ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ತೂಕ ಕಡಿಮೆ ಮಾಡಿಸಬೇಕೆಂದು ತಂದೆಯ ಹುಚ್ಚಿನಿಂದ 6 ವರ್ಷದ ಮಗ ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಜಿಮ್‌ನಲ್ಲಿ ಪುತ್ರನಿಗೆ ಚಿತ್ರ ಹಿಂಸೆ ನೀಡುತ್ತಿರುವ ವಿಡಿಯೊ ವೈರಲ್ ಆಗಿದೆ.

ಜಿಮ್‌ನಲ್ಲಿ ಪುತ್ರನಿಗೆ ವರ್ಕೌಟ್ ಮಾಡುವಂತೆ ಒತ್ತಾಯಿಸುತ್ತಿರುವ ತಂದೆ (ಫೋಟೊ-CallinRugg)
ಜಿಮ್‌ನಲ್ಲಿ ಪುತ್ರನಿಗೆ ವರ್ಕೌಟ್ ಮಾಡುವಂತೆ ಒತ್ತಾಯಿಸುತ್ತಿರುವ ತಂದೆ (ಫೋಟೊ-CallinRugg)

ನ್ಯೂಜೆರ್ಸಿ: ತೂಕ ಇಳಿಸಲು ಜಿಮ್‌ನಲ್ಲಿ ತಂದೆಯೊರ್ವ ಚಿತ್ರಹಿಂಸೆ ನೀಡಿದ ಪರಿಣಾಮ 6 ವರ್ಷದ ಪುಟ್ಟ ಬಾಲಕ ಮೃತ ಪಟ್ಟಿರುವ ಘಟನೆ ನ್ಯೂಜೆರ್ಸಿಯಲ್ಲಿ (New Jersey Crime News) ನಡೆದಿದೆ. ಜಿಮ್‌ನಲ್ಲಿರುವ ಟ್ರೆಡ್‌ಮಿಲ್‌ನಲ್ಲಿ (Tread Mill) ವೇಗವಾಗಿ ಓಡುವಂತೆ ಮಗನಿಗೆ ಪದೇ ಪದೆ ಒತ್ತಾಯಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ನೋಡಿದ ಬಾಲಕನ ತಾಯಿ ಕಣ್ಣೀರಿಟ್ಟಿದ್ದಾಳೆ. ಅಲ್ಲದೆ, ಜಾಲತಾಣಗಳಲ್ಲೂ ಪಾಪಿ ತಂದೆಯ ಕ್ರೌರ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಟ್ರೆಂಡಿಂಗ್​ ಸುದ್ದಿ

ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನ ಸಾವಿಗೆ ಕಾರಣವಾದ ಆರೋಪಿ ತಂದೆಯ ಹೆಸರು ಕ್ರಿಸ್ಟೋಫರ್ ಗ್ರೆಗರ್. ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ತುಂಬಾ ದಪ್ಪಗಿದ್ದೀಯಾ ಅಂತ ಪುತ್ರನನ್ನು ಯಾವಾಗೂ ಪತಿ ನಿಂದಿಸುತ್ತಿದ್ದ ಎಂದು ಮೃತ ಬಾಲಕನ ತಾಯಿ ಕಣ್ಣೀರು ಹಾಕುತ್ತಲೇ ಕೋರ್ಟ್‌ಗೆ ಮಾಹಿತಿ ನೀಡಿದ್ದಾಳೆ. ಈ ಘಟನೆ 2021ರ ಮಾರ್ಚ್ 20 ರಂದು ಅಟ್ಲಾಂಟಿಕ್ ಹೈಟ್ಸ್ ಕ್ಲಬ್‌ಹೌಸ್ ಫಿಟ್‌ನೆಸ್ ಸೆಂಟರ್‌ನಲ್ಲಿ ನಡೆದಿದ್ದು, ಇತ್ತೀಚೆಗೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಓಡಲಾಗದೆ ಪದೇ ಪದೆ ಬೀಳುತ್ತಿದ್ದರು ಬಿಡದ ಪಾಪಿ ತಂದೆ

ವೈರಲ್ ಆಗಿರುವ ವಿಡಿಯೊದಲ್ಲಿ ಟ್ರೆಡ್‌ಮಿಲ್ ಮೇಲೆ ವೇಗವಾಗಿ ಓಡುವಂತೆ ತನ್ನ ಪುತ್ರನಿಗೆ ಆರೋಪಿ ತಂದೆ ಕ್ರಿಸ್ಟೋಫರ್ ಒತ್ತಾಯಿಸುತ್ತಿರುವುದನ್ನು ಕಾಣಬಹುದು. ಟ್ರೆಡ್‌ಮಿಲ್‌ನಲ್ಲಿ ಬಾಲಕ ಓಡುತ್ತಿದ್ದಾಗ ಆರೋಪಿ ವೇಗವನ್ನು ಹೆಚ್ಚಿಸಿದ್ದಾನೆ. ಬಾಲಕ ಓಡಲಾಗದೆ ಕೆಳಗೆ ಬೀಳುತ್ತಾನೆ. ಆದರೂ ಬೀಡದ ಪಾಪಿ ಮತ್ತೆ ಮತ್ತೆ ಕರೆದು ತಂದು ಟ್ರೆಡ್‌ಮಿಲ್‌ ಮೇಲೆ ನಿಲ್ಲಿಸುತ್ತಾನೆ. ಓಡಲು ಸಾಧ್ಯವಾಗದೆ ಬಾಲಕ ಪದೇ ಪದೆ ಪಕ್ಕಕ್ಕೆ ಹೋಗಿ ಬೀಳುತ್ತಾನೆ. ಈ ಎಲ್ಲಾ ಕೃತ್ಯಗಳು ಜಿಮ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಓಡಲು ಆಗದೆ ಕೊನೆಗೆ ಬಾಲಕ ತೀವ್ರ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾನೆ. ಆಗ ವೈದ್ಯರ ಬಳಿಗೆ ಕರೆತಂದಾಗ ಆ ವೇಳೆಗಾಗಲೇ ಬಾಲಕ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ನಂತರ ಶಪ ಪರೀಕ್ಷೆ ಮಾಡಿದಾಗ 6 ವರ್ಷದ ಬಾಲಕ ಕೋರೆ ತೀವ್ರವಾದ ಉರಿಯೂತ, ಹೃದಯ ಹಾಗೂ ಲಿವರ್‌ಗೆ ಗಾಯವಾಗಿ ಮೃತಪಟ್ಟಿರುವುದಾಗಿ ಗೊತ್ತಾಗಿದೆ. ಸದ್ಯ ಪುತ್ರನನ್ನು ಅಮಾನವೀಯವಾಗಿ ಕೊಂದ ಆರೋಪ ಎದುರಿಸುತ್ತಿರುವ ಕ್ರಿಸ್ಟೋಫರ್ ಗ್ರೆಗರ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

IPL_Entry_Point

ವಿಭಾಗ