Viral Video: ಕೇದಾರನಾಥದಲ್ಲಿ 6 ಯಾತ್ರಾರ್ಥಿಗಳನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ, ಎಲ್ಲರೂ ಸುರಕ್ಷಿತ, ವಿಡಿಯೋ ವೈರಲ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video: ಕೇದಾರನಾಥದಲ್ಲಿ 6 ಯಾತ್ರಾರ್ಥಿಗಳನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ, ಎಲ್ಲರೂ ಸುರಕ್ಷಿತ, ವಿಡಿಯೋ ವೈರಲ್‌

Viral Video: ಕೇದಾರನಾಥದಲ್ಲಿ 6 ಯಾತ್ರಾರ್ಥಿಗಳನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ, ಎಲ್ಲರೂ ಸುರಕ್ಷಿತ, ವಿಡಿಯೋ ವೈರಲ್‌

ಕೇದಾರನಾಥದಲ್ಲಿ 6 ಯಾತ್ರಾರ್ಥಿಗಳನ್ನು ಹೊತ್ತ ಕೆಸ್ಟ್ರೆಲ್ ಏವಿಯೇಷನ್ ಕಂಪನಿಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಈ ತುರ್ತು ಲ್ಯಾಂಡಿಂಗ್‌ನ ಎರಡು ವಿಡಿಯೋ ವೈರಲ್‌ ಆಗಿದೆ. ಇಂದು (ಮೇ 24) ಬೆಳಿಗ್ಗೆ 7 ಗಂಟೆ ಈ ಘಟನೆ ನಡೆಯಿತು.ವೈರಲ್ ವಿಡಿಯೋ ಮತ್ತು ಮಾಹಿತಿ ಇಲ್ಲಿದೆ.

ಕೇದಾರನಾಥದಲ್ಲಿ 6 ಯಾತ್ರಾರ್ಥಿಗಳನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ.
ಕೇದಾರನಾಥದಲ್ಲಿ 6 ಯಾತ್ರಾರ್ಥಿಗಳನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. (realkaypius)

ಡೆಹ್ರಾಡೂನ್: ಕೇದಾರನಾಥ ದೇವಾಲಯದ ಹೆಲಿಪ್ಯಾಡ್‌ನಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ನಾಟಕೀಯವಾಗಿ ತುರ್ತು ಭೂಸ್ಪರ್ಶ ಮಾಡಿದೆ. ಆರು ಯಾತ್ರಾರ್ಥಿಗಳು ಮತ್ತು ಪೈಲಟ್ ಸೇರಿ ಏಳು ಜನರನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಸಂಭಾವ್ಯ ದೊಡ್ಡ ಅಪಘಾತ ಒಂದು ಶುಕ್ರವಾರ ಬೆಳಗ್ಗೆ ತಪ್ಪಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಅದು ಕಾಪ್ಟರ್ ಪ್ರಯಾಣದ ಬಗ್ಗೆ ಕಳವಳ ಮೂಡಿಸುವಂತೆ ಇದೆ.

"ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಕೆಸ್ಟ್ರೆಲ್ ಏವಿಯೇಷನ್ ಕಂಪನಿಯ ಹೆಲಿಕಾಪ್ಟರ್ ಆರು ಪ್ರಯಾಣಿಕರನ್ನು ಮತ್ತು ಪೈಲಟ್ ಅನ್ನು ಹೊತ್ತು ಶಿರಸಿಯಿಂದ ಕೇದಾರನಾಥ ಧಾಮಕ್ಕೆ ಹೊರಟಿತು. ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ಕೇದಾರನಾಥ ಹೆಲಿಪ್ಯಾಡ್ನಿಂದ ಸ್ವಲ್ಪ ದೂರದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ರುದ್ರಪ್ರಯಾಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಸೌರಭ್ ಗಹರ್ವಾರ್ ತಿಳಿಸಿದ್ದಾರೆ.

ಹೆಲಿಕಾಪ್ಟರ್ ನಾಟಕೀಯ ಲ್ಯಾಂಡಿಂಗ್‌ನ ಎರಡು ವಿಡಿಯೋಗಳಿದ್ದು, ಎರಡೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಕೇದಾರನಾಥ ಕಾಪ್ಟರ್ ನಾಟಕೀಯ ಲ್ಯಾಂಡಿಂಗ್‌ನ ವಿಡಿಯೋ

ಕೇದಾರನಾಥ ಬೇಸ್‌ಕ್ಯಾಂಪ್‌ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ದೃಶ್ಯ ಸೆರೆಯಾಗಿದೆ.

ಕಾಪ್ಟರ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪೈಲಟ್ ತಾಳ್ಮೆ ಕಳೆದುಕೊಳ್ಳಲಿಲ್ಲ ಮತ್ತು ಬುದ್ಧಿವಂತಿಕೆಯನ್ನು ತೋರಿಸಿದರು ಮತ್ತು ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಿದರು" ಎಂದು ರುದ್ರಪ್ರಯಾಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಸೌರಭ್ ಗಹರ್ವಾರ್ ಹೇಳಿದರು.

ಹೆಲಿಕಾಪ್ಟರ್‌ನಲ್ಲಿ ಕಂಡುಬಂದಿರುವ ತಾಂತ್ರಿಕ ದೋಷದ ಕಾರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಸಂಭವಿಸಿತ್ತು ಹೆಲಿಕಾಪ್ಟರ್ ದುರಂತ

ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (ಯುಸಿಎಡಿಎ) ಹಿರಿಯ ಅಧಿಕಾರಿಯೊಬ್ಬರು 2023 ರ ಏಪ್ರಿಲ್‌ನಲ್ಲಿ ಕೇದಾರನಾಥದಲ್ಲಿ ಹೆಲಿಕಾಪ್ಟರ್‌ನ ಟೈಲ್ ರೋಟರ್‌ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು.

ಕೇದಾರನಾಥದಲ್ಲಿ 2022ರ ಅಕ್ಟೋಬರ್‌ನಲ್ಲಿ, ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಆರು ಭಕ್ತರು ಮತ್ತು ಪೈಲಟ್ ಸಾವನ್ನಪ್ಪಿದ್ದರು. ಅಪಘಾತದ ನಂತರ, ಈ ಪ್ರದೇಶದಲ್ಲಿ ಹೆಲಿ ಸೇವೆಗಳ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಕೇದಾರನಾಥದಲ್ಲಿ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಯುಸಿಎಡಿಎ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಪತ್ರ ಬರೆದಿತ್ತು.

ಕೇದಾರನಾಥದಲ್ಲಿ, ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ, ಹೆಲಿಕಾಪ್ಟರ್‌ಗಳು ಪ್ರತಿದಿನ ಸರಾಸರಿ 400 ಬಾರಿ ಪ್ರಯಾಣಿಸುತ್ತವೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.