Love Bite Tattoo: ಪ್ರಿಯತಮೆ ಕಚ್ಚಿದ ಗುರುತಿನ ಮೇಲೇ ಹಚ್ಚೆ ಹಾಕಿಸಿಕೊಂಡ ಯುವಕ; ವಿಡಿಯೋ ವೈರಲ್
Viral Video: ಬಾಯ್ಫ್ರೆಂಡ್ ತೋಳಿನ ಮೇಲೆ ಕಚ್ಚಿದ ಬಳಿಕ ಯುವತಿ ಕ್ಯಾಮರಾಗೆ ಪೋಸ್ ಕೂಡ ನೀಡುತ್ತಾಳೆ. ಈ ಬೈಟ್ ಮಾರ್ಕ್ ಕೆಳಗೆ "ಪೆರು" ಎಂಬ ಹೆಸರು ಮತ್ತು "16.9.23" ಎಂದು ಟ್ಯಾಟೂ ಹಾಕಿಸಿಕೊಂಡ ದಿನಾಂಕವನ್ನೂ ಹಚ್ಚೆ ಹಾಕಿಸಲಾಗಿದೆ.

ಮೈಮೇಲೆ, ಅಲ್ಲ ಅಲ್ಲ.. ಮೈತುಂಬಾ ಹಚ್ಚೆ ಹಾಕಿಸಿಕೊಳ್ಳುವುದು ಈಗ ಟ್ರೆಂಡ್ ಆಗಿಬಿಟ್ಟಿದೆ. ಹಾರ್ಟ್, ನವಿಲುಗರಿ, ಹಕ್ಕಿಗಳು, ಪ್ರಾಣಿಗಳು, ದೇವರು, ಹೂವು, ಮಗುವಿನ ಹೆಜ್ಜೆ ಗುರುತು, ಚಿಟ್ಟೆ, ಅಕ್ಷರಗಳು, ಎಲೆ ಸೇರಿದಂತೆ ನಾನಾ ಚಿತ್ರಗಳನ್ನು, ನಾನಾ ಡಿಸೈನ್ಗಳನ್ನು ಜನರು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಯುವಕ ತನ್ನ ತೋಳಿನ ಮೇಲೆ ಪ್ರಿಯತಮೆ ಕಚ್ಚಿದ ಗುರುತಿನ ಮೇಲೆಯೇ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಟ್ರೆಂಡಿಂಗ್ ಸುದ್ದಿ
skytattoos111 ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದರಲ್ಲಿ ಯುವತಿಯೊಬ್ಬಳು ತನ್ನ ಪ್ರಿಯತಮನ ತೋಳಿನ ಮೇಲೆ ಕಚ್ಚುತ್ತಾಳೆ. ಕಚ್ಚಿದ ಬಳಿಕ ತೋಳಿನ ಮೇಲಾದ ಬೈಟ್ ಮಾರ್ಕ್ ಮೇಲೆಯೇ ಆ ಯುವಕ ಹಚ್ಚೆ ಹಾಕಿಸಿಕೊಳ್ಳುತ್ತಾನೆ.
ಬಾಯ್ಫ್ರೆಂಡ್ ತೋಳಿನ ಮೇಲೆ ಕಚ್ಚಿದ ಬಳಿಕ ಯುವತಿ ಕ್ಯಾಮರಾಗೆ ಪೋಸ್ ಕೂಡ ನೀಡುತ್ತಾಳೆ. ಈ ಬೈಟ್ ಮಾರ್ಕ್ ಕೆಳಗೆ "ಪೆರು" ಎಂಬ ಹೆಸರು ಮತ್ತು "16.9.23" ಎಂದು ಟ್ಯಾಟೂ ಹಾಕಿಸಿಕೊಂಡ ದಿನಾಂಕವನ್ನೂ ಹಚ್ಚೆ ಹಾಕಿಸಲಾಗಿದೆ.
ಸೆಪ್ಟೆಂಬರ್ 17 ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈವರೆಗೆ 17 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ ಮತ್ತು 5.6 ಲಕ್ಷ ಲೈಕ್ಸ್ ಪಡೆದಿದೆ. ಈ ವಿಡಿಯೋ ಕಂಡು ತಮಾಷೆ ಮಾಡಿದವರೇ ಹೆಚ್ಚು. "ರೇಬೀಸ್ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಬದಲು ಟ್ಯಾಟೂ ಹಾಕಿಸಿಕೊಂಡಿದ್ದಾನೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, "ಈ ದುಃಖವನ್ನು ಅರಗಿಸಿಕೊಳ್ಳುವ ಶಕ್ತಿಯಿಲ್ಲ ನನಗೆ" ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
"ಇದನ್ನು ನೋಡಲು ನಾನು ಯಾಕೆ ಇಲ್ಲಿದ್ದೇನೆ" ಎಂದು ಒಬ್ಬರು, "ಇನ್‌ಸ್ಟಾಗ್ರಾಮ್‌ನಲ್ಲಿ ಡಿಸ್ಲೈಕ್ ಆಪ್ಶನ್ ಯಾಕೆ ಇಲ್ಲ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.