Viral Video: ಚಲಿಸುತ್ತಿದ್ದ ಕಾರಿನ ಸನ್ರೂಫ್ ಮೇಲೆ ಪ್ರೇಮಿಗಳ ಲಿಪ್ಲಾಕ್; ಕಿಡಿಕಾರುತ್ತಿರುವ ನೆಟ್ಟಿಗರು
Viral News: ಈ ವೈರಲ್ ವಿಡಿಯೋದಲ್ಲಿ ಹೈದರಾಬಾದ್ನ ಪಿವಿ ನರಸಿಂಹರಾವ್ ಎಕ್ಸ್ಪ್ರೆಸ್ವೇನಲ್ಲಿ ಚಲಿಸುತ್ತಿದ್ದ ಕಾರಿನ ಸನ್ರೂಫ್ ಮೇಲೆ ಕುಳಿತ ಪ್ರೇಮಿಗಳು ಒಬ್ಬರನೊಬ್ಬರು ತಬ್ಬಿಕೊಂಡು ಲಿಪ್ಲಾಕ್ ಮಾಡುವುದು ಕಂಡುಬಂದಿದೆ. ಅವರ ಹಿಂದೆ ಇದ್ದ ಕಾರಿನೊಳಗೆ ಕುಳಿತಿದ್ದವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಹೈದರಾಬಾದ್ (ತೆಲಂಗಾಣ): ಇತ್ತೀಷೆಗಷ್ಟೇ ಉತ್ತರ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಬೈಕ್ ರೈಡ್ ಮಾಡುತ್ತಾ ರೊಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಉತ್ತರ ಪ್ರದೇಶ ಪೊಲೀಸರು ತಕ್ಷಣ ಪ್ರತಿಕ್ರಿಯಿಸಿ, ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ ಅಡಿಯಲ್ಲಿ ಅವರಿಗೆ 8 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರ ಮುಂದೆಯೇ ಪ್ರೇಮಿಗಳು ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಹೈದರಾಬಾದ್ನಲ್ಲಿ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ.
ಈ ವೈರಲ್ ವಿಡಿಯೋದಲ್ಲಿ ಹೈದರಾಬಾದ್ನ ಪಿವಿ ನರಸಿಂಹರಾವ್ ಎಕ್ಸ್ಪ್ರೆಸ್ವೇನಲ್ಲಿ ಚಲಿಸುತ್ತಿದ್ದ ಕಾರಿನ ಸನ್ರೂಫ್ ಮೇಲೆ ಕುಳಿತ ಪ್ರೇಮಿಗಳು ಒಬ್ಬರನೊಬ್ಬರು ತಬ್ಬಿಕೊಂಡು ಲಿಪ್ಲಾಕ್ ಮಾಡುವುದು ಕಂಡುಬಂದಿದೆ. ಅವರ ಹಿಂದೆ ಇದ್ದ ಕಾರಿನೊಳಗೆ ಕುಳಿತಿದ್ದವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಈ ವಿಡಿಯೋವನ್ನು ಧರಣಿ ಎಂಬವರು ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಶೇರ್ ಮಾಡಿದ್ದು, "ಪಿವಿಎನ್ಆರ್ ಎಕ್ಸ್ಪ್ರೆಸ್ವೇನಲ್ಲಿ ಈ ಅಸುರಕ್ಷಿತ ಡ್ರೈವಿಂಗ್ ಮತ್ತು ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಯ ಬಗ್ಗೆ ಹೈದರಾಬಾದ್ ಸಿಟಿ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ" ಎಂದು ಬರೆದಿದ್ದಾರೆ.
ಈ ವಿಡಿಯೋ ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ಮತ್ತೊಬ್ಬರು, “ಈ ಜೋಡಿಯ ಕೃತ್ಯ ಅಪಘಾತಗಳಿಗೆ ಕಾರಣವಾಗುತ್ತಿತ್ತು. ವಿಡಿಯೊದಲ್ಲಿ ಕಂಡುಬರುವ ವಾಹನದ ಮಾಲೀಕರ ವಿರುದ್ಧ ಮತ್ತು ಪ್ರೇಮಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಂದ ನಿರೀಕ್ಷಿಸುತ್ತೇವೆ.ಇದು ಇತರ ಪ್ರತಿಯೊಬ್ಬ ನಾಗರಿಕರಿಗೂ ಪಾಠವಾಗುತ್ತದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಇದು ಅಸುರಕ್ಷಿತವೋ ಅಲ್ಲವೋ ನನಗೆ ಗೊತ್ತಿಲ್ಲ ಆದರೆ ಸಾರ್ವಜನಿಕವಾಗಿ ಅಶ್ಲೀಲತೆಯಿಂದ ನಡೆದುಕೊಳ್ಳುವುದು ತಪ್ಪು" ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.