ನಮ್ಮ ಹಿಂದೆ ಹಿಂದೆಯೇ ಗಾಡಿ ತಗೊಂಡು ಬನ್ನಿ, ನೀರು ತುಂಬಿದ ಹಳಿಗಳ ಮೇಲೆ ಬರ್ತಾ ಇತ್ತು ರೈಲು- ವೈರಲ್ ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನಮ್ಮ ಹಿಂದೆ ಹಿಂದೆಯೇ ಗಾಡಿ ತಗೊಂಡು ಬನ್ನಿ, ನೀರು ತುಂಬಿದ ಹಳಿಗಳ ಮೇಲೆ ಬರ್ತಾ ಇತ್ತು ರೈಲು- ವೈರಲ್ ವಿಡಿಯೋ

ನಮ್ಮ ಹಿಂದೆ ಹಿಂದೆಯೇ ಗಾಡಿ ತಗೊಂಡು ಬನ್ನಿ, ನೀರು ತುಂಬಿದ ಹಳಿಗಳ ಮೇಲೆ ಬರ್ತಾ ಇತ್ತು ರೈಲು- ವೈರಲ್ ವಿಡಿಯೋ

ಮಧ್ಯಪ್ರದೇಶದಲ್ಲಿ ಧಾರಾಕಾರ ಮಳೆಗೆ ರೈಲ್ವೆ ಹಳಿಗಳು ಜಲಾವೃತವಾಗಿವೆ. ರೈಲು ಒಂದು ಜಲಾವೃತಗೊಂಡ ರೈಲು ಹಳಿಯಲ್ಲಿ ಸಾಗಿದ ದೃಶ್ಯವಿರುವ ವಿಡಿಯೋ ಜನಮನ ಸೆಳೆದಿದೆ. “ನಮ್ಮ ಹಿಂದೆ ಹಿಂದೆಯೇ ಗಾಡಿ ತಗೊಂಡು ಬನ್ನಿ” ಎನ್ನುತ್ತ ಮೂವರು ರೈಲ್ವೆ ಹಳಿಗಳ ನಡುವೆ ನಡೀತಾ ಇದ್ರು.. ಹಿಂದೆ ಟ್ರೇನ್ ಬರ್ತಾ ಇತ್ತು. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.

ನಮ್ಮ ಹಿಂದೆ ಹಿಂದೆಯೇ ಗಾಡಿ ತಗೊಂಡು ಬನ್ನಿ, ನೀರು ತುಂಬಿದ ಹಳಿಗಳ ಮೇಲೆ ಬರ್ತಾ ಇತ್ತು ರೈಲು- ವೈರಲ್ ವಿಡಿಯೋದಿಂದ ತೆಗೆದ ಚಿತ್ರಗಳು
ನಮ್ಮ ಹಿಂದೆ ಹಿಂದೆಯೇ ಗಾಡಿ ತಗೊಂಡು ಬನ್ನಿ, ನೀರು ತುಂಬಿದ ಹಳಿಗಳ ಮೇಲೆ ಬರ್ತಾ ಇತ್ತು ರೈಲು- ವೈರಲ್ ವಿಡಿಯೋದಿಂದ ತೆಗೆದ ಚಿತ್ರಗಳು

ಭೋಪಾಲ: ಮಧ್ಯಪ್ರದೇಶದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು ಕೆಲವು ಕಡೆ ರೈಲ್ವೆ ಹಳಿಗಳೂ ಜಲಾವೃತವಾಗಿದ್ದು ರೈಲು ಸಂಚಾರ ಕಷ್ಟವೆನಿಸಿದೆ. ಆದಾಗ್ಯೂ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ವಿಡಿಯೋ ಒಂದು ಗಮನಸೆಳೆದಿದ್ದು, ಅದರಲ್ಲಿ ಮೂವರು ರೈಲ್ವೆ ಹಳಿಯಲ್ಲಿ ಮುಂದೆ ಸಾಗುತ್ತಿದ್ದರೆ ಹಿಂದೆ ರೈಲೊಂದು ನಿಧಾನವಾಗಿ ಬರುತ್ತಿರುವ ದೃಶ್ಯವಿದೆ!

ಅದನ್ನು ನೋಡಿದಾಗ, ಹಳ್ಳಿಗಳಲ್ಲಿ ರಸ್ತೆ ಚೆನ್ನಾಗಿಲ್ಲದೇ ಇದ್ದಾಗ, ನೀರು ತುಂಬಿಕೊಂಡಿದ್ದಾಗ ಜನ ಮೊದಲು ಹೋಗಿ ಆ ರಸ್ತೆಯಲ್ಲಿ ಗುಂಡಿ ಎಷ್ಟು ದೊಡ್ಡದಿದೆ, ನೀರಿನ ಮಟ್ಟ ಎಷ್ಟಿದೆ ಎಂದು ನೋಡಿಕೊಂಡು ವಾಹನ ಚಲಾಯಿಸಿಕೊಂಡು ಬರುವಂತೆ ಹೇಳುವ ದೃಶ್ಯ ನೆನಪಿಗೆ ಬರುತ್ತದೆ.

ಹೌದು ಈ ಘಟನೆ ನಡೆದಿರುವುದು ಮಧ್ಯ ಪ್ರದೇಶದಲ್ಲಿ. ಅಲ್ಲಿ ಈಗ ಪ್ರತಿಕೂಲ ಹವಾಮಾನ ಇದ್ದು, ಭಾರೀ ಮಳೆಯಿಂದಾಗಿ ರೈಲ್ವೆ ಹಳಿಗಳೂ ನೀರಿನಲ್ಲಿ ಮುಳುಗಿವೆ. ಹಳಿಗಳು ಗೋಚರಿಸದ ಕಾರಣ ಚಾಲಕನೊಬ್ಬ ರೈಲು ಓಡಿಸಲು ಕಷ್ಟಪಡುತ್ತಿದ್ದ. ಆಗ ಭಾರತೀಯ ರೈಲ್ವೆ ನೌಕರರಿಗೆ ಒಂದು ಐಡಿಯಾ ಹೊಳೆಯಿತು. ಮೂವರು ರೈಲಿನಿಂದ ಇಳಿದು ಹಳಿಗಳ ಮೇಲೆ ನಡೆಯಲಾರಂಭಿಸಿದರು. ಮುಂದೆ ಮುಂದೆ ಹೋಗುತ್ತ, ರೈಲು ಚಾಲಕನಿಗೆ ನಿಧಾನವಾಗಿ ಗಾಡಿ ತಗೊಂಡು ಬಾ ಎನ್ನುವಂತೆ ಸನ್ನೆ ಮಾಡುತ್ತಿದ್ದರು. ಅದರಂತೆ ಆ ರೈಲು ನಿಧಾನವಾಗಿ ಸಂಚರಿಸುತ್ತ ಬರುತ್ತಿದ್ದ ದೃಶ್ಯ ವಿಡಿಯೋದಲ್ಲಿದೆ ನೋಡಿ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ರೈಲಿನ ವಿಡಿಯೋ

ಈ ವಿಡಿಯೋವನ್ನು ಹಲವರು ತಮ್ಮ ಖಾತೆಗಳಲ್ಲೂ ಶೇರ್ ಮಾಡಿಕೊಂಡಿದ್ದು, ಜನರಿಂದ ವಿವಿಧ ರೀತಿಯ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ. ನಾವು ಬುಲೆಟ್ ಟ್ರೈನ್ ಬಗ್ಗೆ ಮಾತನಾಡುತ್ತಿದ್ದೇವೆ. ನೀವು ನೆಹರೂ ಕಾಲದ ಈ ರೈಲುಗಳನ್ನು ಉಲ್ಲೇಖಿಸುತ್ತಿದ್ದೀರಿ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಅದೇ ಸಮಯದಲ್ಲಿ, ಈ ರೈಲಿನ ಲೋಕೋ ಪೈಲಟ್ ಮುಂಬೈ ಲೋಕೋ ಪೈಲಟ್‌ನಿಂದ ತರಬೇತಿ ಪಡೆಯಬೇಕು ಎಂದು ಮತ್ತೊಬ್ಬರು ಬಳಕೆದಾರರು ಬರೆದಿದ್ದಾರೆ. ರೈಲನ್ನು ನೀರಿನಲ್ಲಿ ಓಡಿಸುವಷ್ಟು ತುರ್ತು ಏನಿತ್ತು. ರೈಲು ಹಳಿ ತಪ್ಪಿದರೆ ಯಾರು ಹೊಣೆ? ಯಾಕೆ ಅಷ್ಟೊಂದು ರಿಸ್ಕ್ ತಗೊಳ್ತಾ ಇದ್ದಾರೆ ಎಂದು ಇನ್ನೊಬ್ಬರು ಬಳಕೆದಾರರು ಹೇಳಿಕೊಂಡಿರುವುದು ಕಂಡುಬಂದಿದೆ.

ಮಧ್ಯಪ್ರದೇಶದಲ್ಲಿ ಧಾರಾಕಾರ ಮಳೆ; ಹಲವು ಪ್ರದೇಶಗಳು ಜಲಾವೃತ

ಕಳೆದ ಮೂರು ನಾಲ್ಕು ದಿನಗಳಿಂದ ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ಪ್ರಕಾರ, ಪೂರ್ವ ಮಧ್ಯಪ್ರದೇಶದ ದಿಂಡೋರಿ, ಕಟ್ನಿ, ಸಿಯೋನಿ, ಮಂಡ್ಲಾ, ಪನ್ನಾ, ದಾಮೋಹ್, ಛತ್ತರ್‌ಪುರ, ಟಿಕಮ್‌ಗಢ ಮತ್ತು ನೀಮುಚ್ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ರಾಜ್ಯದಲ್ಲಿ ಜುಲೈ 28 ರವರೆಗೆ ಮಳೆಗಾಲ ಮುಂದುವರೆಯಲಿದೆ. ಈಗಾಗಲೇ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

https://x.com/Live_Hindustan/status/1816457742611026324

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.