Viral Girl: ಈ ರಾಜಸ್ಥಾನಿ ಯುವತಿ ಈಗ ಇಂಟರ್‌ನೆಟ್ ಸೆನ್ಸೇಷನ್, ಮುಗ್ಧ ಮನಸ್ಸಿನ ಸುಂದರಿ ಜ್ಯೋತಿಗೆ ಮನಸೋತ ನೆಟ್ಟಿಗರು
Rajasthani girl Viral Video: ಸಾಂಪ್ರದಾಯಿಕ ಉಡುಗೆ ತೊಟ್ಟ ರಾಜಸ್ಥಾನಿ ಸುಂದರಿಯೊಬ್ಬಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವ್ಲಾಗರ್ ಜತೆ ನಗು ನಿಯಂತ್ರಿಸಲಾಗದೆ ನಾಚುತ್ತಾ ಮಾತನಾಡುವ ಈಕೆಯ ಮುಗ್ಧತನ ಮತ್ತು ಸಹಜ ಸೌಂದರ್ಯಕ್ಕೆ ನೆಟ್ಟಿಗರು ಖುಷಿಪಟ್ಟಿದ್ದಾರೆ.
ರಾಜಸ್ಥಾನದ ಯುವತಿಯೊಬ್ಬಳು ವ್ಲಾಗರ್ ಜತೆಗೆ ನಡೆಸಿದ ಸಂಭಾಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಹಜ ಸುಂದರಿಯ ವಿಡಿಯೋವನ್ನು ಸಾಕಷ್ಟು ಜನರು ಮೆಚ್ಚಿದ್ದಾರೆ. ಇದೀಗ ಈಕೆ ಇಂಟರ್‌ನೆಟ್ ಸೆನ್ಸೆಷನ್ ಆಗಿದ್ದಾಳೆ. ಸಾಂಪ್ರದಾಯಿಕ ಉಡುಪಿನಲ್ಲಿ ಕೊಂಚ ಮೇಕಪ್ ಮಾಡಿಕೊಂಡಿರುವ ಜ್ಯೋತಿ ಎಂಬ ಈ ಯುವತಿ ವ್ಲಾಗರ್ ಜತೆ ಮಾತನಾಡುತ್ತಾಳೆ. ಈ ರೀತಿ ವಿಡಿಯೋ ಮುಂದೆ ಈಕೆ ಮಾತನಾಡುತ್ತಿರುವುದು ಇದೇ ಮೊದಲಂತೆ. ಆಕೆಗೆ ಮಾತನಾಡುವಾಗ ನಗು ತಡೆಯಾಗುತ್ತಿಲ್ಲ. ಈ ವಿಡಿಯೋ ನೋಡಿ "ಸಾಂಪ್ರದಾಯಿಕ ಸುಂದರಿ" "ಸರಳ ಸುಂದರಿ" "ನಿಜವಾದ ಸೌಂದರ್ಯ" "ಅದ್ಭುತ ಸೌಂದರ್ಯ" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ರಾಜಸ್ಥಾನಿ ಯುವತಿಯ ವೈರಲ್ ವಿಡಿಯೋ
ರಾಜಸ್ಥಾನಿ ಸಾಂಪ್ರದಾಯಿಕ ಉಡುಪು ತೊಟ್ಟ ಈಕೆ ತನ್ನ ತಲೆಯನ್ನು ಘೂಂಘಾಟ್‌ನಿಂದ ಮುಚ್ಚಿಕೊಂಡಿದ್ದಳು. ಬಿಂದಿ, ಕಿವಿಯೋಲೆ, ಬಳೆಗಳನ್ನು ಧರಿಸಿದ್ದ ಈಕೆ ಪಕ್ಕಾ ಹಳ್ಳಿ ಹುಡುಗಿಯಾಗಿ ಎಲ್ಲರ ಗಮನ ಸೆಳೆದಿದ್ದಾಳೆ. ನಾನು ಮಾತನಾಡುವುದನ್ನು ಇಲ್ಲಿಯವರೆಗೆ ಯಾರೂ ಕೂಡ ವಿಡಿಯೋ ರೆಕಾರ್ಡ್ ಮಾಡಿಲ್ಲ ಎಂದು ಇವಳು ವ್ಲಾಗರ್ ಬಳಿ ನಾಚುತ್ತ ಹೇಳಿದ್ದಾಳೆ. "ಇವಳು ತುಂಬಾ ಚಂದ ಇದ್ದಾಳೆ" ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
ಇದೀಗ ಈಕೆಯ ಫೋಟೋಗಳು ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಭಾರತದ ಸೌಂದರ್ಯದ ಸಂಕೇತ, ಹಳ್ಳಿ ಜನರ ಮುಗ್ಧತೆ ನೋಡುವಾಗ ಖುಷಿಯಾಗುತ್ತದೆ. ಇವರಿಗೆ ಕಪಟತನ, ವಂಚನೆ ಏನೂ ಗೊತ್ತಿಲ್ಲ. ಆಧುನಿಕತೆಯ ಸೋಂಕಿಲ್ಲದೆ ತಮ್ಮ ಪಾಡಿಗೆ ಬದುಕುತಿದ್ದಾರೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಈಕೆಯ ಜತೆ ಇದೀಗ ವಿದೇಶಿಗರು ನಿಂತು ಫೋಟೋ ತೆಗೆದುಕೊಳ್ಳುವುದು ಹೆಚ್ಚಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಾಜಸ್ಥಾನದ ಬಗ್ಗೆ ಒಂದಿಷ್ಟು ಮಾಹಿತಿ
- ಇದು ಉತ್ತರ ಭಾರತದ ಒಂದು ಪ್ರಮುಖ ರಾಜ್ಯ. ಭಾರತದ ಒಟ್ಟು ಭೌಗೋಳಿಕ ಪ್ರದೇಶದ 10.4 ರಷ್ಟು ಪ್ರದೇಶವನ್ನು ರಾಜಸ್ಥಾನ ಹೊಂದಿದೆ. ಹೀಗಾಗಿ, ಇದು ಭಾರತದ ಅತಿದೊಡ್ಡ ರಾಜ್ಯ. ಜನಸಂಖ್ಯೆಯಲ್ಲಿ ಭಾರತದ ಏಳನೇ ದೊಡ್ಡ ರಾಜ್ಯವಾಗಿದೆ.
- ರಾಜಸ್ಥಾನವು ಭಾರತದ ವಾಯುವ್ಯ ಭಾಗದಲ್ಲಿದೆ. ಈ ರಾಜ್ಯದಲ್ಲಿ ವಿಶಾಲವಾದ ಮತ್ತು ನಿರಾಶ್ರಯವಾಗಿರುವ ಥಾರ್ ಮರುಭೂಮಿಯೂ ಇದೆ. ಇದನ್ನು ರಾಜಸ್ಥಾನ ಮರುಭೂಮಿ, ಗ್ರೇಟ್ ಇಂಡಿಯನ್ ಡೆಸರ್ಟ್ ಎಂದು ಕರೆಯುತ್ತಾರೆ.
- ರಾಜಸ್ಥಾನದ ಗಡಿಗಳು ಪಂಜಾಬ್, ಪಾಕಿಸ್ತಾನದ ವಾಯುವ್ಯ ಭಾಗವನ್ನು ಒಳಗೊಂಡಿವೆ. ಉತ್ತರಕ್ಕೆ ಪಂಜಾಬ್, ಹರಿಯಾಣ, ಈಶಾನ್ಯದಲ್ಲಿ ಉತ್ತರ ಪ್ರದೇಶ, ಆಗ್ನೇಯದಲ್ಲಿ ಮಧ್ಯ ಪ್ರದೇಶ ಮತ್ತು ನೈರುತ್ಯದಲ್ಲಿ ಗುಜರಾತ್ ಇದೆ.
- ರಾಜಸ್ಥಾನದಲ್ಲಿ ಮೂರು ರಾಷ್ಟ್ರೀಯ ಹುಲಿ-ಮೀಸಲು ತಾಣಗಳು ಇವೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನವನ, ಅಲ್ವಾರ್‌ಬ ಸರಿಸ್ಕಾ ಹುಲಿ ಮೀಸಲು ಮತ್ತು ಕೋಟಾದಲ್ಲಿನ ಮುಕುಂದ್ರ ಹಿಲ್ ಟೈಗರ್ ರಿಸರ್ವ್ ಇದೆ.
- ರಾಜಸ್ಥಾನವು ಕೋಟೆಗಳು, ಅರಮನೆಗಳಿಗೆ ಹೆಸರುವಾಸಿಯಾಗಿದೆ. ರಾಜಸ್ಥಾನದ ರಾಜಧಾನಿ ಜೈಪುರ. ರಾಜಸ್ಥಾನದಲ್ಲಿ ಜೋಧಪುರ್, ಕೋಟಾ, ಬಿಕನೇರ್, ಅಜ್ಮೀರ್ ಮತ್ತು ಉದಯಪುರ ಮುಂತಾದ ಪ್ರಮುಖ ನಗರಗಳೂ ಇವೆ.