Viral Video: ನಂಗೆ ಸ್ವಲ್ಪ ನೀರು ಕೊಡ್ತಿರಾ? ಬಾಯಾರಿದ ಅಳಿಲು ವ್ಯಕ್ತಿಯೊಬ್ಬರ ಬಳಿ ನೀರು ಕೇಳಿದ ಹೃದಯಸ್ಪರ್ಶಿ ವಿಡಿಯೋ ನೋಡಿ
Viral Video: ಅಳಿಲೊಂದು ವ್ಯಕ್ತಿಯೊಬ್ಬರ ಬಳಿ ಬಂದು ನೀರು ಕೇಳುವ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀರಿನ ಬಾಟಲ್ ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬರ ಬಳಿ ಬಂದು ನೀರಿಗಾಗಿ ಅಳಿಲು ವಿನಂತಿಸುವುದು ನೆಟ್ಟಿಗರ ಹೃದಯ ತಟ್ಟಿದೆ.

ಅಳಿಲೊಂದು ವ್ಯಕ್ತಿಯೊಬ್ಬರ ಬಳಿ ಬಂದು ನೀರು ಕೇಳುವ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀರಿನ ಬಾಟಲ್ ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬರ ಬಳಿ ಬಂದು ನೀರಿಗಾಗಿ ಅಳಿಲು ವಿನಂತಿಸುವುದು ನೆಟ್ಟಿಗರ ಹೃದಯ ತಟ್ಟಿದೆ. ಮೂಕ ಪ್ರಾಣಿಯ ಈ ವಿಡಿಯೋ ನಿಮ್ಮನ್ನು ತುಸು ಭಾವುಕವಾಗಿಸಬಹುದು.
ಈ ವಿಡಿಯೋ ಹೊಸತಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ಯಾರೋ ಒಬ್ಬರು ರೆಡ್ಡಿಟ್‌ನಲ್ಲಿ ಈ ವಿಡಿಯೋ ಷೇರ್ ಮಾಡಿದ ಬಳಿಕ ಮತ್ತೆ ವೈರಲ್ ಆಗಿದೆ.
ಈ ಅಳಿಲು ವ್ಯಕ್ತಿಯೊಬ್ಬರ ಮುಂದೆ ನಿಂತು ಆ ವ್ಯಕ್ತಿಯ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ. ಬಾಟಲಿಯಲ್ಲಿರುವ ನೀರು ಅಳಿಲಿಗೆ ಬೇಕೆಂದು ಆ ವ್ಯಕ್ತಿಗೆ ಅರ್ಥವಾಯಿತು. ಆತ ಆ ಅಳಿಲಿನ ಮುಂದೆ ಬಾಟಲ್ ಹಿಡಿದು ಅದಕ್ಕೆ ನೀರು ಕುಡಿಯಲು ಸಹಕರಿಸುತ್ತಾನೆ. ಕೊಂಚ ನೀರು ಕುಡಿದು ಅಳಿಲು ಓಡಿ ಹೋಗುತ್ತದೆ.
ಒಂದು ದಿನದ ಹಿಂದೆ ರೆಡ್ಡಿಟ್‌ನಲ್ಲಿ ಪ್ರಕಟಗೊಂಡ ಈ ವಿಡಿಯೋವನ್ನು 89 ಸಾವಿರ ಜನರು ಅಪ್‌ವೋಟ್ ಮಾಡಿದ್ದಾರೆ. ಈ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಜನರು ಷೇರ್ ಮಾಡಿಕೊಂಡಿದ್ದಾರೆ. ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ.
ಇದು ನಿಜಕ್ಕೂ ಅದ್ಭುತ. ಪ್ರಾಣಿಗಳು ಕೂಡ ಮನುಷ್ಯರ ಜತೆ ಬದುಕಲು ಕಲಿಯುತ್ತಿವೆ. ಮನುಷ್ಯರ ಸಂಜ್ಞೆಗಳನ್ನೂ ಅವು ಕಲಿತಿವೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ನೀರು ಕುಡಿದ ಬಳಿಕ ಆ ಅಳಿಲು ಥ್ಯಾಂಕ್ಸ್ ಕೂಡ ಹೇಳಿದೆ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಕೆಲವು ಪ್ರಾಣಿಗಳು ನಾವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ಬುದ್ಧಿವಂತಿಕೆ ಹೊಂದಿವೆ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಕಾರು ಹಾರಿದರೆ ಅಚ್ಚರಿ ಪಡಬೇಡಿ
ಈಗ ರಸ್ತೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ವಿಶ್ವವೇ ಇ-ವಾಹನಗಳತ್ತ ತೆರೆದುಕೊಳ್ಳುತ್ತಿದೆ. ಒಂದಾನೊಂದು ಕಾಲದಲ್ಲಿ ಎಲೆಕ್ಟ್ರಿಕ್ ಕಾರುಗಳು ರಸ್ತೆಯಲ್ಲಿ ಕಷ್ಟ ಎನ್ನುತ್ತಿದ್ದವರೂ ಈಗಿನ ಬದಲಾವಣೆಯನ್ನು ನೋಡಿ ಅಚ್ಚರಿ ಪಡುತ್ತಿದ್ದಾರೆ. ಇದೇ ರೀತಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕುರಿತು ಅಣಕವಾಡುತ್ತಿದ್ದವರೂ ಈಗಿನ ಚಾಟ್‌ಜಿಪಿಟಿ ಬುದ್ಧಿವಂತಿಕೆಗೆ ಬೆರಗಾಗುತ್ತಿದ್ದಾರೆ. ಇದೇ ರೀತಿ ಹತ್ತು ವರ್ಷದ ಹಿಂದೆ ಹಾರುವ ಕಾರುಗಳ ಕುರಿತು ಅಚ್ಚರಿ ತೋರಿದವರು ಮುಂದೆ ಕೆಲವು ವರ್ಷಗಳಲ್ಲಿ ಕಾರುಗಳು ನಿಜಕ್ಕೂ ಹಾರಿದಾಗ ಅಚ್ಚರಿ ಪಡದಿರಲಾರರು. ಹಾರುವ ಕಾರುಗಳು ಈ ದಶಕದ ಅಂತ್ಯದಲ್ಲಿ ಆಕಾಶದಲ್ಲಿ ಹಾರಾಟ ನಡೆಸುವ ಸಾಧ್ಯತೆಯಿದೆ ಎಂದು ಹ್ಯುಂಡೈ ಕಂಪನಿಯ ಅಧಿಕಾರಿು ಹೇಳಿದ್ದಾರೆ. ಹಾರುವ ಕಾರಿನ ಕುರಿತು ಲೇಟೆಸ್ಟ್ ವರದಿಯೊಂದು ಇಲ್ಲಿದೆ.
ಸರಕಾರಿ ಉದ್ಯೋಗ ಪರೀಕ್ಷೆ ಬರೆಯಲು ChatGPT ಬಳಸಿದ ಭೂಪ
ಕಳೆದ ಕೆಲವು ತಿಂಗಳಿನಿಂದ ಚಾಟ್‌ಜಿಪಿಟಿ ಎಂಬ ಕೃತಕ ಬುದ್ಧಿವಂತಿಕೆ ಜನಪ್ರಿಯತೆ ಪಡೆಯುತ್ತಿದೆ. ಇದರ ಬುದ್ಧಿವಂತಿಕೆ ತಲೆನೋವು ಕೂಡ ಹುಟ್ಟಿಸಿದೆ. ಚಾಟ್‌ಜಿಪಿಟಿಯಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು ಎಂದು ವಾದಿಸುವವರೂ ಇದ್ದಾರೆ. ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಮತ್ತು ಗೂಗಲ್‌ನ ಮಾಜಿ ಸಿಇಒ ಎರಿಕ್ ಸ್ಕಿಮಿಡ್ಟ್ ಅವರು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕುರಿತೂ ಆತಂಕವನ್ನೂ ಈಗಾಗಲೇ ವ್ಯಕ್ತಪಡಿಸಿದ್ದಾರೆ. ಇದೀಗ ಭಾರತದಲ್ಲಿ ಸರಕಾರಿ ಪರೀಕ್ಷೆಯೊಂದನ್ನು ಬರೆಯಲು ಚಾಟ್‌ಜಿಪಿಟಿ ನೆರವು ಪಡೆದಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತ ವರದಿ ಇಲ್ಲಿದೆ ಓದಿ.