Vivo V27: ವಿ27 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ ವಿವೊ, ದರವೆಷ್ಟು? ಏನೆಲ್ಲ ವಿಶೇಷತೆಗಳಿವೆ? ಇಲ್ಲಿದೆ ವಿವರ
ವಿವೊ ಇಂಡಿಯಾವು ನೂತನ ವಿ27 ಫೋನ್‌ಗಳ ದರವನ್ನು ಘೋಷಿಸಿದೆ. 8ಜಿಬಿ ರಾಮ್ + 128ಜಿಬಿ ಸ್ಟೋರೇಜ್ ನ ವಿವೊ ವಿ27 ಪ್ರೊನ ಆರಂಭಿಕ ದರ 37,999 ರೂ. ಇದೆ.
ವಿವೊ ಕಂಪನಿಯು ತನ್ನ ಈ ಹಿಂದಿನ ವಿ25 ಸರಣಿಯ ಫೋನ್‌ಗಳ ಯಶಸ್ಸಿನಿಂದ ಖುಷಿಗೊಂಡು ಇದೀಗ ವಿ27 ಸರಣಿಯಲ್ಲಿ ವಿವೊ ವಿ27 ಪ್ರೊ, ವಿವೊ ವಿ27 ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಈ ಎರಡು ಮಾಡೆಲ್‌ಗಳು ಫನ್‌ಟಚ್ ಆಪರೇಟಿಂಗ್ ಸಿಸ್ಟಮ್ 13 ಹೊಂದಿವೆ. ಇವು ಆಂಡ್ರಾಯ್ಡ್ 13 ಆಧರಿತ ಆಪರೇಟಿಂಗ್ ಸಿಸ್ಟಮ್‌ಗಳು. ಇವು ಹೈಎಂಡ್ ಮೀಡಿಯಾಟೆಕ್ ಪ್ರೊಸೆಸ್ ಹೊಂದಿವೆ.
ಈ ಸ್ಮಾರ್ಟ್‌ಫೋನ್‌ಗಳು 120 ಹಟ್ಸ್ ರಿಫ್ರೆಶ್ ರೇಟ್ ಇರುವ 3ಡಿ ಕರ್ವಡ್ ಸ್ಕ್ರೀನ್ ಹೊಂದಿವೆ. ವಿಶೇಷ ಎಂದರೆ ಈ ಫೋನ್‌ಗಳ ಹಿಂಬದಿಯ ಫ್ಯಾನೆಲ್ ಬಣ್ಣ ಬದಲಾಯಿಸುವ ಗುಣ ಹೊಂದಿವೆ. ಮಾತ್ರವಲ್ಲದೆ ಈ ಎರಡು ಮಾಡೆಲ್‌ಗಳಲ್ಲಿ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳಿವೆ.
ವಿವೊ ವಿ27 ಪ್ರೊನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 8200 ಎಸ್‌ಒಸಿ ಇದೆ. ಮತ್ತೊಂದು ವಿ27 ಸ್ಪಾರ್ಟ್‌ಫೋನ್‌ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7200 5G ಎಸ್‌ಒಸಿ ಫೀಚರ್ ಇದೆ.
ವಿವೊ ವಿ27 ಪ್ರೊ, ವಿವೊ ವಿ27:ವಿವೊ ಇಂಡಿಯಾವು ನೂತನ ವಿ27 ಫೋನ್‌ಗಳ ದರವನ್ನು ಘೋಷಿಸಿದೆ. 8 ಜಿಬಿ ರಾಮ್ + 128 ಜಿಬಿ ಸ್ಟೋರೇಜ್ ನ ವಿವೊ ವಿ27 ಪ್ರೊನ ಆರಂಭಿಕ ದರ 37,999 ರೂ. ಇದೆ. 8 ಜಿಬಿ ರಾಮ್ + 256 ಜಿಬಿ ಸ್ಟೋರೇಜ್ ಮಾದರಿಗೆ 39,999 ರೂ. ಆರಂಭಿಕ ದರ ಇದೆ. 12 ಜಿಬಿ ರಾಮ್ + 256 ಜಿಬಿ ಸ್ಟೋರೇಜ್ ಹೊಂದಿರುವ ಟಾಪ್ ಎಂಡ್ ಮಾಡೆಲ್‌ನ ಆರಂಭಿಕ ದರ 42,999 ರೂ. ಇದೆ. ಇವೆಲ್ಲ ಪ್ರೊ ದರಗಳು.
ವಿವೊ ವಿ27ನ 8 ಜಿಬಿ ರಾಮ್ + 128 ಜಿಬಿ ಸ್ಟೋರೇಜ್‌ನ ಆರಂಭಿಕ ದರ 32,999 ರೂ. ಇದೆ. 12 ಜಿಬಿ ರಾಮ್ + 256 ಜಿಬಿ ಸ್ಟೋರೇಜ್‌ನ ಮಾಡೆಲ್ ದರ 36,999 ರೂ. ಇದೆ. ಈ ಫೋನ್‌ಗಳು ಮ್ಯಾಜಿಕ್ ಬ್ಲೂ ಮತ್ತು ನೋಬಲ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ದೊರಕುತ್ತದೆ.
ನೂತನ ಫೋನ್‌ಗಳು ಫ್ಲಿಪ್‌ಕಾರ್ಟ್, ವಿವೊ ಆನ್‌ಲೈನ್ ಸ್ಟೋರ್, ಆಫ್‌ಲೈನ್ ರಿಟೇಲ್ ಪಾಲುದಾರ ಅಂಗಡಿಗಳಲ್ಲಿ ಲಭ್ಯವಿರಲಿದೆ. ಇಂದಿನಿಂದ ವಿವೊ ವಿ27 ಪ್ರೊ ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಮಾರ್ಚ್ 6ರ ಬಳಿಕ ಗ್ರಾಹಕರಿಗೆ ಲಭ್ಯವಾಗಲಿದೆ. ಆದರೆ, ವಿವೊ ವಿ27ಸ್ಮಾರ್ಟ್‌ಫೋನ್ ಮಾರ್ಚ್ 23ರ ಬಳಿಕ ದೊರಕಲಿದೆ.
ವಿವೊ ವಿ27 ಪ್ರೊ, ವಿವೊ ವಿ27: ಇವೆರಡೂ ಮಾಡೆಲ್‌ಗಳಲ್ಲಿಯೂ ವಿನೂತನ ಫೀಚರ್‌ಗಳಿವೆ. ಇವೆರಡೂ ಫನ್‌ಟಚ್ ಒಎಸ್ 13 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಇವೆರಡಲ್ಲಿಯೂ 6.78 ಇಂಚಿನ ಫೂಲ್ ಹೆಚ್‌ಡಿ ಪ್ಲಸ್ (1,080x2,400 pixels) ಅಮೊಲೆಡ್ ಡಿಸ್‌ಪ್ಲೇ ಇದೆ.
ಇವೆರಡರಲ್ಲಿಯೂ ತ್ರಿವಳಿ ಕ್ಯಾಮೆರಾಗಳಿವೆ. ಇದರ 50 ಮೆಗಾ ಫಿಕ್ಸೆಲ್ ಸೋನಿ IMX766V ಕ್ಯಾಮೆರಾ ಇದೆ. ಎರಡನೇ ಕ್ಯಾಮೆರಾ 8 ಮೆಗಾ ಫಿಕ್ಸೆಲ್ ಕ್ಯಾಮೆರಾ ಇದೆ. ಮತ್ತೊಂದು 2 ಮೆಗಾಫಿಕ್ಸೆಲ್ ಸೆನ್ಸಾರ್ ಆಗಿದೆ. 5ಜಿ ಬೆಂಬಲ, ವೈಫೈ, ಬ್ಲೂಟೂತ್ v5.3, ಜಿಪಿಎಸ್, ಬೈಡು, ಗ್ಲೋನಸ್, ಗಲೆನಿಯೊ, ನಾವಿಕ್, ಯುಎಸ್‌ಬಿ ಟೈಪ್ ಸಿ ಫೋರ್ಟ್ ಇತ್ಯಾದಿ ಫೀಚರ್‌ಗಳನ್ನು ಹೊಂದಿವೆ.
