Modi in Wayanad: ಕೇರಳ ವಯನಾಡು ಭೂಕುಸಿತ ದುರಂತ, ರಾಷ್ಟ್ರೀಯ ವಿಪತ್ತು ಘೋಷಣೆ ಸಾಧ್ಯತೆ, ಖುದ್ದು ಪರಿಸ್ಥಿತಿ ಪರಾಮರ್ಶಿಸಿದ ಪ್ರಧಾನಿ-wayanad landslide pm modi visited kerala rain hit wayanad area with cm pinarayi vijayan demand on national disaster ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modi In Wayanad: ಕೇರಳ ವಯನಾಡು ಭೂಕುಸಿತ ದುರಂತ, ರಾಷ್ಟ್ರೀಯ ವಿಪತ್ತು ಘೋಷಣೆ ಸಾಧ್ಯತೆ, ಖುದ್ದು ಪರಿಸ್ಥಿತಿ ಪರಾಮರ್ಶಿಸಿದ ಪ್ರಧಾನಿ

Modi in Wayanad: ಕೇರಳ ವಯನಾಡು ಭೂಕುಸಿತ ದುರಂತ, ರಾಷ್ಟ್ರೀಯ ವಿಪತ್ತು ಘೋಷಣೆ ಸಾಧ್ಯತೆ, ಖುದ್ದು ಪರಿಸ್ಥಿತಿ ಪರಾಮರ್ಶಿಸಿದ ಪ್ರಧಾನಿ

PM in Kerala ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ವಯನಾಡು ಜಿಲ್ಲೆಯ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ವಯನಾಡಿಗೆ ಭೇಟಿ ನೀಡಿದಾಗ ಅಲ್ಲಿನ ಜಿಲ್ಲಾಧಿಕಾರಿಯೂ ಆಗಿರುವ ಕನ್ನಡತಿ ಡಿ.ಮೇಘಶ್ರೀ ಹಾಗೂ ಸೇನಾಧಿಕಾರಿಗಳು ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಯನಾಡಿಗೆ ಭೇಟಿ ನೀಡಿದಾಗ ಅಲ್ಲಿನ ಜಿಲ್ಲಾಧಿಕಾರಿಯೂ ಆಗಿರುವ ಕನ್ನಡತಿ ಡಿ.ಮೇಘಶ್ರೀ ಹಾಗೂ ಸೇನಾಧಿಕಾರಿಗಳು ಮಾಹಿತಿ ನೀಡಿದರು.

ವಯನಾಡು: ಕೇರಳದ ವಯನಾಡು ಜಿಲ್ಲೆಯ ಮೇಪ್ಪಾಡಿ ಭಾಗದಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತ ಹಾಗೂ ಆನಂತರದ ದುರಂತದ ಬಳಿಕ ಆಗಿರುವ ಹಾನಿ ಪರಿಶೀಲನೆಗೆ ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಶನಿವಾರ ಆಗಮಿಸಿದರು.ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ದುರಂತ ನಡೆದ ಸ್ಥಳ, ಹಾನಿಗೆ ಒಳಗಾದ ಪ್ರದೇಶದ ಜನರ ಪರಿಹಾರ ಶಿಬಿರಕ್ಕೆ ಭೇಟಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತೊಂದರೆಗೆ ಒಳಗಾದವರಿಗೆ ನಿಮ್ಮ ಪರವಾಗಿ ಕೇಂದ್ರ ಸರ್ಕಾರ ಇದೆ ಎಂದು ಅಭಯ ನೀಡದರು. ಸ್ಥಳೀಯ ಅಧಿಕಾರಿಗಳು ದುರಂತದ ವಿವರಗಳನ್ನು ಒದಗಿಸಿದರು. ಆನಂತರ ಸಭೆಯಲ್ಲೂ ಆಗಬೇಕಾದ ಕೆಲಸದ ಕುರಿತು ಮಾಹಿತಿಯನ್ನು ವಿನಿಮಯ ಮಾಡಿಕೊಂಡರು. ಜತೆಗೆ ಇದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಕೇರಳದ ಈ ಘಟನೆಯನ್ನು ರಾಷ್ಟ್ರೀಯ ವಿಪತ್ತು ಎನ್ನುವ ಘೋಷಣೆ ಮಾಡಿ ವಿಶೇಷ ಪರಿಹಾರವನ್ನು ಪ್ರಕಟಿಸಬೇಕು ಎಂದು ಪ್ರಧಾನಿಗೆ ಮನವಿ ಮಾಡಿದರು.


ವಯನಾಡಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ಅವರ ಮಕ್ಕಳೊಂದಿಗೂ ಮೋದಿ ಕೆಲಹೊತ್ತು ಕಳೆದರು. ಮಕ್ಕಳ ಮೊಗದಲ್ಲಿ ನಗುವನ್ನೂ ಮೂಡಿಸಿದರು. ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನೂ ವಿಚಾರಿಸಿದರು. ಅಲ್ಲದೇ ಪರಿಹಾರ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿ ತಂಗಿರುವ ಹಲವಾರು ಕುಟುಂಬದರಿಗೆ ಅಭಯ ನೀಡಿದರು ಮೋದಿ. ಹಿರಿಯರು, ಯುವಕ ಯುವತಿಯರೊಂದಿಗೆ ಒಡನಾಡಿದರು. ಪ್ರವಾಹದಿಂದ ನಾವೆಲ್ಲವನ್ನೂ ಕಳೆದುಕೊಂಡಿದ್ದೇವೆ. ನಮಗೆ ಆಸರೆಯಾಗಿ ಎಂದು ಪ್ರಧಾನಿಗೆ ಹಲವರು ಅಲವತ್ತುಕೊಂಡರು. ಕಷ್ಟವನ್ನು ಹೇಳಿಕೊಂಡು ಹಲವರು ಕಣ್ಣೀರಾದರು. ಎಲ್ಲವನ್ನೂ ಕಣ್ಣಾರೆ ಕಂಡರು ಪ್ರಧಾನಿ. ಘಟನೆ ದಿನದ ಸನ್ನಿವೇಶ, ಈವರೆಗೂ ಆಗಿರುವ ಅನಾಹುತ, ಮುಂದೆ ಆಗಬೇಕಾದ ಕೆಲಸಗಳ ಪಟ್ಟಿಯನ್ನು ಪಡೆದುಕೊಂಡರು.

ಹೀಗಿತ್ತು ಮೋದಿ ರೌಂಡ್ಸ್‌

ಪ್ರಧಾನಿ ಮೋದಿ ಅವರು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಅವರೊಂದಿಗೆ ಪೀಡಿತ ಪ್ರದೇಶಗಳಲ್ಲಿ ನಡೆದುಕೊಂಡು ಹೊರಟರು. ಕನ್ನಡತಿಯಾಗಿರುವ ವಯನಾಡು ಜಿಲ್ಲಾಧಿಕಾರಿ ಡಿ.ಆರ್‌.ಮೇಘಶ್ರೀ, ಸೇನಾ ಅಧಿಕಾರಿಗಳೊಂದಿಗೆ ಭೂಕುಸಿತವಾದ ಸ್ಥಳಕ್ಕೂ ಭೇಟಿ ನೀಡಿ ವಿವರ ಪಡೆದುಕೊಂಡರು.

ಪ್ರತಿಪಕ್ಷಗಳ 'ರಾಷ್ಟ್ರೀಯ ವಿಪತ್ತು' ಟ್ಯಾಗ್ ಬೇಡಿಕೆಯ ನಡುವೆ ಭೂಕುಸಿತ ಪೀಡಿತ ವಯನಾಡ್ ಗೆ ಪ್ರಧಾನಿ ಮೋದಿಗೆ ಆಗಮಿಸಿದ್ದರು. ಕಳೆದ ವಾರ ಸಂಭವಿಸಿದ ಭೀಕರ ಭೂಕುಸಿತದಿಂದ 300 ಕ್ಕೂ ಹೆಚ್ಚು ಸಾವುಗಳು ಮತ್ತು ನೂರಾರು ಮನೆಗಳ ಮೇಲೆ ಪರಿಣಾಮ ಬೀರಿದ ಕೇರಳದ ವಯನಾಡ್ ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಿದರು. ವಿಪತ್ತು ಪೀಡಿತ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿದ ಮೋದಿ, ಹಾನಿಯ ಪ್ರಮಾಣವನ್ನು ಮೌಲ್ಯಮಾಪನ ಮಾಡಲು ವೈಮಾನಿಕ ಸಮೀಕ್ಷೆ ನಡೆಸಿದರು. ಡಿಡಿ ನ್ಯೂಸ್ ಹಂಚಿಕೊಂಡಿರುವ ತುಣುಕಿನಲ್ಲಿ ಮೋದಿ ಪ್ರವಾಸದ ವಿವರ ಇದೆ.

ಭೂಕುಸಿತ ಪೀಡಿತ ಪ್ರದೇಶಗಳಾದ ಚೂರಲ್ಮಾಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಕುಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಲು ಅವರು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಅನ್ನು ಬಳಸಿದರು. ವೀಡಿಯೊದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಪ್ರಧಾನಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಕಣ್ಣೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮೋದಿ, ಜುಲೈ 30 ರಂದು ಸಂಭವಿಸಿದ ಭೂಕುಸಿತದಿಂದ ಉಂಟಾದ ಹಾನಿಯನ್ನು ವೈಯಕ್ತಿಕವಾಗಿ ವೀಕ್ಷಿಸಲು ಚೂರಲ್ಮಾಲಾ ಪ್ರದೇಶದಲ್ಲಿ ಸುತ್ತಾಡಿದರು.

'ರಾಷ್ಟ್ರೀಯ ವಿಪತ್ತು' ಬೇಡಿಕೆ ಏಕೆ?

ವಿಪತ್ತನ್ನು "ಅಪರೂಪದ ತೀವ್ರತೆ" ಅಥವಾ "ತೀವ್ರ ಸ್ವರೂಪ" ಎಂದು ಘೋಷಿಸಿದಾಗ, ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಬಲವನ್ನು ನೀಡಲಾಗುತ್ತದೆ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (NDRF) ಹೆಚ್ಚುವರಿ ಸಹಾಯವನ್ನು ಪರಿಗಣಿಸಬಹುದು.

ಆದಾಗ್ಯೂ, ನೈಸರ್ಗಿಕ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ವರ್ಗೀಕರಿಸಲು ಯಾವುದೇ ಕಾರ್ಯನಿರ್ವಾಹಕ ಅಥವಾ ಕಾನೂನು ನಿಬಂಧನೆ ಅಸ್ತಿತ್ವದಲ್ಲಿಲ್ಲ.

ಕೇಂದ್ರ ಸರ್ಕಾರ ನಿರ್ವಹಿಸುವ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯನ್ನು ವಿಪತ್ತು ಸಮಯದಲ್ಲಿ ತುರ್ತು ಪರಿಹಾರ, ವಿಪತ್ತು ಪ್ರತಿಕ್ರಿಯೆ ಮತ್ತು ಪುನರ್ವಸತಿಯ ವೆಚ್ಚಗಳನ್ನು ಭರಿಸಲು ಬಳಸಲಾಗುತ್ತದೆ.

ಈ ವರ್ಷದ ಏಪ್ರಿಲ್ 1 ರ ಹೊತ್ತಿಗೆ, ಕೇರಳ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ಖಾತೆಯಲ್ಲಿ ಸುಮಾರು 395 ಕೋಟಿ ರೂ. ಪ್ರಸಕ್ತ ವರ್ಷದ ಎಸ್ಡಿಆರ್ಎಫ್ನ ಕೇಂದ್ರ ಪಾಲಿನ ಮೊದಲ ಕಂತಿನ 145.60 ಕೋಟಿ ರೂ.ಗಳನ್ನು ಜುಲೈ 31 ರಂದು ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಪಿಟಿಐ ತಿಳಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.