Self Esteem Tips: ಸ್ವಯಂಗೌರವ ಬೆಳೆಸಿಕೊಳ್ಳುವುದು ಹೇಗೆ? ಸ್ವಾಭಿಮಾನ, ಆತ್ಮಾಭಿಮಾನ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಅಮೂಲ್ಯ ಸಲಹೆಗಳು
- ಸ್ವಯಂ ಗೌರವ ಬೆಳೆಸಿಕೊಳ್ಳುವುದು ನಿಧಾನವಾಗಿ ರೂಢಿಸಿಕೊಂಡು ಬರುವಂತಹ ಒಂದು ಪ್ರಕ್ರಿಯೆ. ತನ್ನ ಬಗ್ಗೆ ಸಕಾರಾತ್ಮಕ, ಆರೋಗ್ಯಕರ ಗ್ರಹಿಕೆಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ಇದಾಗಿದೆ. ಸ್ವಯಂಗೌರವ, ಆತ್ಮಗೌರವ, ಆತ್ಮಾಭಿಮಾನ, ಸೆಲ್ಫ್ ಎಸ್ಟೀಮ್ ಇತ್ಯಾದಿ ಪದಗಳಿಂದ ಕರೆಯಲ್ಪಡುವ ಸ್ವಗೌರವವನ್ನು ಹೆಚ್ಚಿಸಿಕೊಳ್ಳಲು ಈ ಮುಂದಿನ ಸಲಹೆಗಳು ನಿಮಗೆ ನೆರವಾಗಬಹುದು.
- ಸ್ವಯಂ ಗೌರವ ಬೆಳೆಸಿಕೊಳ್ಳುವುದು ನಿಧಾನವಾಗಿ ರೂಢಿಸಿಕೊಂಡು ಬರುವಂತಹ ಒಂದು ಪ್ರಕ್ರಿಯೆ. ತನ್ನ ಬಗ್ಗೆ ಸಕಾರಾತ್ಮಕ, ಆರೋಗ್ಯಕರ ಗ್ರಹಿಕೆಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ಇದಾಗಿದೆ. ಸ್ವಯಂಗೌರವ, ಆತ್ಮಗೌರವ, ಆತ್ಮಾಭಿಮಾನ, ಸೆಲ್ಫ್ ಎಸ್ಟೀಮ್ ಇತ್ಯಾದಿ ಪದಗಳಿಂದ ಕರೆಯಲ್ಪಡುವ ಸ್ವಗೌರವವನ್ನು ಹೆಚ್ಚಿಸಿಕೊಳ್ಳಲು ಈ ಮುಂದಿನ ಸಲಹೆಗಳು ನಿಮಗೆ ನೆರವಾಗಬಹುದು.
(1 / 6)
ನಿಮ್ಮಲ್ಲಿರುವ ನಕಾರಾತ್ಮಕ ಅಂಶಗಳನ್ನು ಗುರುತಿಸಿ, ಸವಾಲು ಮಾಡಿ: ಆಂತರಿಕ ಸಂಭಾಷಣೆಗೆ ಆದ್ಯತೆ ನೀಡಿ. ನಿಮ್ಮಲ್ಲಿ ಉಂಟಾಗುವ ಯಾವುದೇ ನಕಾರಾತ್ಮಕ ಆಲೋಚನೆಗಳು ಅಥವಾ ಸ್ವಯಂ ಟೀಕೆಗಳನ್ನು ಗುರುತಿಸಿ. ಧನಾತ್ಮಕ ಅಂಶಗಳ ಮೂಲಕ ಅವುಗಳನ್ನು ಬದಲಾಯಿಸಿ ಅಂತಹ ನಂಬಿಕೆಗಳಿಗೆ ಚಾಲೆಂಜ್ ಮಾಡಿ. ದೌರ್ಬಲ್ಯದ ಕುರಿತು ಹೆಚ್ಚು ಆಲೋಚಿಸದೆ ಸಾಮರ್ಥ್ಯಗಳ ಕುರಿತು ಹೆಚ್ಚಿನ ಗಮನ ಕೇಂದ್ರೀಕರಿಸಿ. (Unsplash)
(2 / 6)
ವಾಸ್ತವಿಕ ಗುರಿಗಳನ್ನು ಹೊಂದಿ: ಅಲ್ಪಾವಧಿ ಮತ್ತು ದೀರ್ಘಾವಧಿಯ ಸಾಧಿಸಬಹುದಾದ ಗುರಿಗಳನ್ನು ನಿಮಗೆ ನೀವೇ ನಿಗದಿ ಮಾಡಿ. ಅವುಗಳನ್ನು ಸಣ್ಣ ಹಂತಗಳಾಗಿ ವಿಭಜಿಸಿ, ಈಡೇರಿಸಲು ಆರಂಭಿಸಿ. ಈ ರೀತಿ ನಿಮ್ಮ ಪ್ರಗತಿಯು ಹೆಚ್ಚುತ್ತಾ ಹೋದಂತೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ಸಾಧನೆಯ ಪ್ರಜ್ಞೆಯನ್ನು ನೀಡುತ್ತದೆ. (Unsplash)
(3 / 6)
ಸ್ವಯಂಕಾಳಜಿ ಅಭ್ಯಾಸ ಮಾಡಿರಿ: ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಗಮನ ನೀಡಿ. ನೀವು ಆನಂದಿಸುವ ಮತ್ತು ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅಂದರೆ, ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ, ಸಾಕಷ್ಟು ನಿದ್ರೆ ಮಾಡುವುದು, ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು, ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡುವುದು ಮತ್ತು ಹವ್ಯಾಸಗಳು ಅಥವಾ ಆಸಕ್ತಿಗಳನ್ನು ಅನುಸರಿಸುವುದು ಇತ್ಯಾದಿಗಳನ್ನು ಇದು ಒಳಗೊಂಡಿದೆ. (Unsplash)
(4 / 6)
ನಿಮ್ಮ ಸುತ್ತ ಪಾಸಿಟೀವ್ ಮತ್ತು ಬೆಂಬಲ ನೀಡುವ ಜನರು ಇರಲಿ: ನಿಮ್ಮನ್ನು ಸದಾ ಟೀಕೆ ಮಾಡುವ, ನಕಾರಾತ್ಮಕವಾಗಿ ಮಾತನಾಡುವ ವ್ಯಕ್ತಿಗಳಿಂದ ದೂರವಿರಿ. ನಿಮ್ಮನ್ನು ಉನ್ನತೀಕರಿಸುವ ಮತ್ತು ಪ್ರೋತ್ಸಾಹಿಸುವ ವ್ಯಕ್ತಿಗಳ ಸ್ನೇಹ ಮಾಡಿ. ಇದರಿಂದ ನಿಮ್ಮ ಸ್ವಾಭಿಮಾನ ಹೆಚ್ಚುತ್ತದೆ. ನಿಮ್ಮ ಯಶಸ್ಸಿಗೆ ಬೆಂಬಲವೂ ದೊರಕುತ್ತದೆ. (Unsplash)
(5 / 6)
ವೈಫಲ್ಯಗಳು ಮತ್ತು ಹಿನ್ನಡೆಗಳಿಂದ ಕಲಿಯಿರಿ: ತಪ್ಪುಗಳು ಅಥವಾ ವೈಫಲ್ಯಗಳು ಎಲ್ಲರಿಗೂ ಎದುರಾಗುತ್ತದೆ. ಆದರೆ, ಇವು ನೀವು ಕಲಿಯಲು ಇರುವ ಅವಕಾಶಗಳು. ಇದು ಸಹಜ. ಇದಕ್ಕಾಗಿ ಕುಗ್ಗಬೇಡಿ. ಏನು ತಪ್ಪಾಗಿದೆ ಎಂಬುದನ್ನು ವಿಶ್ಲೇಷಿಸಿ. ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿ. (Unsplash)
ಇತರ ಗ್ಯಾಲರಿಗಳು