Train Reservation Rules: ರೈಲ್ವೆ ಟಿಕೆಟ್ ಬುಕಿಂಗ್ ಅವಧಿಯನ್ನು 120 ರಿಂದ 60 ದಿನಕ್ಕೆ ಇಳಿಸಿದ್ದೇಕೆ? ಇಲ್ಲಿದೆ ಅಸಲಿ ಕಾರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Train Reservation Rules: ರೈಲ್ವೆ ಟಿಕೆಟ್ ಬುಕಿಂಗ್ ಅವಧಿಯನ್ನು 120 ರಿಂದ 60 ದಿನಕ್ಕೆ ಇಳಿಸಿದ್ದೇಕೆ? ಇಲ್ಲಿದೆ ಅಸಲಿ ಕಾರಣ

Train Reservation Rules: ರೈಲ್ವೆ ಟಿಕೆಟ್ ಬುಕಿಂಗ್ ಅವಧಿಯನ್ನು 120 ರಿಂದ 60 ದಿನಕ್ಕೆ ಇಳಿಸಿದ್ದೇಕೆ? ಇಲ್ಲಿದೆ ಅಸಲಿ ಕಾರಣ

Indian Railway: ರೈಲ್ವೆ ಟಿಕೆಟ್ ಕಾಯ್ದಿರಿಸುವ ಅವಧಿಯನ್ನು 120 ದಿನಗಳಿಂದ 60 ದಿನಕ್ಕೆ ಇಳಿಸಿದೆ. ನಿಜವಾಗಿಯೂ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಭಾರತೀಯ ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ.

ರೈಲ್ವೆ ಟಿಕೆಟ್ ಬುಕಿಂಗ್ ಅವಧಿಯನ್ನು 120 ರಿಂದ 60 ದಿನಕ್ಕೆ ಇಳಿಸಿದ್ದೇಕೆ
ರೈಲ್ವೆ ಟಿಕೆಟ್ ಬುಕಿಂಗ್ ಅವಧಿಯನ್ನು 120 ರಿಂದ 60 ದಿನಕ್ಕೆ ಇಳಿಸಿದ್ದೇಕೆ

ಭಾರತೀಯ ರೈಲ್ವೆ ಇಲಾಖೆಯು (Indian Railway) ನವೆಂಬರ್​​ 1ರಿಂದ ಮುಂಗಡ ರೈಲು ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ ತರಲಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ 4 ತಿಂಗಳ ಮೊದಲೇ ಟಿಕೆಟ್ ಬುಕ್ (Ticket Book) ಮಾಡುವ ಅವಕಾಶವನ್ನು 2 ತಿಂಗಳಿಗೆ ಇಳಿಸಿದೆ. ಅಂದರೆ ಟಿಕೆಟ್ ಕಾಯ್ದಿರಿಸುವ ಅವಧಿಯನ್ನು 120 ದಿನಗಳಿಂದ 60 ದಿನಕ್ಕೆ ಇಳಿಸಿದೆ. ನಿಜವಾದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲೆಂದು ರೈಲ್ವೆ ಮಂಡಳಿ ಈ ಕ್ರಮ ಕೈಗೊಂಡಿದೆ. ಆದರೆ, ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಏನು? ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದ್ದೇಕೆ? ಇಲ್ಲಿದೆ ವಿವರ.

ಅಕ್ಟೋಬರ್ 31ರ ತನಕ 120 ದಿನಗಳ ಟಿಕೆಟ್ ಬುಕಿಂಗ್​​ಗೆ ಅವಕಾಶ ಇರುತ್ತದೆ. ಆದರೆ ಅದರ ನಂತರ 60 ದಿನಕ್ಕೆ ಇಳಿಯಲಿದೆ. ಬುಕಿಂಗ್ ಸಮಯ ಇಳಿಸಲು ಪ್ರಮುಖ ಕಾರಣ ಏನೆಂದರೆ, 4 ತಿಂಗಳ ಟಿಕೆಟ್ ಕಾಯ್ದಿರಿಸುವ ಅವಧಿಯಲ್ಲಿ ಶೇ 21ರಷ್ಟು ಮಂದಿ ಟಿಕೆಟ್ ಕ್ಯಾನ್ಸಲ್ ಮಾಡುತ್ತಿದ್ದರು. ಇನ್ನೂ ಶೇ 5ರಷ್ಟು ಮಂದಿ ಟಿಕೆಟ್ ಬುಕ್ ರದ್ದು ಮಾಡದೆಯೇ ಪ್ರಯಾಣ ಕೈಗೊಳ್ಳುತ್ತಿರಲಿಲ್ಲ. ಇದು ಪ್ರಾಮಾಣಿಕ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿತ್ತು. ಹಾಗಾಗಿ ಇದೆಲ್ಲಾ ಬೆಳಕಿಗೆ ಬಂದ ನಂತರ ಭಾರತೀಯ ರೈಲ್ವೆ 120 ರಿಂದ 60 ದಿನಕ್ಕೆ ಇಳಿಸಿದೆ.

ರೈಲ್ವೆ ಇಲಾಖೆಗೂ ನಷ್ಟವಾಗಿದ್ದುಂಟು

4 ತಿಂಗಳ ಮೊದಲೇ ಟಿಕೆಟ್​ ಬುಕ್ ಮಾಡಿದ್ದವರ ಪೈಕಿ ಎಷ್ಟೋ ಮಂದಿ ತಮ್ಮ ಪ್ರಯಾಣದ ದಿನಾಂಕ ಸಮೀಪಕ್ಕೆ ಬಂದ ತಕ್ಷಣವೇ ವಿವಿಧ ಕಾರಣಗಳಿಂದ ಟಿಕೆಟ್ ಕ್ಯಾನ್ಸಲ್ ಮಾಡಿದ ಉದಾಹರಣೆಗಳಿವೆ. ಹಬ್ಬ ಹರಿದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆದಿವೆ. ಹೀಗಾಗಿ, ನಿಜವಾದ ಪ್ರಯಾಣಿಕರು ತಮಗೆ ಟಿಕೆಟ್ ಸಿಗದೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ವಿದೇಶಿ ಪ್ರಯಾಣಿಕರು ಟಿಕೆಟ್​ ಸಿಗದೆ ತೊಂದರೆ ಅನುಭವಿಸಿದ್ದಾರೆ. ಕೆಲವೊಂದಿಷ್ಟು ಮಂದಿ ಟಿಕೆಟ್ ಕಾಯ್ದಿರಿಸಿದರೂ ಟ್ರೈನ್​ನಲ್ಲಿ ಪ್ರಯಾಣ ಬೆಳೆಸುವುದಿಲ್ಲ. ಇದು ರೈಲ್ವೆ ಇಲಾಖೆಗೂ ದೊಡ್ಡ ಮೊತ್ತದಲ್ಲಿ ನಷ್ಟವಾಗಲಿದೆ.

ನಿಜವಾದ ಪ್ರಯಾಣಿಕರಿಗೆ ಟಿಕೆಟ್ ಲಭ್ಯತೆಯನ್ನು ಸುಧಾರಿಸುವ ಗುರಿ ಈ ನಿರ್ಧಾರದ ಹಿಂದಿದೆ. ಇದು ಕಾಯ್ದಿರಿಸಿದ ಬರ್ತ್‌ಗಳು ವ್ಯರ್ಥ ಆಗುವುದಿಲ್ಲ ಎಂದು ರೈಲ್ವೆ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಜನರು ಬುಕ್‌ ಮಾಡಿಟ್ಟು ನಂತರ ರದ್ದುಪಡಿಸುತ್ತಿದ್ದ ಕಾರಣ ಭಾರತೀಯ ರೈಲ್ವೆಗೂ ಗೊಂದಲ ಉಂಟಾಗುತ್ತಿತ್ತು. ಸ್ಪೆಷಲ್ ಟ್ರೈನ್ ಬಿಡಬೇಕಾ? ಬೇಡವೇ ಎನ್ನುವ ಗೊಂದಲ ಸೃಷ್ಟಿಸುತ್ತಿತ್ತು. ಇದೀಗ ಅದಕ್ಕೆಲ್ಲಾ ಪೂರ್ಣವಿರಾಮ ಇಡಲು ರೈಲ್ವೆ ಮಂಡಳಿ ನಿರ್ಧರಿಸಿದೆ.

ವಿದೇಶಿ ಪ್ರವಾಸಿಗರಿಗೆ ಬದಲಾವಣೆ ಇಲ್ಲ

ಮುಂಗಡ ಕಾಯ್ದಿರಿಸುವಿಕೆಯ ಅವಧಿ (ARP)ಯನ್ನು ಭಾರತೀಯ ರೈಲ್ವೆ ಬದಲಾಯಿಸುತ್ತಲೇ ಇರುತ್ತದೆ. 2024ರ ಅಕ್ಟೋಬರ್ 31ರ ಮೊದಲು 120 ದಿನಗಳ ಎಆರ್​ಪಿ ಅಡಿಯಲ್ಲಿ ಮಾಡಲಾದ ಎಲ್ಲಾ ಅಸ್ತಿತ್ವದಲ್ಲಿರುವ ಬುಕಿಂಗ್‌ಗಳು ಮಾನ್ಯವಾಗಿರುತ್ತವೆ. ಆದರೆ ನವೆಂಬರ್​​ 1ರಿಂದ 60 ದಿನಗಳ ಹೊಸ ಎಆರ್​ಪಿಗೆ ಅರ್ಹವಾಗಿರುತ್ತವೆ.  60 ದಿನಗಳ ಮುಂಗಡ ಮೀಸಲು ಅವಧಿ ಮೀರಿ ಮಾಡಿದ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗುತ್ತದೆ. ಅದೇ ರೀತಿ ವಿದೇಶಿ ಪ್ರವಾಸಿಗರಿಗೆ 365 ದಿನಗಳ ಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.