Pig butchering scam: ಶುರುವಾಗಿದೆ ಹಂದಿ ಕಟುಕ ವಂಚನೆ; ನಿರುದ್ಯೋಗಿ ಯುವ ಜನತೆ, ಗೃಹಿಣಿಯರು, ವಿದ್ಯಾರ್ಥಿಗಳೇ ಇವರ ಟಾರ್ಗೆಟ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pig Butchering Scam: ಶುರುವಾಗಿದೆ ಹಂದಿ ಕಟುಕ ವಂಚನೆ; ನಿರುದ್ಯೋಗಿ ಯುವ ಜನತೆ, ಗೃಹಿಣಿಯರು, ವಿದ್ಯಾರ್ಥಿಗಳೇ ಇವರ ಟಾರ್ಗೆಟ್‌

Pig butchering scam: ಶುರುವಾಗಿದೆ ಹಂದಿ ಕಟುಕ ವಂಚನೆ; ನಿರುದ್ಯೋಗಿ ಯುವ ಜನತೆ, ಗೃಹಿಣಿಯರು, ವಿದ್ಯಾರ್ಥಿಗಳೇ ಇವರ ಟಾರ್ಗೆಟ್‌

Pig butchering scam: ಪಿಗ್‌ ಬುಚರಿಂಗ್‌ ಸ್ಕ್ಯಾಮ್‌ (ಹಂದಿ ಕಟುಕ ವಂಚನೆ) ಅಥವಾ ಹೂಡಿಕೆ ವಂಚನೆ ಎಂಬ ಆನ್‌ಲೈನ್‌ ವಂಚನೆ ಕುರಿತು ಗೃಹ ಸಚಿವಾಲಯವು ಎಚ್ಚರಿಸಿದೆ. ನಿರುದ್ಯೋಗ ಯುವಕ ಯುವತಿಯರು, ಗೃಹಿಣಿಯರು, ವಿದ್ಯಾರ್ಥಿಗಳು, ಹಣ ಸಂಪಾದನೆಯ ಅವಕಾಶಗಳನ್ನು ಹುಡುಕುತ್ತಿರುವವರೇ ಈ ವಂಚಕರ ಪ್ರಮುಖ ಟಾರ್ಗೆಟ್‌ ಆಗುತ್ತಿದ್ದಾರೆ.

ಹಂದಿ ಕಟುಕ ವಂಚನೆ: ನಿರುದ್ಯೋಗಿ ಯುವ ಜನತೆ, ಗೃಹಿಣಿಯರು ಇವರ ಟಾರ್ಗೆಟ್‌
ಹಂದಿ ಕಟುಕ ವಂಚನೆ: ನಿರುದ್ಯೋಗಿ ಯುವ ಜನತೆ, ಗೃಹಿಣಿಯರು ಇವರ ಟಾರ್ಗೆಟ್‌

ಆನ್‌ಲೈನ್‌ನಲ್ಲಿ ಪ್ರತಿನಿತ್ಯ ನಾನಾ ಬಗೆಯ ವಂಚನೆಗಳು ನಡೆಯುತ್ತಿವೆ. ಇದೀಗ ಪಿಗ್‌ ಬುಚರಿಂಗ್‌ ಸ್ಕ್ಯಾಮ್‌ ಅಥವಾ ಹೂಡಿಕೆ ವಂಚನೆ ಎಂಬ ಆನ್‌ಲೈನ್‌ ವಂಚನೆ ಕುರಿತು ಗೃಹ ಸಚಿವಾಲಯವು ಮಾಹಿತಿ ನೀಡಿದೆ. ನಿರುದ್ಯೋಗ ಯುವಕ-ಯುವತಿಯರು, ಗೃಹಿಣಿಯರು, ವಿದ್ಯಾರ್ಥಿಗಳು, ಹಣ ಸಂಪಾದನೆಯ ಅವಕಾಶಗಳನ್ನು ಹುಡುಕುತ್ತಿರುವವರೇ ಈ ವಂಚಕರ ಪ್ರಮುಖ ಟಾರ್ಗೆಟ್‌ ಆಗುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಈ ಸೈಬರ್‌ ಅಪರಾಧಿಗಳು ತಮ್ಮ ಅಪರಾಧ ಕೃತ್ಯಗಳನ್ನು ನಡೆಸಲು ಗೂಗಲ್‌ ಸರ್ವೀಸ್‌ ಪ್ಲಾಟ್‌ಫಾರ್ಮ್‌ಗಳನ್ನೇ ಬಳಸುತ್ತಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. "ಬಿಗ್ ಟೆಕ್ ಪ್ಲಾಟ್‌ಫಾರ್ಮ್‌ಗಳನ್ನು ದುರುಪಯೋಗಪಡಿಸಿಕೊಂಡ ಸೈಬರ್‌ಕ್ರೈಮ್ ದೂರುಗಳು (cybercrime complaints where Big Tech platforms have been misused)" ಎಂಬ ತನ್ನ ವಾರ್ಷಿಕ ವರದಿಯಲ್ಲಿ ಗೃಹ ಸಚಿವಾಲಯವು ಸಾಕಷ್ಟು ಮಾಹಿತಿಗಳನ್ನು ಬಹಿರಂಗಪಡಿಸಿದೆ.

"ಗೂಗಲ್‌ನ ಜಾಹೀರಾತು ಪ್ಲಾಟ್‌ಫಾರ್ಮ್‌ ಮೂಲಕ ಆನ್‌ಲೈನ್‌ನಲ್ಲಿ ವಂಚಕರು ಜಾಹೀರಾತುಗಳನ್ನು ನೀಡುತ್ತಾರೆ. "ಪಿಕ್‌ ಬುಚರಿಂಗ್‌ ಸ್ಕ್ಯಾಮ್‌ ಅಥವಾ ಹೂಡಿಕೆ ವಂಚನೆ ಎಂದು ಕರೆಯಲ್ಪಡುವ ಈ ಹಗರಣವು ಜಾಗತಿಕ ವಿದ್ಯಮಾನವಾಗಿದೆ. ಈ ಮೂಲಕ ದೊಡ್ಡಮಟ್ಟದಲ್ಲಿ ಹಣ ವರ್ಗಾವಣೆ ಮತ್ತು ಸೈಬರ್‌ ಗುಲಾಮಗಿರಿಗೆ ಕಾರಣವಾಗುತ್ತಿದೆ" ಎಂದು ಗೃಹ ಸಚಿವಾಲಯದ ವರದಿ ತಿಳಿಸಿದೆ.

ಏನಿದು ಪಿಗ್‌ ಬುಚರಿಂಗ್‌ ಸ್ಕ್ಯಾಮ್‌?

ಈ ವಂಚನೆ 2016ರಲ್ಲಿ ಚೀನಾದಲ್ಲಿ ಆರಂಭವಾಯಿತು ಎನ್ನಲಾಗುತ್ತಿದೆ. ಈ ಆನ್‌ಲೈನ್‌ ವಂಚಕರು ಮೊದಲು ಬಲಿಪಶುಗಳನ್ನು ಹುಡುಕುತ್ತಾರೆ. ತಾವು ಆಯ್ಕೆ ಮಾಡಿಕೊಂಡ ವ್ಯಕ್ತಿಗಳಲ್ಲಿ ನಂಬಿಕೆ ಮೂಡಿಸಲು ಪ್ರಯತ್ನಿಸುತ್ತಾರೆ. ಒಂದಿಷ್ಟು ಸಮಯದಲ್ಲಿ ನಂಬಿಕೆ ಗಳಿಸಿಕೊಂಡ ಬಳಿಕ ಕ್ರಿಪ್ಟೋಕರೆನ್ಸಿ ಅಥವಾ ಇತರೆ ಕೆಲವು ಲಾಭದಾಯಕ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವಂತೆ ಮನವೋಲಿಸುತ್ತಾರೆ. ಬಳಿಕ ಇವರ ಹಣವನ್ನು ಲಪಟಾಯಿಸುತ್ತಾರೆ.

ಇದಕ್ಕೆ ಹಂದಿ ಕಟುಕ ಹಗರಣ ಎಂಬ ಹೆಸರು ಏಕೆ?

ಫಿಗ್‌ ಬುಚರಿಂಗ್‌ ಸ್ಕ್ಯಾಮ್‌ ಅನ್ನು ಕನ್ನಡದಲ್ಲಿ ಹಂದಿ ಕಟುಕ ವಂಚನೆ ಎಂದು ಅರ್ಥೈಸಿಕೊಳ್ಳಬಹುದು. ಹಂದಿಯನ್ನು ಕಟುಕರು ಕೊಲ್ಲುವ ಮುನ್ನ ಚೆನ್ನಾಗಿ ಕೊಬ್ಬಿಸುತ್ತಾರೆ. ಇದೇ ಕಾರಣಕ್ಕೆ ಈ ವಂಚನೆಗೆ ಫಿಗ್‌ ಬುಚರಿಂಗ್‌ ಸ್ಕ್ಯಾಮ್‌ ಹೆಸರು ಬಂದಿದೆ.

ಸದ್ಯ ಈ ವಂಚನೆಯನ್ನು ತಡೆಯಲು ಇಂತಹ ವಂಚನೆಯ ಕುರಿತು ತುರ್ತು ಮಾಹಿತಿ ಹಂಚಿಕೊಳ್ಳುವಂತೆ ಗೂಗಲ್‌ ಜತೆ ಭಾರತದ ಸೈಬರ್‌ ಕ್ರೈಮ್‌ ಕೋ ಆರ್ಡಿನೇಷನ್‌ ಸೆಂಟರ್‌(ಐ4ಸಿ) ಪಾಲುದಾರಿಕೆ ಮಾಡಿಕೊಂಡಿದೆ.

ಭಾರತದಲ್ಲಿ ಸಾಲ ನೀಡುವ ಅಕ್ರಮ ಅಪ್ಲಿಕೇಷನ್‌ಗಳನ್ನು ಪ್ರಚಾರ ಮಾಡಲು ಸೈಬರ್‌ ಅಪರಾಧಿಗಳು ಫೇಸ್‌ಬುಕ್‌ನ ಸ್ಪಾನ್ಸರ್ಡ್‌ ಪೋಸ್ಟ್‌ಗಳನ್ನು, ಜಾಹೀರಾತುಗಳನ್ನು ಬಳಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಈ ರೀತಿಯ ವಂಚಕ ಲಿಂಕ್‌ಗಳನ್ನು ಗುರುತಿಸಿ ಕ್ರಮಕೈಗೊಳ್ಳಲಾಗುತ್ತಿದೆ.

ಇದೇ ಸಮಯದಲ್ಲಿ ಭಾರತದಲ್ಲಿ ಸೈಬರ್ ಕ್ರಿಮಿನಲ್‌ಗಳು ದುರುಪಯೋಗಪಡಿಸಿಕೊಳ್ಳುವ ದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ವಾಟ್ಸಪ್‌ ಪರಿಣಮಿಸಿದೆ ಎಂಬ ಗೃಹ ಸಚಿವಾಲಯದ ವಾರ್ಷಿಕ ವರದಿ ತಿಳಿಸಿದೆ.

ವಂಚಕರಿಂದ ಪಾರಾಗಲು ಈ ಕ್ರಮ ಅನುಸರಿಸಿ

  • ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸುವ ಅಪರಿಚಿತ, ಅನುಮಾನಸ್ಪದ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. ವಿಶೇಷವಾಗಿ ಹಣ ಹೂಡಿಕೆ ಮಾಡಿ ಎಂದು ಆಮೀಷ ಒಡ್ಡುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ.
  • ಆನ್‌ಲೈನ್‌ನಲ್ಲಿ ಅಪರಿಚಿತ ಸ್ನೇಹಿತರ ಜತೆ ಹಣಕಾಸು ವ್ಯವಹಾರ ಬೇಡ. ಆನ್‌ಲೈನ್‌ನಲ್ಲಿ ಪರಿಚಿತರಾಗಿ ನಿಮ್ಮ ನಂಬಿಕೆ ಗಳಿಸಿಕೊಂಡ ಬಳಿಕ ಇವರು ಹಣಕಾಸು ಹೂಡಿಕೆಗೆ ಉತ್ತೇಜಿಸಬಹುದು. ನನಗೆ ಸಾಕಷ್ಟು ಲಾಭ ಬಂದಿದೆ, ನೀನೂ ಇನ್ವೆಸ್ಟ್‌ ಮಾಡು ಎಂದು ಪುಸಲಾಯಿಸಬಹುದು. ಇಂಥ ಬಲೆಗೆ ಬೀಳಬೇಡಿ. ಹಂದಿಯನ್ನು ಸಾಯಿಸುವ ಮೊದಲು ಕಟುಕ ತುಂಬಾ ಚೆನ್ನಾಗಿ ಕೊಬ್ಬಿಸುತ್ತಾನೆ. ನಿಮ್ಮಿಂದ ಹಣ ಹೂಡಿಕೆ ಮಾಡಿಸಿಕೊಳ್ಳುವ ಮುನ್ನ ತನ್ನ ನಯವಾದ ಮಾತಿನಿಂದ ಆ ವಂಚಕರು ಕೊಬ್ಬಿಸಬಹುದು ಎನ್ನುವುದು ನೆನಪಿರಲಿ.
  • ಆನ್‌ಲೈನ್‌ನಲ್ಲಿ ಯಾವುದೇ ಹಣಕಾಸು ವ್ಯವಹಾರ ಮಾಡುವಾಗ ಸಾಕಷ್ಟು ಯೋಚನೆ ಮಾಡಿ. ತಕ್ಷಣ ಶ್ರೀಮಂತರಾಗಲು ಯಾವುದೇ ದಾರಿಗಳು ಇಲ್ಲ ಎನ್ನುವುದು ತಿಳಿದಿರಲಿ.

ಇದನ್ನೂ ಓದಿ: ವಾಟ್ಸಪ್‌ನಲ್ಲಿ ಮದುವೆ ಆಮಂತ್ರಣ ತೆರೆಯುವ ಮುನ್ನ ಜಾಗ್ರತೆ! ಹೊಸ ಬಗೆಯ ಆನ್‌ಲೈನ್‌ ವಂಚನೆ ಕುರಿತು ಎಚ್ಚರಿಸಿದ ಬೆಂಗಳೂರು ಪೊಲೀಸ್‌

ಆನ್‌ಲೈನ್‌ ವಂಚನೆ ಕುರಿತು ಎಚ್ಚರವಿರಲಿ

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಸೈಬರ್‌ ಅಪರಾಧಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಡಿಜಿಟಲ್‌ ಜಾಗೃತಿ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ಸೈಬರ್‌ ಕ್ರೈಮ್‌ಗೆ ಸಂಬಂಧಪಟ್ಟ ಎಲ್ಲಾ ಸುದ್ದಿ, ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.