ಕನ್ನಡ ಸುದ್ದಿ / ಜೀವನಶೈಲಿ /
ಮೆಟ್ರೋ ರೈಲು ಮತ್ತು ಸಾಮಾನ್ಯ ರೈಲು ನಡುವೆ ಇರುವ ಪ್ರಮುಖ ವ್ಯತ್ಯಾಸಗಳೇನು? ಇಲ್ಲಿದೆ 15 ಅಂಶಗಳ ಪಟ್ಟಿ
ಸಾಮಾನ್ಯ ರೈಲು ವರ್ಸಸ್ ಮೆಟ್ರೊ ರೈಲು: ಸಾಮಾನ್ಯ ಮತ್ತು ಮೆಟ್ರೊ ರೈಲಿಗೂ ಏನು ವ್ಯತ್ಯಾಸ ಎನ್ನುವುದರ ಕುರಿತು ಸಾಕಷ್ಟು ಮಂದಿಗೆ ಗೊಂದರ ಇದ್ದೇ ಇದೆ. ಅದಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಮೆಟ್ರೋ ರೈಲು ಮತ್ತು ಸಾಮಾನ್ಯ ರೈಲು ನಡುವೆ ಇರುವ ಪ್ರಮುಖ ವ್ಯತ್ಯಾಸಗಳೇನು
ಸಾಮಾನ್ಯ ರೈಲು ವರ್ಸಸ್ ಮೆಟ್ರೊ ರೈಲು: ಭಾರತದಲ್ಲಿ ರೈಲ್ವೆ ಸಂಪರ್ಕ ಜಾಲ ದಿನದಿಂದ ದಿನಕ್ಕೆ ವಿಸ್ತರಣೆ ಕಾಣುತ್ತಿದೆ. ನಗರ, ಉಪನಗರ, ಪಟ್ಟಣ, ಹಳ್ಳಿಗಳಲ್ಲೂ ರೈಲ್ವೆ ಸಂಪರ್ಕ ಸಿಕ್ಕಿದೆ. ಪ್ರಸ್ತುತ ನಗರದ ಮೂಲೆ ಮೂಲೆಗಳು ಮೆಟ್ರೋ ಸಂಪರ್ಕ ಸಿಕ್ಕಿದೆ. ಹಾಗಾದರೆ ಸಾಮಾನ್ಯ ರೈಲಿಗೂ, ಮೆಟ್ರೋ ರೈಲಿಗೂ ಇರುವ ವ್ಯತ್ಯಾಸ ಏನು? ಯಾವೆಲ್ಲ ವಿಧಗಳಲ್ಲಿ ಉಭಯ ಸಾರಿಗೆ ಸಂಪರ್ಕಗಳು ಭಿನ್ನ ಎಂಬುದನ್ನು ಮುಂದೆ ತಿಳಿಯೋಣ.
1. ಉದ್ದೇಶ
- ಮೆಟ್ರೋ ರೈಲು: ನಗರ ಸಾರಿಗೆ, ನಗರ ಕೇಂದ್ರಗಳು, ಉಪನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸಲಿವೆ.
- ಸಾಮಾನ್ಯ ರೈಲು: ದೂರದ ಪ್ರಯಾಣ, ಸರಕು ಸಾಗಣೆ ಮತ್ತು ಪ್ರಾದೇಶಿಕ ಸಂಪರ್ಕ.
2. ನೆಟ್‌ವರ್ಕ್
- ಮೆಟ್ರೋ ರೈಲು: ನಗರ ಮಿತಿಯಲ್ಲಿ ಪ್ರತ್ಯೇಕ, ಮೀಸಲಾದ ಟ್ರ್ಯಾಕ್‌ಗಳು. ಸೇತುವೆ ರೀತಿ ಸಂಚಾರಕ್ಕೆ ವ್ಯವಸ್ಥೆ ಹಾಗೂ ಭೂಗತವಾಗಿ ಸಂಚಾರಕ್ಕೂ ವ್ಯವಸ್ಥೆ.
- ಸಾಮಾನ್ಯ ರೈಲು: ಈ ರೈಲು ಸೇವೆಗಳಿಗೆ ಟ್ರ್ಯಾಕ್ಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಕೆಲವೊಮ್ಮೆ ಟ್ರ್ಯಾಕ್ಗಳನ್ನು ಹಂಚಿಕೆಯೂ ಇರಲಿದೆ. ಟ್ರ್ಯಾಕ್ ವ್ಯಾಪಕ ದೂರವನ್ನು ವ್ಯಾಪಿಸುತ್ತವೆ.
3. ಆವರ್ತನ
- ಮೆಟ್ರೋ ರೈಲು: ಪ್ರತಿ 5 ನಿಮಿಷಕ್ಕೆ ಒಂದು ರೈಲು ಪ್ರಯಾಣ (ಪ್ರತಿ 2 ರಿಂದ 10 ನಿಮಿಷಗಳೊಳಗೆ ಒಂದು ಮೆಟ್ರೊ ರೈಲು). ಇದು ನಗರದೊಳಗೆ ಸೀಮಿತ ಕಿಮೀ ದೂರ ಪ್ರಯಾಣ ಮಾತ್ರ ಇರಲಿದೆ. ಹಾಗಾಗಿ ಕಡಿಮೆ ಅವಧಿಯಲ್ಲೇ ಮೆಟ್ರೋ ಸೇವೆ ಸಿಗಲಿದೆ.
- ಸಾಮಾನ್ಯ ರೈಲು: ಕಡಿಮೆ ನಿರ್ಗಮನ (ಗಂಟೆ ಅಥವಾ ದಿನಕ್ಕೊಂದು ರೈಲಿನ ಪ್ರಯಾಣ). ಏಕೆಂದರೆ ಇದು ದೂರದ ಅಥವಾ ಅಂತಾರಾಜ್ಯ ಪ್ರಯಾಣ ಬೆಳೆಸುವ ಕಾರಣ ದಿನಕ್ಕೊಂದು ರೈಲು ಸಂಚರಿಸುವ ಸಾಧ್ಯತೆ ಹೆಚ್ಚು.
4. ವೇಗ
- ಮೆಟ್ರೋ ರೈಲು: ಕಡಿಮೆ ವೇಗ- ಗಂಟೆಗೆ 30 ರಿಂದ 80 ಕಿಮೀ ವೇಗ (30-80 km/h)
- ಸಾಮಾನ್ಯ ರೈಲು: ಹೆಚ್ಚಿನ ವೇಗ - ಗಂಟೆಗೆ 50-200 ಕಿಮೀ ವೇಗ (50-200 km/h)
5. ನಿಲುಗಡೆ
- ಮೆಟ್ರೋ ರೈಲು: ನಗರದ ಪ್ರಮುಖ ಏರಿಯಾಗಳಲ್ಲಿ ನಿಲುಗಡೆ. ಒಂದೆರಡು ಕಿಮೀಗೂ ನಿಲ್ದಾಣ.
- ಸಾಮಾನ್ಯ ರೈಲು: ದೂರದ ಪ್ರಯಾಣ ಕಾರಣ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ. ಕಡಿಮೆ ನಿಲ್ದಾಣಗಳಲ್ಲಿ ನಿಲುಗಡೆ.
6. ರೋಲಿಂಗ್ ಸ್ಟಾಕ್ (ವಿದ್ಯುತ್ ಅಥವಾ ಅಲ್ಲದ)
- ಮೆಟ್ರೋ ರೈಲು: ವಿಶೇಷವಾಗಿ ವಿನ್ಯಾಸ ಮಾಡಲಾದ ಕಾಂಪ್ಯಾಕ್ಟ್ ರೈಲುಗಳು.
- ಸಾಮಾನ್ಯ ರೈಲು: ದೊಡ್ಡದಾದ, ವೈವಿಧ್ಯಮಯ ರೋಲಿಂಗ್ ಸ್ಟಾಕ್ (ಪ್ರಯಾಣಿಕ, ಸರಕು ಸಾಗಣೆ)
7. ಸಿಗ್ನಲಿಂಗ್
- ಮೆಟ್ರೋ ರೈಲು: ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ.
- ಸಾಮಾನ್ಯ ರೈಲು: ಸಾಂಪ್ರದಾಯಿಕ ಸಿಗ್ನಲಿಂಗ್ ವ್ಯವಸ್ಥೆ.
8. ಪವರ್
- ಮೆಟ್ರೋ ರೈಲು: ವಿದ್ಯುತ್ ಶಕ್ತಿ
- ಸಾಮಾನ್ಯ ರೈಲು: ಡೀಸೆಲ್ ಅಥವಾ ವಿದ್ಯುತ್ ಶಕ್ತಿ.
ಇದನ್ನೂ ಓದಿ: ಈ ರೈಲಿನಿಂದ ಬಂದ ವಾರ್ಷಿಕ ಆದಾಯ 176 ಕೋಟಿ ರೂಪಾಯಿ; ಶತಾಬ್ದಿ ಅಥವಾ ವಂದೇ ಭಾರತ್ ಅಲ್ಲವೇ ಅಲ್ಲ!
9. ಸಾಮರ್ಥ್ಯ
- ಮೆಟ್ರೋ ರೈಲು: ಹೆಚ್ಚಿನ ಪ್ರಯಾಣಿಕರ ಸಾಮರ್ಥ್ಯ (ಗಂಟೆಗೆ ಸಾವಿರ).
- ಸಾಮಾನ್ಯ ರೈಲು: ಕಡಿಮೆ ಪ್ರಯಾಣಿಕರ ಸಾಮರ್ಥ್ಯ (ಪ್ರತಿ ಟ್ರಿಪ್‌ಗೆ ನೂರಾರು ಮಂದಿ).
10. ದರ ರಚನೆ
- ಮೆಟ್ರೋ ರೈಲು: ವಲಯ ಅಥವಾ ದೂರದ ಆಧಾರದ ಮೇಲೆ ದರ.
- ಸಾಮಾನ್ಯ ರೈಲು: ದೂರದ ಆಧಾರದ ಮೇಲೆ ದರ. ಮುಂಗಡ ಬುಕ್ಕಿಂಗ್ ಕೂಡ ಮಾಡಬಹುದು.
11. ಗಾತ್ರ
- ಮೆಟ್ರೋ ರೈಲು: ಚಿಕ್ಕದಾದ, ಹಗುರವಾದ ರೈಲುಗಳು.
- ಸಾಮಾನ್ಯ ರೈಲು: ದೊಡ್ಡದಾದ, ಭಾರವಾದ ರೈಲುಗಳು.
12. ಕಾರ್ಯಾಚರಣೆ
- ಮೆಟ್ರೋ ರೈಲು: ಚಾಲಕರಹಿತ/ಸ್ವಯಂಚಾಲಿತ
- ಸಾಮಾನ್ಯ ರೈಲು: ಹಸ್ತಚಾಲಿತ ಕಾರ್ಯಾಚರಣೆ
13. ಪ್ರಯಾಣಿಕರ ವಿವರ
- ಮೆಟ್ರೋ ರೈಲು: ದೈನಂದಿನ ಪ್ರಯಾಣಿಕರು.
- ಸಾಮಾನ್ಯ ರೈಲು: ದೂರದ ಪ್ರಯಾಣಿಕರು.
14. ಮೂಲಸೌಕರ್ಯ
- ಮೆಟ್ರೋ ರೈಲು: ಭೂಗತ/ಎಲಿವೇಟೆಡ್ ಟ್ರ್ಯಾಕ್‌ಗಳು.
- ಸಾಮಾನ್ಯ ರೈಲು: ನೆಲಮಟ್ಟದ ಟ್ರ್ಯಾಕ್‌ಗಳು.
15. ಕೋಚ್ಗಳು
- ಮೆಟ್ರೋ ರೈಲು: 4 ರಿಂದ 5 ಕೋಚ್ಗಳು
- ಸಾಮಾನ್ಯ ರೈಲು: 15 ರಿಂದ 20 ಕೋಚ್ಗಳು
ಇದನ್ನೂ ಓದಿ: ಭಾರತೀಯ ರೈಲ್ವೆ ಹಳಿಗಳ ನಡುವೆ ಅಂತರ ಎಷ್ಟಿರುತ್ತೆ; ಬ್ರಾಡ್ ಗೇಜ್, ಮೀಟರ್ ಗೇಜ್, ನ್ಯಾರೋ ಗೇಜ್ ಎಂದರೇನು?
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.