Chat Lock: ವಾಟ್ಸಾಪ್‌ನಲ್ಲಿ ನಿಮ್ಮ ಖಾಸಗಿ ಸಂಭಾಷಣೆ ಹೈಡ್ ಮಾಡಲು ಬಂತು ಹೊಸ ಫೀಚರ್; ತಿಳಿದುಕೊಳ್ಳಬೇಕಾದ 5 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Chat Lock: ವಾಟ್ಸಾಪ್‌ನಲ್ಲಿ ನಿಮ್ಮ ಖಾಸಗಿ ಸಂಭಾಷಣೆ ಹೈಡ್ ಮಾಡಲು ಬಂತು ಹೊಸ ಫೀಚರ್; ತಿಳಿದುಕೊಳ್ಳಬೇಕಾದ 5 ಅಂಶಗಳು

Chat Lock: ವಾಟ್ಸಾಪ್‌ನಲ್ಲಿ ನಿಮ್ಮ ಖಾಸಗಿ ಸಂಭಾಷಣೆ ಹೈಡ್ ಮಾಡಲು ಬಂತು ಹೊಸ ಫೀಚರ್; ತಿಳಿದುಕೊಳ್ಳಬೇಕಾದ 5 ಅಂಶಗಳು

ವಾಟ್ಸಾಪ್ ಬಳಕೆದಾರರು ತಮ್ಮ ಖಾಸಗಿ ಸಂಭಾಷಣೆಯನ್ನು ಹೈಡ್ ಮಾಡಲು ಚಾಟ್ ಲಾಕ್ ಅನ್ನು ಪರಿಚಿಯಿಸಲಾಗಿದೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ವಾಟ್ಸಾಪ್‌ನಲ್ಲಿ ಖಾಸಗಿ ಸಂಭಾಷಣೆಯನ್ನು ಹೈಡ್ ಮಾಡಲು ಚಾಟ್ ಲಾಕ್ ಪರಿಚಯಿಸಲಾಗಿದೆ.
ವಾಟ್ಸಾಪ್‌ನಲ್ಲಿ ಖಾಸಗಿ ಸಂಭಾಷಣೆಯನ್ನು ಹೈಡ್ ಮಾಡಲು ಚಾಟ್ ಲಾಕ್ ಪರಿಚಯಿಸಲಾಗಿದೆ.

ಬೆಂಗಳೂರು: ವಾಟ್ಸಾಪ್ ಬಳಕೆದಾರರು ತಮ್ಮ ಖಾಸಗಿ ಸಂಭಾಷಣೆಯನ್ನು ಇನ್ನಷ್ಟು ಖಾಸಗಿಯಾಗಿಸಲು ಚಾಟ್ ಲಾಕ್ ಎಂಬ ಹೊಸ ಫೀಚರ್‌ಅನ್ನು ಬಿಡುಗಡೆ ಮಾಡಿದ್ದು, ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಚಾಟ್ ಲಾಕ್‌ಅನ್ನು ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್ ನಿನ್ನೆ (ಮೇ 15, ಸೋಮವಾರ) ಘೋಷಿಸಿದ್ದಾರೆ.

ಮೆಟಾ ಹೇಳುವ ಪ್ರಕಾರ ಈ ವೈಶಿಷ್ಟ್ಯವು ನಿಮ್ಮ ಅತ್ಯಂತ ಖಾಸಗಿ ಸಂಭಾಷಣೆಗಳನ್ನು ಪಾಸ್‌ವರ್ಡ್‌ನೊಂದಿಗೆ ರಕ್ಷಿಸಲು ಹಾಗೂ ಅವುಗಳನ್ನು ಪ್ರತ್ಯೇಕ ಫೋಲ್ಟರ್‌ನಲ್ಲಿ ಸುರಕ್ಷಿತವಾಗಿ ಇಡುತ್ತದೆ. ಯಾರಾದರೂ ನಿಮಗೆ ಸಂದೇಶಗಳನ್ನು ಕಳುಹಿಸಿದಾಗ ಮತ್ತು ನೀವು ಆ ಚಾಟ್‌ಗಳನ್ನು ಲಾಕ್ ಮಾಡಿದಾಗ, ಸಂದೇಶ ಕಳುಹಿಸುವವರ ಹೆಸರು ಮತ್ತು ಸಂದೇಶದ ವಿಷಯವನ್ನು ಕೂಡ ಇದು ಮರೆಮಾಟುತ್ತದೆ.

ವಾಟ್ಸಾಪ್‌ ಚಾಟ್‌ಅನ್ನು ಲಾಕ್‌ ಮಾಡಿದಾಗ ಆ ಸಂಭಾಷಣೆಯ ಥ್ರೆಡ್ಅನ್ನು ಇನ್‌ಬಾಕ್ಸ್‌ನಿಂದ ಹೊರತೆಗೆಯುತ್ತದೆ. ಆ ನಂತರ ಪ್ರತ್ಯೇಕವಾಗಿ ರಚಿಸಲಾದ ಫೋಲ್ಡರ್‌ನಲ್ಲಿ ಇಡುತ್ತದೆ. ಆ ಚಾಟ್‌ನ ವಿಷಯಗಳನ್ನ ಸ್ವಯಂಚಾಲಿತವಾಗಿ ಮರೆಮಾಡುತ್ತೆ.

ಬಬ್ಬ ಬಳಕೆದಾರರೊಬ್ಬರಿಂದ ಒಬ್ಬರು ಅಥವಾ ಗುಂಪಿನ ಹೆಸರನ್ನು ಟ್ಯಾಪ್ ಮಾಡಲುವ ಮೂಲಕ ಹಾಗೂ ಲಾಕ್‌ ಆಯ್ಕೆಯನ್ನು ಆರಿಸಿಕೊಳ್ಳುವ ಮೂಲಕ ಚಾಟ್‌ ಅನ್ನು ಲಾಕ್ ಮಾಡಬಹುದು. ಈ ವೈಶಿಷ್ಟ್ಯವು ಹೊಸ ಅಪ್ಲಿಕೇಶನ್ ಅಪ್ಡೇಟ್‌ನೊಂದಿಗೆ ಬಳಕೆದಾರರಿಗೆ ಆ್ಯಂಡ್ರಾಯ್ಡ್ ಮತ್ತು ಐಒಎಸ್‌ ಫೋನ್‌ಗಳಲ್ಲಿ ಲಭ್ಯವಿರುತ್ತದೆ.

ಲಾಕ್ ಮಾಡಿದ ಚಾಟ್‌ ಅನ್ನು ಮತ್ತೆ ಒಪನ್ ಮಾಡಲು ಒಬ್ಬ ವ್ಯಕ್ತಿಯು ತನ್ನ ಮೊಬೈಲ್ ಅಥವಾ ಇತರೆ ಸಾಧನದ ಪಾಸ್‌ವರ್ಡ್ ಅನ್ನು ಮಾತ್ರ ಬಳಬಹುದು. ಇದಕ್ಕೆ ಪರ್ಯಾಯವಾಗಿ ಫಿಂಗರ್‌ಪ್ರಿಂಟ್‌ನಂತಹ ಬಯೋಮೆಟ್ರಿಕ್‌ಗೂ ಅವಕಾಶ ಇದೆ.

ಮೆಟಾ ಹೇಳುವ ಪ್ರಕಾರ ತಮ್ಮ ಫೋನ್‌ಗಳನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುವ ಬಳಕೆದಾರರಿಗೆ ಚಾಟ್ ಅನ್ನು ಲಾಕ್ ಮಾಡುವ ವೈಶಿಷ್ಟ್ಯವು ಹೆಚ್ಚು ಪ್ರಯೋಜನಕಾರಿಯಾಗಿದೆಯಂತೆ.

ಮುಂಬರುವ ದಿನಗಳಲ್ಲಿ ಕಂಪ್ಯಾನಿಯನ್ ಸಾಧನಗಳಿಗೆ ಲಾಕ್‌ಗಳು, ಹಾಗೆಯೇ ಚಾಟ್‌ಗಳಿಗಾಗಿ ಕಸ್ಟಮ್ ಪಾಸ್‌ವರ್ಡ್‌ಗಳು ಸೇರಿದಂತೆ ಹೆಚ್ಚಿನ ಆಯ್ಕೆಗಳನ್ನು ಚಾಟ್‌ಲಾಕ್‌ಗೆ ಸೇರಿಸಲಾಗುತ್ತದೆ. ಇದರಿಂದ ಒಬ್ಬ ವ್ಯಕ್ತಿ ಸಂಭಾಷಣೆಯನ್ನು ಅನ್‌ಲಾಕ್‌ ಮಾಡಲು ತಮ್ಮ ಫೋನ್‌ಗಿಂತ ವಿಭಿನ್ನವಾದ ಪಾಸ್‌ವರ್ಡ್ ಅನ್ನು ಬಳಸಬಹುದು.

ಮೆಟಾ ಈಗಾಗಲೇ ವಾಟ್ಸಾಪ್‌ಗಾಗಿ ಹಲವು ವೈಶಿಷ್ಟ್ಯಗಳನ್ನು ಹೊರತರುವ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ವಾಟ್ಸಾಪ್ ಮತ್ತಷ್ಟು ಹೊಸ ಫೀಚರ್‌ಗಳನ್ನು ಕಾಣಲಿದ್ದು, ಬಳಕೆದಾರರಿಗೆ ಯಾವ ರೀತಿಯಲ್ಲಿ ಅನುಕೂಲವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.