WhatsApp: ಬೇರೊಬ್ಬರಿಗೆ ಕಳಿಸಿದ ಮೆಸೇಜ್ ತಪ್ಪಾಗಿದಿಯಾ; ವಾಟ್ಸಾಪ್‌ನಲ್ಲಿ ಬರ್ತಿದೆ ಹಳೆಯ ಸಂದೇಶವನ್ನು ಎಡಿಟ್ ಮಾಡುವ ಆಯ್ಕೆ
ವಾಟ್ಸಾಪ್‌ನಲ್ಲಿ ಸ್ನೇಹಿತರಿಗೆ, ಬಂಧು ಬಳಗದವರಿಗೆ, ಸಹೋದ್ಯೋಗಿಗಳಿಗೆ ಈ ಹಿಂದೆ ಏನಾದ್ರೂ ತಪ್ಪಾಗಿ ಮೆಸೇಜ್‌ಗಳನ್ನು ಮಾಡಿದ್ದರೆ, ಈಗಾಗಲೇ ಮಾಡಿರುವ ಮೆಸೇಜ್‌ಗಳನ್ನ ಎಡಿಟ್ ಮಾಡಬಹುದುದಾದ ಹೆೊಸ ಆಯ್ಕೆಯೊಂದು ಬರುತ್ತಿದೆ.
ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವ ವಾಟ್ಸಾಪ್ ( WhatsApp) ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಆದರೆ ಈ ಬಾರಿಯ ಹೊಸ ಆಯ್ಕೆಯೊಂದು ತುಂಬಾ ಆಕರ್ಷಕವಾಗಿದ್ದು, ಗಮನ ಸಳೆಯುತ್ತಿದೆ.
ಯಾರಿಗಾದರೂ ನೀವು ಮೆಸೇಜ್ ಮಾಡಿ ಅದರಲ್ಲಿ ತಪ್ಪುಗಳು ಇದ್ದರೆ ತಿದ್ದುಕೊಳ್ಳಬಹುದು. ಇಲ್ಲವೇ ಸಂದೇಶ ಕಳಿಸಿದ ನಂತರ ನಿಮಗೆ ಅದರಲ್ಲಿ ಏನಾದರೂ ಬದಲಾವಣೆ ಮಾಡಬೇಕಿತ್ತು ಎಂದು ಅನಿಸಿದರೆ ಅಂತಹ ಸಂದೇಶಗಳನ್ನು ಎಡಿಟ್ ಮಾಡುವಂತಹ ಹೊಸ ಆಯ್ಕೆ ಬರುತ್ತಿದೆ.
ವಾಟ್ಸಾಪ್‌ನಲ್ಲಿ ಬರಲಿರುವ ಈ ಹೊಸ ಅಪ್ಡೇಟ್‌ನಲ್ಲಿ ಈಗಾಗಲೇ ಕಳಿಸಿರುವ ಮೆಸೇಜ್‌ಗಳಲ್ಲಿ ಕಾಗುಣಿತ ತಪ್ಪಾಗಿದ್ದರೆ ಅದನ್ನು ಸರಿಪಡಿಸಬಹುದು. ಇಲ್ಲವೇ ಹೊಸದಾಗಿ ಹಿಂದಿನ ಸಂದೇಶಕ್ಕೆ ಏನಾದರೂ ಸೇರಿಬೇಕೆಂದುಕೊಂಡಿದ್ದರೂ ಇಲ್ಲಿ ಅವಕಾಶ ಇದೆ.
ನಿಮ್ಮ ಚಾಟ್‌ಗಳ ಮೇಲೆ ನಿಮಗೆ ಹೆಚ್ಚಿನ ನಿಯಂತ್ರಣವನ್ನು ತರಲು ನಾವು ತುಂಬಾ ಉತ್ಸುಕರಾಗಿದ್ದೇವೆ. ನೀವು ಮಾಡಬೇಕಾಗಿರುವುದು ಇಷ್ಟೆ. ಕಳಿಸಿರುವಂತಹ ಮೆಸೇಜ್ ಮೇಲೆ ದೀರ್ಘವಾಗಿ ಒತ್ತಿ ಮತ್ತು ನಂತರದ ಅಂದರೆ 15 ನಿಮಿಷಗಳವರೆಗೆ ಆ ಸಂದೇಶವನ್ನು ಎಡಿಟ್ ಮಾಡಬಹುದಾಗಿದೆ ಎಂದು ಮೆಟಾ ಹೇಳಿದೆ.
ಎಡಿಟ್ ಆದ ಮೆಸೇಜ್‌ಗಳ ಪಕ್ಕದಲ್ಲೇ ಎಡಿಟ್ ಮಾಡಲಾಗಿದೆ ಎಂದು ತೋರಿಸುತ್ತದೆ. ಆದರೆ ನೀವು ಯಾರಿಗೆ ಸಂದೇಶ ಕಳುಹಿಸುತ್ತಿರೋ ಅವರಿಗೆ ಗೊತ್ತಾಗದಂತೆ ಎಡಿಟ್ ಮಾಡಬಹುದಾಗಿದೆ.
ಎಲ್ಲಾ ವೈಯಕ್ತಿ ಸಂದೇಶಗಳು, ಮಾಧ್ಯಮ ಮತ್ತು ಕರೆಗಳಂತೆಯೇ ನಿಮ್ಮ ಸಂದೇಶಗಳು ಹಾಗೂ ನೀವು ಮಾಡುವಂತಹ ಎಡಿಟ್ ಎನ್‌ಕ್ರಿಪ್ಶನ್‌ನಿಂದ ರಕ್ಷಿಸಲ್ಪಡುತ್ತದೆ. ವಾಟ್ಸಾಪ್‌ನಲ್ಲಿ ಈ ವೈಶಿಷ್ಯವನ್ನು ಜಾಗತಿಕವಾಗಿ ಬಳಕೆದಾರರಿಗೆ ನೀಡಲು ಪ್ರಾರಂಭಿಸಿದೆ. ಮುಂಬರುವ ದಿನಗಳಲ್ಲಿ ಈ ಆಯ್ಕೆಗಳು ಎಲ್ಲರಿಗೂ ಲಭ್ಯವಾಗಲಿವೆ.
ವಾಟ್ಸಾಪ್ ಬಳಕೆದಾರರು ತಮ್ಮ ಖಾಸಗಿ ಸಂಭಾಷಣೆಯನ್ನು ಇನ್ನಷ್ಟು ಖಾಸಗಿಯಾಗಿಸಲು ಚಾಟ್ ಲಾಕ್ ಎಂಬ ಹೊಸ ಫೀಚರ್‌ಅನ್ನು ಮೇ 15 ರಂದು ಬಿಡುಗಡೆ ಮಾಡಲಾಗಿತ್ತು. ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಚಾಟ್ ಲಾಕ್‌ಅನ್ನು ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ್ದರು. ಇದೀಗ ಸಂದೇಶಗಳನ್ನು ಎಡಿಟ್ ಮಾಡುವ ಆಯ್ಕೆ ನೀಡಲು ಮುಂದಾಗಿದ್ದಾರೆ.
ಮೆಟಾ ಹೇಳುವ ಪ್ರಕಾರ ಚಾಟ್ ಲಾಕ್ ವೈಶಿಷ್ಟ್ಯವು ನಿಮ್ಮ ಅತ್ಯಂತ ಖಾಸಗಿ ಸಂಭಾಷಣೆಗಳನ್ನು ಪಾಸ್‌ವರ್ಡ್‌ನೊಂದಿಗೆ ರಕ್ಷಿಸಲು ಹಾಗೂ ಅವುಗಳನ್ನು ಪ್ರತ್ಯೇಕ ಫೋಲ್ಟರ್‌ನಲ್ಲಿ ಸುರಕ್ಷಿತವಾಗಿ ಇಡುತ್ತದೆ. ಯಾರಾದರೂ ನಿಮಗೆ ಸಂದೇಶಗಳನ್ನು ಕಳುಹಿಸಿದಾಗ ಮತ್ತು ನೀವು ಆ ಚಾಟ್‌ಗಳನ್ನು ಲಾಕ್ ಮಾಡಿದಾಗ, ಸಂದೇಶ ಕಳುಹಿಸುವವರ ಹೆಸರು ಮತ್ತು ಸಂದೇಶದ ವಿಷಯವನ್ನು ಕೂಡ ಇದು ಮರೆಮಾಚುತ್ತದೆ.
ವಾಟ್ಸಾಪ್ ಚಾಟ್‌ಅನ್ನು ಲಾಕ್ ಮಾಡಿದಾಗ ಆ ಸಂಭಾಷಣೆಯ ಥ್ರೆಡ್ಅನ್ನು ಇನ್‌ಬಾಕ್ಸ್‌ನಿಂದ ಹೊರತೆಗೆಯುತ್ತದೆ. ಆ ನಂತರ ಪ್ರತ್ಯೇಕವಾಗಿ ರಚಿಸಲಾದ ಫೋಲ್ಡರ್‌ನಲ್ಲಿ ಇಡುತ್ತದೆ. ಆ ಚಾಟ್‌ನ ವಿಷಯಗಳನ್ನ ಸ್ವಯಂಚಾಲಿತವಾಗಿ ಮರೆಮಾಡುತ್ತೆ.