ಕನ್ನಡ ಸುದ್ದಿ  /  Nation And-world  /  Which Rto Services Are Online: Morth Releases Notice For 58 Rto Services Completely Online Based On Aadhar Authentication

Which RTO services are online: ಆರ್‌ಟಿಒದ ಈ 58 ಸೇವೆಗಳನ್ನು ಆನ್‌ಲೈನಲ್ಲೇ ಪಡೆಯಿರಿ; ಆಧಾರ್‌ ದೃಢೀಕರಣ ಇದ್ದರೆ ಸಾಕು

Which RTO services are online: ಸರ್ಕಾರದ ಅಧಿಸೂಚನೆ ಪ್ರಕಾರ, ಯಾವನೇ ವ್ಯಕ್ತಿ ಪರಿವಾಹನ್‌ ಪೋರ್ಟಲ್‌ ಮೂಲಕ ಆನ್‌ಲೈನ್‌ ಸೇವೆ ಪಡೆಯುವುದಾದರೆ, ಆಧಾರ್‌ ದೃಢೀಕರಣ ಪ್ರಕ್ರಿಯೆ ನಡೆಸಬೇಕು. ಆಧಾರ್‌ ಸಂಖ್ಯೆ ಇಲ್ಲದೇ ಇರುವಂಥವರು ಸಮೀಪದ ಆರ್‌ಟಿಒ ಕಚೇರಿಗೆ ತೆರಳಿ ಪರ್ಯಾಯ ಗುರುತು ದಾಖಲೆ ಪತ್ರ ನೀಡಿ ಆ ಸೇವೆಯನ್ನು ಪಡೆಯಬಹುದಾಗಿದೆ.

ಆರ್‌ಟಿಒದ ಈ 58 ಸೇವೆಗಳನ್ನು ಆನ್‌ಲೈನಲ್ಲೇ ಪಡೆಯಿರಿ
ಆರ್‌ಟಿಒದ ಈ 58 ಸೇವೆಗಳನ್ನು ಆನ್‌ಲೈನಲ್ಲೇ ಪಡೆಯಿರಿ (HT_PRINT)

ಭಾರತದಲ್ಲಿ ಆರ್‌ಟಿಒ ಕಚೇರಿ ಕೆಲಸಗಳು ಬಹಳ ಹೊತ್ತು ಹಿಡಿಯುವಂಥದ್ದು. ಆರ್‌ಟಿಒ ಕಚೇರಿಗಳಲ್ಲಿ ಗಂಟೆಗಟ್ಟಲೆ ಸರದಿ ನಿಲ್ಲಬೇಕು. ಇವನ್ನೆಲ್ಲ ತಪ್ಪಿಸಲು ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್‌ ತಿಂಗಳಲ್ಲೇ 58 ಆರ್‌ಟಿಒ ಸೇವೆಗಳನ್ನು ಆನ್‌ಲೈನ್‌ ಮೂಲಕ ಪಡೆಯಬಹುದು. ಇದಕ್ಕಾಗಿ ಆಧಾರ್‌ ದೃಢೀಕರಣ ಇದ್ದರೆ ಸಾಕು ಎಂದು ಘೋಷಿಸಿತ್ತು. ಇಂದು ಆ 58 ಸೇವೆಗಳ ಪಟ್ಟಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬಿಡುಗಡೆಮಾಡಿದೆ.

ಈ ಸೇವೆಗಳ ಪೈಕಿ ಡ್ರೈವಿಂಗ್‌ ಲೈಸೆನ್ಸ್‌, ವಾಹನ ನೋಂದಣಿ, ಕಂಡಕ್ಟರ್‌ ಲೈಸೆನ್ಸ್‌, ಮಾಲೀಕತ್ವ ಬದಲಾವಣೆ ಮುಂತಾದವು ಸೇರಿಕೊಂಡಿವೆ. ಈ ಕೆಲಸಗಳಿಗಾಗಿ ಇನ್ನು ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ಇವೆಲ್ಲವೂ ಆನ್‌ಲೈನ್‌ ಆದ ಬಳಿಕವೂ ಆರ್‌ಟಿಒ ಕಚೇರಿಗೆ ಸೇವೆ ಪಡೆಯಲು ಹೋಗುವವರ ಸಂಖ್ಯೆ ದಿನಕ್ಕೆ 25 ಲಕ್ಷ ಎಂದು ಅಂದಾಜಿಸಲಾಗಿದೆ.

ಸರ್ಕಾರದ ಅಧಿಸೂಚನೆ ಪ್ರಕಾರ, ಯಾವನೇ ವ್ಯಕ್ತಿ ಪರಿವಾಹನ್‌ ಪೋರ್ಟಲ್‌ ಮೂಲಕ ಆನ್‌ಲೈನ್‌ ಸೇವೆ ಪಡೆಯುವುದಾದರೆ, ಆಧಾರ್‌ ದೃಢೀಕರಣ ಪ್ರಕ್ರಿಯೆ ನಡೆಸಬೇಕು. ಆಧಾರ್‌ ಸಂಖ್ಯೆ ಇಲ್ಲದೇ ಇರುವಂಥವರು ಸಮೀಪದ ಆರ್‌ಟಿಒ ಕಚೇರಿಗೆ ತೆರಳಿ ಪರ್ಯಾಯ ಗುರುತು ದಾಖಲೆ ಪತ್ರ ನೀಡಿ ಆ ಸೇವೆಯನ್ನು ಪಡೆಯಬಹುದಾಗಿದೆ.

ಆಧಾರ್‌ ದೃಢೀಕರಣ ಮೂಲಕ ಆನ್‌ಲೈನ್‌ನಲ್ಲಿ ಪಡೆಯಬಹುದಾದ ಸೇವೆಗಳ ವಿವರ ಹೀಗಿದೆ

  • ಕಲಿಕಾ ಪರವಾನಗಿಗೆ ಅರ್ಜಿ ಸಲ್ಲಿಕೆ
  • ಲರ್ನಿಂಗ್‌ ಲೈಸೆನ್ಸ್‌ನಲ್ಲಿ ವಿಳಾಸ ಬದಲಾವಣೆ
  • ಲರ್ನಿಂಗ್‌ ಲೈಸೆನ್ಸ್‌ನಲ್ಲಿ ಹೆಸರು ಬದಲಾವಣೆ
  • ಲರ್ನಿಂಗ್‌ ಲೈಸೆನ್ಸ್‌ನಲ್ಲಿ ಫೋಟೋ ಮತ್ತು ಸಹಿ ಬದಲಾವಣೆ
  • ಡುಪ್ಲಿಕೇಟ್‌ ಲರ್ನಿಂಗ್‌ ಲೈಸೆನ್ಸ್‌
  • ಲರ್ನರ್‌ ಲೈಸೆನ್ಸ್‌ ಎಕ್ಸ್‌ಟ್ರಾಕ್ಟ್‌ ಪ್ರೊವಿಷನಿಂಗ್‌
  • ಪರೀಕ್ಷೆ ಅಗತ್ಯವಿಲ್ಲದ ಚಾಲನಾ ಪರವಾನಗಿ ನವೀಕರಣ
  • ಚಾಲನಾ ಪರವಾನಗಿ ಬದಲಾವಣೆ
  • ಚಾಲನಾ ಪರವಾನಗಿ ವಿತರಣೆಗೆ ಅಕ್ರೆಡಿಟೆಡ್‌ ಡ್ರೈವರ್‌ ಟ್ರೇನಿಂಗ್‌ ಸೆಂಟರ್‌ ನಿಂದ ಅರ್ಜಿ ಸಲ್ಲಿಕೆ ಮತ್ತು ಪರೀಕ್ಷೆ ಉತ್ತೀರ್ಣ ಪ್ರಮಾಣ ಪತ್ರ ಕಳುಹಿಸುವುದು
  • ಚಾಲನಾ ಪರವಾನಗಿಯಲ್ಲಿ ವಿಳಾಸ ಬದಲಾವಣೆ
  • ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ಹೆಸರು ಬದಲಾವಣೆ
  • ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ಬಯೋಮೆಟ್ರಿಕ್‌ ಬದಲಾವಣೆ
  • ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ಜನ್ಮದಿನಾಂಕ ಬದಲಾವಣೆ
  • ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ಫೋಟೋ ಮತ್ತು ಸಹಿ ಬದಲಾವಣೆ
  • ಡ್ರೈವಿಂಗ್‌ ಲೈಸೆನ್ಸ್‌ ಎಕ್ಸ್‌ಟ್ರಾಕ್ಟ್‌ ಪ್ರೊವಿಷನಿಂಗ್‌
  • ಅಂತಾರಾಷ್ಟ್ರೀಯ ಚಾಲನಾ ಪರವಾನಗಿ
  • ಲೈಸೆನ್ಸ್‌ನಿಂದ ಕ್ಲಾಸ್‌ ಆಫ್‌ ವೆಹಿಕಲ್‌ ಅನ್ನು ಸರಂಡರ್‌ ಮಾಡುವುದು
  • ಅಪಾಯಕಾರಿ ವಸ್ತು ಸಾಗಿಸುವುದಕ್ಕೆ ಚಾಲನೆಗೆ ಅನುಮೋದನೆ ಪಡೆಯುವುದು
  • ಬೆಟ್ಟ ಪ್ರದೇಶದಲ್ಲಿ ಚಾಲನೆಗೆ ಅನುಮೋದನೆ ಪಡೆಯುವುದು
  • ರಕ್ಷಣಾ ಚಾಲನಾ ಪರವಾನಗಿ
  • ಡಿಫೆನ್ಸ್‌ ಡ್ರೈವಿಂಗ್‌ ಲೈಸೆನ್ಸ್‌ ಹೊಂದಿದವರಿಗೆ ಎಇಡಿಎಲ್‌
  • ಚಾಲಕರಿಗೆ ಪಿಎಸ್‌ವಿ ಬ್ಯಾಡ್ಜ್‌
  • ಡುಪ್ಲಿಕೇಟ್‌ ಪಿಎಸ್‌ವಿ ಬ್ಯಾಡ್ಜ್‌
  • ಚಾಲಕರಿಗೆ ತಾತ್ಕಾಲಿಕ ಪಿಎಸ್‌ವಿ ಬ್ಯಾಡ್ಜ್‌
  • ಕಂಡಕ್ಟರ್‌ ಲೈಸೆನ್ಸ್‌ ನವೀಕರಣ
  • ಡುಪ್ಲಿಕೇಟ್‌ ಕಂಡಕ್ಟರ್‌ ಲೈಸೆನ್ಸ್‌
  • ಕಂಡಕ್ಟರ್‌ ಲೈಸೆನ್ಸ್‌ ಎಕ್ಸ್‌ಟ್ರಾಕ್ಟ್‌ ಪ್ರೊವಿಷನಿಂಗ್‌
  • ತಾತ್ಕಾಲಿಕ ಕಂಡಕ್ಟರ್‌ ಲೈಸೆನ್ಸ್‌
  • ಕಂಡಕ್ಟರ್‌ ಲೈಸೆನ್ಸ್‌ನಲ್ಲಿ ವಿಳಾಸ ಬದಲಾವಣೆ
  • ಕಂಡಕ್ಟರ್‌ ಲೈಸೆನ್ಸ್‌ನಲ್ಲಿ ಬಯೋಮೆಟ್ರಿಕ್‌ ಬದಲಾವಣೆ
  • ಕಂಡಕ್ಟರ್‌ ಲೈಸೆನ್ಸ್‌ನಲ್ಲಿ ಹೆಸರು ಬದಲಾವಣೆ
  • ಮೋಟಾರು ವಾಹನಗಳ ತಾತ್ಕಾಲಿಕ ನೋಂದಣಿ
  • ಪೂರ್ಣ ಬಾಡಿ ಹೊಂದಿರುವ ಮೋಟಾರು ವಾಹನದ ನೋಂದಣಿ ಅರ್ಜಿ
  • ಡುಪ್ಲಿಕೇಟ್‌ ಆರ್‌ಸಿ ಪಡೆಯಲು ಅರ್ಜಿ ಸಲ್ಲಿಕೆ
  • ರಿಜಿಸ್ಟ್ರೇಶನ್‌ ಸರ್ಟಿಫಿಕೇಟ್‌ನ ಶುಲ್ಕ ಡೆಪಾಸಿಟ್‌ ಮಾಡುವುದು
  • ಆರ್‌ಸಿಗಾಗಿ ಎನ್‌ಒಸಿ ಪಡೆಯಲು ಅರ್ಜಿ ಸಲ್ಲಿಕೆ
  • ಆರ್‌ಸಿಯಲ್ಲಿ ವಿಳಾಸ ಬದಲಾವಣೆ
  • ನೋಂದಣಿ ಸಂಖ್ಯೆ ಉಳಿಸುವುದು
  • ಮೋಟಾರು ವಾಹನ ಮಾಲೀಕತ್ವ ಬದಲಾವಣೆ ನೋಟಿಸ್‌
  • ಮೋಟಾರು ವಾಹನ ಮಾಲೀಕತ್ವ ವರ್ಗಾವಣೆ ಅರ್ಜಿ
  • ಮೋಟಾರು ವಾಹನ ಮಾಲೀಕತ್ವ ವರ್ಗಾವಣೆ ಸಂದರ್ಭ ಹೆಚ್ಚುವರಿ ಲೈಫ್‌ ಟೈಮ್‌‌ ಟ್ಯಾಕ್ಸ್‌ ಪಾವತಿ
  • ಹೈರ್‌ ಪರ್ಚೇಸ್‌ ಅಗ್ರಿಮೆಂಟ್‌ನ ಎಂಡೋರ್ಸ್‌ಮೆಂಟ್‌
  • ಹೈರ್‌ ಪರ್ಚೇಸ್‌ ಅಗ್ರಿಮೆಂಟ್‌ನ ಟರ್ಮಿನೇಶನ್‌
  • ಟ್ರೇಡ್‌ ಸರ್ಟಿಫಿಕೇಟ್‌ ವಿತರಣೆ ಅಥವಾ ನವೀಕರಣ
  • ಫ್ರೆಶ್‌ ಪರ್ಮಿಟ್‌ ವಿತರಣೆ
  • ಡುಪ್ಲಿಕೇಟ್‌ ಪರ್ಮಿಟ್‌ ವಿತರಣೆ
  • ಪರ್ಮಿಟ್‌ ನಾನ್‌-ಯೂಸ್‌ ಇಂಟಿಮೇಶನ್‌
  • ಪರ್ಮಿಟ್‌ನ ಪರ್ಮನೆಂಟ್‌ ಸರಂಡರ್‌
  • ಪರ್ಮಿಟ್‌ನ ವರ್ಗಾವಣೆ
  • ಪರ್ಮಿಟ್‌ ವರ್ಗಾವಣೆ (ಮರಣದ ಸಂದರ್ಭ)
  • ಪರ್ಮಿಟ್‌ ನವೀಕರಣ
  • ಪರ್ಮಿಟ್‌ ಅಥೋರೈಸೇಶನ್‌ ನವೀಕರಣ
  • ಸ್ಪೆಷಲ್‌ ಪರ್ಮಿಟ್‌ಗಾಗಿ ಅರ್ಜಿ
  • ತಾತ್ಕಾಲಿಕ ಪರ್ಮಿಟ್‌ಗಾಗಿ ಅರ್ಜಿ
  • ಸಾರಿಗೆ ಸೇವೆಗಳ ದಾಖಲೆಗಳಲ್ಲಿ ಮೊಬೈಲ್‌ ನಂಬರ್‌ ಅಪ್ಡೇಟ್‌ ಮಾಡುವುದು

ಪರಿವಾಹನ ಪೋರ್ಟಲ್‌ಗೆ ಹೊರತಾಗಿ, ಪಾರ್ಕ್‌ ಆಪ್‌ (Park App) ಡೌನ್‌ಲೋಡ್‌ ಮಾಡಿಕೊಂಡು ಈ ಸೇವೆಗಳನ್ನು ಪಡೆಯಬಹುದು.

IPL_Entry_Point