ಯಾರಿದು ಡಾಕ್ಟರ್ ಜೈ ಭಟ್ಟಾಚಾರ್ಯ? ಲಾಕ್‌ಡೌನ್‌ ಟೀಕಿಸಿದ ಭಾರತೀಯ ಮೂಲದ ವ್ಯಕ್ತಿಗೆ ಆರೋಗ್ಯ ಸಂಸ್ಥೆಯ ಜವಾಬ್ದಾರಿ ನೀಡಿದ ಡೊನಾಲ್ಡ್‌ ಟ್ರಂಪ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯಾರಿದು ಡಾಕ್ಟರ್ ಜೈ ಭಟ್ಟಾಚಾರ್ಯ? ಲಾಕ್‌ಡೌನ್‌ ಟೀಕಿಸಿದ ಭಾರತೀಯ ಮೂಲದ ವ್ಯಕ್ತಿಗೆ ಆರೋಗ್ಯ ಸಂಸ್ಥೆಯ ಜವಾಬ್ದಾರಿ ನೀಡಿದ ಡೊನಾಲ್ಡ್‌ ಟ್ರಂಪ್‌

ಯಾರಿದು ಡಾಕ್ಟರ್ ಜೈ ಭಟ್ಟಾಚಾರ್ಯ? ಲಾಕ್‌ಡೌನ್‌ ಟೀಕಿಸಿದ ಭಾರತೀಯ ಮೂಲದ ವ್ಯಕ್ತಿಗೆ ಆರೋಗ್ಯ ಸಂಸ್ಥೆಯ ಜವಾಬ್ದಾರಿ ನೀಡಿದ ಡೊನಾಲ್ಡ್‌ ಟ್ರಂಪ್‌

Who is Jay Bhattacharya?: ಡೊನಾಲ್ಡ್‌ ಟ್ರಂಪ್‌ ಅವರು ಭಾರತೀಯ ಮೂಲದ ಜೈ ಭಟ್ಟಾಚಾರ್ಯ ಅವರನ್ನು ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ನ ನೂತನ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡಿದ್ದಾರೆ. ಜೈ ಭಟ್ಟಾಚಾರ್ಯರ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಡಾಕ್ಟರ್ ಜೈ ಭಟ್ಟಾಚಾರ್ಯ?
ಡಾಕ್ಟರ್ ಜೈ ಭಟ್ಟಾಚಾರ್ಯ?

Who is Jay Bhattacharya?: ಡೊನಾಲ್ಡ್‌ ಟ್ರಂಪ್‌ ಅವರು ಭಾರತೀಯ ಮೂಲದ ಜೈ ಭಟ್ಟಾಚಾರ್ಯ ಅವರನ್ನು ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ನ ನೂತನ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಅಮೆರಿಕ ಸರಕಾರದಲ್ಲಿ ಭಾರತೀಯರ ಪ್ರಾಬಲ್ಯ ಇನ್ನಷ್ಟು ಹೆಚ್ಚಾಗಿದೆ. ವಿಶೇಷವೆಂದರೆ, ಈ ಜೈ ಭಟ್ಟಾಚಾರ್ಯ ಅವರು ಹಿಂದೊಮ್ಮೆ ಅಮೆರಿಕದಲ್ಲಿ ಕೈಗೊಂಡ ಕೋವಿಡ್‌ ಉಪಕ್ರಮಗಳನ್ನು ಟೀಕಿಸಿದ್ದರು. ಇವರು ಡೊನಾಲ್ಡ್‌ ಟ್ರಂಪ್‌ ಆಪ್ತರೂ ಹೌದು. ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರ ನೀತಿಗಳನ್ನು ಟೀಕಿಸಿ ಗಮನ ಸೆಳೆದಿದ್ದ ಇವರಿಗೆ ಇದೀಗ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಮುಖ ಹುದ್ದೆ ನೀಡಿದ್ದಾರೆ.

ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ನಿರ್ದೇಶಕರಾಗಿ ಆಯ್ಕೆಯಾಗಿರುವ ಡಾಕ್ಟರ್‌ ಜೈ ಭಟ್ಟಾಚಾರ್ಯ ಅವರು ವೈದ್ಯಕೀಯ ಪದವಿ ಜತೆಗೆ ಅಮೆರಿಕದ ಸ್ಟ್ಯಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಬನ್ನಿ ಜೈ ಭಟ್ಟಾಚಾರ್ಯ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.

ಯಾರಿವರು ಜೈ ಭಟ್ಟಾಚಾರ್ಯ?

  1. ಜೈ ಭಟ್ಟಾಚಾರ್ಯ 1968ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದರು. 1997ರಲ್ಲಿ ಸ್ಟ್ಯಾನ್‌ಫೋರ್ಡ್‌ನಿಂದ ವೈದ್ಯಕೀಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಮೂರು ವರ್ಷಗಳ ನಂತರ ಅದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದರು.
  2. ಡಾ ಭಟ್ಟಾಚಾರ್ಯ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಆರೋಗ್ಯ ನೀತಿಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ಸ್ ರಿಸರ್ಚ್‌ನಲ್ಲಿ ಸಂಶೋಧನಾ ಸಹಾಯಕರಾಗಿದ್ದಾರೆ. ಇವರು ಸ್ಟ್ಯಾನ್‌ಫೋರ್ಡ್‌ನ ಸೆಂಟರ್‌ ಫಾರ್‌ ಡೆಮೊಗ್ರಫಿ ಆಂಡ್‌ ಎಕಾನಮಿಕ್ಸ್‌ ಆಫ್‌ ಹೆಲ್ತ್‌ ಆಂಡ್‌ ಏಜಿಂಗ್‌ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
  3. ಇವರು ಬಡ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಿ ಹಲವು ಸಂಶೋಧನೆಗಳನ್ನು ಮಾಡಿದ್ದಾರೆ ಸರಕಾರಿ ಕಾರ್ಯಕ್ರಮಗಳು, ಬಯೋಮೆಡಿಕಲ್‌ ಮತ್ತು ಅರ್ಥಶಾಸ್ತ್ರವನ್ನು ಒಳಗೊಂಡಂತೆ ಅನೇಕ ಆರೋಗ್ಯ ಸಂಶೋಧನೆಗಳನ್ನು ನಡೆಸಿದ್ದಾರೆ.
  4. ಡಾ ಭಟ್ಟಾಚಾರ್ಯ ಅವರ ಇತ್ತೀಚಿನ ಸಂಶೋಧನೆಯು ಕೋವಿಡ್ -19 ಸಾಂಕ್ರಾಮಿಕ ಕಾಯಿಲೆ ಕುರಿತಾಗಿತ್ತು. ಈ ಸಾಂಕ್ರಾಮಕ ರೋಗಕ್ಕೆ ಸರಕಾರದ ನೀತಿ ನಿರೂಪಣೆಗಳ ಕುರಿತು ಇವರ ಸಂಶೋಧನೆ ಗಮನ ಹರಿಸಿತ್ತು.
  5. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಇವರು ಬಹಿರಂಗ ಪತ್ರ ಬರೆದಿದ್ದರು. ಲಾಕ್‌ಡೌನ್‌ ಜನರಿಗೆ ತೊಂದರೆ ಉಂಟು ಮಾಡುತ್ತದೆ ಎಂದು ಹೇಳಿದ್ದರು. ಲಾಕ್‌ಡೌನ್‌ ಹಿಂತೆಗೆದುಕೊಳ್ಳುವಂತೆ ಕರೆ ನೀಡಿದ್ದರು
  6. ವೈದ್ಯಕೀಯ, ಅರ್ಥಶಾಸ್ತ್ರ, ಆರೋಗ್ಯ ನೀತಿ, ಸಾಂಕ್ರಾಮಿಕ ರೋಗಶಾಸ್ತ್ರ, ಅಂಕಿಅಂಶಗಳು, ಕಾನೂನು ಮತ್ತು ಸಾರ್ವಜನಿಕ ಆರೋಗ್ಯ, ಇತರ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ವೈಜ್ಞಾನಿಕ ನಿಯತಕಾಲಿಕೆಗಳಿಗೆ ಇವರು 135 ಲೇಖನಗಳನ್ನು ಬರೆದಿದ್ದಾರೆ. ಇವರು ಡೊನಾಲ್ಡ್‌ ಟ್ರಂಪ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.