ಕನ್ನಡ ಸುದ್ದಿ  /  Nation And-world  /  Whose Dargah It Is Will Build Ganpati Temple If It Is Not Demolished Raj Thackeray

Raj Thackeray: 'ಇದು ಯಾರ ದರ್ಗಾ? ಇದನ್ನು ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ' - ರಾಜ್ ಠಾಕ್ರೆ

ಮುಂಬೈನ ಮಾಹಿಮ್ ಸಮುದ್ರದಲ್ಲಿ 'ಅಕ್ರಮ ದರ್ಗಾ' ಕಟ್ಟಲಾಗಿದೆ. ಇದನ್ನು ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ
ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ

ಮುಂಬೈ (ಮಹಾರಾಷ್ಟ್ರ): ಮುಂಬೈನ ಮಾಹಿಮ್ ಸಮುದ್ರದಲ್ಲಿ 'ಅಕ್ರಮ ದರ್ಗಾ' ಕಟ್ಟಲಾಗಿದೆ. ಇದನ್ನು ಕೆಡವದಿದ್ದರೆ ಇದೇ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟುತ್ತೇನೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಗುಡಿ ಪಾಡ್ವಾ ಅಂಗವಾಗಿ ನಿನ್ನೆ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ ಠಾಕ್ರೆ, "ಮುಂಬೈನ ಮಾಹಿಮ್ ಸಮುದ್ರದಲ್ಲಿ ಒಂದು ದರ್ಗಾ ಕಾಣಿಸುತ್ತಿದೆ. "ಇದು ಯಾರ ದರ್ಗಾ? ಇದು ಮೀನಿನದ್ದೇ? ಇದು ಒಂದೆರಡು ವರ್ಷಗಳ ಹಿಂದೆ ಇರಲಿಲ್ಲ. ಅಕ್ರಮ ನಿರ್ಮಾಣವನ್ನು ತಕ್ಷಣವೇ ನೆಲಸಮ ಮಾಡದಿದ್ದರೆ, ಅದೇ ಸ್ಥಳದಲ್ಲಿ ಬೃಹತ್ ಗಣಪತಿ ದೇವಸ್ಥಾನವನ್ನು ನಾವು ನಿರ್ಮಿಸುತ್ತೇವೆ" ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

"ಮಾಹಿಮ್‌ನಲ್ಲಿರುವ ಮಖ್ದುಮ್ ಬಾಬಾ ಅವರ ದರ್ಗಾದ ಬಳಿ ಈ ಅಕ್ರಮ ದರ್ಗಾ ಇದೆ. ನಾನು ದೇಶದ ಸಂವಿಧಾನವನ್ನು ಪಾಲಿಸುವ ಮುಸ್ಲಿಮರನ್ನು ಕೇಳಲು ಬಯಸುತ್ತೇನೆ: ನೀವು ಇದನ್ನು ಒಪ್ಪುತ್ತೀರಾ? ನಾನು ಫ್ಲೆಕ್ಸ್ ಮಾಡಲು ಬಯಸುವುದಿಲ್ಲ, ಆದರೆ ಅಗತ್ಯವಿದ್ದಾಗ ನಾನು ಅದನ್ನು ಮಾಡುತ್ತೇನೆ" ಎಂದು ರಾಜ್ ಠಾಕ್ರೆ ಹೇಳಿದರು.

ರಾಜ್ ಠಾಕ್ರೆ ತೋರಿಸದ ವಿಡಿಯೋದಲ್ಲಿ ಮುಂಬೈನ ಮಾಹಿಮ್ ಕರಾವಳಿಯಲ್ಲಿ ದ್ವೀಪ-ಮಾದರಿಯ ಪ್ರದೇಶದಲ್ಲಿ ದರ್ಗಾವೊಂದನ್ನು ನಿರ್ಮಿಸಲಾಗಿದೆ. ಅಲ್ಲಿಗೆ ಜನರು ಬಂದು ಹೋಗುವುದನ್ನು ಕಾಣಬಹುದಾಗಿದೆ. ಅನೇಕ ಸೋಷುಯಲ್​ ಮೀಡಿಯಾ ಬಳಕೆದಾರರು ರಾಜ್ ಠಾಕ್ರೆ ತೋರಿಸಿದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ ಮತ್ತು ಕೆಲವರು ಮಾಹಿಮ್‌ನ ರಹಸ್ಯ ದರ್ಗಾ ಗೂಗಲ್ ನಕ್ಷೆಗಳಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ.

"ಪಾಕಿಸ್ತಾನದ ವಿರುದ್ಧ ಮಾತನಾಡುವ ಜಾವೇದ್ ಅಖ್ತರ್ ಅವರಂತಹ ಮುಸ್ಲಿಮರನ್ನು ನಾನು ಇಷ್ಟಪಡುತ್ತೇನೆ" ಎಂದು ರಾಜ್ ಠಾಕ್ರೆ ಹೇಳಿದರು. "ನನಗೆ ಜಾವೇದ್ ಅಖ್ತರ್​​ನಂತಹ ಇನ್ನೂ ಅನೇಕ ಜನರು ಬೇಕು. ಪಾಕಿಸ್ತಾನದ ವಿರುದ್ಧ ಮಾತನಾಡುವ ಮತ್ತು ನಮ್ಮ ಶಕ್ತಿಯನ್ನು ಹೇಳುವ ಭಾರತೀಯ ಮುಸ್ಲಿಮರು ನನಗೆ ಬೇಕು. ಜಾವೇದ್ ಅಖ್ತರ್ ಹಾಗೆ ಮಾಡುತ್ತಾರೆ ಮತ್ತು ಅವರಂತಹ ಮುಸ್ಲಿಮರು ನನಗೆ ಬೇಕು" ಎಂದು ರಾಜ್ ಠಾಕ್ರೆ ಹೇಳಿಕೆ ನೀಡಿದ್ದಾರೆ.

"ಅಲ್ಲಾ ಕಿವುಡನೇ" ಎಂದ ಈಶ್ವರಪ್ಪ..

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕರ್ನಾಟಕದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆಜಾನ್ ಕುರಿತು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಸಮೀಪದಲ್ಲೇ ಮಸೀದಿಯಿಂದ ಆಜಾನ್ ಶಬ್ದಕೇಳಿದೆ. ಇದರಿಂದ ಕೂಡಲೇ ಸಿಟ್ಟಾದ ಈಶ್ವರಪ್ಪ, "ಎಲ್ಲಿ ಹೋದರೂ ಇದು (ಆಜಾನ್) ನನಗೆ ತಲೆನೋವು, ನಾನು ಎಲ್ಲಿಗೆ ಹೋದರೂ ಇದೇ ಸಮಸ್ಯೆ. ಮೈಕ್‌ನಲ್ಲಿ ಕಿರುಚಿದರೆ ಮಾತ್ರ ಅಲ್ಲಾ ಪ್ರಾರ್ಥನೆಯನ್ನು ಕೇಳುತ್ತಾನೆಯೇ? ಅಲ್ಲಾ ಕಿವುಡನೇ? ಸುಪ್ರೀಂ ಕೋರ್ಟ್ ತೀರ್ಪು ಬರಲಿದೆ. ಇದೆಲ್ಲದಕ್ಕೂ ಶೀಘ್ರದಲ್ಲೇ ಅಂತ್ಯವಿರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ" ಎಂದಿದ್ದರು.

ತಮ್ಮ ಹೇಳಿಕೆ ವಿವಾದ ಸೃಷ್ಟಿಸಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ್ದ ಈಶ್ವರಪ್ಪ, "ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಆಜಾನ್ ಕೇಳಿದಾಗ ತೊಂದರೆಯಾಗುತ್ತದೆ ಎಂದಿದ್ದು, ಯಾವುದೇ ಧರ್ಮವನ್ನು ಖಂಡಿಸುವ ಉದ್ದೇಶವಿಲ್ಲ. ಆದರೆ ಯಾರಾದರೂ ಸಾಮಾನ್ಯ ಜನರ ಭಾವನೆಗಳಿಗೆ ಧ್ವನಿ ನೀಡಬೇಕು. ಇದು ಧರ್ಮವನ್ನು ಖಂಡಿಸುವುದಲ್ಲ" ಅಂತ ತಿಳಿಸಿದ್ದರು.

IPL_Entry_Point

ವಿಭಾಗ