ಭೂಮಿಗೆ ಮರಳಿದ ಸ್ಟಾರ್‌ಲೈನರ್‌ ಅಂತರಿಕ್ಷ ನೌಕೆಯಲ್ಲಿ ಇಂದು ಸುನೀತಾ ವಿಲಿಯಮ್ಸ್ ಬರಲಿಲ್ಲವೇಕೆ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭೂಮಿಗೆ ಮರಳಿದ ಸ್ಟಾರ್‌ಲೈನರ್‌ ಅಂತರಿಕ್ಷ ನೌಕೆಯಲ್ಲಿ ಇಂದು ಸುನೀತಾ ವಿಲಿಯಮ್ಸ್ ಬರಲಿಲ್ಲವೇಕೆ?

ಭೂಮಿಗೆ ಮರಳಿದ ಸ್ಟಾರ್‌ಲೈನರ್‌ ಅಂತರಿಕ್ಷ ನೌಕೆಯಲ್ಲಿ ಇಂದು ಸುನೀತಾ ವಿಲಿಯಮ್ಸ್ ಬರಲಿಲ್ಲವೇಕೆ?

ಸ್ಪೇಸ್‌ಎಕ್ಸ್‌ ಕ್ರ್ಯೂ 8 ಕ್ಯಾಪ್ಸುಲ್‌ ಇಂದು (ಅಕ್ಟೋಬರ್‌ 25) ಭೂಮಿಗೆ ಹಿಂತುರುಗಿದೆ. ಆದರೆ, ಈ ಕ್ಯಾಪ್ಸುಲ್‌ನಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬಚ್‌ ವಿಲ್‌ಮೋರ್‌ ವಾಪಸ್‌ ಬರಲಿಲ್ಲ. ಅವರಿಬ್ಬರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದಿದ್ದಾರೆ. ಯಾಕೆ ಎಂದು ತಿಳಿಯೋಣ.

ಭೂಮಿಗೆ ಮರಳಿದ ಸ್ಟಾರ್‌ಲೈನರ್‌ ಅಂತರಿಕ್ಷ ನೌಕೆಯಲ್ಲಿ ಇಂದು ಸುನಿತಾ ವಿಲಿಯಮ್ಸ್‌ ಬರಲಿಲ್ಲವೇಕೆ?
ಭೂಮಿಗೆ ಮರಳಿದ ಸ್ಟಾರ್‌ಲೈನರ್‌ ಅಂತರಿಕ್ಷ ನೌಕೆಯಲ್ಲಿ ಇಂದು ಸುನಿತಾ ವಿಲಿಯಮ್ಸ್‌ ಬರಲಿಲ್ಲವೇಕೆ? (REUTERS)

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಇತರೆ ಗಗನಯಾನಿಗಳು ಉಳಿದಿದ್ದಾರೆ. ಅವರಿಗೆ ವಾಪಸ್‌ ಬರಲಾಗುತ್ತಿಲ್ಲ ಎಂದೆಲ್ಲ ವದಂತಿ ಕಳೆದ ಹಲವು ತಿಂಗಳಿನಿಂದ ಹರಿದಾಡುತ್ತಿತ್ತು. ಇದೀಗ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸುಲ್ ಅಂತರಿಕ್ಷದಿಂದ ನಾಲ್ವರು ಗಗನಯಾನಿಗಳನ್ನು ಹೊತ್ತು ಭೂಮಿಗೆ ಬಂದಿದೆ. ಬುಧವಾರ ಇದು ಐಎಸ್‌ಎಸ್‌ನಿಂದ ಪ್ರಯಾಣ ಆರಂಭಿಸಿತ್ತು. ಇಂದು ಶುಕ್ರವಾರ ಭೂಮಿಗೆ ತಲುಪಿದೆ. ಈ ಕ್ಯಾಪ್ಸುಲ್‌ ಯಶಸ್ವಿಯಾಗಿ ಸುರಕ್ಷಿತವಾಗಿ ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಇಳಿಯಿತು. ಆದರೆ, ಈ ಕ್ಯಾಪ್ಸುಲ್‌ನೊಳಗೆ ಭೂಮಿಗೆ ಬರಲು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಸ್ಥಳಾವಕಾಶವಿರಲಿಲ್ಲ. ಅವರು ಜೂನ್‌ ತಿಂಗಳಿನಿಂದ ಐಎಸ್‌ಎಸ್‌ನಲ್ಲೇ ಇದ್ದಾರೆ.

ಐಎಸ್‌ಎಸ್‌ನಲ್ಲಿ ಒಂದಿಷ್ಟು ತೊಂದರೆಗಳು ಇದ್ದವು. ಹೀಲಿಯಂ ಸೋರಿಕೆ ಸಮಸ್ಯೆ ಇತ್ತು. ಬೋಯಿಂಗ್‌ ಸ್ಟಾರ್‌ಲೈನರ್‌ಗೆ ಸಂಬಂಧಪಟ್ಟ ಥ್ರಸ್ಟರ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಈ ಜೋಡಿ ಭೂಮಿಗೆ ಹಿಂತುರುಗುವುದು ವಿಳಂಬವಾಗುತ್ತಿದೆ. ಜೂನ್‌ 4ರ ಬಳಿಕ ಈ ಸಮಸ್ಯೆ ಸರಿಪಡಿಸುವ ಯತ್ನಗಳಾದವು. ಇದಾದ ಬಳಿಕ ನಾಲ್ಕು ವಾರಗಳಲ್ಲಿ ಜಗತ್ತಿನಾದ್ಯಂತ ಸುನಿತಾ ವಿಲಿಯಮ್ಸ್‌ ಮತ್ತು ವಿಲ್ಮೋರ್‌ ಕುರಿತು ಜನರಲ್ಲಿ ಕುತೂಹಲ ಹೆಚ್ಚಾಯಿತು. ಆಗಸ್ಟ್‌ ತಿಂಗಳಲ್ಲಿ ನಾಸಾ ತನ್ನ ಸೋಲು ಒಪ್ಪಿಕೊಂಡಿತ್ತು. ಇವರಿಬ್ಬರು ಸ್ಟಾರ್‌ಲೈನರ್‌ನಲ್ಲಿ ಭೂಮಿಗೆ ಬರೋದಿಲ್ಲ ಎಂದು ಹೇಳಿತು. ಈ ಸಮಯದಲ್ಲಿ ವದಂತಿ ಹೆಚ್ಚಾದವು. ಇದು ನಾಸಾ ಮತ್ತು ಬೋಯಿಂಗ್‌ ನಡುವೆ ಬಿರುಕಿಗೂ ಕಾರಣವಾಯಿತು. ಈ ಸಮಯದಲ್ಲಿ ತನ್ನ ಗಗನಯಾನಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದನ್ನು ಸಾಬೀತುಪಡಿಸುವುದಾಗಿ ನಾಸಾ ದೃಢವಾಗಿ ಹೇಳಿತು.

ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯು ತನ್ನ ಜತೆಗೆ ಬಂದಿದ್ದ ಸಿಬ್ಬಂದಿಗಳು ಇಲ್ಲದೆ ಸೆಪ್ಟೆಂಬರ್‌ 6ರಂದು ಮಾನವರಹಿತವಾಗಿ ಭೂಮಿಗೆ ವಾಪಸ್‌ ಬಂದಿತ್ತು. ಈ ಸಮಯದಲ್ಲಿ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್‌ ನಾಸಾದ ಕಾರ್ಯಾಚರಣೆಯ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ಅಂತಿಮವಾಗಿ ಎಲೋನ್‌ ಮಸ್ಕ್‌ನ ಸ್ಪೇಸ್‌ ಎಕ್ಸ್‌ ಕ್ರ್ಯೂ 9 ಮಿಷನ್‌ ಆರಂಭಿಸಿತ್ತು. ನಾಸಾದ ನಿಕ್ ಹೇಗ್ ಮತ್ತು ರೋಸ್ಕೊಸ್ಮೊಸ್ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಜತೆಗೆ ಎರಡು ಸೀಟುಗಳನ್ನು ಖಾಲಿಯಾಗಿಟ್ಟುಕೊಂಡು ಸ್ಪೇಸ್‌ ಎಕ್ಸ್‌ನ ನೌಕೆ ಸೆಪ್ಟೆಂಬರ್‌ 28ರಂದು ಹೊರಡಬೇಕಿತ್ತು. ಝೆನಾ ಕಾರ್ಡ್‌ಮ್ಯಾನ್ ಮತ್ತು ಸ್ಟೆಫನಿ ವಿಲ್ಸನ್, ಹೇಗ್ ಮತ್ತು ಜಿಒರ್ಬು ಜತೆ ಐಎಸ್‌ಎಸ್‌ಗೆ ಪ್ರಯಾಣ ಮಾಡಲು ಉದ್ದೇಶಿಸಿದ್ದರು. ಆದರೆ, ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್‌ ಐಎಸ್‌ಎಸ್‌ನಲ್ಲಿ ಉಳಿಯಬೇಕಾಯಿತು. ಇವರ ಮರಳುವಿಕೆ ಫೆಬ್ರವರಿ 2025ಕ್ಕೆ ನಿಗದಿಪಡಿಸಲಾಗಿದೆ. ಇವರಿಬ್ಬರ ಮಿಷನ್‌ ಅನ್ನು ವಿಸ್ತರಿಸಿರುವುದರಿಂದ ಮುಂದಿನ ವರ್ಷದ ಫೆಬ್ರವರಿ ತನಕ ಕಾಯುವುದು ಅನಿವಾರ್ಯವಾಗಿದೆ.

ಕ್ರ್ಯೂ-8 ಮಿಷನ್ ಬಾಹ್ಯಾಕಾಶ ನೌಕೆಯಲ್ಲಿ ಇಂದು ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಯಾಕೆ ಕರೆದುಕೊಂಡು ಬಂದಿಲ್ಲ. ಇದಕ್ಕೆ ಉತ್ತರ ಸರಳ. ಈಗಾಗಲೇ ಎರಡು ನಾಲ್ಕು ನಾಸಾ ಗಗನಯಾತ್ರಿಗಳಾದ ಮ್ಯಾಥ್ಯೂ ಡೊಮಿನಿಕ್, ಮೈಕೆಲ್ ಬ್ಯಾರಟ್ ಮತ್ತು ಜೀನೆಟ್ ಎಪ್ಸ್ ಮತ್ತು ರೋಸ್ಕೊಸ್ಮೊಸ್ನ ಅಲೆಕ್ಸಾಂಡರ್ ಗ್ರೆಬೆನ್ಕಿನ್ ಅವರನ್ನು ಈ ಕಾರ್ಯಾಚರಣೆಗೆ ಮೀಸಲಿರಿಸಲಾಗಿದೆ. ಆದರೆ, ಯಾರಿಗೂ ಸ್ಥಳಾವಕಾಶ ಇರಲಿಲ್ಲ. ಸುನಿತಾ ವಿಲಿಯಮ್ಸ್‌ ಮತ್ತು ವಿಲ್ಮೋರ್‌ ಐಎಸ್‌ಎಸ್‌ನಲ್ಲಿ 18 ವಾರಗಳಿಗೂ ಹೆಚ್ಚು ಕಾಲದಿಂದ ಇದ್ದಾರೆ. ಇನ್ನೂ ನಾಲ್ಕರಿಂದ ಐದು ತಿಂಗಳು ಅಲ್ಲಿರಬೇಕಾಗುತ್ತದೆ. ಈ ಜೋಡಿಯು ಅಂತರಿಕ್ಷಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಕೆಲಸಗಾರರು. ಇವರು ಹೆಚ್ಚು ಕಾಲ ಅಂತರಿಕ್ಷದಲ್ಲಿದ್ದು ಹೊಸ ದಾಖಲೆ ಬರೆಯುವ ಸಾಧ್ಯತೆಯೂ ಇದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.