"ನಾವು ಬಿಜೆಪಿಗೆ ಮತ ಹಾಕುತ್ತೇವೆ, ಬಿಜೆಪಿ ಈ ಕೆಲಸ ಮಾಡಿದರೆ....": ಕಿಡಿ ಹೊತ್ತಿಸಿದ ಉತ್ತರ ಕೇರಳದ ಆರ್ಚ್ ಬಿಷಪ್ ಹೇಳಿಕೆ
ಉತ್ತರ ಕೇರಳ ಪಟ್ಟಣದಲ್ಲಿ ಭಾನುವಾರ ಕ್ಯಾಥೋಲಿಕ್ ರೈತರ ಸಮಾವೇಶದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಷಪ್ "ಕೇಂದ್ರ ಆಡಳಿತ ಪಕ್ಷವನ್ನು ಚರ್ಚ್‌ನಿಂದ ದೂರವಿಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
ತಲಚೇರಿ: ಉತ್ತರ ಕೇರಳದ ತಲಚೇರಿಯ ಆರ್ಚ್ ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ ನೀಡಿರುವ ಹೇಳಿಕೆಯೊಂದರ ಕುರಿತು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಮತ್ತು ಕಾಂಗ್ರೆಸ್ ಟೀಕಿಸಿವೆ. ಚರ್ಚ್‌ನ ಭಕ್ತರು ರಾಜ್ಯದಿಂದ ಮೊದಲ ಸಂಸದರನ್ನು ಆಯ್ಕೆ ಮಾಡಲು ಭಾರತೀಯ ಜನತಾ ಪಕ್ಷಕ್ಕೆ ಸಹಾಯ ಮಾಡಲು ಸಿದ್ಧರಾಗಿದ್ದಾರೆ ಎಂದು ಈ ಪಕ್ಷಗಳು ಟೀಕಿಸಿವೆ.
ಟ್ರೆಂಡಿಂಗ್ ಸುದ್ದಿ
ಉತ್ತರ ಕೇರಳ ಪಟ್ಟಣದಲ್ಲಿ ಭಾನುವಾರ ಕ್ಯಾಥೋಲಿಕ್ ರೈತರ ಸಮಾವೇಶದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಷಪ್ "ಕೇಂದ್ರ ಆಡಳಿತ ಪಕ್ಷವನ್ನು ಚರ್ಚ್‌ನಿಂದ ದೂರವಿಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
“ಬಿಜೆಪಿಯ ಕುರಿತು ಚರ್ಚ್ ಯಾವುದೇ ದ್ವೇಷ ಅಥವಾ ಅಸ್ಪೃಶ್ಯ ಮನೋಭಾವವನ್ನು ಹೊಂದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಇದು ದೇಶದ ಆಡಳಿತ ಪಕ್ಷವಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಿದರೆ ಬಿಜೆಪಿಗೆ ಮತ ಹಾಕುತ್ತೇವೆ" ಎಂದು ಅವರು ಹೇಳಿದ್ದಾರೆ.
ನೈಸರ್ಗಿಕ ರಬ್ಬರ್ ಬಲೆ ಈಗ 130 ರೂ.ನಿಂದ 150 ರೂ. ನಡುವೆ ಇದೆ. ಕೇಂದ್ರ ಸರಕಾರವು ಈ ದರವನ್ನು ಕಿಲೋಗೆ 300 ರೂ.ಗೆ ಹೆಚ್ಚಿಸಬೇಕೆಂದು ಬಿಷಪ್ ಬಯಸಿದ್ದಾರೆ. "ಕೇಂದ್ರ ಸರ್ಕಾರವು ರಬ್ಬರ್ ಬೆಲೆಯನ್ನು ಹೆಚ್ಚಿಸಿದರೆ, ಚರ್ಚ್ ಸಹಜವಾಗಿ ರಾಜ್ಯದಿಂದ ಸಂಸತ್ತಿನ ಸದಸ್ಯರನ್ನು ಆಯ್ಕೆ ಮಾಡಲು ಬಿಜೆಪಿಗೆ ಸಹಾಯ ಮಾಡುತ್ತದೆ" ಎಂದು ಬಿಷಪ್ ಹೇಳಿದ್ದಾರೆ.
ಚರ್ಚ್ ಸಾಮಾನ್ಯವಾಗಿ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ, ಆದರೆ ರೈತರೊಂದಿಗೆ ನಿಲ್ಲುವ ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರವನ್ನು ಅದು ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನು ಚರ್ಚ್ ಮತ್ತು ಬಿಜೆಪಿ ನಡುವಿನ ಮೈತ್ರಿ ಎಂದು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಡುಪ್ರಾಣಿಗಳ ದಾಳಿ ಇರುವ ಗುಡ್ಡಗಾಡು ಪ್ರದೇಶದಲ್ಲಿ ರಬ್ಬರ್ ಕೃಷಿಕ ರೈತರು ವಾಸವಿದ್ದಾರೆ. ಅದೇ ಸಮಯದಲ್ಲಿ ರಾಜ್ಯದಲ್ಲಿ ರಬ್ಬರ್ ಬೆಲೆ ಕಡಿಮೆಯಾಗಿದ್ದು, ಈ ರೈತರ ಬದುಕನ್ನು ದುಸ್ತರಗೊಳಿಸಿದೆ ಎಂದು ಬಿಷಪ್ ಹೇಳಿದ್ದಾರೆ.
ಬಿಷಪ್ ಹೇಳಿಕೆಯನ್ನು ಟೀಕಿಸಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಟೀಕಿಸಿದ್ದಾರೆ.
“ಉತ್ತರ ಭಾರತದ ರಾಜ್ಯಗಳಲ್ಲಿ ಚರ್ಚ್ ಮತ್ತು ಪಾದ್ರಿಗಳ ಮೇಲಿನ ದಾಳಿಯನ್ನು ಬಿಷಪ್ ಮರೆತಿದ್ದಾರೆ ಎಂದು ಭಾವಿಸುತ್ತೇವೆ. ಅವರು ಯಾವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ" ಎಂದು ಅವರು ಹೇಳಿದ್ದಾರೆ.
"ಯಾರು ಕೂಡ ಕೋಳಿ ಜತೆ ನರಿ ಸಾಕುವುದಿಲ್ಲ. ಹಿಂದೂ ರಾಷ್ಟ್ರ ಪರಿಕಲ್ಪನೆಯ ನಾಯಕರನ್ನು ಚರ್ಚ್ ಹೇಗೆ ಬೆಂಬಲಿಸುತ್ತದೆ?" ಎಂದು ರಾಜ್ಯ ಸಚಿವ ಎಂ ಬಿ ರಾಜೇಶ್ ಪ್ರಶ್ನಿಸಿದ್ದಾರೆ.
ಬಿಷಪ್ ಹೇಳಿಕೆಯನ್ನು ಬಿಜೆಪಿ ಶ್ಲಾಘಿಸಿದೆ. “ಅವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಕ್ರಿಶ್ಚಿಯನ್ ಬಹುಸಂಖ್ಯಾತ ಈಶಾನ್ಯ ರಾಜ್ಯಗಳಲ್ಲಿ ಪಕ್ಷವು ದೊಡ್ಡ ಗೆಲುವು ಸಾಧಿಸಿದೆ ಮತ್ತು ಇದು ಕೇರಳದಲ್ಲೂ ಪ್ರತಿಫಲಿಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದಾರೆ. "ಬಿಜೆಪಿಯ ರಬ್ಬರ್ ರೈತರ ಸಂಕಷ್ಟದ ಕುರಿತು ಕೇಂದ್ರ ಸರಕಾರದ ಜತೆ ಚರ್ಚಿಸಲಿದೆ" ಎಂದು ಅವರು ಭರವಸೆ ನೀಡಿದ್ದಾರೆ.
"ಕಾಂಗ್ರೆಸ್ ಮತ್ತು ಸಿಪಿಐ(ಎಂ) ಅಲ್ಪಸಂಖ್ಯಾತ ಸಮುದಾಯಗಳನ್ನು ಕೇವಲ ವೋಟ್ ಬ್ಯಾಂಕ್‌ಗಾಗಿ ಇಟ್ಟುಕೊಳ್ಳುತ್ತಾರೆ. ಇದಕ್ಕಾಗಿ ಈ ಸಮುದಾಯದ ಜನರಲ್ಲಿ ಭಯದ ಮನೋವಿಕಾರವನ್ನು ಹುಟ್ಟುಹಾಕುತ್ತಿವೆ" ಎಂದು ಸುರೇಂದ್ರನ್ ಟೀಕಿಸಿದ್ದಾರೆ.