ಕನ್ನಡ ಸುದ್ದಿ  /  Nation And-world  /  World Environment Day Sudarsan Pattnaik Crafts Sand Turtle With 2320 Plastic Bottles Puri Beach Viral Kannada News Rst

Environment Day: ಪರಿಸರ ಜಾಗೃತಿಗೆ ಸುದರ್ಶನ್‌ ಪಟ್ನಾಯಕ್‌ ಭಿನ್ನ ಯತ್ನ; 2320 ಪ್ಲಾಸ್ಟಿಕ್‌ ಬಾಟಲಿಗಳಿಂದ ಅರಳಿತು ಆಮೆಯ ಸುಂದರ ಚಿತ್ತಾರ

Sudarsan Pattnaik: ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್‌ ಪಟ್ನಾಯಕ್‌ ಒಡಿಶಾದ ಪುರಿ ಬೀಚ್‌ನಲ್ಲಿ ಸುಂದರ ಆಮೆಯೊಂದನ್ನು ರಚಿಸಿದ್ದಾರೆ. ಈ ಆಮೆ ಚಿತ್ತಾರಕ್ಕೆ ಅವರು ಬಳಸಿದ್ದು ಬರೋಬ್ಬರಿ 2320 ಪ್ಲಾಸ್ಟಿಕ್‌ ಬಾಟಲಿಗಳನ್ನು. ಆ ಮೂಲಕ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಒಡಿಶಾದ ಪುರಿ ಬೀಚ್‌ನಲ್ಲಿ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್‌ ಪಟ್ನಾಯಕ್‌ ಕೈಯಲ್ಲಿ ಅರಳಿದ ಪ್ಲಾಸ್ಟಿಕ್‌ ಬಾಟಲಿಗಳ ಆಮೆ
ಒಡಿಶಾದ ಪುರಿ ಬೀಚ್‌ನಲ್ಲಿ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್‌ ಪಟ್ನಾಯಕ್‌ ಕೈಯಲ್ಲಿ ಅರಳಿದ ಪ್ಲಾಸ್ಟಿಕ್‌ ಬಾಟಲಿಗಳ ಆಮೆ

ಪರಿಸರ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಕುರಿತು ಕಾಳಜಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ನಾವು 50ನೇ ವರ್ಷದ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. ಪ್ಲಾಸ್ಟಿಕ್‌ ಮಾಲಿನ್ಯವನ್ನು ಸೋಲಿಸಿ ಅಥವಾ ಪ್ಲಾಸ್ಟಿಕ್‌ ಮಾಲಿನ್ಯ ತಡೆಯಿರಿ ಎಂಬುದು ಈ ವರ್ಷ ಘೋಷವಾಕ್ಯ. ವಿಶ್ವಸಂಸ್ಥೆಯು ಪ್ಲಾಸ್ಟಿಕ್‌ ಮಾಲಿನ್ಯದ ವಿರುದ್ಧ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಈ ಥೀಮ್‌ ಅನ್ನು ನೀಡಿದೆ.

ವಿಶ್ವ ಪರಿಸರ ದಿನದ ಅಂಗವಾಗಿ ಜಗತ್ಪ್ರಸಿದ್ಧ ಮರಳು ಶಿಲ್ಪ ಕಲಾವಿದ ಸುದರ್ಶನ್‌ ಪಟ್ನಾಯಕ್‌ ಒಡಿಶಾದ ಪುರಿ ಬೀಚ್‌ನಲ್ಲಿ 2320 ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿ ಸುಂದರವಾದ ಆಮೆಯ ಶಿಲ್ಪವನ್ನು ರಚಿಸಿದ್ದಾರೆ. ಈ ಕಲಾಕೃತಿಯು ಸುದರ್ಶನ್‌ ಅವರ ಕಲಾ ನಿಪುಣತೆ ಮಾತ್ರವಲ್ಲ, ಪ್ಲಾಸ್ಟಿಕ್‌ ಮಾಲಿನ್ಯ ಎದುರಿಸುವ ಬಗ್ಗೆ ಪ್ರಬಲ ಸಂದೇಶವನ್ನೂ ಹೊಂದಿದೆ.

ಬಾಟಲಿಗಳಿಂದ ಅರಳಿದ ಆಮೆ

ಈ ಅದ್ಭುತ ಕಲಾಕೃತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸುದರ್ಶನ್‌ ʼಪರಿಸರ ದಿನದ ಈ ಸಂದರ್ಭದಲ್ಲಿ 2320 ಪ್ಲಾಸ್ಟಿಕ್‌ ಬಾಟಲಿಗಳಿಂದ ಆಮೆಯನ್ನು ರಚಿಸಲಾಗಿದೆ. ಪ್ಲಾಸ್ಟಿಕ್‌ ಮಾಲಿನ್ಯ ಕುರಿತ ಸಂದೇಶವು ಈ ಚಿತ್ತಾರದಲ್ಲಿದೆʼ ಎಂದು ಬರೆದುಕೊಂಡಿದ್ದಾರೆ.

ಸುದರ್ಶನ್ ಪಟ್ನಾಯಕ್ ಅವರು ರಚಿಸಿರುವ ಈ ಶಿಲ್ಪವು ಈ ವರ್ಷದ ವಿಶ್ವ ಪರಿಸರ ದಿನದ ಥೀಮ್, 'ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ' ನಿಂದ ಸ್ಫೂರ್ತಿ ಪಡೆದಿದೆಸುದರ್ಶನ್ ಪಟ್ನಾಯಕ್ ಅವರು ರಚಿಸಿರುವ ಈ ಶಿಲ್ಪವು ಈ ವರ್ಷದ ವಿಶ್ವ ಪರಿಸರ ದಿನದ ಥೀಮ್, 'ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ' ನಿಂದ ಸ್ಫೂರ್ತಿ ಪಡೆದಿದೆ.

ಈ ದೈತ್ಯ ಹಾಗೂ ಸುಂದರ ಆಮೆಯ ಕಲಾಕೃತಿಯು ನಮ್ಮ ದೈನಂದಿನ ಜೀವನದಲ್ಲಿ ಪ್ಪಾಸ್ಟಿಕ್‌ ಬಳಕೆ ಕಡಿಮೆ ಮಾಡಲು, ಸ್ವಚ್ಛ, ಆರೋಗ್ಯಕರ ಪರಿಸರಕ್ಕೆ ಕೊಡುಗೆ ನೀಡಲು ನಾವು ಜೀವನದಲ್ಲಿ ಮಾಡಿಕೊಳ್ಳಬೇಕಾದ ಪರಿಣಾಮಕಾರಿ ಬದಲಾವಣೆಗಳನ್ನು ಇದು ಒತ್ತಿ ಹೇಳುವಂತಿದೆ.

ಇಂದು ಬೆಳಿಗ್ಗೆ ಟ್ವಿಟರ್‌ನಲ್ಲಿ ಈ ಫೋಟೊ ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ಸಾಕಷ್ಟು ಲೈಕ್ಸ್‌, ಕಾಮೆಂಟ್‌ ಬಂದಿದೆ. ಅಲ್ಲದೆ, ಹಲವರು ಇದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ವಾವ್‌! ನೀವು ನಿಜಕ್ಕೂ ಗ್ರೇಟ್‌ ಸರ್‌, ನೀವು ಮುಂದಿನ ಎಷ್ಟೋ ತಲೆಮಾರುಗಳಿಗೆ ಸ್ಫೂರ್ತಿʼ ಎಂದಿದ್ದಾರೆ. ʼಇದು ನಿಜಕ್ಕೂ ಅದ್ಭುತ, ಕ್ರಿಯಾತ್ಮಕವಾಗಿದೆʼ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ʼಉತ್ತಮ ಸಂದೇಶವಿರುವ ಸುಂದರ ಕಲಾಕೃತಿʼ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

IPL_Entry_Point

ವಿಭಾಗ