ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜರ್ಮನಿಯ ಲಿಂಬರ್ಗ್‌ನಲ್ಲಿ ವಿಪರೀತ ಪಾರಿವಾಳ ಕಾಟ; ಹತ್ಯೆ ಮಾಡಲು ರೆಫರಂಡಂ, ಪ್ರಾಣಿ ಹಕ್ಕುಗಳ ಕಾರ್ಯಕರ್ತರ ವಿರೋಧ

ಜರ್ಮನಿಯ ಲಿಂಬರ್ಗ್‌ನಲ್ಲಿ ವಿಪರೀತ ಪಾರಿವಾಳ ಕಾಟ; ಹತ್ಯೆ ಮಾಡಲು ರೆಫರಂಡಂ, ಪ್ರಾಣಿ ಹಕ್ಕುಗಳ ಕಾರ್ಯಕರ್ತರ ವಿರೋಧ

ಪಾರಿವಾಳಗಳನ್ನು ಕೊಲ್ಲುವ ಬಗ್ಗೆ ಜರ್ಮನ್ ಪಟ್ಟಣದ ಜನಾಭಿಪ್ರಾಯ ಸಂಗ್ರಹವು ಪ್ರಾಣಿ ಹಕ್ಕುಗಳ ಕಾರ್ಯಕರ್ತರ ಕೋಲಾಹಲಕ್ಕೆ ಕಾರಣವಾಗಿದೆ. ಜರ್ಮನಿಯ ಲಿಂಬರ್ಗ್‌ನಲ್ಲಿ ವಿಪರೀತ ಪಾರಿವಾಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ಹತ್ಯೆ ಮಾಡಲು ರೆಫರಂಡಂ ಆಗಿದೆ. ಇದಕ್ಕೆ ಪ್ರಾಣಿ ಹಕ್ಕುಗಳ ಕಾರ್ಯಕರ್ತರ ವಿರೋಧ ವ್ಯಕ್ತವಾಗಿದೆ.

ಜರ್ಮನಿಯ ಲಿಂಬರ್ಗ್‌ನಲ್ಲಿ ವಿಪರೀತ ಪಾರಿವಾಳ ಕಾಟ; ಹತ್ಯೆ ಮಾಡಲು ರೆಫರಂಡಂ, ಪ್ರಾಣಿ ಹಕ್ಕುಗಳ ಕಾರ್ಯಕರ್ತರ ವಿರೋಧ (ಸಾಂಕೇತಿಕ ಚಿತ್ರ)
ಜರ್ಮನಿಯ ಲಿಂಬರ್ಗ್‌ನಲ್ಲಿ ವಿಪರೀತ ಪಾರಿವಾಳ ಕಾಟ; ಹತ್ಯೆ ಮಾಡಲು ರೆಫರಂಡಂ, ಪ್ರಾಣಿ ಹಕ್ಕುಗಳ ಕಾರ್ಯಕರ್ತರ ವಿರೋಧ (ಸಾಂಕೇತಿಕ ಚಿತ್ರ) (Canva)

ಬರ್ಲಿನ್: ಜರ್ಮನಿಯ ಸಣ್ಣ ಪಟ್ಟಣ ಲಿಂಬರ್ಗ್‌ನಲ್ಲಿ ಪಾರಿವಾಳಗಳ ಕಾಟ. ಅದರಿಂದ ಪಾರಾಗಲು ಅವುಗಳನ್ನು ಕೊಲ್ಲಬೇಕೆ ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದರ ಬಗ್ಗೆ ಸ್ಥಳೀಯರು ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತರ ನಡುವೆ ಸಮರವೇ ನಡೆಯುತ್ತಿದ್ದುದು ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ಇದಕ್ಕೆ ಜೂನ್ 9 ರಂದು ಜನಮತ (ರೆಫರೆಂಡಂ) ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ.

ಮಧ್ಯ ಜರ್ಮನ್ ಪಟ್ಟಣ ಲಿಂಬರ್ಗ್‌ನ ಅಧಿಕಾರಿಗಳು ಜನಮತ ನಿರ್ವಹಣೆ ಮಾಡಿದ್ದು, ಅದರ ಫಲಿತಾಂಶ ಪ್ರಕಟವಾಗಿದೆ. ಸ್ಥಳೀಯರು ಈ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದು, ಪ್ರಾಣಿ ಹಕ್ಕುಗಳ ಕಾರ್ಯಕರ್ತರಿಗೆ ಹಿನ್ನಡೆಯಾಗಿದೆ. ಸರಳವಾಗಿ ಹೇಳಬೇಕು ಎಂದರೆ ಪಾರಿವಾಳ ಕೊಲ್ಲಬೇಕು ಎಂಬುದು ಜನಮತವಾಗಿದೆ.

ರೆಫರೆಂಡಂ ಅನುಷ್ಠಾನಕ್ಕೆ ಕಾಲಮಿತಿ ಇಲ್ಲ

ಲಿಂಬರ್ಗ್‌ನಲ್ಲಿ ಪಾರಿವಾಳದ ಸಮಸ್ಯೆ ಸ್ಥಳೀಯರನ್ನು ಹತಾಶರನ್ನಾಗಿಸಿದೆ. ನ್ಯೂಮಾರ್ಕ್ಟ್ ಸೆಂಟ್ರಲ್ ಸ್ಕ್ವೇರ್ ಸುತ್ತಮುತ್ತಲಿನ ನಿವಾಸಿಗಳು, ರೆಸ್ಟೋರೆಂಟ್‌ಗಳು ಮತ್ತು ಮಾರುಕಟ್ಟೆ ಮಾರಾಟಗಾರರು ಪಾರಿವಾಳದ ಕಾಟದ ಬಗ್ಗೆ ಪದೇಪದೆ ದೂರು ನೀಡುತ್ತಿರುವುದು ಮುಂದುವರಿದಿದೆ. ಸಮಸ್ಯೆಗೆ ಪರಿಹಾರ ಒದಗಿಸುವಂತೆ ಸ್ಥಳೀಯರು ಕಾನೂನು ಹೋರಾಟ ಶುರುಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಈಗ ರೆಫರೆಂಡಂ ಸ್ಥಳೀಯರ ಪರವಾಗಿ ಬಂದರೂ, ಅದರ "ಅನುಷ್ಠಾನಕ್ಕೆ ಯಾವುದೇ ವೇಳಾಪಟ್ಟಿ ಇಲ್ಲ. ಅನುಷ್ಠಾನಕ್ಕೆ ಮೊದಲು ಮತ್ತೊಂದು ಸಮಗ್ರ ಪ್ರಕರಣವಾರು ಪರಿಶೀಲನೆ ನಡೆಯಲಿದೆ ಎಂಬುದನ್ನು ನಿರ್ಣಯವು ಸೂಚಿಸುತ್ತದೆ." ಎಂದು ಪಟ್ಟಣದ ವಕ್ತಾರ ಜೋಹಾನ್ಸ್ ಲಾಬಾಕ್ ತಿಳಿಸಿದ್ದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

700 ಕ್ಕೂ ಹೆಚ್ಚು ಪಾರಿವಾಳಗಳು; ಪಟ್ಟಣದ ಜನರ ಸಂಕಷ್ಟ

ಪಟ್ಟಣದಲ್ಲಿ ಸುಮಾರು 700ಕ್ಕೂ ಹೆಚ್ಚು ಪಾರಿವಾಳಗಳಿವೆ. ಕಳೆದ ನವೆಂಬರ್‌ನಲ್ಲಿ, ಇಷ್ಟು ದೊಡ್ಡ ಪ್ರಮಾಣದ ಪಾರಿವಾಳಗಳ ಸಂಖ್ಯೆ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ಕೌನ್ಸಿಲ್ ನಿರ್ಧರಿಸಿತು. ಆಗ, ಅವುಗಳನ್ನು ಹೇಗೆ ಕೊಲ್ಲಬೇಕು ಎಂಬುದನ್ನು ತೀರ್ಮಾನಿಸಿಲ್ಲ. ಆದರೆ ಈ ಕ್ರಮವು ಪ್ರಾಣಿ ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆಯನ್ನು ಎದುರಿಸಿತು. ಅವರು ಜನಾಭಿಪ್ರಾಯ ಸಂಗ್ರಹಿಸಲಾರಂಭಿಸಿದರು ಎಂದು ಡಿಪಿಎ ತಿಳಿಸಿದೆ.

ಇನ್ನೊಂದೆಡೆ ಒಂದು ತಿಂಗಳ ಕಾಲ ನಡೆದ ರೆಫರೆಂಡಂನಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಪಾರಿವಾಳಗಳ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಲಿಂಬರ್ಗ್‌ನ ಮೇಯರ್ ಮಾರಿಯಸ್ ಹಾನ್ ಹೇಳಿದ್ದಾಗಿ ವರದಿ ವಿವರಿಸಿದೆ.

ಲಿಂಬರ್ಗ್ ಇರುವ ಹೆಸ್ಸೆ ರಾಜ್ಯದ ಕಾಸೆಲ್‌ನ ಆಡಳಿತಾತ್ಮಕ ನ್ಯಾಯಾಲಯವು 2011 ರ ತೀರ್ಪಿನಲ್ಲಿ, ಪಾರಿವಾಳಗಳ ಹತ್ಯೆಯನ್ನು ಅವುಗಳ ಸಂಖ್ಯೆ, ಅವುಗಳಿಂದ ಎದುರಾಗಬಹುದಾದ ಆರೋಗ್ಯ ಅಪಾಯ ಅಥವಾ ಕಟ್ಟಡಗಳಿಗೆ ಹಾನಿಯಂತಹ ವಿವಿಧ ಪರಿಸ್ಥಿತಿಗಳನ್ನು ಪರಿಶೀಲಿಸಬೇಕು ಎಂದು ಹೇಳಿತ್ತು. ಇದರರ್ಥ ನಾವು ಕಾಸೆಲ್‌ನ ಆಡಳಿತಾತ್ಮಕ ನ್ಯಾಯಾಲಯದ ಅವಶ್ಯಕತೆಗಳನ್ನು ಪೂರೈಸುತ್ತಿದ್ದೇವೆಯೇ ಎಂದು ಎಚ್ಚರಿಕೆಯಿಂದ ಪರಿಶೀಲಿಸಬೇಕು" ಎಂದು ಲಾಬಾಕ್ ಹೇಳಿದರು.

ಪಾರಿವಾಳಗಳನ್ನು ಕೊಲ್ಲಬಾರದೆನ್ನುವ ಪ್ರಾಣಿ ಹಕ್ಕು ರಕ್ಷಣಾ ಕಾರ್ಯಕರ್ತರು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದು, ಪಟ್ಟಣದ ಜನಪ್ರತಿನಿಧಿಗಳು, ಮೇಯರ್, ಆಡಳಿತಾಧಿಕಾರಿಗಳನ್ನು ಅವಮಾನಿಸುತ್ತಿದ್ದಾರೆ. ಫೋನ್‌ಕರೆ ಮಾಡಿ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ಲಾಬಾಕ್ ವಿವರಿಸಿದ್ದಾಗಿ ವರದಿ ಹೇಳಿದೆ.

ವಿಭಾಗ