PM Modi in Egypt: ಈಜಿಪ್ಟ್ ತಲುಪಿದ ಭಾರತದ ಪ್ರಧಾನಿ ಮೋದಿ; ಎರಡು ದಿನಗಳ ಪ್ರವಾಸ
PM Modi in Egypt: ಭಾರತದ ಪ್ರಧಾನಿ ಮೋದಿ ಎರಡು ದಿನಗಳ ಪ್ರವಾಸಕ್ಕಾಗಿ ಈಜಿಪ್ಟ್‌ಗೆ ತಲುಪಿದರು.ಇದು 26 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಪ್ರವಾಸವಾಗಿದೆ. ಅವರು ಈಜಿಪ್ಟ್ ನಾಯಕರನ್ನು ಭೇಟಿ ಮಾಡಿ ದುಂಡುಮೇಜಿನ ಸಭೆ ನಡೆಸಲಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ಮಧ್ಯಾಹ್ನ ಎರಡು ದಿನಗಳ ಪ್ರವಾಸಕ್ಕಾಗಿ ಈಜಿಪ್ಟ್‌ಗೆ (PM Modi in Egypt) ಬಂದಿಳಿದರು. ಇದು 26 ವರ್ಷಗಳ ಅವಧಿಯಲ್ಲಿ ಯಾವುದೇ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಪ್ರವಾಸ. ಪ್ರಧಾನಿ ಮೋದಿ ಅವರನ್ನು ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ (Egypt PM Mostafa Madbouly) ಅವರು ಕೈರೋದ ವಿಮಾನ ನಿಲ್ದಾಣದಲ್ಲಿ ಸರ್ಕಾರಿ ಗೌರವದೊಂದಿಗೆ ಬರಮಾಡಿಕೊಂಡರು.
ಪ್ರಧಾನಿ ಮೋದಿ ಅವರು ಈಜಿಪ್ಟ್ ಪ್ರಧಾನಿಯೊಂದಿಗೆ ದುಂಡುಮೇಜಿನ ಸಭೆ ನಡೆಸಲಿದ್ದಾರೆ. ಅಧ್ಯಕ್ಷ ಎಲ್-ಸಿಸಿ ಅವರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರು ನಾಲ್ಕು ದಿನಗಳ ಅಮೆರಿಕ ಪ್ರವಾಸ ಮುಗಿಸಿ ನೇರವಾಗಿ ಈಜಿಪ್ಟ್ ಕಡೆಗೆ ಪ್ರಯಾಣಿಸಿದ್ದರು.
ಇದು ಪ್ರಧಾನಿಯಾಗಿ ಈಜಿಪ್ಟ್‌ಗೆ ನರೇಂದ್ರ ಮೋದಿ ಅವರ ಮೊದಲ ಭೇಟಿಯಾಗಿದೆ. 26 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಈ ವರ್ಷ ಜನವರಿಯಲ್ಲಿ ಭಾರತದ ಗಣರಾಜ್ಯೋತ್ಸವದ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಗಣರಾಜ್ಯೋತ್ಸವದ ಅತಿಥಿಯಾಗಿ ಭಾಗವಹಿಸುವಂತೆ ಅವರಿಗೆ ಆಹ್ವಾನ ನೀಡಿದ್ದರು. ಅದನ್ನು ಅನುಸರಿಸಿ ಅವರು ಆಗಮನಿಸಿದ್ದರು.
ಎರಡು ದಿನಗಳ ಪ್ರವಾಸದಲ್ಲಿ ಏನೇನು?
ತಮ್ಮ ಎರಡು ದಿನಗಳ ಪ್ರವಾಸದ ಅವಧಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್‌ನ ಪ್ರಧಾನಿ ಮಡ್‌ಬೌಲಿ ಅವರೊಂದಿಗೆ ದುಂಡುಮೇಜಿನ ಸಭೆ ನಡೆಸಲಿದ್ದಾರೆ. ಈಜಿಪ್ಟ್ ಅಧ್ಯಕ್ಷ ಎಲ್-ಸಿಸಿ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಅವರು ಆಫ್ರಿಕನ್ ರಾಷ್ಟ್ರದಲ್ಲಿ ವಾಸಿಸುವ ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿಯಾಗಲಿದ್ದಾರೆ.
ಕೈರೋದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ನಾವೆಲ್ಲರೂ ತುಂಬಾ ರೋಮಾಂಚನದೊಂದಿಗೆ ಕಾಯುತ್ತಿದ್ದೇವೆ. ಇಂದು ಪ್ರಧಾನಿಯನ್ನು ಭೇಟಿ ಮಾಡಲು ಸುಮಾರು 300-350 ಜನರನ್ನು ಇಲ್ಲಿಗೆ ಆಹ್ವಾನಿಸಲಾಗಿದೆ ಎಂದು ಈಜಿಪ್ಟ್‌ನಲ್ಲಿರುವ ಭಾರತೀಯ ಸಮುದಾಯ ಸಂಘದ ಅಧ್ಯಕ್ಷೆ ದೀಪ್ತಿ ಸಿಂಗ್ ಎಎನ್‌ಐಗೆ ತಿಳಿಸಿದರು.
ಗಮನಿಸಬಹುದಾದ ಸುದ್ದಿಗಳು ಮತ್ತು ಅಂಕಣಗಳು
Live Update: ಪ್ರಧಾನಿ ಮೋದಿ ಈಜಿಪ್ಟ್ ಪ್ರವಾಸ ಶುರು; ಕರ್ನಾಟಕದ ಮಳೆ ಮಾಹಿತಿ; ರಷ್ಯಾದಲ್ಲಿ ದಂಗೆ