Russia Wagner Coup: ರಷ್ಯಾ ಆಂತರಿಕ ದಂಗೆ ಅಂತ್ಯ, ದೇಶ ತೊರೆದ ವ್ಯಾಗ್ನರ್ ನಾಯಕ ಪ್ರಿಗೊಜಿನ್​; ಆದ್ರೆ, ಅಧ್ಯಕ್ಷ ಪುಟಿನ್ ನಾಪತ್ತೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Russia Wagner Coup: ರಷ್ಯಾ ಆಂತರಿಕ ದಂಗೆ ಅಂತ್ಯ, ದೇಶ ತೊರೆದ ವ್ಯಾಗ್ನರ್ ನಾಯಕ ಪ್ರಿಗೊಜಿನ್​; ಆದ್ರೆ, ಅಧ್ಯಕ್ಷ ಪುಟಿನ್ ನಾಪತ್ತೆ

Russia Wagner Coup: ರಷ್ಯಾ ಆಂತರಿಕ ದಂಗೆ ಅಂತ್ಯ, ದೇಶ ತೊರೆದ ವ್ಯಾಗ್ನರ್ ನಾಯಕ ಪ್ರಿಗೊಜಿನ್​; ಆದ್ರೆ, ಅಧ್ಯಕ್ಷ ಪುಟಿನ್ ನಾಪತ್ತೆ

Russia President Vladimir Putin: ರಷ್ಯಾದಲ್ಲಿ 24 ವರ್ಷಗಳಿಂದ ಸುದೀರ್ಘ ಕಾಲ ಆಳ್ವಿಕೆ ನಡೆಸುತ್ತಿರುವ ಅಧ್ಯಕ್ಷ ವ್ಲಾಡಿಮರ್​ ಪುಟಿನ್​ (70) ಅವರ ಪ್ರಾಬಲ್ಯವು ವ್ಯಾಗ್ನರ್ ದಂಗೆಯಿಂದ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ವ್ಯಾಗ್ನರ್ ಪಡೆಗೆ ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದ ಬಳಿಕ ರಷ್ಯಾ ಅಧ್ಯಕ್ಷರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ವ್ಯಾಗ್ನರ್‌ ಗ್ರೂಪ್‌ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌
ವ್ಯಾಗ್ನರ್‌ ಗ್ರೂಪ್‌ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌

ಮಾಸ್ಕೊ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ರಷ್ಯಾದಲ್ಲಿ ಆಂತರಿಕ ದಂಗೆ ಭುಗಿಲೆದ್ದಿತ್ತು. ರಷ್ಯಾ ವಿರುದ್ಧವೇ ಅಲ್ಲಿನ ಖಾಸಗಿ ಸೇನಾ ಪಡೆ ವ್ಯಾಗ್ನರ್​ ಬಂಡಾಯವೆದ್ದಿತ್ತು. ಉಕ್ರೇನ್​​ನಲ್ಲಿ ರಷ್ಯಾ ಪರವಾಗಿ ಹೋರಾಡುತ್ತಿದ್ದ ಯೆವ್ಗೆನಿ ಪ್ರಿಗೊಜಿನ್​ ನೇತೃತ್ವದ ವ್ಯಾಗ್ನರ್​ ಪಡೆ ರಷ್ಯಾದ ರಕ್ಷಣಾ ವ್ಯವಸ್ಥೆಯ ವಿರುದ್ಧವೇ ತಿರುಗಿ ಬಿದ್ದಿತ್ತು. ಆದರೆ ವ್ಯಾಗ್ನರ್ ಪಡೆ ಇದೀಗ ಒಂದೇ ಒಂದು ಎಚ್ಚರಿಕೆಗೆ ಸೈಲೆಂಟ್​ ಆಗಿದೆ.

ಏಕಾಏಕಿ ದಂಗೆ ಎದ್ದಿದ್ದ ವ್ಯಾಗ್ನರ್ ಪಡೆ, ರಷ್ಯಾದಲ್ಲಿ ದಾಳಿ ನಡೆಸುವ, ಮಿಲಿಟರಿ ಪಡೆಯನ್ನು ಧ್ವಂಸಗೊಳಿಸುವ ಬೆದರಿಕೆ ಒಡ್ಡಿತ್ತು, ರಷ್ಯಾದ ಮಿಲಿಟರಿ‌‌ ಪ್ರಧಾನ ಕಚೇರಿ‌ ಇರುವ ರೋಸ್ಟೋವ್ ನಗರಕ್ಕೆ ನುಗ್ಗಿತ್ತು. ಇದರಿಂದ ಎಚ್ಚೆತ್ತ ಪುಟಿನ್ ಸರ್ಕಾರ ಮಾಸ್ಕೋದ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿತ್ತು.

ರಷ್ಯಾ ಅಧ್ಯಕ್ಷ ವ್ಲಾಡಿಮರ್​ ಪುಟಿನ್​ ಈ ದಂಗೆಯನ್ನು "ದೇಶದ್ರೋಹ" ಎಂದು ಖಂಡಿಸಿದ್ದರು. ಎಂದಿಗೂ ಕಂಡಿರದ "ಕಠಿಣ ಶಿಕ್ಷೆ" ನೀಡುವ ಎಚ್ಚರಿಕೆ ನೀಡಿದ್ದರು. ರಷ್ಯಾ ಸರ್ಕಾರ ಮತ್ತು ವ್ಯಾಗ್ನರ್ ನಾಯಕ ಯೆವ್ಗೆನಿ ಪ್ರಿಗೊಜಿನ್​ ನಡುವೆ ನಡೆದ ಸಂಧಾನ ಸಭೆಯಲ್ಲಿ ದಂಗೆ ಕೈಬಿಡುವುದಾಗಿ ಪ್ರಿಗೊಜಿನ್ ಒಪ್ಪಿಕೊಂಡಿದ್ದಾನೆ. ಆದರೆ ಇದಕ್ಕೆ ಪ್ರಮುಖ ಕಾರಣ ಪುಟಿನ್ ಆಪ್ತರೂ ಆಗಿರುವ ಬೆಲರೂಸ್​ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ. ಬೆಲರೂಸ್​ ಅಧ್ಯಕ್ಷ ಕೂಡ ಈ ಸಂಧಾನ ಸಭೆಯಲ್ಲಿ ಭಾಗಿಯಾಗಿ ಮಾತುಕತೆ ನಡೆಸಿದ್ದರು.

ದೇಶ ತೊರೆದರೆ ಮಾತ್ರ ಈತನ ವಿರುದ್ಧ ಸಶಸ್ತ್ರ ದಂಗೆಯ ಆರೋಪವನ್ನು ಕೈಬಿಡುವುದಾಗಿ ಷರತ್ತು ವಿಧಿಸಲಾಗಿತ್ತು. ಹೀಗಾಗಿ ಪ್ರಿಗೊಜಿನ್ ರಷ್ಯಾ ತೊರೆದು ಬೆಲಾರಸ್​ಗೆ ಪಲಾಯನ ಮಾಡಿದ್ದಾನೆ. ಬೆಲಾರಸ್​ನಲ್ಲಿ ಪ್ರಿಗೊಜಿನ್​​ಗೆ ಆಶ್ರಯ ನೀಡಲು ಸಂಧಾನ ಸಭೆಯಲ್ಲಿ ಲುಕಾಶೆಂಕೊ ಒಪ್ಪಿಕೊಂಡಿದ್ದರು. ಹಾಗೆಯೇ ತನ್ನ ವ್ಯಾಗ್ನರ್ ಪಡೆಗೆ ಉಕ್ರೇನ್​​ಗೆ ಮರಳಿ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದಾನೆ.

ರಷ್ಯಾ ಮತ್ತು ಉಕ್ರೇನ್​ ನಡುವೆ ನಡೆಯುತ್ತಿರುವ ಸಮಯವು ಎರಡನೇ ಮಹಾಯುದ್ಧದ ನಂತರ ಯುರೋಪಿನ ಅತಿದೊಡ್ಡ ಸಂಘರ್ಷವಾಗಿದೆ. ದಾಳಿ -ಪ್ರತಿದಾಳಿಗಳು ಜಗತ್ತನ್ನೇ ಬೆಚ್ಚಿ ಬೀಳಿಸಿವೆ. ಸಾವಿರಾರು ನಾಗರಿಕರು, ಮಕ್ಕಳು, ಸೈನಿಕರು ಪ್ರಾಣತೆತ್ತಿದ್ದಾರೆ. ರಷ್ಯಾ ಪಡೆಗಳಿಗೆ ಬೆಲಾರಸ್​ ಆಶ್ರಯ ನೀಡುತ್ತಾ ಬಂದಿದೆ.

ಪುಟಿನ್​ ಎಲ್ಲಿದ್ದಾರೆ?

ರಷ್ಯಾದಲ್ಲಿ 24 ವರ್ಷಗಳಿಂದ ಸುದೀರ್ಘ ಕಾಲ ಆಳ್ವಿಕೆ ನಡೆಸುತ್ತಿರುವ ಅಧ್ಯಕ್ಷ ವ್ಲಾಡಿಮರ್​ ಪುಟಿನ್​ (70) ಅವರ ಪ್ರಾಬಲ್ಯವು ವ್ಯಾಗ್ನರ್ ದಂಗೆಯಿಂದ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಅವರ ಇಮೇಜ್​ ಡ್ಯಾಮೇಜ್​ ಆಗಿದೆ ಎನ್ನಲಾಗುತ್ತಿದೆ. ವ್ಯಾಗ್ನರ್ ಪಡೆಗೆ ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದ ಬಳಿಕ ರಷ್ಯಾ ಅಧ್ಯಕ್ಷರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ದಂಗೆ ಅಂತ್ಯವಾಗಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಶನಿವಾರ ರಾತ್ರಿ ಬೆಲಾರಸ್​ ಅಧ್ಯಕ್ಷ ಲುಕಾಶೆಂಕೊ ಅವರಿಗೆ ದೂರವಾಣಿ ಕರೆ ಮಾಡಿ ಧನ್ಯವಾದ ಅರ್ಪಿಸಿದರು ಎಂದು ಬೆಲಾರಸ್‌ನ ರಾಜ್ಯ ಸರ್ಕಾರ ನಡೆಸುವ ಬೆಲ್ಟಾ ಸುದ್ದಿ ಮಾಧ್ಯಮ ವರದಿ ಮಾಡಿದೆ. ಹೀಗಾಗಿ ಪುಟಿನ್​ ನಾಪತ್ತೆ ಬಗ್ಗೆ ಅನುಮಾನಗಳು ಮೂಡಿವೆ.

ವ್ಯಾಗ್ನರ್ ಗ್ರೂಪ್​

ವ್ಯಾಗ್ನರ್​ ಗುಂಪನ್ನು ಅಧಿಕೃತವಾಗಿ ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯುತ್ತಾರೆ. ಇದು ರಷ್ಯಾದ ಖಾಸಗಿ ಅರೆಕಾಲಿಕ ಪಡೆ. ಇದು ಕಾನೂನು ಬಾಹಿರ ಸೇನೆ ಆದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೆಚ್ಚು ಆಪ್ತವಾಗಿತ್ತು. ಪುಟಿನ್​ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು. ಪುಟಿನ್​ಗೆ ಹೆಚ್ಚು ಆಪ್ತವಾಗಿದ್ದ ಖಾಸಗಿ ಸೇನೆಯೂ ಇದಾಗಿದ್ದು, ಪುಟಿನ್ ಸರ್ಕಾರದ ವಿರುದ್ಧವೇ ಬಂಡಾಯ ಎದ್ದಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.