ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Human Embryo Model: ಅಂಡಾಣು, ವೀರ್ಯ ಎರಡೂ ಇಲ್ಲದೆ ಮನುಷ್ಯ ಭ್ರೂಣ ಮಾದರಿ ತಯಾರಿಸಿದ ವಿಜ್ಞಾನಿಗಳು

Human Embryo Model: ಅಂಡಾಣು, ವೀರ್ಯ ಎರಡೂ ಇಲ್ಲದೆ ಮನುಷ್ಯ ಭ್ರೂಣ ಮಾದರಿ ತಯಾರಿಸಿದ ವಿಜ್ಞಾನಿಗಳು

Human Embryo Model: ವೈಜ್‌ಮನ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳ ತಂಡವು ವೀರ್ಯ, ಅಂಡಾಣು ಅಥವಾ ಗರ್ಭವನ್ನು ಬಳಸದೆ 14 ದಿನಗಳ ಮಾನವ ಭ್ರೂಣವನ್ನು ಹೋಲುವ 'ಭ್ರೂಣ ಮಾದರಿ'ಯನ್ನು ಯಶಸ್ವಿಯಾಗಿ ರಚಿಸಿದೆ.

ಮಾನವ ಭ್ರೂಣವನ್ನು ಹೋಲುವ 'ಭ್ರೂಣ ಮಾದರಿ'
ಮಾನವ ಭ್ರೂಣವನ್ನು ಹೋಲುವ 'ಭ್ರೂಣ ಮಾದರಿ' (Weizmann Institute of Science)

ತಂತ್ರಜ್ಞಾನ ಮತ್ತು ನವೀನ ಡಿಜಿಟಲ್ ಸಲ್ಯೂಷನ್‌ಗಳ ಪ್ರಗತಿಯೊಂದಿಗೆ, ಆರೋಗ್ಯ ಉದ್ಯಮವು ತೀವ್ರವಾಗಿ ವಿಕಸನಗೊಂಡಿದೆ. ಹಂದಿಯ ಹೃದಯವನ್ನು ಮಾನವ ಹೃದಯಕ್ಕೆ ಕಸಿ ಮಾಡಿದ್ದರಿಂದ ಹಿಡಿದು ಶ್ರವಣ ಸಾಧನಗಳವರೆಗೆ, ವೈದ್ಯಕೀಯ ವಿಜ್ಞಾನವು ಉದ್ಯಮದಲ್ಲಿ ಪ್ರಚಂಡ ಫಲಿತಾಂಶಗಳನ್ನು ನೀಡಿದೆ. ಇದರ ಮುಂದುವರಿದ ಭಾಗ ಎನ್ನಬಹುದಾದ ವಿದ್ಯಮಾನದಲ್ಲಿ, ಆರಂಭಿಕ ಹಂತದ ಮಾನವ ಭ್ರೂಣವನ್ನು ಹೋಲುವ ಮಾದರಿಯನ್ನು ವಿಜ್ಞಾನಿಗಳು ಬೆಳೆಸಿದ್ದಾರೆ. ಅಂದ ಹಾಗೆ ಈ ಭ್ರೂಣ ಮಾದರಿಯನ್ನುಅಭಿವೃದ್ಧಿ ಪಡಿಸಲು ವಿಜ್ಞಾನಿಗಳು ವೀರ್ಯ, ಅಂಡಾಣು ಅಥವಾ ಗರ್ಭಾಶಯವನ್ನು ಬಳಸಿಲ್ಲ ಎಂಬುದು ವಿಶೇಷ.

ಟ್ರೆಂಡಿಂಗ್​ ಸುದ್ದಿ

ಇಸ್ರೇಲ್‌ನ ವೈಜ್‌ಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರು ತಮ್ಮ "ಭ್ರೂಣ ಮಾದರಿ" ಯನ್ನು ಕಾಂಡಕೋಶಗಳನ್ನು ಬಳಸಿ ತಯಾರಿಸಲಾಗಿದೆ. ಇದಲ್ಲದೆ, ಇದು ನಿಜವಾದ 14-ದಿನ ವಯಸ್ಸಿನ ಭ್ರೂಣದ ಪಠ್ಯಪುಸ್ತಕದ ಉದಾಹರಣೆಗೆ ನಿಕಟವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಮಾನವ ಭ್ರೂಣ ಮಾದರಿ ಅಭಿವೃದ್ಧಿಯ ಪ್ರಯೋಜನ

ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಿದ ಸ್ಟೆಲ್ ಸೆಲ್‌ಗಳನ್ನು ಬಳಸಿಕೊಂಡು ಮಾನವ ಭ್ರೂಣದ ಮಾದರಿ ರಚಿಸಿದ್ದೇವೆ. ಅಷ್ಟೆ ಅಲ್ಲ, ಇದು ಗರ್ಭಾವಸ್ಥೆಯ ಪರೀಕ್ಷೆಯನ್ನು ಧನಾತ್ಮಕವಾಗಿ ಪರಿವರ್ತಿಸುವ ಹಾರ್ಮೋನನ್ನೂ ಬಿಡುಗಡೆ ಮಾಡಿತು. ಈ ಸಂಶೋಧನೆಯು ಭ್ರೂಣದ ಮಾಡೆಲಿಂಗ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದು ಮನುಷ್ಯ ಜೀವನದ ಆರಂಭಿಕ ಕ್ಷಣಗಳನ್ನು ಅರ್ಥಮಾಡಿಕೊಳ್ಳುವ ನೈತಿಕ ಮಾರ್ಗವನ್ನು ನೀಡುತ್ತದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.

ಇದನ್ನೂ ಓದಿ| ಹೆಣ್ಣು ಹುಡುಕಿ ಕೊಡಪ್ಪಾ ತಂದೆ ಅಂತ ದೇವರಿಗೆ ಹರಕೆ ಹೊತ್ತ, ಫಲಿಸದ ಕಾರಣ ಶಿವಲಿಂಗವನ್ನೇ ಕಿತ್ತೊಯ್ದ

ಈ ಸಿಂಥೆಟಿಕ್‌ ಅಥವಾ ಸಂಶ್ಲೇಷಿತ ಭ್ರೂಣದ ಮಾದರಿಯು ಜರಾಯು, ಹಳದಿ ಚೀಲ, ಕೊರಿಯಾನಿಕ್ ಚೀಲ ಮತ್ತು ಇತರ ಬಾಹ್ಯ ಅಂಗಾಂಶಗಳನ್ನು ಒಳಗೊಂಡು ಈ ಹಂತದ ವಿಶಿಷ್ಟವಾಗಿರುವ ಎಲ್ಲ ರಚನೆಗಳು, ವಿಭಾಗಗಳನ್ನು ಹೊಂದಿದೆ. ಮಾದರಿಯ ಕ್ರಿಯಾತ್ಮಕ ಮತ್ತು ಅಗತ್ಯ ಬೆಳವಣಿಗೆಯನ್ನು ಇದು ಖಚಿತಪಡಿಸುತ್ತದೆ ಎಂದು ವಿಜ್ಞಾನಿಗಳ ತಂಡವು ಹೇಳಿದೆ.

ಗರ್ಭಾವಸ್ಥೆಯ ಆರಂಭಿಕ ಬೆಳವಣಿಗೆಗಳ ಅಧ್ಯಯನಕ್ಕೆ ಸಹಕಾರಿ

ಭ್ರೂಣದ ಬೆಳವಣಿಗೆಯ ನಾಟಕೀಯ ವಿದ್ಯಮಾನ ಮೊದಲ ತಿಂಗಳು ನಡೆಯುತ್ತದೆ. ಉಳಿದ ಎಂಟು ತಿಂಗಳ ಗರ್ಭಾವಸ್ಥೆಯು ಮುಖ್ಯವಾಗಿ ಅಗತ್ಯ ಬೆಳವಣಿಗೆಯಾಗಿದೆ. ಆದರೆ ಆ ಮೊದಲ ತಿಂಗಳುಇನ್ನೂ ಬಹುಮಟ್ಟಿಗೆ ಕಪ್ಪು ಪೆಟ್ಟಿಗೆಯಂತೆ. ಮನುಷ್ಯನ ಕಾಂಡಕೋಶದಿಂದ ಪಡೆದ ಮಾನವ ಭ್ರೂಣದಮಾದರಿಯು ಈ ಪೆಟ್ಟಿಗೆಯಲ್ಲಿ ಇಣುಕಿನೋಡುವ ನೈತಿಕ ಮತ್ತು ಪ್ರವೇಶಿಸಬಹುದಾದ ಮಾರ್ಗವನ್ನು ನೀಡುತ್ತದೆ. ಇದು ನಿಜವಾದ ಮಾನವಭ್ರೂಣದ ಬೆಳವಣಿಗೆಯನ್ನು ನಿಕಟವಾಗಿ ಅನುಕರಿಸುತ್ತದೆ, ಅದರಲ್ಲೂ ವಿಶೇಷವಾಗಿ ಅದರ ಸೂಕ್ಷ್ಮವಾದ ಉತ್ತಮಹೊರಹೊಮ್ಮುವಿಕೆಯೇ ನಿಜವಾದವಾಸ್ತುಶಿಲ್ಪ ಎಂದು ಪ್ರೊಫೆಸರ್ ಜಾಕೋಬ್ಹನ್ನಾ ಹೇಳುತ್ತಾರೆ.

ಗರ್ಭಧಾರಣೆಯಅನೇಕ ವೈಫಲ್ಯ ಮೊದಲ ಕೆಲವು ವಾರಗಳಲ್ಲೇ ಸಂಭವಿಸುತ್ತವೆ. ಅಂದರೆ ಮಹಿಳೆಯು ತಾನು ಗರ್ಭಿಣಿಯಾಗಿದ್ದಾಳೆಂದು ತಿಳಿಯುವ ಮೊದಲೇ ಈ ವಿದ್ಯಮಾನಗಳು ನಡೆದಿರುತ್ತವೆ. ಅನೇಕ ಜನ್ಮದೋಷಗಳು ಹುಟ್ಟಿಕೊಳ್ಳುತ್ತವೆ. ಆದರೂ ಅವುಗಳು ಬಹಳನಂತರ ಪತ್ತೆಯಾಗುತ್ತವೆ. ಈಆರಂಭಿಕ ಹಂತದಲ್ಲಿ ಸರಿಯಾದ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಜೀವರಾಸಾಯನಿಕ ಮತ್ತು ಯಾಂತ್ರಿಕ ಸಂಕೇತಗಳನ್ನು ಬಹಿರಂಗಪಡಿಸುವುದಕ್ಕೆ ಈ ಭ್ರೂಣ ಮಾದರಿಬಳಸಬಹುದು ಮತ್ತು ಆ ಅಭಿವೃದ್ಧಿಯು ಯಾವರೀತಿಯಲ್ಲಿ ತಪ್ಪಾಗಿರಬಹುದು ಎಂಬುದನ್ನು ಅಂದಾಜಿಸುವುದು ಸಾಧ್ಯವಿದೆ ಎಂದು ಹನ್ನಾ ವಿವರಿಸುತ್ತಾರೆ.

ಭವಿಷ್ಯದ ಸಂಶೋಧನೆಗೆ ಹೊಸ ದಿಕ್ಕು ತೆರೆದುಕೊಟ್ಟ ವಿದ್ಯಮಾನ

ಅವರ ಅಧ್ಯಯನವು ಈಗಾಗಲೇ ಭವಿಷ್ಯದ ಸಂಶೋಧನೆಗೆ ಹೊಸ ದಿಕ್ಕನ್ನು ತೆರೆದಿದೆ. ಮೂರು ದಿನದಲ್ಲಿ ಭ್ರೂಣವು ಜರಾಯು-ರೂಪಿಸುವ ಕೋಶಗಳಿಂದ ಸರಿಯಾಗಿ ಆವರಿಸದಿದ್ದರೆ, ಅರ್ಥಾತ್ ಅದರ ಆಂತರಿಕ ರಚನೆಗಳು ಸರಿಯಾಗಿ ಅಭಿವೃದ್ಧಿಗೊಳ್ಳಲು ವಿಫಲವಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಳ್ಳುತ್ತಾರೆ. ನೈಸರ್ಗಿಕ ಭ್ರೂಣದ ಬೆಳವಣಿಗೆಯಲ್ಲಿ 10 ನೇ ದಿನಕ್ಕೆ ಅನುರೂಪವಾಗಿರುವುದು ಅವಶ್ಯ.

ಭ್ರೂಣವು ಸ್ಥಿರವಾಗಿರುವುದಿಲ್ಲ. ಇದು ಸರಿಯಾದ ವ್ಯವಸ್ಥೆಯಲ್ಲಿ ಸರಿಯಾದ ಕೋಶಗಳನ್ನು ಹೊಂದಿರಬೇಕು. ಹಾಗಿದ್ದರೆ ಮಾತ್ರ ಅದು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಸಂಪೂರ್ಣ ಭ್ರೂಣದ ಮಾದರಿಯು ಅದರ ಸರಿಯಾದ ಬೆಳವಣಿಗೆಯನ್ನು ಯಾವುದು ನಿರ್ಧರಿಸುತ್ತದೆ ಎಂಬುದರ ಕುರಿತು ಮೂಲಭೂತ ಪ್ರಶ್ನೆಗಳನ್ನು ಪರಿಹರಿಸಲು ಸಂಶೋಧಕರಿಗೆ ಸಹಾಯ ಮಾಡುತ್ತದೆ ಎಂದು ಹನ್ನಾ ತಿಳಿಸಿದ್ದಾರೆ.

ಈ ಸಂಶೋಧನಾ ಪ್ರಬಂಧ ನೇಚರ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಟಿ20 ವರ್ಲ್ಡ್‌ಕಪ್ 2024