ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಿಶ್ವದ ಟಾಪ್ 10 ಅತಿಶ್ರೀಮಂತ ಮಹಿಳೆಯರು; ಪಟ್ಟಿಯಲ್ಲಿ ಭಾರತದ ಸಾವಿತ್ರಿ ಜಿಂದಾಲ್, ಫೋರ್ಬ್ಸ್‌ ರಿಯಲ್ ಟೈಮ್‌ ಬಿಲಿಯನೇರ್ಸ್ ರ‍್ಯಾಂಕಿಂಗ್‌

ವಿಶ್ವದ ಟಾಪ್ 10 ಅತಿಶ್ರೀಮಂತ ಮಹಿಳೆಯರು; ಪಟ್ಟಿಯಲ್ಲಿ ಭಾರತದ ಸಾವಿತ್ರಿ ಜಿಂದಾಲ್, ಫೋರ್ಬ್ಸ್‌ ರಿಯಲ್ ಟೈಮ್‌ ಬಿಲಿಯನೇರ್ಸ್ ರ‍್ಯಾಂಕಿಂಗ್‌

ವಿಶ್ವದ ಟಾಪ್ 10 ಅತಿಶ್ರೀಮಂತ ಮಹಿಳೆಯರು; ಫೋರ್ಬ್ಸ್‌ ರಿಯಲ್ ಟೈಮ್‌ ಬಿಲಿಯನೇರ್ಸ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಸಾವಿತ್ರಿ ಜಿಂದಾಲ್ ಕೂಡ ಇದ್ದಾರೆ. ಫ್ರಾನ್ಸ್ ಮೂಲದ ಲೋರಿಯಲ್ ಕಂಪನಿ ಒಡತಿ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ಮೊದಲ ಸ್ಥಾನದಲ್ಲಿದ್ದಾರೆ.

ವಿಶ್ವದ ಟಾಪ್ 10 ಅತಿಶ್ರೀಮಂತ ಮಹಿಳೆಯರು ಫೋರ್ಬ್ಸ್‌ ರಿಯಲ್ ಟೈಮ್ಸ್ ಬಿಲಿಯನೇರ್ಸ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ (1) ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್, (2) ಅಲೈಸ್ ವಾಲ್ಟನ್‌ ಮತ್ತು ಭಾರತದ ಸಾವಿತ್ರಿ ಜಿಂದಾಲ್ ಅವರು 6 ನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಟಾಪ್ 10 ಅತಿಶ್ರೀಮಂತ ಮಹಿಳೆಯರು ಫೋರ್ಬ್ಸ್‌ ರಿಯಲ್ ಟೈಮ್ಸ್ ಬಿಲಿಯನೇರ್ಸ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ (1) ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್, (2) ಅಲೈಸ್ ವಾಲ್ಟನ್‌ ಮತ್ತು ಭಾರತದ ಸಾವಿತ್ರಿ ಜಿಂದಾಲ್ ಅವರು 6 ನೇ ಸ್ಥಾನದಲ್ಲಿದ್ದಾರೆ.

ನವದೆಹಲಿ: ಜಗತ್ತಿನಲ್ಲಿ ಪದೇಪದೆ ಗಮನಸೆಳೆಯುವ ಸುದ್ದಿಗಳ ಪೈಕಿ ಕೋಟ್ಯಧಿಪತಿಗಳ ವಿವರವೂ ಒಂದು. ಅತಿಶ್ರೀಮಂತರ ಇಂತಹ ಪಟ್ಟಿಯನ್ನು ಪ್ರಕಟಿಸುವ ಸಂಸ್ಥೆಗಳ ಪೈಕಿ ಫೋರ್ಬ್ಸ್‌ ಮುಂಚೂಣಿಯಲ್ಲಿದೆ. 2024ರ ಟಾಪ್ 10 ಅತಿಶ್ರೀಮಂತ ಮಹಿಳೆಯರು ಯಾರು ಎಂಬ ಸಂದೇಹವನ್ನು ಫೋರ್ಬ್ಸ್‌ ನೀಗಿಸಿದೆ.

ಈ ಪಟ್ಟಿಯಲ್ಲಿ ಹಣಕಾಸು, ಫ್ಯಾಷನ್, ಇಕಾಮರ್ಸ್‌ ಸೇರಿ ವಿವಿಧ ಉದ್ಯಮಗಳನ್ನು ಸ್ಥಾಪಿಸಿ ಜನಪ್ರಿಯರಾಗಿರುವ, ತಮ್ಮದೇ ಛಾಪು ಮೂಡಿಸಿರುವ ಮಹಿಳೆಯರೂ ಇದ್ದಾರೆ ಎಂಬುದು ಈಗ ನಿರ್ವಿವಾದಿತ ವಿಚಾರ. ಇಂತಹ ಶತಕೋಟ್ಯಧಿಪತಿಗಳ ನೈಜ ಸಮಯದ ಸಂಪತ್ತನ್ನು ಫೋರ್ಬ್ಸ್ ಟ್ರ್ಯಾಕ್ ಮಾಡುತ್ತದೆ. ಈ ಪಟ್ಟಿಯನ್ನು ಗಮನಿಸುವುದಾದರೆ ಜಗತ್ತಿನಲ್ಲಿ 2024ರ ಅತಿಶ್ರೀಮಂತ ಅಥವಾ ಶತಕೋಟ್ಯಧಿಪತಿ ಮಹಿಳೆಯರ ಟಾಪ್ 10 ಪಟ್ಟಿಯ ವಿವರ ಹೀಗಿದೆ ಗಮನಿಸಿ.

ಜಗತ್ತಿನ ಟಾಪ್ 10 ಅತಿಶ್ರೀಮಂತ ಮಹಿಳೆಯರು ಇವರು

1) ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ (70) ಮತ್ತು ಕುಟುಂಬ, ಫ್ರಾನ್ಸ್‌, 99.5 ಶತಕೋಟಿ ಡಾಲರ್‌, ಲೋರಿಯಲ್‌, ಫ್ಯಾಷನ್& ರಿಟೇಲ್‌

ಟ್ರೆಂಡಿಂಗ್​ ಸುದ್ದಿ

2) ಅಲೈಸ್ ವಾಲ್ಟನ್‌ (74), ಅಮೆರಿಕ, 72.3 ಶತಕೋಟಿ ಡಾಲರ್, ವಾಲ್‌ ಮಾರ್ಟ್‌, ಫ್ಯಾಷನ್& ರಿಟೇಲ್‌

3) ಜುಲಿಯಾ ಕೋಚ್ ಮತ್ತು ಕುಟುಂಬ (61), 64.3 ಶತಕೋಟಿ ಡಾಲರ್, ಅಮೆರಿಕ, ಕೊಚ್ ಇಂಡಸ್ಟ್ರೀಸ್, ವಿವಿಧ ಉತ್ಪನ್ನಗಳು

4) ಜಾಕ್ವೆಲಿನ್ ಮಾರ್ಸ್ (84), 38.5 ಶತಕೋಟಿ ಡಾಲರ್, ಅಮೆರಿಕ, ಕ್ಯಾಂಡಿ ಮತ್ತು ಪೆಟ್‌ ಫುಡ್‌

5) ಮೆಕ್‌ಕೆನ್ಝಿ ಸ್ಕಾಟ್ (53) 35.6 ಶತಕೋಟಿ ಡಾಲರ್, ಅಮೆರಿಕ, ಅಮೆಜಾನ್‌

6) ಸಾವಿತ್ರಿ ಜಿಂದಾಲ್ (74) ಮತ್ತು ಕುಟುಂಬ, 33.5 ಶತಕೋಟಿ ಡಾಲರ್, ಭಾರತ, ಜಿಂದಾಲ್ ಇಂಡಸ್ಟ್ರೀಸ್

7) ರಾಫೆಲಾ ಅಪೊಂಟೆ ಡಯಮಂಟ್ (79), 33.1 ಶತಕೋಟಿ ಡಾಲರ್‌, ಸ್ವಿಜರ್ಲೆಂಡ್ ಶಿಪ್ಪಿಂಗ್

8) ಮಿರಿಯಮ್ ಅಡೆಲ್ಸನ್ (78) ಮತ್ತು ಕುಟುಂಬ, 32 ಶತಕೋಟಿ ಡಾಲರ್, ಅಮೆರಿಕ, ಕ್ಯಾಸಿನೊ

9) ಗಿನಾ ರೈನ್ಹಾರ್ಟ್ (70), 30.8 ಶತಕೋಟಿ ಡಾಲರ್, ಆಸ್ಟ್ರೇಲಿಯಾ, ಮೈನಿಂಗ್

10) ಅಬಿಗೈಲ್ ಜಾನ್ಸನ್ (62), 29 ಶತಕೋಟಿ ಡಾಲರ್, ಅಮೆರಿಕ, ಫಿಡೆಲಿಟಿ

(ಜುಲೈ 4, 2024ರ ಮಾಹಿತಿ ಪ್ರಕಾರ)

ಫೋರ್ಬ್ಸ್ ರಿಯಲ್‌ಟೈಮ್‌ ಬಿಲಿಯನೇರ್ಸ್‌ ರ‍್ಯಾಂಕಿಂಗ್

ಜಗತ್ತಿನಲ್ಲಿ ಈಗ ಹಿಂದೆಂದಿಗಿಂತಲೂ ಹೆಚ್ಚು ಶತಕೋಟ್ಯಧಿಪತಿಗಳಿದ್ದಾರೆ. ಒಟ್ಟಾರೆಯಾಗಿ 2,781 ಶತಕೋಟ್ಯಧಿಪತಿಗಳಿದ್ದು, ಇದು ಕಳೆದ ವರ್ಷಕ್ಕಿಂತ 141 ಹೆಚ್ಚು. 2021ರ ದಾಖಲೆಗಿಂತ 26 ಹೆಚ್ಚು. ಶತಕೋಟ್ಯಧಿಪತಿಗಳ ಒಟ್ಟು ಸಂಪತ್ತು 14.2 ಲಕ್ಷ ಕೋಟಿ ಡಾಲರ್‌ ಇದೆ. 2022ರಲ್ಲಿ 1.1 ಲಕ್ಷ ಕೋಟಿ ಡಾಲರ್ ಹೆಚ್ಚಾದರೆ, 2023ರಲ್ಲಿ 2 ಲಕ್ಷ ಕೋಟಿ ಡಾಲರ್ ಸಂಪತ್ತು ಹೆಚ್ಚಾಗಿದೆ. 2023ರಿಂದೀಚೆಗೆ ಒಟ್ಟು ಸಂಪತ್ತಿನಲ್ಲಿ 700 ಶತಕೋಟಿ ಡಾಲರ್ ಸಂಪತ್ತು ಅಗ್ರ 20 ಅತಿಶ್ರೀಮಂತರಿಂದ ಬಂದಿದೆ.

ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದು 813 ಶತಕೋಟ್ಯಧಿಪತಿಗಳು ಅಲ್ಲಿದ್ದು ಅವರ ಸಂಪತ್ತು 5.7 ಲಕ್ಷ ಕೋಟಿ ಡಾಲರ್. ಎರಡನೇ ಸ್ಥಾನದಲ್ಲಿ ಚೀನಾ (ಹಾಂಕಾಂಗ್‌ ಸೇರಿ) ಇದ್ದು ಅಲ್ಲಿ 473 ಶತಕೋಟ್ಯಧಿಪತಿಗಳು ಮತ್ತು ಅವರ ಸಂಪತ್ತು 1.7 ಲಕ್ಷ ಕೋಟಿ ಡಾಲರ್‌ ಇದೆ. ಭಾರತ ಮೂರನೇ ಸ್ಥಾನದಲ್ಲಿದ್ದು 200 ಶತಕೋಟ್ಯಧಿಪತಿಗಳಿದ್ದಾರೆ. ಶತಕೋಟ್ಯಧಿಪತಿಗಳ ಸಂಪತ್ತು ಲೆಕ್ಕ ಹಾಕಲು 2024ರ ಮಾರ್ಚ್‌ 8ರ ಷೇರು ಮೌಲ್ಯ ಮತ್ತು ವಿನಿಮಯ ದರವನ್ನು ಪರಿಗಣಿಸಿರುವುದಾಗಿ ಫೋರ್ಬ್ಸ್‌ ತಿಳಿಸಿದೆ.