Richest transgender: ಜಗತ್ತಿನ ಶ್ರೀಮಂತ ತೃತೀಯ ಲಿಂಗಿ ಈ ಜೆನ್ನಿಫರ್‌, ಇವರ ಸಂಪತ್ತು 99 ಸಾವಿರ ಕೋಟಿ ರೂಪಾಯಿ, ಇವರು ಆಗಿದ್ರು ಸಿಪಾಯಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Richest Transgender: ಜಗತ್ತಿನ ಶ್ರೀಮಂತ ತೃತೀಯ ಲಿಂಗಿ ಈ ಜೆನ್ನಿಫರ್‌, ಇವರ ಸಂಪತ್ತು 99 ಸಾವಿರ ಕೋಟಿ ರೂಪಾಯಿ, ಇವರು ಆಗಿದ್ರು ಸಿಪಾಯಿ

Richest transgender: ಜಗತ್ತಿನ ಶ್ರೀಮಂತ ತೃತೀಯ ಲಿಂಗಿ ಈ ಜೆನ್ನಿಫರ್‌, ಇವರ ಸಂಪತ್ತು 99 ಸಾವಿರ ಕೋಟಿ ರೂಪಾಯಿ, ಇವರು ಆಗಿದ್ರು ಸಿಪಾಯಿ

Who is richest transgender: ಜಗತ್ತಿನಲ್ಲಿಯೇ ಶ್ರೀಮಂತ ತೃತೀಯ ಲಿಂಗಿ ಎಂದು ಖ್ಯಾತಿ ಪಡೆದಿರುವುದು ಜೆನ್ನಿಫರ್‌ ಫ್ರಿಟ್ಜಕರ್‌ (Jennifer Pritzker). ಇವರು ಜಗತ್ತಿನ ಬಿಲಿಯನೇರ್‌ ಟ್ರಾನ್ಸ್‌ಜೆಂಡರ್‌ ಎಂದೇ ಖ್ಯಾತಿ ಪಡೆದಿದ್ದಾರೆ. ಇವರ ಸಂಪತ್ತು ಸೇರಿದಂತೆ ಇತರೆ ವಿವರ ಇಲ್ಲಿದೆ.

Richest transgender: ಜಗತ್ತಿನ ಶ್ರೀಮಂತ ತೃತೀಯ ಲಿಂಗಿ ಈ ಜೆನ್ನಿಫರ್‌
Richest transgender: ಜಗತ್ತಿನ ಶ್ರೀಮಂತ ತೃತೀಯ ಲಿಂಗಿ ಈ ಜೆನ್ನಿಫರ್‌

ಭಾರತದಲ್ಲಿ ಹಲವು ತೃತೀಯ ಲಿಂಗಿಗಳು ಕಷ್ಟದ ಜೀವನ ನಡೆಸುತ್ತಿದ್ದಾರೆ. ಮನೆ ಬಿಟ್ಟು ಹೊರಕ್ಕೆ ಬಂದ ಇವರಲ್ಲಿ ಹಲವು ಜನ ಸ್ವಂತವಾಗಿ ಏನಾದರೂ ಸಾಧಿಸಲು ಬಯಸುವ ಕನಸು ಹೊಂದಿದ್ದಾರೆ. ಇವರಿಗೆ ಉದ್ಯೋಗಾವಕಾಶ ದೊರಕಿಸುವ ಪ್ರಯತ್ನ ಕೆಲವು ಕಡೆ ನಡೆಯುತ್ತಿದೆ. ಏನೇ ಆದರೂ, ಇವರ ಬದುಕು ಕಷ್ಟದಲ್ಲಿ ಇರುವುದು ನಿಜ. ಇನ್ನು ಜಾಗತಿಕವಾಗಿ ನೋಡುವುದಾದರೆ ಕೆಲವು ದೇಶಗಳಲ್ಲಿ ತೃತೀಯ ಲಿಂಗಿಗಳು ಕೂಡ ಎಲ್ಲರಂತೆ ಅತ್ಯುತ್ತಮವಾಗಿ ಜೀವನ ನಡೆಸುತ್ತಿದ್ದಾರೆ. ಸಾಕಷ್ಟು ಶ್ರೀಮಂತ ತೃತೀಯ ಲಿಂಗಿಗಳೂ ಇದ್ದಾರೆ. ಜಗತ್ತಿನಲ್ಲಿಯೇ ಶ್ರೀಮಂತ ತೃತೀಯ ಲಿಂಗಿ ಎಂದು ಖ್ಯಾತಿ ಪಡೆದಿರುವುದು ಜೆನ್ನಿಫರ್‌ ಫ್ರಿಟ್ಜಕರ್‌. ಇವರು ಜಗತ್ತಿನ ಬಿಲಿಯನೇರ್‌ ಟ್ರಾನ್ಸ್‌ಜೆಂಡರ್‌ ಎಂದೇ ಖ್ಯಾತಿ ಪಡೆದಿದ್ದಾರೆ.

ಜಗತ್ತಿನ ಶ್ರೀಮಂತ ತೃತೀಯ ಲಿಂಗಿ

ಜೆನ್ನಿಫರ್‌ ಜಗತ್ತಿನ ಬಿಲಿಯನೇರ್‌ ಟ್ರಾನ್ಸ್‌ಜೆಂಡರ್‌ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಕಠಿಣ ಪರಿಶ್ರಮದಿಂದ ಈ ಹಂತ ತಲುಪಿದ್ದಾರೆ. ಜತೆಗೆ ಅವರ ಶ್ರೀಮಂತ ಕುಟುಂಬವೂ ಈ ಆದಾಯ, ಸಂಪತ್ತಿಗೆ ಕಾರಣವಾಗಿದೆ. ಜೆನ್ನಿಫರ್‌ ಕುಟುಂಬವು ಹೈಟ್‌ ಹೋಟೆಲ್ಸ್‌ ಎಂಬ ಫೈವ್‌ಸ್ಟಾರ್‌ ಹೋಟೆಲ್‌ಗಳ ಸರಣಿಯನ್ನು ನಡೆಸುತ್ತಿದೆ. ಇವರ ಕುಟುಂಬವು ಅಮೆರಿಕದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ. ಅಮೆರಿಕದ ಶ್ರೀಮಂತ 11 ಶತಕೋಟ್ಯಧಿಪತಿಗಳಲ್ಲಿ ಜೆನ್ನಿಫರ್‌ ಒಬ್ಬರಾಗಿದ್ದಾರೆ. ಇವರ ಕುಟುಂಬದ ಒಟ್ಟಾರೆ ನಿವ್ವಳ ಮೌಲ್ಯ 36.9 ಶತಕೋಟಿ ಡಾಲರ್‌. ಅಂದರೆ, ಸುಮಾರು 3.06 ಲಕ್ಷ ಕೋಟಿ ರೂಪಾಯಿ.

ಇಷ್ಟು ಮಾತ್ರವಲ್ಲದೆ ಜಗತ್ತಿನ ಶ್ರೀಮಂತ ಟ್ರಾನ್ಸ್‌ಜೆಂಡರ್‌ ವ್ಯಕ್ತಿಯಾದ ಜೆನ್ನಿಫರ್‌ ಅವರ ಸಂಪತ್ತು (ಕುಟುಂಬದ ಆದಾಯ ಸೇರದೆ) ಮಾತ್ರ ಎಷ್ಟಿದೆ ಎಂದು ನೋಡೋಣ. ಜೆನ್ನಿಫರ್‌ ವೈಯಕ್ತಿಕ ಸಂಪತ್ತು 1.9 ಶತಕೋಟಿ ಡಾಲರ್‌. ಅಂದರೆ, ಸುಮಾರು 15,800 ಕೋಟಿ ರೂಪಾಯಿ ಎಂದು ವರದಿಗಳು ತಿಳಿಸಿವೆ. ಇವರ ಹೋಟೆಲ್‌ ಸರಣಿ ಹೈಟ್‌ ಹೋಟೆಲ್‌ ಸುಮಾರು 99000 ಕೋಟಿ ರೂಪಾಯಿ ಮೌಲ್ಯ ಹೊಂದಿದೆ.

ಅಂದಹಾಗೆ, ಈ ಜಗತ್ತಿನ ಶ್ರೀಮಂತ ಟ್ರಾನ್ಸ್‌ಜೆಂಡರ್‌ ಜೆನ್ನಿಫರ್‌ ಅವರು ಕೇವಲ ಸಂಪತ್ತಿನ ವಿಷಯದಲ್ಲಿ ಮಾತ್ರ ಜನಪ್ರಿಯರಲ್ಲ. ಇವರು ಅಮೆರಿಕದ ಸೇನೆಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು 1974ರಲ್ಲಿ ಅಮೆರಿಕದ ಮಿಲಿಟರಿಯಲ್ಲಿ ಕಾರ್ಯನಿರ್ವಹಿಸಿದ್ದರು. ಆಗ ಅವರ ವಯಸ್ಸು 23 ಆಗಿತ್ತು. ಇವರು ಜೇಮ್ಸ್‌ ಪ್ರಿಟ್ಜೆಕರ್‌ ಆಗಿ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸುಮಾರು 25 ವರ್ಷ ಕಾರ್ಯನಿರ್ವಹಿಸಿದ್ದಾರೆ. ಬಳಿಕ ಇವರು ತೃತೀಯ ಲಿಂಗಿಯಾದರು. ಈಗ ಇವರ ವಯಸ್ಸು 70 ದಾಟಿದೆ. ಎಂದು ವರದಿಗಳು ತಿಳಿಸಿವೆ.

ವಿಲಾಸಿ ಹೋಟೆಲ್‌ ಚೈನ್‌ ಮಾತ್ರವಲ್ಲದೆ ಇವರು ಖಾಸಗಿ ವೆಲ್ತ್‌ ಮ್ಯಾನೇಜ್‌ಮೆಂಟ್‌ ಕಂಪನಿ ತೈವಾನಿ ಎಂಟರ್‌ಪ್ರೈಸಸ್‌ನ ಸಿಇಒ ಮತ್ತು ಸ್ಥಾಪಕರು. 2013ರಲ್ಲಿ ಇವರು ತಾನು ತೃತೀಯ ಲಿಂಗಿ ಎಂದು ಘೋಷಿಸಿದರು. ಈ ರೀತಿ ಮುಕ್ತವಾಗಿ ಘೋಷಿಸಿಕೊಂಡ ಅಪರೂಪದ ಶ್ರೀಮಂತ ವ್ಯಕ್ತಿ ಇವರಾಗಿದ್ದಾರೆ. ಇವರ ಕುರಿತು ಸಾಕಷ್ಟು ಒಳ್ಳೆಯ ಸುದ್ದಿಗಳು ಇವೆ. ಇವರು ತಮ್ಮ ಸಂಪತ್ತಿನ ಒಂದಿಷ್ಟು ಭಾಗವನ್ನು ತೃತೀಯ ಲಿಂಗಿಗಳ ಕಲ್ಯಾಣಕ್ಕೆ ಬಳಸುತ್ತಿದ್ದಾರೆ. (ಪೂರಕ ಮಾಹಿತಿ: ಡಿಎನ್‌ಎ ವರದಿ)

8 ಸಾವಿರ ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ ಉಪಾಸನಾ

ಉಪಸನಾ ಟಾಕು ಅವರು ಮೊಬಿಕ್‌ವಿಕ್‌ (MobiKwik) ಕಂಪನಿಯ ಆಡಳಿತ ಮಂಡಳಿಯ ಮುಖ್ಯಸ್ಥೆ ಮತ್ತು ಸಿಒಒ. ಮೊಬಿಕ್‌ವಿಕ್‌ ಎನ್ನುವ ಕಂಪನಿಯನ್ನು ತನ್ನ ಪತಿಯ ಜತೆ ಸೇರಿ ಉಪಸನಾ ಟಾಕು ಆರಂಭಿಸಿದರು. ಇವರು ಪಂಜಾಬ್‌ ಟೆಕ್ನಿಕಲ್‌ ಯೂನಿವರ್ಸಿಟಿಯಿಂದ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಇವರ ಯಶಸ್ಸಿನ ಕತೆ ಇಲ್ಲಿದೆ ಓದಿ.

7300 ಕೋಟಿ ರೂ ಮೌಲ್ಯದ ಕಂಪನಿಯ ಒಡೆಯ ಕೈವಲ್ಯ

ಭಾರತದ ಯುವ ಶ್ರೀಮಂತ, ಝೆಪ್ಟೊ ಕಂಪನಿಯ ಸಹ ಸ್ಥಾಪಕ ಕೈವಲ್ಯ ವೊಹ್ರಾ ಹುಟ್ಟಿದ್ದು ಬೆಂಗಳೂರಿನಲ್ಲಿ. ಈತ ಐಐಎಫ್‌ಎಲ್‌ನ ವೆಲ್ತ್‌ ಹೂರನ್‌ ಇಂಡಿಯಾ ರಿಚ್‌ ಲಿಸ್ಟ್‌ 2022ರಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾನೆ. ಝೆಪ್ಟೊ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿಯಾಗಿರುವ ಇವರು ತನ್ನ 19 ವಯಸ್ಸಿನಲ್ಲಿಯೇ ಜಗತ್ತಿನ ಯುವ ಶ್ರೀಮಂತ ವ್ಯಕ್ತಿಯಾಗಿ ಗಮನ ಸೆಳೆದಿದ್ದಾನೆ. ತನ್ನ ಸ್ನೇಹಿತ ಆದಿತ್‌ ಪಾಲಿಚ ಜತೆ ಸೇರಿ ಝೆಪ್ಟೊ ಎಂಬ ಕಂಪನಿಯನ್ನು ಆರಂಭಿಸಿದ್ದನು. ಇದು ಭಾರತದ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಇ-ಗ್ರೋಸರಿ ಕಂಪನಿ. ಕೈವಲ್ಯನ ಯಶಸ್ಸಿನ ಕತೆ ಇಲ್ಲಿದೆ ಓದಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.