Shamina Singh: ಪ್ರತಿಷ್ಠಿತ ಹುದ್ದೆಗೆ ಭಾರತೀಯ ಮೂಲದ ಶಮಿನಾರನ್ನು ಆಯ್ಕೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಯಾರಿವರು ಶಮಿನಾ ಸಿಂಗ್
Shamina Singh: ಅಧ್ಯಕ್ಷರ ಎಕ್ಸ್‌ಪೋರ್ಟ್ ಕೌನ್ಸಿಲ್‌ಗೆ ನೂತನ ಮುಖ್ಯಸ್ಥೆಯಾಗಿ ಭಾರತೀಯ ಅಮೆರಿಕನ್ ಉದ್ಯಮಿ ಶಮಿನಾ ಸಿಂಗ್ ಅವರನ್ನು ಅಮೆರಿಕದ ಅಧ್ಯಕ್ಷರಾದ ಜೋ ಬೈಡನ್ ಆಯ್ಕೆ ಮಾಡಿದ್ದಾರೆ.
ಅಮೆರಿಕ ಸರಕಾರದ ಪ್ರಮುಖ ಹುದ್ದೆಗಳಲ್ಲಿ ಭಾರತೀಯ ಮೂಲದವರ ನೇಮಕ ಹೆಚ್ಚಾಗುತ್ತಿದೆ. ಇದೀಗ ಅಮೆರಿಕದ ಅಧ್ಯಕ್ಷರಾದ ಜೋ ಬೈಡನ್ ಅವರು ಪ್ರೆಸಿಡೆಂಟ್ ಎಕ್ಸ್‌ಪೋರ್ಟ್ ಕೌನ್ಸಿಲ್‌ಗೆ ಭಾರತೀಯ ಮೂಲದ ಅಮೆರಿಕದ ಬಿಸ್ನೆಸ್ ಲೀಡರ್ ಶಮಿನಾ ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ. ಪ್ರೆಸಿಡೆಂಟ್ ಎಕ್ಸ್‌ಪೋರ್ಟ್ ಕೌನ್ಸಿಲ್ ಎನ್ನುವುದು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಪ್ರಧಾನ ರಾಷ್ಟ್ರೀಯ ಸಲಹಾ ಸಮಿತಿಯಾಗಿ ಕಾರ್ಯನಿರ್ವಹಿಸುತ್ತದೆ.
ಶಮಿನಾ ಸಿಂಗ್ ಅವರು ಮಾಸ್ಟರ್‌ಕಾರ್ಡ್ ಸೆಂಟರ್ ಫಾರ್ ಇನ್‌ಕ್ಲೂಸಿವ್ ಗ್ರೋಥ್‌ನ ಸ್ಥಾಪಕರು ಮತ್ತು ಅಧ್ಯಕ್ಷರು. "ಪ್ರೆಸೆಡೆಂಟ್ ಎಕ್ಸ್‌ಪೋರ್ಟ್ ಗ್ರೋಥ್‌ನ ಪ್ರಮುಣ ನಾಯಕರ ಗುಂಪಿಗೆ ಸೇರುವ ಗೌರವ ದೊರಕಿರುವುದಕ್ಕೆ ಧನ್ಯವಾದ" ಎಂದು ಶಮಿನಾ ಸಿಂಗ್ ಹೇಳಿದ್ದಾರೆ. ಪ್ರಮುಖ ಹುದ್ದೆಗೆ ಶಮಿನಾ ಸಿಂಗ್ ಅವರನ್ನು ನೇಮಕ ಮಾಡುವುದಾಗಿ ಜುಲೈ 1ರಂದು ಅಮೆರಿಕದ ಅಧ್ಯಕ್ಷರಾದ ಜೋ ಬೈಡನ್ ಘೋಷಿಸಿದ್ದರು. ಶಮಿನಾ ಸಿಂಗ್ ಅವರು ಪ್ರಮುಖ ಮಹಿಳಾ ಉದ್ಯಮಿ. ಅಮೆರಿಕದ ಅಧ್ಯಕ್ಷರಾದ ಜೋ ಬೈಡನ್ ಅವರಿಂದ ಪ್ರಮುಖ ಹುದ್ದೆಗೆ ನೇಮಕಗೊಂಡ ಎರಡನೇ ಭಾರತೀಯ ಮೂಲದ ಅಮೆರಿಕನ್ ವ್ಯಕ್ತಿಯಾಗಿದ್ದಾರೆ.
"ಅಮೆರಿಕ ಮತ್ತು ಜಗತ್ತಿನಾದ್ಯಂತ ಜನರು ಮತ್ತು ಆರ್ಥಿಕತೆಗೆ ಸಮೃದ್ಧಿ ಉಂಟುಮಾಡುವ ಕೆಲಸಕ್ಕಾಗಿ ನಾನು ನನ್ನ ವೃತ್ತಿ ಜೀವನದ ಆರಂಭದಿಂದಲೂ ಗಮನ ನೀಡುತ್ತಿದ್ದೇನೆ" ಎಂದು ಅವರು ಮಾಸ್ಟರ್‌ಕಾರ್ಡ್‌ನ ವೆಬ್‌ಸೈಟ್‌ನಲ್ಲಿ ಇರುವ ಹೇಳಿಕೆಯಲ್ಲಿ ಹೇಳಿದ್ದಾರೆ. ಅಧ್ಯಕ್ಷರ ರಫ್ತು ಮಂಡಳಿಯು ಅಂತರರಾಷ್ಟ್ರೀಯ ವ್ಯಾಪಾರದ ಪ್ರಮುಖ ರಾಷ್ಟ್ರೀಯ ಸಲಹಾ ಸಮಿತಿಯಾಗಿ ಕಾರ್ಯನಿರ್ವಹಿಸುತ್ತದೆ. ಅಮೆರಿಕದ ವ್ಯಾಪಾರ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗುವಂತಹ ಸಲಹೆಗಳನ್ನು ಅಮೆರಿಕದ ಅಧ್ಯಕ್ಷರಿಗೆ ಈ ಸಮಿತಿ ನೀಡುತ್ತದೆ.
"ನನ್ನ ವೃತ್ತಿಜೀವನದ ಆರಂಭಿಕ ದಿನಗಳಿಂದ, ಯುಎಸ್ ಮತ್ತು ಪ್ರಪಂಚದಾದ್ಯಂತದ ಜನರು ಮತ್ತು ಆರ್ಥಿಕತೆಗಳಿಗೆ ದೀರ್ಘಕಾಲೀನ ಮತ್ತು ಅಂತರ್ಗತ ಸಮೃದ್ಧಿಯನ್ನು ಸೃಷ್ಟಿಸಲು ಸಹಾಯ ಮಾಡುವ ಕೆಲಸದ ಕಡೆಗೆ ನಾನು ಆಕರ್ಷಿತನಾಗಿದ್ದೇನೆ" ಎಂದು ಅವರು ಮಾಸ್ಟರ್‌ಕಾರ್ಡ್‌ನ ವೆಬ್‌ಸೈಟ್‌ನಲ್ಲಿನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ವ್ಯಾಪಾರ, ಕೈಗಾರಿಕಾ, ಕೃಷಿ, ಕಾರ್ಮಿಕ ಮತ್ತು ಸರ್ಕಾರಿ ವಲಯಗಳ ನಡುವೆ ವ್ಯಾಪಾರ-ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಈ ಕೌನ್ಸಿಲ್ ನೆರವಾಗುತ್ತದೆ.
ಶಮಿನಾ ಸಿಂಗ್ ಕುರಿತು ಒಂದಿಷ್ಟು ಮಾಹಿತಿ
- ಶಮಿನಾ ಸಿಂಗ್ ಅವರು ಮಾಸದ್ಟರ್‌ಕಾರ್ಡ್‌ನ ಸಸ್ಟೆನೆಬಿಲಿಟಿ ವಿಭಾಗದಲ್ಲಿ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕಂಪನಿಯ ಆಡಳಿತ ಸಮಿತಿಯ ಸದಸ್ಯರೂ ಹೌದು.
- 2018ರಲ್ಲಿ ಶಮಿನಾ ಸಿಂಗ್ ಅವರು ಮಾಸ್ಟರ್‌ಕಾರ್ಡ್‌ನ ಇಂಪ್ಯಾಕ್ಟ್ ಫಂಡ್ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
- ಶಮಿನಾ ಸಿಂಗ್ ಅವರು ವೈಟ್‌ಹೌಸ್ ಮತ್ತು ಅಮೆರಿಕದ ಜನಪ್ರತಿನಿಧಿಗಳ ವಿಭಾಗದಲ್ಲಿಯೂ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇವರು ಫಸ್ಟ್ ಪ್ರೆಸಿಡೆಂಟ್ಸ್ ಅಡ್ವೈಸರಿ ಕಮಿಷನ್‌ನ ಎಕ್ಸಿಕ್ಯುಟಿವ್ ನಿರ್ದೇಶಕರು.
- 2015ರಲ್ಲಿ ಶಮಿನಾ ಅವರನ್ನು ಬರಾಕ್ ಒಬಾಮಾ ಅವರು ಆರು ವರ್ಷಗಳ ಅವಧಿಗೆ ಅಮ್ರಿಕಾರ್ಪ್ಸ್ ಆಡಳಿತ ಮಂಡಳಿಗೆ ಸೇರಿಸಿದ್ದರು. ಇದಕ್ಕೆ ಯುಎಸ್ ಸೆನೆಟ್ ಅಂಗೀಕಾರ ನೀಡಿತ್ತು. ಅವರು ಎರಡು ವರ್ಷಗಳ ಕಾಲ ಈ ವಿಭಾಗದ ಮುಖ್ಯಸ್ಥೆಯಾಗಿದ್ದರು.
- ಆಡ್ ಕೌನ್ಸಿಲ್ ಆಫ್ ಅಮೆರಿಕ ಅಡ್ವೈಸರಿ ಕಮಿಟಿ ಆನ್ ಪಬ್ಲಿಕ್ ಇಶ್ಯೂಸ್‌ನ ಸಹ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.