ಕನ್ನಡ ಸುದ್ದಿ  /  Nation And-world  /  World No Tobacco Day History Significance Theme Celebration Smoking Health Environment Anti Tobacco Day In Kannada Rst

No Tobacco Day: ತಂಬಾಕು ತ್ಯಜಿಸಿ ಆರೋಗ್ಯವಾಗಿರಿ; ವಿಶ್ವ ತಂಬಾಕು ರಹಿತ ದಿನದ ಇತಿಹಾಸ, ಥೀಮ್‌, ಆಚರಣೆಯ ಮಹತ್ವ ಹೀಗಿದೆ

Anti-Tobacco Day 2023: ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ತಂಬಾಕು ಸೇವನೆಯ ವಿರುದ್ಧ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶ. ಈ ದಿನದ ಇತಿಹಾಸ, ಮಹತ್ವ, ಪರಿಕಲ್ಪನೆ ಹಾಗೂ ಆಚರಣೆಯ ಕುರಿತ ಇನ್ನಷ್ಟು ವಿವರ ಇಲ್ಲಿದೆ.

ಇಂದು ವಿಶ್ವ ತಂಬಾಕು ರಹಿತ ದಿನ
ಇಂದು ವಿಶ್ವ ತಂಬಾಕು ರಹಿತ ದಿನ

ಪ್ರತಿವರ್ಷ ಮೇ 31 ರಂದು ತಂಬಾಕು ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಇದನ್ನು ವಿಶ್ವ ತಂಬಾಕು ರಹಿತ ದಿನ ಎಂದೂ ಕರೆಯಲಾಗುತ್ತದೆ. ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಂಬಾಕು ಸೇವನೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ ನೀತಿಗಳನ್ನು ಪ್ರತಿಪಾದಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ನೇತೃತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಧೂಮಪಾನ ಮತ್ತು ಹೊಗೆರಹಿತ ತಂಬಾಕು ಉತ್ಪನ್ನಗಳು ಸೇರಿದಂತೆ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ತಂಬಾಕು ವಿರೋಧಿ ದಿನದ ಉದ್ದೇಶವಾಗಿದೆ. ಇದು ತಂಬಾಕು ತ್ಯಜಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಮತ್ತು ತಂಬಾಕು ಬಳಕೆಯ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಉತ್ತೇಜಿಸುತ್ತದೆ.

ವಿಶ್ವ ತಂಬಾಕು ವಿರೋಧಿ ದಿನ

ಪ್ರಪಂಚದಾದ್ಯಂತ ಪ್ರತಿ ವರ್ಷ ಮೇ 31 ರಂದು ಈ ದಿನವನ್ನು ಆಚರಿಸಲಾಗುತ್ತದೆ. ತಂಬಾಕು ಸೇವನೆಯಿಂದಾಗುವ ಅಪಾಯಗಳು ಹಾಗೂ ತಡೆಗಟ್ಟುವ ಕ್ರಮದ ಬಗ್ಗೆ ಜಾಗತಿಕ ಗಮನ ಸೆಳೆಯಲು 1987ರಲ್ಲಿ ಡಬ್ಲ್ಯೂಎಚ್‌ಒ ಸದಸ್ಯ ರಾಷ್ಟ್ರಗಳಿಂದ ವಿಶ್ವ ತಂಬಾಕು ರಹಿತ ದಿನವನ್ನು ಮೊದಲ ಬಾರಿ ಆಚರಿಸಲಾಗಿತ್ತು.

ಇತಿಹಾಸ ಮತ್ತು ಮಹತ್ವ

1987ರಲ್ಲಿ, ವಿಶ್ವ ಆರೋಗ್ಯ ಅಸೆಂಬ್ಲಿಯು WHA40.38 ರೆಸಲ್ಯೂಶನ್ ಅನ್ನು ಅಂಗೀಕರಿಸಿತು, ಅಲ್ಲದೆ, 1988 ಏಪ್ರಿಲ್ 7 ಅನ್ನು ʼವಿಶ್ವ ಧೂಮಪಾನ ನಿಷೇಧ ದಿನʼ ಎಂದು ಕರೆ ನೀಡಿತು. 1988ರಲ್ಲಿ, WHA42.19 ನಿರ್ಣಯವನ್ನು ಅಂಗೀಕರಿಸಲಾಯಿತು, ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಕರೆ ಅಂದು ನೀಡಲಾಯಿತು.

ಈ ವಾರ್ಷಿಕ ಆಚರಣೆಯು ತಂಬಾಕು ಬಳಕೆಯ ಅಪಾಯಗಳು ಮಾತ್ರವಲ್ಲದೆ ತಂಬಾಕು ಕಂಪನಿಗಳ ವ್ಯಾಪಾರ ಅಭ್ಯಾಸಗಳು, ತಂಬಾಕು ಸಾಂಕ್ರಾಮಿಕದ ವಿರುದ್ಧ ಹೋರಾಡಲು ಡಬ್ಲ್ಯೂಎಚ್‌ಒ ಕ್ರಮಗಳು  ಮತ್ತು ಈ ಕುರಿತು ಪ್ರಪಂಚದಾದ್ಯಂತ ಜನರು ತಮ್ಮ ಹಕ್ಕನ್ನು ಪಡೆಯಲು ಏನು ಮಾಡಬಹುದು ಎಂಬುದರ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. 

ʼಆರೋಗ್ಯ ಮತ್ತು ಆರೋಗ್ಯಕರ ಜೀವನ ಮತ್ತು ಭವಿಷ್ಯದ ಪೀಳಿಗೆಯನ್ನು ರಕ್ಷಿಸಲು ಈ ದಿನವನ್ನು ಆಚರಿಸಲು ಮಹತ್ವ ನೀಡಬೇಕುʼ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

ʼನಮಗೆ ಆಹಾರ ಬೇಕು, ತಂಬಾಕಲ್ಲʼ

ಮೇ 31, 2023 ರಂದು, ಡಬ್ಲ್ಯೂಎಚ್‌ಒ ಮತ್ತು ಪ್ರಪಂಚದಾದ್ಯಂತದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ವಿಶ್ವ ತಂಬಾಕು ರಹಿತ ದಿನವನ್ನು (WNTD) ಆಚರಿಸಲು ಒಟ್ಟುಗೂಡುತ್ತಾರೆ. ಈ ವರ್ಷದ ಥೀಮ್‌ ʼನಮಗೆ ಆಹಾರ ಬೇಕು, ತಂಬಾಕಲ್ಲʼ ಎಂಬುದಾಗಿದೆ.

ಆಚರಣೆ ಹೇಗೆ?

ಈ ದಿನದಂದು, ತಂಬಾಕು ನಿಯಂತ್ರಣವನ್ನು ಉತ್ತೇಜಿಸಲು ವಿಶ್ವದಾದ್ಯಂತ ವಿವಿಧ ಚಟುವಟಿಕೆಗಳು ಮತ್ತು ಅಭಿಯಾನಗಳನ್ನು ಆಯೋಜಿಸಲಾಗುತ್ತದೆ. ಸಾರ್ವಜನಿಕ ಜಾಗೃತಿ ಅಭಿಯಾನಗಳು, ಶಾಲೆಗಳು ಮತ್ತು ಸಮುದಾಯಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು, ಆರೋಗ್ಯ ತಪಾಸಣೆ ಮತ್ತು ನೀತಿ ಪ್ರತಿಪಾದನೆಯಂತಹ ಕೆಲಸಗಳೂ ನಡೆಯುತ್ತವೆ. 

ಆ ಮೂಲಕ ತಂಬಾಕು ಸೇವನೆಯ ಅಪಾಯಗಳ ಬಗ್ಗೆ ಜನರಿಗೆ ತಿಳಿಸುವುದು, ನಿಲ್ಲಿಸುವ ಪ್ರಯತ್ನಗಳನ್ನು ಬೆಂಬಲಿಸುವುದು ಮತ್ತು ಯುವಕರು ತಂಬಾಕು ಅಭ್ಯಾಸವನ್ನು ಪ್ರಾರಂಭಿಸುವುದನ್ನು ತಡೆಯುವುದು ಮುಂತಾದ ಕೆಲಸಗಳನ್ನು ಮಾಡಲಾಗುತ್ತದೆ.

ತಂಬಾಕು ವಿರೋಧಿ ದಿನವು ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ತಂಬಾಕಿನ ವಿನಾಶಕಾರಿ ಪರಿಣಾಮವನ್ನು ನೆನಪಿಸುತ್ತದೆ. ಧೂಮಪಾನಿಗಳನ್ನು ಧೂಮಪಾನ ತ್ಯಜಿಸಲು ಪ್ರೋತ್ಸಾಹಿಸುವುದು, ಯುವಕರನ್ನು ಈ ಅಭ್ಯಾಸಕ್ಕೆ ದಾಸರಾಗುವುದನ್ನು ತಡೆಯುವುದು ಈ ದಿನ ಆಚರಣೆಯ ಮುಖ್ಯ ಉದ್ದೇಶವಾಗಿದೆ. 

ಜಾಗೃತಿ ಮೂಡಿಸುವ ಮತ್ತು ತಂಬಾಕು ನಿಯಂತ್ರಣ ಕ್ರಮಗಳನ್ನು ಉತ್ತೇಜಿಸುವ ಮೂಲಕ, ತಂಬಾಕು ವಿರೋಧಿ ದಿನವು ತಂಬಾಕು ಸಂಬಂಧಿತ ರೋಗಗಳ ಹೊರೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಆರೋಗ್ಯಕರ ಸಮಾಜವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ವ್ಯಕ್ತಿಗಳು ತಂಬಾಕು ತ್ಯಜಿಸುವ ಪ್ರತಿಜ್ಞೆ ಮಾಡುವ ಮೂಲಕ, ತಂಬಾಕು ನಿಯಂತ್ರಣ ನೀತಿಗಳನ್ನು ಬೆಂಬಲಿಸುವ ಮೂಲಕ ಮತ್ತು ಅವರ ಸ್ನೇಹಿತರು, ಕುಟುಂಬ ಮತ್ತು ಸಮುದಾಯಗಳಲ್ಲಿ ತಂಬಾಕಿನ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಈ ದಿನದ ಆಚರಣೆಗೆ ಅರ್ಥ ಕಲ್ಪಿಸಬಹುದು. 

ವಿಭಾಗ