ಕನ್ನಡ ಸುದ್ದಿ  /  Nation And-world  /  Worlds Longest Platform At Hubballi Station Inauguration By Pm Narendra Modi On March 12

ಪ್ರಧಾನಿ ಮೋದಿಯಿಂದ ಜಗತ್ತಿನ ಬೃಹತ್‌ ರೈಲ್ವೆ ಪ್ಲಾಟ್‌ಫಾರ್ಮ್‌ ನಾಳೆ ಉದ್ಘಾಟನೆ, ಹುಬ್ಬಳ್ಳಿಯ ಈ ಪ್ಲಾಟ್‌ಫಾರ್ಮ್‌ ಬಗ್ಗೆ ನಿಮಗೆಷ್ಟು ಗೊತ್ತು?

ನಾಳೆ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಳ್ಳಲಿರುವ ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್‌ ಜಗತ್ತಿನಲ್ಲಿಯೇ ಅತಿದೊಡ್ಡ ರೈಲ್ವೆ ಪ್ಲಾಟ್‌ಫಾರ್ಮ್‌ ಎಂಬ ಹಿರಿಮೆಗೆ ಪಾತ್ರವಾಗಿದೆ.

ಪ್ರಧಾನಿ ಮೋದಿಯಿಂದ ಜಗತ್ತಿನ ಬೃಹತ್‌ ರೈಲ್ವೆ ಪ್ಲಾಟ್‌ಫಾರ್ಮ್‌ ನಾಳೆ ಉದ್ಘಾಟನೆ, ಹುಬ್ಬಳ್ಳಿಯ ಈ ಪ್ಲಾಟ್‌ಫಾರ್ಮ್‌ ಬಗ್ಗೆ ನಿಮಗೆಷ್ಟು ಗೊತ್ತು?  Photographer: T. Narayan/Bloomberg
ಪ್ರಧಾನಿ ಮೋದಿಯಿಂದ ಜಗತ್ತಿನ ಬೃಹತ್‌ ರೈಲ್ವೆ ಪ್ಲಾಟ್‌ಫಾರ್ಮ್‌ ನಾಳೆ ಉದ್ಘಾಟನೆ, ಹುಬ್ಬಳ್ಳಿಯ ಈ ಪ್ಲಾಟ್‌ಫಾರ್ಮ್‌ ಬಗ್ಗೆ ನಿಮಗೆಷ್ಟು ಗೊತ್ತು? Photographer: T. Narayan/Bloomberg (Bloomberg)

ಹುಬ್ಬಳ್ಳಿ: ಬಹುಸಮಯದಿಂದ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೆ ಕಾಯುತ್ತಿದ್ದ ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್‌ ನಾಳೆ (ಮಾರ್ಚ್‌ 12) ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ಮೋದಿಯವರು ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣವನ್ನು ನಾಳೆ ಉದ್ಘಾಟನೆ ಮಾಡಲಿದ್ದಾರೆ. ನಾಳೆ ಮೋದಿಯವರು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ, ಹುಬ್ಬಳ್ಳಿಯ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಳ್ಳಲಿರುವ ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್‌ ಜಗತ್ತಿನಲ್ಲಿಯೇ ಅತಿದೊಡ್ಡ ರೈಲ್ವೆ ಪ್ಲಾಟ್‌ಫಾರ್ಮ್‌ ಎಂಬ ಹಿರಿಮೆಗೆ ಪಾತ್ರವಾಗಿದೆ. ಸುಮಾರು 115 ಕೋಟಿ ರೂ. ವೆಚ್ಚದಲ್ಲಿ ಈ 1505 ಮೀಟರ್‌ ಉದ್ದದ ಪ್ಲಾಟ್‌ಫಾರ್ಮ್‌ ಅನ್ನು ನಿರ್ಮಿಸಲಾಗಿದೆ.

ಇದಕ್ಕೂ ಮುನ್ನ ಉತ್ತರ ಪ್ರದೇಶದ ಗೋರಕ್‌ಪುರ ರೈಲ್ವೆ ನಿಲ್ದಾಣವು (1366 ಮೀಟರ್‌) ಜಗತ್ತಿನ ಉದ್ದವಾದ ರೈಲ್ವೆ ಪ್ಲಾಟ್‌ಫಾರ್ಮ್‌ ಆಗಿತ್ತು. ಇದೀಗ ನೈರುತ್ಯ ರೈಲ್ವೆಯ ಈ ಪ್ಲಾಟ್‌ಫಾರ್ಮ್‌ ಈಶಾನ್ಯ ವಲಯದ ಪ್ಲಾಟ್‌ಫಾರ್ಮ್‌ನ ದಾಖಲೆಯನ್ನು ಮುರಿದಿದೆ.

ಈಗಾಗಲೇ ಈ ಪ್ಲಾಟ್‌ಫಾರ್ಮ್‌ನ ಎಲೆಕ್ಟ್ರಿಕಲ್‌ ಮತ್ತು ಸಿಗ್ನಲಿಂಗ್‌ ಕೆಲಸ ಸೇರಿದಂತೆ ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಈ ವಿಶ್ವದ ಬೃಹತ್‌ ಪ್ಲಾಟ್‌ಫಾರ್ಮ್‌ ಅನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ಲಾಟ್‌ಫಾರ್ಮ್‌ 1ರಿಂದ 8ರವರೆಗೆ ಇದು ಉದ್ದವಿದೆ.

ಈ ರೈಲ್ವೆ ಪ್ಲಾಟ್‌ಫಾರ್ಮ್‌ ಅನ್ನು ಲಿಮ್ಕಾ ಬುಕ್ಸ್‌ ಆಫ್‌ ರೆಕಾರ್ಡ್‌ಗೆ ಸೇರಿಸಲು ರೈಲ್ವೆ ಅಧಿಕಾರಿಗಳು ಮಾಹಿತಿ ಸಲ್ಲಿಸಿದ್ದಾರೆ. ಈ ಕುರಿತು ಲಿಮ್ಕಾ ಅಧಿಕಾರಿಗಳಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಈ ಮೊದಲು ಈ ರೈಲ್ವೆ ಪ್ಲಾಟ್‌ಫಾರ್ಮ್‌ ಕೇವಲ 550 ಮೀಟರ್‌ ಉದ್ದವಿತ್ತು. ಇದೀಗ ಇದರ ಉದ್ದ ಸುಮಾರು ಮೂರುಪಟ್ಟು ಹೆಚ್ಚಾಗಿದೆ. ಅಂದರೆ, ಸುಮಾರು ಒಂದೂವರೆ ಕಿ.ಮೀ. ಉದ್ದದ ಪ್ಲಾಟ್‌ಫಾರ್ಮ್‌ ಇದಾಗಿದೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಹೊಸದಾಗಿ ಆಗಮಿಸುವ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗಳ ಮಾಹಿತಿ ಸರಿಯಾಗಿ ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಈ ಉದ್ದವಾದ ಪ್ಲಾಟ್‌ಫಾರ್ಮ್‌ನಲ್ಲಿ ಸಾಕಷ್ಟು ಅಳೆದಾಡಬೇಕಾಗಬಹುದು.

ಅಂದಹಾಗೆ, ಈ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ ಸಿದ್ಧಗೊಂಡು ಈಗಾಗಲೇ ಸುಮಾರು ಎರಡು ವರ್ಷವಾಗುತ್ತ ಬಂದಿದೆ. ಇಲ್ಲಿಯವರೆಗೆ ಉದ್ಘಾಟನೆ ಭಾಗ್ಯ ಕಂಡಿರಲಿಲ್ಲ. ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದಲೇ ಉದ್ಘಾಟನೆಗೆ ಎರಡು ವರ್ಷಗಳಿಂದ ಶಬರಿಯಂತೆ ಕಾದು ನಾಳೆ ಲೋಕಾರ್ಪಣೆಗೊಳ್ಳಲಿದೆ.

ಅಹಮದಾಬಾದ್ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರೀಡಾಂಗಣವೇ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಅಂತಿಮ ಪಂದ್ಯವು, ಇಂದಿನಿಂದ ಆರಂಭವಾಗಿದೆ. ಗುಜರಾತ್‌ ರಾಜ್ಯದ ಅತಿದೊಡ್ಡ ನಗರವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸ್ಟೇಡಿಯಂ ಹಲವು ವಿಶೇಷತೆಗಳನ್ನು ಹೊಂದಿದೆ.

ಇಂದು ಆರಂಭವಾದ ನಾಲ್ಕನೇ ಟೆಸ್ಟ್‌ ಪಂದ್ಯವು ದೇಶ ವಿದೇಶದಾದ್ಯಂತ ವಿಶೇಷ ಆಕರ್ಷಣೆಯಾಗಿದೆ. ಇದಕ್ಕೆ ಕಾರಣ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮದೇ ಹೆಸರಿನ ಸ್ಟೇಡಿಯಂಗೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಭೇಟಿ ನೀಡಿ ಪಂದ್ಯವನ್ನು ವೀಕ್ಷಿಸಿರುವುದು. ಈ ಕ್ರೀಡಾಂಗಣದ ಕುರಿತು ಇಲ್ಲಿದೆ ಹೆಚ್ಚಿನ ವಿವರ.

IPL_Entry_Point