Year Ender 2022: ವರ್ಷದ ಹಿನ್ನೋಟ, ಈ ವರ್ಷ ಬಿಡುಗಡೆಯಾದ ಭರ್ಜರಿ ಸ್ಮಾರ್ಟ್‌ಫೋನ್‌ಗಳಿವು, ನಿಮ್ಮಲ್ಲುಂಟ ಈ ಸ್ಮಾರ್ಟ್‌ಫೋನ್?
- 2022ರ ಅಂತ್ಯದಲ್ಲಿದ್ದೇವೆ. ಈ ವರ್ಷ ಟೆಕ್ ಲೋಕದಲ್ಲಿಯೂ ಸಾಕಷ್ಟು ಹೊಸತರ ಆಗಮನವಾಗಿದೆ. ಮುಖ್ಯವಾಗಿ ಬಹುತೇಕ ಎಲ್ಲರೂ ಬಳಸುವ ಸ್ಮಾರ್ಟ್‌ಫೋನ್ ಲೋಕದಲ್ಲಿಯೂ ಹೊಚ್ಚ ಹೊಸ ಪ್ರಾಡಕ್ಟ್‌ಗಳು ಬಂದಿವೆ. ಈ ವರ್ಷ ಆಪಲ್, ಸ್ಮಾಮ್‌ಸಂಗ್, ಗೂಗಲ್, ವಿವೊ, ಒಪ್ಪೊ ಮತ್ತು ಇತರೆ ಬ್ರಾಂಡ್‌ಗಳ ಹಲವು ಸ್ಮಾರ್ಟ್‌ಫೋನ್‌ಗಳು ಬಂದಿವೆ. ಬಹುತೇಕ ಕಂಪನಿಗಳು ಹಳೆಯ ಆವೃತ್ತಿಯನ್ನೇ ಅಪ್‌ಗ್ರೇಡ್ ಮಾಡಿದರೆ, ಇನ್ನು ಕೆಲವು ಹಳೆಯ ಆವೃತ್ತಿಗೆ ಹಲವು ಹೊಸ ಫೀಚರ್ಸ್ ಅಳವಡಿಸಿ ಮಾರುಕಟ್ಟೆಗೆ ಬಿಟ್ಟಿವೆ. ಈ ವರ್ಷದ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬ ಹಿನ್ನೋಟ ಇಲ್ಲಿದೆ.
- 2022ರ ಅಂತ್ಯದಲ್ಲಿದ್ದೇವೆ. ಈ ವರ್ಷ ಟೆಕ್ ಲೋಕದಲ್ಲಿಯೂ ಸಾಕಷ್ಟು ಹೊಸತರ ಆಗಮನವಾಗಿದೆ. ಮುಖ್ಯವಾಗಿ ಬಹುತೇಕ ಎಲ್ಲರೂ ಬಳಸುವ ಸ್ಮಾರ್ಟ್‌ಫೋನ್ ಲೋಕದಲ್ಲಿಯೂ ಹೊಚ್ಚ ಹೊಸ ಪ್ರಾಡಕ್ಟ್‌ಗಳು ಬಂದಿವೆ. ಈ ವರ್ಷ ಆಪಲ್, ಸ್ಮಾಮ್‌ಸಂಗ್, ಗೂಗಲ್, ವಿವೊ, ಒಪ್ಪೊ ಮತ್ತು ಇತರೆ ಬ್ರಾಂಡ್‌ಗಳ ಹಲವು ಸ್ಮಾರ್ಟ್‌ಫೋನ್‌ಗಳು ಬಂದಿವೆ. ಬಹುತೇಕ ಕಂಪನಿಗಳು ಹಳೆಯ ಆವೃತ್ತಿಯನ್ನೇ ಅಪ್‌ಗ್ರೇಡ್ ಮಾಡಿದರೆ, ಇನ್ನು ಕೆಲವು ಹಳೆಯ ಆವೃತ್ತಿಗೆ ಹಲವು ಹೊಸ ಫೀಚರ್ಸ್ ಅಳವಡಿಸಿ ಮಾರುಕಟ್ಟೆಗೆ ಬಿಟ್ಟಿವೆ. ಈ ವರ್ಷದ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬ ಹಿನ್ನೋಟ ಇಲ್ಲಿದೆ.
(1 / 6)
ಈ ವರ್ಷ ಆಪಲ್, ಸ್ಮಾಮ್‌ಸಂಗ್, ಗೂಗಲ್, ವಿವೊ, ಒಪ್ಪೊ ಮತ್ತು ಇತರೆ ಬ್ರಾಂಡ್‌ಗಳ ಹಲವು ಸ್ಮಾರ್ಟ್‌ಫೋನ್‌ಗಳು ಬಂದಿವೆ. ಬಹುತೇಕ ಕಂಪನಿಗಳು ಹಳೆಯ ಆವೃತ್ತಿಯನ್ನೇ ಅಪ್‌ಗ್ರೇಡ್ ಮಾಡಿದರೆ, ಇನ್ನು ಕೆಲವು ಹಳೆಯ ಆವೃತ್ತಿಗೆ ಹಲವು ಹೊಸ ಫೀಚರ್ಸ್ ಅಳವಡಿಸಿ ಮಾರುಕಟ್ಟೆಗೆ ಬಿಟ್ಟಿವೆ.
(2 / 6)
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್22 ಅಲ್ಟ್ರಾ (Samsung Galaxy S22 Ultra): ಈ ವರ್ಷ ಲಾಂಚ್ ಆದ ಪ್ರಮುಖ ಫೋನ್‌ಗಳಲ್ಲಿ ಒಂದಾಗಿದೆ. ಸದ್ಯ ಲಭ್ಯವಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಅತ್ಯುತ್ತಮವಾದ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಇದರ ಅಮೊಲೆಡ್ ಡಿಸ್‌ಪ್ಲೇಯೂ ಅದ್ಭುತವಾಗಿದೆ. 5ಜಿ ಕನೆಕ್ಟಿವಿಟಿ, 100ಎಕ್ಸ್ ಝೂಮ್ ಕ್ಯಾಮೆರಾ, ಬಿಲ್ಟ್ ಇನ್ ಎಸ್ ಪೆನ್, ಸೈಲೂಸ್, ಐದು ವರ್ಷದ ಆಂಡ್ರಾಯ್ಡ್ ಬೆಂಬಲ ಇದರ ಪ್ರಮುಖ ಫೀಚರ್‌ಗಳು. ದರ: 1,31,999 ರೂ.ನಿಂದ ಆರಂಭ. (HT Photo)
(3 / 6)
ಆಪಲ್ ಐಫೋನ್ 14 ಪ್ರೊ (Apple iPhone 14 Pro): ಹಳೆಯ ಐಫೋನ್ ಆವೃತ್ತಿಯ ಮುಂದುವರೆದ ಆವೃತ್ತಿಯಾಗಿ ಆಪಲ್ ಐಫೋನ್ 14 ಪ್ರೊ ಆಗಮಿಸಿದೆ. ಇದರ ಕ್ಯಾಮೆರಾ, ಪ್ರೊಸೆಸರ್, ಡಿಸ್‌ಪ್ಲೇ ಫೀಚರ್‌ಗಳನ್ನು ಗಮನಾರ್ಹ ಪ್ರಗತಿಯಾಗಿದೆ. ಈ ಫೋನ್‌ನ ಯೂಸರ್ ಎಕ್ಸ್‌ಪಿರಿಯೆನ್ಸ್‌ನಲ್ಲಿಯೂ ಸಾಕಷ್ಟು ಪ್ರಗತಿಯಾಗಿದೆ. ಆರಂಭಿಕ ದರ: 1,29,900 ರೂಪಾಯಿ.
(4 / 6)
ಗೂಗಲ್ ಫಿಕ್ಸೆಲ್ 7 ಪ್ರೊ (Google Pixel 7 Pro): ಇಲ್ಲಿಯವರೆಗೆ ಗೂಗಲ್ ಪರಿಚಯಿಸಿದ ವಿವಿಧ ಸ್ಮಾರ್ಟ್‌ಗಳಿಗಿಂತ ಇದು ಅತ್ಯುತ್ತಮ ಎನ್ನಬಹುದು. ಇದರ ವಿನ್ಯಾಸವೂ ಅನನ್ಯವಾಗಿದೆ. ಬ್ಯಾಟರಿ ಬಾಳ್ವಿಕೆಯೂ ಹೆಚ್ಚಾಗಿದೆ. ಹೈಎಂಡ್ ಟಾಸ್ಕ್ ದಕ್ಷತೆ ಉತ್ತಮವಾಗಿದೆ. ಕ್ಯಾಮೆರಾ ಹಾರ್ಡ್‌ವೇರ್ ಉನ್ನತ ಮಟ್ಟದ್ದು. ಎಐ ಬೆಂಬಲಿತ ಮ್ಯಾಜಿಕ್ ಎರೆಸರ್ ಮತ್ತು ಮೋಷನ್ ಮೋಡ್ ಶೂಟ್ಸ್ ಇತ್ಯಾದಿಗಳು ಇದರ ಇನ್ನಷ್ಟು ವಿಶೇಷ ಫೀಚರ್‌ಗಳಾಗಿವೆ. ಆರಂಭಿಕ ದರ: 84,999 ರೂಪಾಯಿ. REUTERS/Roselle Chen
(5 / 6)
ಒನ್ ಪ್ಲಸ್ ನೋರ್ಡ್ 2ಟಿ 5ಜಿ (One Plus Nord 2T 5G): ಇದು ಗೊರಿಲ್ಲಾ ಗ್ಲಾಸ್ ಅನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಂದಿದೆ. ಸೂಪರ್ ಫಾಸ್ಟ್ 5ಜಿ ಫೋನ್ ಆಗಿದ್ದು, ಮೀಡಿಯಾ ಟೆಕ್‌ನ 1300 ಪ್ರೊಸೆಸರ್ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಅತ್ಯುತ್ತಮ ಸಿಪಿಯು ಇದಾಗಿದೆ. ಮೂರು ಕ್ಯಾಮೆರಾ ಹಿಂಭಾಗದಲ್ಲಿದೆ. ಆದರೆ, ವಾಟರ್ ಪ್ರೂಫಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಫೀಚರ್‌ಗಳು ಇದರಲ್ಲಿಲ್ಲ. ದರ: 28,999 ರೂ.ನಿಂದ ಆರಂಭ.
(6 / 6)
ಪೊಕೊ ಎಂ5 (POCO M5): ಇದು 6.58 ಇಂಚಿನ ಫುಲ್ ಎಚ್‌ಡಿ ಪ್ಲಸ್ (2408 x 1080p) ಎಲ್‌ಸಿಡಿ ಸ್ಕ್ರೀನ್ ಹೊಂದದಿಎ. ಗೊರಿಲ್ಲಾ ಗ್ಲಾಸ್ 3 ಇದೆ. ಮೀಡಿಯಾ ಟೆಕ್ ಹೆಲಿಯೊ ಜಿ೯೯ ಚಿಪ್‌ಸೆಟ್ ಇದೆ. 2.2GHz ಗರಿಷ್ಠ ಸಿಪಿಯು ಸ್ಪೀಡ್ ಹೊಂದಿದೆ. ಎಂಐಯುಐ ಒಎಸ್ ಹೊಂದಿರುವ ಇದು 5 ಸಾವಿರ ಎಂಎಎಚ್ ಬ್ಯಾಟರಿ ಹೊಂದಿದೆ. 18 ವಾಲ್ಟ್ ಚಾರ್ಜರ್ ಕೂಡ ಇದರಲ್ಲಿದೆ. (Twitter.com/IndiaPOCO)
ಇತರ ಗ್ಯಾಲರಿಗಳು