ಕನ್ನಡ ಸುದ್ದಿ  /  Nation And-world  /  You Must Call Me A Hindu: Kerala Governor Arif Mohammed Khan

Arif Mohammed Khan: ನೀವು ನನ್ನನ್ನು ಹಿಂದೂ ಎಂದು ಕರೆಯಬೇಕು, ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಆಗ್ರಹ

"ನನ್ನ ಗಂಭೀರ ದೂರು ಇರುವುದು ನಿಮ್ಮ ಮೇಲೆ (ಆರ್ಯ ಸಮಾಜದ ಸದಸ್ಯರು)... ಏಕೆ ನೀವು ನನ್ನನ್ನು ಹಿಂದೂ ಎಂದು ಕರೆಯುತ್ತಿಲ್ಲ? ನಾನು ಹಿಂದೂ ಎನ್ನುವುದು ಧಾರ್ಮಿಕ ಪದವೆಂದು ಪರಿಗಣಿಸುವುದಿಲ್ಲ... ಹಿಂದೂ ಎನ್ನುವುದನ್ನು ಭೌಗೋಳಿಕವಾಗಿ ನಾನು ಪರಿಗಣಿಸುತ್ತೇನೆ"" ಎಂದು ಆರೀಫ್‌ ಮೊಹಮ್ಮದ್‌ ಖಾನ್‌ ಅವರು ಹೇಳಿದ್ದಾರೆ.

Governor Arif Mohammed Khan (ANI)
Governor Arif Mohammed Khan (ANI) (HT_PRINT)

ತಿರುವನಂತಪುರ: ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯದ ಸ್ಥಾಪಕರು, ಸಮಾಜ ಸುಧಾರಕ ಮತ್ತು ಶಿಕ್ಷಣ ತಜ್ಞರಾದ ಸರ್‌ ಸೈಯದ್‌ ಅಹ್ಮದ್‌ ಖಾನ್‌ ಅವರು ಹಿಂದೊಮ್ಮೆ ನನ್ನನ್ನು ಹಿಂದೂ ಎಂದು ಕರೆಯಬೇಕು ಎಂದು ಹೇಳಿದ್ದರು ಎಂದು ಕೇರಳ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ನೆನಪಿಸಿದ್ದಾರೆ.

ತಿರುವನಂತಪುರದಲ್ಲಿ ಉತ್ತರ ಅಮೆರಿಕದ ಕೇರಳ ಹಿಂದೂಗಳು (ಕೆಎಚ್‌ಎನ್‌ಎ) ಆಯೋಜಿಸಿದ ಕಾರ್ಯಕ್ರಮದಲ್ಲಿ ಆರೀಫ್‌ ಖಾನ್‌ ಅವರು "ನೀವು ನನ್ನನ್ನು ಕಡ್ಡಾಯವಾಗಿ ಹಿಂದೂ ಎಂದು ಕರೆಯಬೇಕು" ಎಂದು ಸೈಯದ್‌ ಅಹ್ಮದ್‌ ಖಾನ್‌ ಅವರ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

"ನನ್ನ ಗಂಭೀರ ದೂರು ಇರುವುದು ನಿಮ್ಮ ಮೇಲೆ (ಆರ್ಯ ಸಮಾಜದ ಸದಸ್ಯರು)... ಏಕೆ ನೀವು ನನ್ನನ್ನು ಹಿಂದೂ ಎಂದು ಕರೆಯುತ್ತಿಲ್ಲ? ನಾನು ಹಿಂದೂ ಎನ್ನುವುದು ಧಾರ್ಮಿಕ ಪದವೆಂದು ಪರಿಗಣಿಸುವುದಿಲ್ಲ... ಹಿಂದೂ ಎನ್ನುವುದನ್ನು ಭೌಗೋಳಿಕವಾಗಿ ನಾನು ಪರಿಗಣಿಸುತ್ತೇನೆ"" ಎಂದು ಆರೀಫ್‌ ಮೊಹಮ್ಮದ್‌ ಖಾನ್‌ ಅವರು ಹೇಳಿದ್ದಾರೆ.

ಭಾರತದಲ್ಲಿ ಯಾರು ಜನಿಸಿದ್ದಾರೋ, ಭಾರತದಲ್ಲಿ ತಯಾರಾದ ಆಹಾರವನ್ನು ಯಾರು ಸೇವಿಸುವರೋ, ಭಾರತದ ನದಿಗಳ ನೀರನ್ನು ಯಾರು ಕುಡಿಯುವರೋ, ಅವರೆಲ್ಲರೂ ತಮ್ಮನ್ನು ತಾವು ಹಿಂದೂಗಳೆಂದೂ ಪರಿಗಣಿಸಬೇಕು. ಹೀಗಾಗಿ, ಸರ್‌ ಸೈಯದ್‌ ಅಹ್ಮದ್‌ ಖಾನ್‌ ಹೇಳಿದಂತೆ ನೀವು ನನ್ನನ್ನು ಹಿಂದೂ ಕರೆಯಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆʼʼ ಎಂದು ಅವರು ಹೇಳಿದ್ದಾರೆ.

ವಸಾಹತುಶಾಹಿ ಯುಗದಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಖ್‌ನಂತಹ ಪರಿಭಾಷೆಗಳನ್ನು ಬಳಸುವುದು ತಪ್ಪಲ್ಲ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಕೆಂದರೆ ಬ್ರಿಟಿಷರು ನಾಗರಿಕರ ಸಾಮಾನ್ಯ ಹಕ್ಕುಗಳನ್ನು ನಿರ್ಧರಿಸಲು ಸಮುದಾಯಗಳನ್ನು ಆಧಾರವಾಗಿಸಿಕೊಂಡಿದ್ದರು. ಕೇರಳ ಸರ್ಕಾರದ ಜತೆಗಿನ ಸಂಘರ್ಷದಿಂದ ಆಗಾಗ್ಗೆ ಸುದ್ದಿಯಾಗುವ ಖಾನ್, ‘ನಾನು ಹಿಂದೂ’ ಎಂದು ಹೇಳುವುದು ತಪ್ಪು ಎಂಬ ಭಾವನೆ ಮೂಡಿಸುವ ಷಡ್ಯಂತ್ರ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯಕ್ಕೂ ಮುಂಚೆಯೇ, "ಸನಾತನ ಧರ್ಮ" ದಲ್ಲಿ ನಂಬಿಕೆಯಿಟ್ಟ ದೇಶದ ರಾಜರು ಮತ್ತು ಆಡಳಿತಗಾರರು ಎಲ್ಲಾ ಧಾರ್ಮಿಕ ಗುಂಪುಗಳನ್ನು ಮುಕ್ತ ತೋಳುಗಳಿಂದ ಸ್ವೀಕರಿಸಿದ್ದರು ಎಂದು ಅವರು ಒತ್ತಿ ಹೇಳಿದ್ದಾರೆ.

ಭಾರತ ಸ್ವಾತಂತ್ರ್ಯಗೊಂಡಾಗ ಈ ದೇಶ ಬಹಳ ದಿನಗಳ ಕಾಲ ಬದುಕುವುದಿಲ್ಲ ಎಂದು ಕೆಲವರು ಅಂದಾಜಿಸಿದ್ದರು. ಭಾರತೀಯರು ಪರಸ್ಪರ ಜಗಳವಾಡಿ ಇಬ್ಭಾಗವಾಗಲಿದ್ದಾರೆ ಎಂದು ಅವರು ಊಹಿಸಿದ್ದರು. ಆದರೆ ಭಾರತವು ತನ್ನ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡಿರುವುದು ಮಾತ್ರವಲ್ಲ, ಏಕತೆಯ ಪಥದಲ್ಲಿ ಅತ್ಯಂತ ದೃಢವಾಗಿ ಸಾಗುತ್ತಿದೆ. ಇದು ಕೆಲವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಆರೀಫ್‌ ಮೊಹಮ್ಮದ್‌ ಖಾನ್‌ ಹೇಳಿದ್ದಾರೆ.

"ಇಂದು ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಮೂಲದ ಜನರ ನೇತೃತ್ವದಲ್ಲಿ ನಡೆಯುತ್ತಿವೆ. ಜಗತ್ತು ಭಾರತದ ಸಾಮರ್ಥ್ಯವನ್ನು ಅರಿತುಕೊಳ್ಳುತ್ತಿದೆ. ನಾವು ಶಕ್ತಿಯುತರಾಗಿದ್ದರೆ ಯಾರೂ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ನಾವು ಇತರರ ಮೇಲೆ ಪ್ರಾಬಲ್ಯ ಸಾಧಿಸಲು ಈ ಅಧಿಕಾರವನ್ನು ಎಂದಿಗೂ ಬಳಸಲಿಲ್ಲ. ಬದಲಿಗೆ ನಾವು ಪುರುಷ ಮತ್ತು ಮಹಿಳೆಯ ಸಂಭಾವ್ಯ ದೈವತ್ವವನ್ನು ನಾವು ಜಗತ್ತಿಗೆ ಸಾರಿದ್ದೇವೆ.." ಎಂದು ಆರೀಫ್‌ ಮೊಹಮ್ಮದ್‌ ಖಾನ್‌ ಮಾರ್ಮಿಕವಾಗಿ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿರುವ ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಭಾರತವನ್ನು ನೂರು ತುಂಡುಗಳಾಗಿ ನೋಡಲು ಬಯಸುವವರು ಅಸಮಾಧಾನಗೊಂಡಿದ್ದಾರೆ. ಆದ್ದರಿಂದಲೇ ಅವರು ಇಂತಹ ನಕಾರಾತ್ಮಕ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಆರೀಫ್‌ ಮೊಹಮ್ಮದ್‌ ಖಾನ್‌ ಅವರ ಅಭಿಪ್ರಾಯದ ಪ್ರತ್ಯೇಕ ವರದಿ ಇಲ್ಲಿದೆ.

IPL_Entry_Point