MS Dhoni: ಎಂಎಸ್ ಧೋನಿ ಸಾರ್ವಕಾಲಿಕ ಶ್ರೇಷ್ಠ ನಾಯಕನಾಗಲು ಬೆಂಗಾವಲಾಗಿ ನಿಂತ ಹತ್ತು ಮಂದಿ ಇವರೇ
- MS Dhoni: ಮಹೇಂದ್ರ ಸಿಂಗ್ ಧೋನಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕನಾಗಲು ಕಾರಣರಾದವರು ಯಾರೆಂಬುದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಮಾಹಿ ಸಕ್ಸಸ್ಗೆ ನೆರವಾದವರು ಯಾರು? ಎಂಬುದನ್ನು ಈ ಮುಂದೆ ನೋಡೋಣ.
- MS Dhoni: ಮಹೇಂದ್ರ ಸಿಂಗ್ ಧೋನಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕನಾಗಲು ಕಾರಣರಾದವರು ಯಾರೆಂಬುದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಮಾಹಿ ಸಕ್ಸಸ್ಗೆ ನೆರವಾದವರು ಯಾರು? ಎಂಬುದನ್ನು ಈ ಮುಂದೆ ನೋಡೋಣ.
(1 / 12)
ಮಾಜಿ ನಾಯಕ ಎಂಎಸ್ ಧೋನಿ ಟೀಮ್ ಇಂಡಿಯಾ ಕಂಡಂತಹ ಅತ್ಯಂತ ಯಶಸ್ವಿ ನಾಯಕ. ಮೂರು ಐಸಿಸಿ ಟ್ರೋಫಿ ಗೆದ್ದ ವಿಶ್ವದ ಏಕೈಕ ಕ್ಯಾಪ್ಟನ್. ಈ ಚಾಣಾಕ್ಷನ ಸಾರಥ್ಯದಲ್ಲಿ ಭಾರತ ತಂಡ ದೇಶ-ವಿದೇಶಗಳಲ್ಲಿ ಗೆಲುವಿನ ನಗಾರಿ ಬಾರಿಸಿರುವುದು ವಿಶೇಷ. ಹಲವು ಸ್ಮರಣೀಯ ಗೆಲುವುಗಳು ನಮಗೆ ಸಿಕ್ಕಿವೆ.
(2 / 12)
ಆದರೆ ತನ್ನ ನಾಯಕತ್ವ, ವಿಭಿನ್ನ ಬ್ಯಾಟಿಂಗ್ ಶೈಲಿಯಿಂದ ಇಡೀ ಪ್ರಪಂಚಕ್ಕೆ ಪರಿಚಯವವಾಗಿರುವ ಈ ಆಟಗಾರ ಯಶಸ್ಸಿನ ಹಿಂದೆ ಹತ್ತು ಮಂದಿ ಇದ್ದಾರೆ ಎಂಬುದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಧೋನಿಯ ಪ್ರತಿ ಹೆಜ್ಜೆಯ ಯಶಸ್ಸಿನಲ್ಲೂ ಇವರೆಲ್ಲರೂ ಪ್ರಮುಖ ಪಾತ್ರವಹಿಸಿದ್ದಾರೆ. ಮಾಹಿ ಸಕ್ಸಸ್ಗೆ ನೆರವಾದವರು ಯಾರು? ಎಂಬುದನ್ನು ಈ ಮುಂದೆ ನೋಡೋಣ.
(3 / 12)
ತಂದೆ ಪಾನ್ ಸಿಂಗ್ ಧೋನಿ ಯಶಸ್ಸಿ ಹಿಂದಿರುವ ಮೇನ್ ಪಿಲ್ಲರ್. ಹುಟ್ಟಿನಿಂದಲೇ ಶಿಸ್ತು ಕಲಿಸಿದ ಪಾನ್ ಸಿಂಗ್, ಚಿಕ್ಕ ವಯಸ್ಸಿನಲ್ಲೇ ಮಾಹಿಯ ಕ್ರಿಕೆಟ್ ಪ್ರೀತಿಯನ್ನು ಪ್ರೋತ್ಸಾಹಿಸಿದರು. ಬಡತನ ಇದ್ದರೂ ಮಗನ ಪ್ರತಿ ಹೆಜ್ಜೆಯಲ್ಲೂ ಮಗನ ಕನಸಿಗೆ ನೀರೆರೆದರು. ಅಂತಾರಾಷ್ಟ್ರೀಯ ಕ್ರಿಕೆಟ್‌ವರೆಗೂ ಧೋನಿಗೆ ಬೇಕಿದ್ದೆಲ್ಲವನ್ನೂ ನೀಡಿ ಮಹಾನ್ ಶಕ್ತಿಯಾದರು.
(4 / 12)
ಧೋನಿ ಕ್ರಿಕೆಟ್ ವೃತ್ತಿಜೀವನದಲ್ಲಿ ಯಶಸ್ಸಿನಲ್ಲಿ ತಂದೆಯಷ್ಟೇ ತಾಯಿ ದೇವಿಕಾ ದೇವಿ ಅವರು ಸಹ ಪ್ರಮುಖ ಪಾತ್ರವಹಿಸಿದರು. ಅಚಲವಾದ ಬೆಂಬಲ ನೀಡಿದ ದೇವಿಕಾ, ಧೋನಿ ಪ್ರಯಾಣದುದ್ದಕ್ಕೂ ಅಪಾರ ಶಕ್ತಿ ತುಂಬಿದರು. ಮಗನ ಕನಸನ್ನು ತನ್ನ ಕನಸೆಂದು ಭಾವಿಸಿ ಜೊತೆಯಾಗಿ ನಿಂತರು.
(5 / 12)
ಬಾಲ್ಯದ ಕೋಚ್ ಕೇಶವ್ ರಂಜನ್ ಬ್ಯಾನರ್ಜಿ ಅವರು ಧೋನಿ ಸಾಮರ್ಥ್ಯ ಗುರುತಿಸಿದ್ದರು. ಧೋನಿ ಅವರ ಜೀವನಾಧಾರಿತದಲ್ಲಿ ಬ್ಯಾನರ್ಜಿ ಪಾತ್ರವನ್ನು ರಾಜೇಶ್ ಶರ್ಮಾ ನಿರ್ವಹಿಸಿದ್ದಾರೆ. ಬ್ಯಾನರ್ಜಿ ಈಗಲೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ರಾಂಚಿಯಲ್ಲಿ 'ಬ್ಯಾನರ್ಜಿ ಸರ್' ಎಂದು ಜನಪ್ರಿಯ.
(6 / 12)
ಕೋಚ್ ದೇವಲ್ ಸಹಾಯ್ ಅವರು ಧೋನಿಯ ಮೆಂಟರ್ ಆಗಿದ್ದರು. ಧೋನಿಯ ತಪ್ಪುಗಳನ್ನು ತಿಡಿದ್ದು ಇವರೇ. ಆದರೀಗ ಇವರು 2020ರಲ್ಲಿ ನಿಧನರಾದರು. ಬಹು ಅಂಗಾಂಗ ವೈಫಲ್ಯದಿಂದ ರಾಂಚಿಯಲ್ಲಿ ನಿಧನರಾದರು. ಅವರಿಗೆ 73 ವರ್ಷ. ರಾಂಚಿಯಲ್ಲಿ ಮೊದಲ ಟರ್ಫ್ ಪಿಚ್‌ಗಳನ್ನು ಸಿದ್ಧಪಡಿಸಿದ ಕೀರ್ತಿ ದೇವಲ್‌ಗೆ ಸಲ್ಲುತ್ತದೆ.
(7 / 12)
ಪತ್ನಿ ಸಾಕ್ಷಿ ಸಿಂಗ್ ಧೋನಿಯ ಏರಿಳಿತ ಜೀವನದಲ್ಲಿ ಸದಾ ಬೆಂಬಲ ಕೊಟ್ಟವರು. 2010ರಲ್ಲಿ ಡೆಹ್ರಾಡೂನ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರೀತಿಸಿ ಮನೆಯಲ್ಲಿ ಒಪ್ಪಿಗೆ ಪಡೆದಿದ್ದರು. ಈ ಜೋಡಿಗೆ ಜೀವಾ ಎಂಬ ಮುದ್ದಾದ ಮಗಳು ಕೂಡಾ ಇದ್ದಾಳೆ. ಧೋನಿಗೆ ಸದಾ ಬೆಂಬಲ ನೀಡುವ ಸಾಕ್ಷಿ, ಐಪಿಎಲ್ ಪ್ರತಿ ಪಂದ್ಯವನ್ನೂ ವೀಕ್ಷಿಸುತ್ತಾರೆ.
(8 / 12)
ಅರುಣ್ ಪಾಂಡೆ ಧೋನಿ ಬಾಲ್ಯದ ಸ್ನೇಹಿತ. ಮಾಹಿಗೆ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ಅರುಣ್, ಅವರ ವೃತ್ತಿಪರ ಬದ್ದತೆ ಮತ್ತು ಯೋಜನೆಗಳನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
(9 / 12)
ಅನುಭವಿ ಮತ್ತು ಸಹ ಆಟಗಾರ ರಾಹುಲ್ ದ್ರಾವಿಡ್ ಕೂಡ ಧೋನಿ ಬದುಕಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಮಾಹಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿ ದ್ರಾವಿಡ್ ಹೆಚ್ಚಿನ ಮಾರ್ಗದರ್ಶನ ನೀಡಿದ್ದರು. ಈ ಅಮೂಲ್ಯ ಮಾರ್ಗದರ್ಶನವೇ ಧೋನಿ ಕರಿಯರ್ ಬದಲಾವಣೆಗೆ ಸಾಕ್ಷಿಯಾಗಿತ್ತು.
(10 / 12)
ಸೌರವ್ ಗಂಗೂಲಿ, ಧೋನಿ ನಾಯಕತ್ವ ನೀಡಲು ಪ್ರಮುಖ ಕಾರಣರಾಗಿದ್ದರು. ನಾಯಕತ್ವದ ಜವಾಬ್ದಾರಿ ವಹಿಸಿಕೊಟ್ಟ ಗಂಗೂಲಿ, ಪರಾಕ್ರಮ ಪ್ರದರ್ಶಿಸಲು ಅವಕಾಶ ನೀಡಿದರು. ಆರಂಭಿಕ ದಿನಗಳಲ್ಲಿ ಸತತ ವೈಫಲ್ಯ ಅನುಭವಿಸಿದರೂ ತನ್ನ ನಾಯಕತ್ವದಲ್ಲಿ ಅವಕಾಶ ನೀಡಿದ್ದೇ ಸೌರವ್ ಗಂಗೂಲಿ ಎಂಬುದು ವಿಶೇಷ.
(11 / 12)
ಸಚಿನ್ ತೆಂಡೂಲ್ಕರ್ ಎಲ್ಲರಿಗೂ ಮಹಾನ್ ಸ್ಫೂರ್ತಿಯಂತೆ ಧೋನಿಗೂ ಅಷ್ಟೇ ಸ್ಫೂರ್ತಿ. ಧೋನಿ ಈಗಲೂ ಸಚಿನ್ರನ್ನು ಗುರು ಎಂದು ಕರೆಯುತ್ತಾರೆ. ಅವರೆಂದರೆ ಕ್ಯಾಪ್ಟನ್ ಕೂಲ್ಗೆ ಬಲು ಇಷ್ಟ. ತುಂಬಾ ಸಂದರ್ಭಗಳಲ್ಲಿ ಸಚಿನ್ ಅವರನ್ನು ನೋಡಿಯೇ ಬೆಳೆದಿದ್ದು ಕ್ರಿಕೆಟ್ ಆಡಿದ್ದೇವೆ ಎಂದು ಧೋನಿ ಹೇಳಿದ್ದುಂಟು. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಬಂದ ನಂತರ ಧೋನಿಗೆ ಕ್ಯಾಪ್ಟನ್ಸಿ ಒಪ್ಪಿಸಲು ಸಚಿನ್ರದ್ದು ಮಹತ್ವದ ಪಾತ್ರವಿದೆ.
ಇತರ ಗ್ಯಾಲರಿಗಳು