ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ 15 ಸಿನಿಮಾಗಳು; ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಚಿತ್ರಗಳ ವಿವರ
ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಕುಲದಲ್ಲಿ ಕೀಳ್ಯಾವುದೋ ಸೇರಿದಂತೆ ಕೆಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಹಿಂದಿಯಲ್ಲಿ ಭೋಲ್ ಚುಕ್ ಮಾಫ್, ತಮಿಳಿನಲ್ಲಿ ಏಸ್, ಮಲಯಾಳಂನಲ್ಲಿ ಡಿಟೆಕ್ಟಿವ್ ಉಜ್ವಲನ್ ಸೇರಿದಂತೆ ಭಾರತದಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ.
(1 / 12)
ಈ ವೀಕೆಂಡ್‌ನಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕೆನ್ನುವವರಿಗೆ ಹಲವು ಆಯ್ಕೆಗಳು ಇವೆ. ಅವುಗಳಲ್ಲಿ ಕೆಲವೇ ಕೆಲವು ಸಿನಿಮಾಗಳು ಮಾತ್ರ ನಿರೀಕ್ಷೆ ಹುಟ್ಟುಹಾಕಿವೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಸಿನಿಮಾಗಳ ವಿವರ ಇಲ್ಲಿದೆ.
(2 / 12)
ಜೈ ಕಿಸಾನ್: ಜೈಕಿಸಾನ್ ಎಂಬ ಕನ್ನಡ ಸಿನಿಮಾ ಮೇ 23ರಂದು ರಿಲೀಸ್ ಆಗುತ್ತಿದೆ. ಸ್ಮಿತಾ ತಂಬೆ, ಜನಮೇಜಯ್ ತೆಲಂಗ್, ಗಣೇಶ್ ಯಾದವ್, ಪ್ರಕಾಶ್ ದೋತ್ರೆ ಮುಂತಾದವರು ನಟಿಸಿದ್ದಾರೆ.
(3 / 12)
ಕಿರಿಕ್: ರವಿ ಶೆಟ್ಟಿ, ಪೂಜಾ ರಾಮಚಂದ್ರ, ಬಾಲಾ ರಾಜ್‌ವಾಡಿ, ಕುರಿ ರಂಗ, ಸೀರುಂಡೆ ರಘು, ಟೆನ್ನಿಸ್ ಕೃಷ್ಣಾ ಸೇರಿದಂತೆ ಹಲವು ಕಲಾವಿದರು ನಟಿಸಿರುವ ಕಿರಿಕ್ ಸಿನಿಮಾವೂ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
(4 / 12)
ಕುಲದಲ್ಲಿ ಕೀಳ್ಯಾವುದೋ: ಮಡೆನೂರು ಮನು ನಟಿಸಿರುವ ಸಿನಿಮಾ ನಾಳೆ ರಿಲೀಸ್ ಆಗಲಿದೆ. ಈ ಚಿತ್ರದ ನಾಯಕ ನಟ ಮನು ಇಂದು ರೇಪ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಇದು ಚಿತ್ರ ಬಿಡುಗಡೆಯ ಮೇಲೆ ಅನಿಶ್ಚಿತತೆಯನ್ನು ತಂದಿದೆ. ಯೋಗರಾಜ್ ಸಿನಿಮಾಸ್ ಮತ್ತು ಪರ್ಲ್ ಸಿನಿ ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದೆ.
(5 / 12)
ಮಂಕುತಿಮ್ಮನ ಕಗ್ಗ: ಹಿರಿಯ ನಟ ರಾಮಕೃಷ್ಣ, ಭವ್ಯ ಶ್ರೀ ರೈ ನಟಿಸಿರುವ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಇದು ಕೆಲವೇ ಕೆಲವು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ.
(6 / 12)
ಭೋಲ್ ಚುಕ್ ಮಾಫ್: ಹಿಂದಿಯಲ್ಲಿ ಈ ವಾರ ಬಿಡುಗಡೆಯಾಗುವ ಬಹುನಿರೀಕ್ಷಿತ ಸಿನಿಮಾವಾಗಿದೆ. ರಾಜಕುಮಾರ್ ರಾವ್, ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
(7 / 12)
ಕಪ್‌ಕಪಿ: ಶ್ರೇಯಸ್ ತಲ್‌ಪಾಡೆ, ತುಷಾರ್ ಕಪೂರ್, ಸಿದ್ದಿ ಇದ್ನಾನಿ, ಸೋನಿಯಾ ರಾಥಿ ಮುಂತಾದವರು ನಟಿಸಿದ ಕಪ್‌ಕಪಿ ಎಂಬ ಸಿನಿಮಾ ಹಿಂದಿ ಭಾಷೆಯಲ್ಲಿ ಬಿಡುಗಡೆಯಗಲಿದೆ.
(8 / 12)
ಕೇಸರಿ ವೀರ್: ಸೂರಜ್ ಪಂಚೋಲಿ, ಸುನೀಲ್ ಶೆಟ್ಟಿ, ವಿವೇಕ್ ಓಬೆರಾಯ್ ನಟಿಸಿರುವ ಇನ್ನೊಂದು ಬಹುನಿರೀಕ್ಷಿತ ಸಿನಿಮಾ ಕೇಸರಿ ವೀರ್ ಈ ವಾರ ರಿಲೀಸ್ ಆಗುತ್ತಿದೆ.
(9 / 12)
ಲಿಲ್ಲೊ ಆಂಡ್ ಸ್ಟಿಚ್: ಈ ಇಂಗ್ಲಿಷ್ ಸಿನಿಮಾ ಇಂಗ್ಲಿಷ್, ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ.
(10 / 12)
ಏಸ್ ಎಂಬ ತಮಿಳು ಸಿನಿಮಾ ತಮಿಳು ಮಾತ್ರವಲ್ಲದೆ ತೆಲುಗಿನಲ್ಲಿಯೂ ರಿಲೀಸ್ ಆಗುತ್ತಿದೆ. ತೆಲುಗಿನಲ್ಲಿ ನಿಶಬ್ದ ಪ್ರೇಮ ಎಂಬ ಸಿನಿಮಾವೂ ಬಿಡುಗಡೆಯಾಗುತ್ತಿದೆ.
ಇತರ ಗ್ಯಾಲರಿಗಳು