Vijay Diwas 2022: ಬಾಂಗ್ಲಾ ವಿಮೋಚನೆಗಾಗಿ ನಡೆದ ಇಂಡೋ ಪಾಕ್ ಯುದ್ಧದಲ್ಲಿ ಮಡಿದ ವೀರ ಸೈನಿಕರಿಗೆ ಗೌರವ ನಮನ | ಚಿತ್ರಗಳು
ಬಾಂಗ್ಲಾ ವಿಮೋಚನೆಗೆ ಸಂಬಂಧಪಟ್ಟಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ 1971ರ ಯುದ್ಧದಲ್ಲಿ ಭಾರತ ಗೆಲುವು ಪಡೆದ ದಿನವಿಂದು. 1971 ಡಿಸೆಂಬರ್ 3 ಮತ್ತು 1971 ಡಿಸೆಂಬರ್ 16ರ ನಡುವೆ ಭಾರತದ ಪಶ್ಚಿಮ ಗಡಿಯಲ್ಲಿ ನಡೆದ ಸಶಸ್ತ್ರ ಸಂಘರ್ಷವನ್ನು ‘ಭಾರತ-ಪಾಕಿಸ್ತಾನ’ ಯುದ್ಧ ಎಂದು ಭಾರತ ಮತ್ತು ಬಾಂಗ್ಲಾ ದೇಶಗಳ ಸೈನ್ಯಗಳು ಕರೆದಿವೆ. ಈ ಯುದ್ಧದಲ್ಲಿ ಮಡಿದ ಭಾರತದ ವೀರಯೋಧರಿಗೆ ಇಂದು ದೇಶದ ವಿವಿಧೆಡೆ ನಮನ ಸಲ್ಲಿಸಲಾಯಿತು.
(1 / 7)
ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ದೇಶದ ರಕ್ಷಣಾ ಪಡೆ ಮುಖ್ಯಸ್ಥ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ವಿ ಆರ್ ಚೌಧರಿ, ಭಾರತೀಯ ನೌಕಾ ಪಡೆ ಉಪ ಮುಖ್ಯಸ್ಥ ಅಡ್ಮಿರಲ್ ಎಸ್ ಎನ್ ಘೋರ್ಮಡೆ ಅವರು ಸಹ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು. ಸೇನಾ ಸಂಪ್ರದಾಯದಂತೆ ಗೌರವ ನಮನ ಸಲ್ಲಿಸಲಾಯಿತು. (ANI)
(2 / 7)
ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಮಡಿದ ಯೋಧರ ಸ್ಮರಿಸಿದರು.(ANI)
(3 / 7)
ವಿಜಯ ದಿವಸದ ಪ್ರಯುಕ್ತ ದೆಹಲಿಯ ಆರ್ಮಿ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೇನೆಯ ಪ್ರಮುಖರನ್ನು ಭೇಟಿಯಾದರು.(PTI)
(4 / 7)
ವಿಜಯ ದಿವಸದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಪ್ರಮುಖರು ಪಾಲ್ಗೊಂಡರು.(PTI)
(6 / 7)
ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನರ್ ಆಗಿರುವ ಅಂಡಲಿಬ್ ಎಲಿಯಾ ಅವರು ಬಾಂಗ್ಲಾದೇಶ ವಿಮೋಚನೆಯ ವಿಜಯ ದಿವಸದ ಪ್ರಯುಕ್ತ ಕೋಲ್ಕತ್ತಾದಲ್ಲಿ ಧ್ವಜಾರೋಹಣ ಮಾಡಿದರು.
ಇತರ ಗ್ಯಾಲರಿಗಳು