ಕನ್ನಡ ಸುದ್ದಿ  /  Photo Gallery  /  2 Die After A Large Rock Falls From 42nd Floor Of Under-construction Building In Worli

Worli Incident: ನಿರ್ಮಾಣ ಹಂತದ ಕಟ್ಟಡದ 42ನೇ ಮಹಡಿಯಿಂದ ಉರುಳಿ ಬಿದ್ದ ಬಂಡೆ: ಇಬ್ಬರು ಬಲಿ

  • ಮಹಾರಾಷ್ಟ್ರದ ಮುಂಬೈನ ವರ್ಲಿಯಲ್ಲಿ ನಿನ್ನೆ ರಾತ್ರಿ ನಡೆದ ದಾರುಣ ಘಟನೆಯಲ್ಲಿ ನಿರ್ಮಾಣ ಹಂತದ ಕಟ್ಟಡದ 42ನೇ ಮಹಡಿಯಿಂದ ಬೃಹತ್​ ಬಂಡೆ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಫೋರ್ ಸೀಸನ್ ಹೋಟೆಲ್ ಬಳಿ ನಿಲ್ಲಿಸಿದ್ದ ಹಲವು ಕಾರುಗಳಿಗೂ ಹಾನಿಯಾಗಿದೆ.

ನಿರ್ಮಾಣ ಹಂತದ ಕಟ್ಟಡದ 42ನೇ ಮಹಡಿಯಿಂದ ಬೃಹತ್​ ಬಂಡೆ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದ ಮುಂಬೈನ ವರ್ಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ಫೋರ್ ಸೀಸನ್ ಹೋಟೆಲ್ ಬಳಿ ನಿಲ್ಲಿಸಿದ್ದ ಹಲವು ಕಾರುಗಳಿಗೂ ಹಾನಿಯಾಗಿದೆ. 
icon

(1 / 6)

ವರ್ಲಿಯ ಗಾಂಧಿ ನಗರ ಪ್ರದೇಶದಲ್ಲಿ ಫೋರ್ ಸೀಸನ್ ಹೋಟೆಲ್ ಬಳಿ ಕಟ್ಟಡವೊಂದನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣ ಕಾರ್ಯದ ವೇಳೆ ಕಟ್ಟಡದ 42ನೇ ಮಹಡಿಯಿಂದ ಬಂಡೆ ಕೆಳಗೆ ಬಿದ್ದಿದೆ.
icon

(2 / 6)

ಘಟನೆಯಲ್ಲಿ ಶಬ್ಬೀರ್ ಮತ್ತು ಇಮ್ರಾನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
icon

(3 / 6)

ರಾತ್ರಿ 9:40ರ ಸುಮಾರಿಗೆ ಘಟನೆ ನಡೆದಿದ್ದು, ಫೋರ್ ಸೀಸನ್ ಹೋಟೆಲ್ ಬಳಿ ನಿಲ್ಲಿಸಿದ್ದ ಹಲವು ಕಾರುಗಳಿಗೂ ಹಾನಿಯಾಗಿದೆ.
icon

(4 / 6)

"ಮೃತಪಟ್ಟ ಇಬ್ಬರು ಫೋರ್ ಸೀಸನ್ ರೆಸಿಡೆನ್ಸಿ ಎದುರಿನ ಹೌಸಿಂಗ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಊಟ ಮುಗಿಸಿ ಟೀ ಕುಡಿಯಲು ಬಂದಿದ್ದರು. ಈ ವೇಳೆ ಘಟನೆ ನಡೆದಿದೆ" ಎಂದು ವರ್ಲಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕೋಲಿ ತಿಳಿಸಿದ್ದಾರೆ.   
icon

(5 / 6)

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಿಎಂಸಿಯ ನಾಯರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
icon

(6 / 6)

IPL_Entry_Point

ಇತರ ಗ್ಯಾಲರಿಗಳು