Juices with Health Benefits: ಆರೋಗ್ಯವಾಗಿರಲು ಈ ಮೂರು ಜ್ಯೂಸ್ ಕುಡಿಯಿರಿ, ಇದು ಪೌಷ್ಟಿಕತಜ್ಞರ ಸಲಹೆ
- ದೈನಂದಿನ ಆಹಾರದ ಜತೆಗೆ ತುಳಸಿ ರಸವನ್ನು ಕೂಡಾ ಹೊಟ್ಟೆಗೆ ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ತುಳಸಿಯು ಆಸ್ತಮಾ, ಶೀತ, ಕೆಮ್ಮು ಮತ್ತು ಜ್ವರದಂತಹ ವಿವಿಧ ಕಾಯಿಲೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.
- ದೈನಂದಿನ ಆಹಾರದ ಜತೆಗೆ ತುಳಸಿ ರಸವನ್ನು ಕೂಡಾ ಹೊಟ್ಟೆಗೆ ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ತುಳಸಿಯು ಆಸ್ತಮಾ, ಶೀತ, ಕೆಮ್ಮು ಮತ್ತು ಜ್ವರದಂತಹ ವಿವಿಧ ಕಾಯಿಲೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.
(1 / 8)
ಆರೋಗ್ಯಕರ ಜೀವನವನ್ನು ನಡೆಸಲು, ಪ್ರತಿದಿನ ಹಣ್ಣುಗಳು ಮತ್ತು ತರಕಾರಿಗಳ ರಸ ಅಥವಾ ಜ್ಯೂಸ್ ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ. ಅದರೊಂದಿಗೆ, ಕರಿದ ಆಹಾರ ಪದಾರ್ಥಗಳು ಮತ್ತು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನುಕಾಪಾಡಬಹುದು. ಈ ಬಗ್ಗೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಈ ರೀತಿ ಸಲಹೆ ನೀಡಿದ್ದಾರೆ.(Unsplash)
(2 / 8)
ತುಳಸಿ ರಸವನ್ನು ದೈನಂದಿನ ಆಹಾರದಲ್ಲಿ ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ತುಳಸಿಯು ಆಸ್ತಮಾ, ಶೀತ ಕೆಮ್ಮು ಮತ್ತು ಜ್ವರದಂತಹ ವಿವಿಧ ಕಾಯಿಲೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.(Unsplash)
(3 / 8)
ಕಪ್ಪು ತುಳಸಿಯ ಎಲೆಗಳು ಹಸಿರು ತುಳಸಿಗಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದ್ದು, ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಅಂಜಲಿ ಮುಖರ್ಜಿ ಹೇಳುತ್ತಾರೆ.(Unsplash)
(4 / 8)
ಕಲ್ಲಂಗಡಿ ಜ್ಯೂಸ್‌ನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ, ಇದು ದೇಹದ ನೀರಿನ ಅಗತ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.(Unsplash)
(5 / 8)
ಉಪ್ಪು, ಸಕ್ಕರೆ ಮತ್ತು ಮೈದಾ ಸೇವನೆಯನ್ನು ಕಡಿಮೆ ಮಾಡಿ, ದೈನಂದಿನ ಆಹಾರದಲ್ಲಿ ಕಲ್ಲಂಗಡಿ ರಸವನ್ನು ಸೇರಿಸಲು ಅಂಜಲಿ ಶಿಫಾರಸು ಮಾಡಿದ್ದಾರೆ.(Unsplash)
(6 / 8)
ಕ್ಯಾರೆಟ್ ಜ್ಯೂಸ್ ಕ್ಯಾಲ್ಸಿಯಂ, ವಿಟಮಿನ್ ಎ, ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆಯಿಂದ ತುಂಬಿರುತ್ತದೆ.(Unsplash)
(7 / 8)
ಕ್ಯಾರೆಟ್ ಜ್ಯೂಸ್ ದೇಹಕ್ಕೆ ಪೋಷಕಾಂಶಗಳ ಸರಿಯಾದ ಅಗತ್ಯವನ್ನು ಪೂರೈಸುತ್ತದೆ ಮತ್ತು ಅದನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.(Unsplash)
ಇತರ ಗ್ಯಾಲರಿಗಳು