Ear Care Tips: ಕಿವಿಗಳ ಆರೋಗ್ಯಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ..
ಆಯುರ್ವೇದದ ಪ್ರಕಾರ, ಕಿವಿಗಳನ್ನು ಮನಸ್ಸು ಮತ್ತು ಇಂದ್ರಿಯಗಳ ಹೆಬ್ಬಾಗಿಲು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅತ್ಯುತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವುಗಳ ಕಾಳಜಿ ವಹಿಸುವುದು ಅತ್ಯಗತ್ಯ. ಕಿವಿಗಳ ಆರೋಗ್ಯಕ್ಕಾಗಿ ಆಯುರ್ವೇದ ಸಲಹೆಗಳನ್ನು ಪರಿಶೀಲಿಸಿ.
(1 / 6)
ಆಧುನಿಕ ಜೀವನದಲ್ಲಿ ಒಂದು ದಿನದಲ್ಲಿ ಸಾಕಷ್ಟು, ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ಶಬ್ದಗಳನ್ನು ನಮ್ಮ ಕಿವಿ ಆಲಿಸುತ್ತದೆ. ಕಿವಿಗಳು ಕೇವಲ ಸೌಂಡ್ ಫಿಲ್ಟರ್‌ಗಳಲ್ಲ, ನಮ್ಮ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿಯೂ ಪಾತ್ರ ವಹಿಸುತ್ತದೆ. ಕಿವಿಯ ಆರೋಗ್ಯಕ್ಕಾಗಿ ಡಾ. ವರಲಕ್ಷ್ಮಿ ನೀಡಿರುವ ಸಲಹೆಗಳನ್ನು ನೋಡೋಣ ಬನ್ನಿ. (freepik )
(2 / 6)
ಶೀತ ವಾತಾವರಣಕ್ಕೆ ಒಡ್ಡಿಕೊಳ್ಳುವಾಗ ನಿಮ್ಮ ತಲೆ ಮತ್ತು ಕಿವಿಗಳನ್ನು ಕವರ್ ಮಾಡಿಕೊಳ್ಳಿ. ತಂಪಾದ ಗಾಳಿಯು ನಿಮ್ಮ ಕಿವಿಯೊಳಗೆ ವಾತವನ್ನು ಉಲ್ಬಣಗೊಳಿಸಬಹುದು ಮತ್ತು ಅಸಮತೋಲನವನ್ನು ಉಂಟುಮಾಡಬಹುದು.(Unsplash)
(3 / 6)
ಇಯರ್ ಬಡ್‌ಗಳು ಅನೇಕರಿಗೆ ಆಧುನಿಕ ಅಗತ್ಯವಾಗಿದೆ. ಆದರೆ ಅವು ಶಾಶ್ವತ ಶ್ರವಣ ನಷ್ಟವನ್ನು ಉಂಟುಮಾಡಬಹುದು. ವಾಲ್ಯೂಮ್ ಅನ್ನು 60% ಕ್ಕಿಂತ ಕಡಿಮೆ ಮತ್ತು ಬಳಕೆಯ ಸಮಯವನ್ನು 60 ನಿಮಿಷಗಳ ಕೆಳಗೆ ಇರಿಸಿ.(Pexels)
(4 / 6)
ಸರಿಯಾದ ಆರೈಕೆ ಮತ್ತು ನೈರ್ಮಲ್ಯದಿಂದ ನಿಮ್ಮ ಕಿವಿಗಳನ್ನು ಸ್ವಚ್ಛವಾಗಿಡಿ. ಕಿವಿಯನ್ನು ಸ್ವಚ್ಛಗೊಳಿಸಲು ಶುಭ್ರವಾದ ಹತ್ತಿ ಬಟ್ಟೆಯನ್ನು ಬಳಸಿ. ಕಿವಿಯಲ್ಲಿ ಉತ್ಪತ್ತಿಯಾಗುವ ವ್ಯಾಕ್ಸ್ ಅಥವಾ ಕುಗ್ಗೆಯನ್ನು ಹೊರತೆಗೆಯಲು ' ಇಯರ್ ಕ್ಯಾಂಡಲಿಂಗ್' ಪ್ರಯತ್ನಿಸಿ.(freepik )
(5 / 6)
ವಿಮಾನಗಳಲ್ಲಿ ಪ್ರಯಾಣಿಸುವಾಗ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ. ಕಿವಿಗೆ ಒತ್ತಡವಾಗದಂತೆ ಚೂಯಿಂಗ್ ಸಾಧನಗಳನ್ನು ಬಳಸಿ.(Unsplash)
ಇತರ ಗ್ಯಾಲರಿಗಳು