Famous Churches in India: ಕ್ರಿಸ್‌ಮಸ್ ರಜೆಯಲ್ಲಿ ಭಾರತದ ಈ 5 ಪ್ರಸಿದ್ಧ ಚರ್ಚ್‌ಗಳಿಗೆ ನೀವು ಹೋಗಲೇಬೇಕು
ನೀವು ರಾಜ್ಯದಲ್ಲಿರುವ ಸುಂದರ ಮತ್ತು ಖ್ಯಾತ ಚರ್ಚ್‌ಗಳಿಗೆ ಈಗಾಗಲೇ ಭೇಟಿ ನೀಡಿರಬಹುದು. ಈ ಕ್ರಿಸ್‌ಮಸ್‌ಗೆ ನೀವು ಬೇರೆ ರಾಜ್ಯಗಳ ಯಾವುದಾದರೂ ಚರ್ಚ್‌ಗೆ ಹೋಗುವ ಪ್ಲಾನ್ ಇದ್ದರೆ, ಇಲ್ಲಿ ಕೆಲ ಸುಂದರ ಚರ್ಚ್‌ಗಳ ಪಟ್ಟಿ ಇದೆ. ಶಿಮ್ಲಾದ ಕ್ರೈಸ್ಟ್ ಚರ್ಚ್‌ನಿಂದ ಹಿಡಿದು ಕೊಚ್ಚಿಯ ಸಾಂತಾ ಕ್ರೂಜ್ ಬೆಸಿಲಿಕಾವರೆಗೆ, ಈ ಕ್ರಿಸ್ಮಸ್ ಋತುವಿನಲ್ಲಿ ನೀವು ಹೋಗಬಹುದಾದ ಪ್ರಮುಖ ಪ್ರಾರ್ಥನಾ ಸ್ಥಳಗಳ ವಿವರ ಇಲ್ಲಿದೆ ನೋಡಿ.
(1 / 5)
ಕ್ರೈಸ್ಟ್ ಚರ್ಚ್, ಶಿಮ್ಲಾ: ಭಾರತದಲ್ಲಿ ಕ್ರಿಸ್‌ಮಸ್ ಸಮಯದಲ್ಲಿ ಭೇಟಿ ನೀಡಲು ಉತ್ತಮ ಚರ್ಚ್‌ಗಳಲ್ಲಿ ಇದು ಕೂಡಾ ಒಂದು. ಇದು ಉತ್ತರ ಭಾರತದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ. ಇದನ್ನು 1857ರಲ್ಲಿ ಬ್ರಿಟಿಷರು ಸ್ಥಾಪಿಸಿದರು. ಇದು ಶಿಮ್ಲಾದಲ್ಲಿ ನೋಡಲೇಬೇಕಾದ ಸ್ಥಳವಾಗಿದೆ. ಚರ್ಚ್‌ನ ಬಣ್ಣದ ಗಾಜಿನ ಕಿಟಕಿಗಳು ಮಾನವೀಯತೆ, ಧೈರ್ಯ, ಸಹಾನುಭೂತಿ, ನಂಬಿಕೆ ಮತ್ತು ಭರವಸೆಯನ್ನು ಪ್ರತಿನಿಧಿಸುತ್ತವೆ.(pinterest)
(2 / 5)
ಪಾಲ್ಸ್ ಕ್ಯಾಥೆಡ್ರಲ್, ಕೋಲ್ಕತ್ತಾ: ಅರಮನೆಗಳ ನಗರ ಕೋಲ್ಕತ್ತಾದ ಜಾಯ್ ನಗರದ ಮಧ್ಯಭಾಗದಲ್ಲಿ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ಇದೆ. ಇದು ಭಾರತದಲ್ಲಿನ ಅತ್ಯಂತ ಜನಪ್ರಿಯ ಚರ್ಚ್ ಆಗಿದೆ. ಇದು ತನ್ನ ಸೌಂದರ್ಯ ಮತ್ತು ಅದರ ಪ್ರಾಚೀನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಕ್ರಿಸ್‌ಮಸ್ ಸಂದರ್ಭದಲ್ಲಿ ಈ ಕ್ಯಾಥೆಡ್ರಲ್, ಸುತ್ತಮುತ್ತಲಿನ ಉದ್ಯಾನಗಳು ಮತ್ತು ಹತ್ತಿರದ ಬೀದಿಗಳಲ್ಲಿ ಬೆಳಕಿನ ಹಬ್ಬವನ್ನು ನೋಡಲೇಬೇಕು.(Arijit Sen/HT Photo)
(3 / 5)
ಬೆಸಿಲಿಕಾ ಆಫ್ ಜೀಸಸ್, ಗೋವಾ: ಗೋವಾದ ಬೆಸಿಲಿಕಾ ಆಫ್ ಬೊಮ್ ಜೀಸಸ್ ಚರ್ಚ್ ಭಾರತದಲ್ಲಿ ಬರೊಕ್ ವಾಸ್ತುಶಿಲ್ಪದೊಂದಿಗೆ ವಿಶಿಷ್ಟವಾದ ಕಟ್ಟಡವಾಗಿದೆ. ಶತಮಾನಗಳಷ್ಟು ಹಳೆಯದಾದ ಈ ಚರ್ಚ್, ಈಗ ಭಾರತದ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ. ನೈಸರ್ಗಿಕ, ಪ್ರಾಚೀನತೆಯ ಶ್ರೀಮಂತಿಕೆಯೊಂದಿಗೆ ಇದು ವರ್ಷವಿಡೀ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.(Ajay Aggarwal/HT PHOTO)
(4 / 5)
ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಕ್ಯಾಥೆಡ್ರಲ್, ಪಾಂಡಿಚೇರಿ: ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯಲ್ಲಿರುವ ಒಂದು ಪ್ರಸಿದ್ಧ ತಾಣವೆಂದರೆ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಕ್ಯಾಥೆಡ್ರಲ್. ಇದರ ವಾಸ್ತುಶೈಲಿಗೆ ಮಂತ್ರಮುಗ್ಧರಾಗದವರು ಇರಲಿಕಿಲ್ಲ. ಇದರ ಒಳಾಂಗಣ ತುಂಬಾ ಆಕರ್ಷಕವಾಗಿದೆ.(Garima Verma)
ಇತರ ಗ್ಯಾಲರಿಗಳು