Himachal Pradesh: ಈ ಚಳಿಗಾಲಕ್ಕೆ ಹಿಮಾಚಲ ಪ್ರದೇಶಕ್ಕೆ ಟ್ರಿಪ್ ಮಾಡಿದ್ರೆ ಹೇಗೆ? ಇಲ್ಲಿವೆ 6 ಸ್ಥಳಗಳ ಸಚಿತ್ರ ಮಾಹಿತಿ
ಹಿಮಾಚಲವು ಪ್ರಪಂಚದ ಕೆಲವು ಸುಂದರ ತಾಣಗಳ ನೆಲೆಯಾಗಿದೆ. ಚಳಿಗಾಲ ಬಂತಂದ್ರೆ ಇಲ್ಲಿ ಭೂಲೋಕದ ಸ್ವರ್ಗವೇ ತೆರೆದುಕೊಳ್ಳುತ್ತದೆ. ನಿಜವಾದ ಸೌಂದರ್ಯವನ್ನು ನೋಡಬೇಕಂದ್ರೆ ನೀವು ಇಲ್ಲಿಗೆ ಈ ಸಮಯದಲ್ಲಿ ಹೋಗಬೇಕು.
(1 / 7)
ಹಿಮಾಚಲ ಪ್ರದೇಶವು ನಿಸ್ಸಂದೇಹವಾಗಿ ಚಳಿಗಾಲದ ರಜಾದಿನಗಳನ್ನು ಕಳೆಯಲು ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಹಿಮಾವೃತ ಭೂದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಇದು ಸೂಕಕ್ತ ಸಮಯ. ಇಲ್ಲಿನ ಹಿಮ ತುಂಬಿದ ಗಿರಿಗಳು, ರಸ್ತೆಹಳು ಮೋಡಿಮಾಡುವಂತೆ ಕಾಣುತ್ತದೆ. ಹನಿಮೂನ್‌ಗೆ ನವಜೋಡಿಗಳು ಆಯ್ಕೆ ಮಾಡುವ ಮೊದಲ ಸ್ಥಳವೇ ಇದು. ಚಳಿಗಾಲದ ವಿರಾಮಕ್ಕಾಗಿ ಪ್ರತಿ ವರ್ಷ ಹಲವರು ಈ ರಾಜ್ಯಕ್ಕೆ ಬರುತ್ತಾರೆ. ನೆಲದ ಮೇಲೆ ಬಿದಗ್ದು ಕರಗುವ ಹಿಮ, ತಣ್ಣನೆಯ ಗಾಳಿ, ಹಿಮದಿಂದ ಆವೃತವಾದ ಪರ್ವತಗಳು, ಮರಗಳು ಮತ್ತು ಹುಲ್ಲುಗಾವಲುಗಳು, ರುಚಿಕರವಾದ ಹಿಮಾಚಲದ ಆಹಾರ ಮತ್ತು ಆಕರ್ಷಕ ಪ್ರವಾಸಿ ತಾಣಗಳೊಂದಿಗೆ ಇಲ್ಲಿನ ಪ್ರತಿ ಕ್ಷಣವನ್ನು ಖುಷಿಯಿಂದ ಕಳೆಯಲು ಪ್ರವಾಸಿಗ ಕಾಯುತ್ತಿರುತ್ತಾನೆ.(Unsplash)
(2 / 7)
ಹಿಮಾಚಲ ಪ್ರದೇಶದ ಸ್ಪಿತಿಯು 'ಲಿಟಲ್ ಟಿಬೆಟ್' ಎಂದೇ ಪ್ರಸಿದ್ಧವಾಗಿದೆ. ಇದು ನಿಜಕ್ಕೂ ಭೂಮಿಯ ಮೇಲಿನ ಸ್ವರ್ಗ. ಸ್ಪಿತಿ ಕಣಿವೆಯು ಶಾಂತಿ ಮತ್ತು ಆಧ್ಯಾತ್ಮಿಕತೆಯಿಂದ ಪ್ರತಿಧ್ವನಿಸುವ ಅದ್ಭುತಲೋಕವಾಗಿದೆ. ಇದು ಹಲವಾರು ಬೌದ್ಧ ಮಠಗಳು ಮತ್ತು ನೈಸರ್ಗಿಕ ಭೂದೃಶ್ಯಗಳಿಗೆ ಸಾಕ್ಷಿಯಾದ ಸ್ಥಳ. ಇಲ್ಲಿನ ಕಣಿವೆಯ ಹಿಮದಿಂದ ಆವೃತವಾದ ಪರ್ವತಗಳಿಂದ ರಚಿಸಲ್ಪಟ್ಟಿದೆ, ಪ್ಯಾರಾಗ್ಲೈಡಿಂಗ್, ಕ್ಯಾಂಪಿಂಗ್ ಮತ್ತು ಹೈಕಿಂಗ್‌ನಂತಹ ಸಾಹಸ ಕ್ರೀಡೆಗಳನ್ನು ಆನಂದಿಸುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ.(HT photo )
(3 / 7)
ಶಿಮ್ಲಾ-ಕಾಜಾ ಹೆದ್ದಾರಿಯಲ್ಲಿ ಕಿನ್ನೌರ್ ಜಿಲ್ಲೆಯ ಕಲ್ಪಾ ನದಿ ತೀರದ ಪಟ್ಟಣ ಕೂಡಾ ಪ್ರವಾಸಿಗರ ನೆಚ್ಚಿನ ತಾಣ. ಇದನ್ನು ಆಗಾಗ್ಗೆ ಆಶ್ಚರ್ಯಕರ ಸ್ಥಳ ಎಂದು ಕರೆಯಲಾಗುತ್ತದೆ. ಸಟ್ಲೆಜ್ ನದಿಯ ಪಕ್ಕದಲ್ಲಿ ನೆಲೆಗೊಂಡಿರುವ ಕಲ್ಪಾದಲ್ಲಿ ಅನೇಕ ಸುಂದರವಾದ ಸೇಬಿನ ತೋಟಗಳಿವೆ. ಇಲ್ಲಿನ ಕೆಲವು ಬೌದ್ಧ ಮಠಗಳು ಪ್ರವಾಸಿಗರ ಜನಪ್ರಿಯ ತಾಣಗಳಾಗಿವೆ.(HT photo)
(4 / 7)
ರೋಹ್ಟಾಂಗ್ ಪಾಸ್ ತನ್ನ ಭವ್ಯವಾದ ನೈಸರ್ಗಿಕ ವೈಭವದಿಂದಾಗಿ ಜನಪ್ರಿಯವಾಗಿದೆ. ರೋಹ್ಟಾಂಗ್ ಪಾಸ್ ಅನ್ನು ವಾಹನದ ಮೂಲಕ ಮಾತ್ರ ಪ್ರವೇಶಿಸಬಹುದು. ಇದು ಮನಾಲಿಯಿಂದ ಕೇವಲ 51 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಮೌಂಟೇನ್ ರೈಡಿಂಗ್ ಮಾಡಬಹುದು. ಭಾರತದಲ್ಲಿ ಚಳಿಗಾಲವನ್ನು ಅನುಭವಿಸಲು ಇದು ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದು.(Unsplash)
(5 / 7)
ಬಾಸ್ಪಾ ಕಣಿವೆ ಅಥವಾ ಸಾಂಗ್ಲಾ ಕಣಿವೆ ಎಂದೂ ಕರೆಯಲ್ಪಡುವ ಸಾಂಗ್ಲಾದ ಸುಂದರವಾದ ಸ್ಥಳವು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿದೆ. ಇದು ಮರಗಳ ಸಮೃದ್ಧ ಕಾಡು. ಭವ್ಯವಾದ ಹಿಮಾಲಯ ಪರ್ವತಗಳು, ಸೇಬು ಮರಗಳನ್ನೊಳಗೊಂಡ ತೋಟಗಳು ಮತ್ತು ಸೊಗಸಾಗಿ ನಿರ್ಮಿಸಲಾದ ತಗ್ಗು ಮನೆಗಳಿಂದ ಈ ಪ್ರದೇಶ ಆವೃತವಾಗಿದೆ.(Unsplash)
(6 / 7)
ಮಶೋಬ್ರಾವು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿರುವ ಆಕರ್ಷಕವಾದ ಬೆಟ್ಟ. ಆಕರ್ಷಕ ಹಣ್ಣಿನ ತೋಟಗಳು ಮತ್ತು ಸೊಂಪಾದ ಓಕ್ ಕಾಡುಗಳಿಂದ ತುಂಬಿದೆ. ಪ್ರಕೃತಿಯ ಮಡಿಲಲ್ಲಿ ಶಾಂತ ಸಮಯವನ್ನು ಕಳೆಯಲು ಬಯಸುವವರಿಗೆ ಇದು ಅತ್ಯಂತ ಸೂಕ್ತ ಹಾಗೂ ಸುಂದರ ಸ್ಥಳ. (SHUTTERSTOCK)
ಇತರ ಗ್ಯಾಲರಿಗಳು