Ecuador earthquake: ಈಕ್ವೆಡಾರ್‌ನಲ್ಲಿ 6.8 ತೀವ್ರತೆಯ ಭೂಕಂಪ, ಕನಿಷ್ಠ 14 ಸಾವು | ಭೂಕಂಪದ ಭೀಕರ ಚಿತ್ರಗಳು
ಈಕ್ವೆಡಾರ್‌ನ ಎರಡನೇ ಅತಿದೊಡ್ಡ ನಗರವಾದ ಗುವಾಕ್ವಿಲ್‌ನ ದಕ್ಷಿಣಕ್ಕೆ ಸುಮಾರು 50 ಮೈಲಿ (80 ಕಿಲೋಮೀಟರ್) ದೂರದಲ್ಲಿ ಪೆಸಿಫಿಕ್ ಕರಾವಳಿ ಕೇಂದ್ರಬಿಂದುವಿನಲ್ಲಿ ಸುಮಾರು 6.8 ತೀವ್ರತೆಯ ಭೂಕಂಪ ಸಂಭವಿಸಿದೆ.
(1 / 8)
ದಕ್ಷಿಣ ಈಕ್ವೆಡಾರ್ ಮತ್ತು ಉತ್ತರ ಪೆರುವಿನಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಬಲಿಪಶುಗಳಲ್ಲಿ ಒಬ್ಬರು ಪೆರುವಿನಲ್ಲಿ, ಇತರ 14 ಜನರು ಈಕ್ವೆಡಾರ್‌ನಲ್ಲಿ ಮೃತಪಟ್ಟಿದ್ದಾರೆ.(AP)
(2 / 8)
ಮಾರ್ಚ್ 18, ಶನಿವಾರದಂದು ಈಕ್ವೆಡಾರ್‌ನ ಮಚಲಾದಲ್ಲಿ ಭೂಕಂಪ ಸಂಭವಿಸಿದ ಬಳಿಕ ಕುಸಿದ ಮನೆಯ ಅವಶೇಷಗಳ ನಡುವೆ ವ್ಯಕ್ತಿಯೊಬ್ಬರು ವಸ್ತುಗಳನ್ನು ಹುಡುಕುತ್ತಿರುವುದು.(AP)
(3 / 8)
"ಭೂಕಂಪವು ನಿಸ್ಸಂದೇಹವಾಗಿ ಜನರಿಗೆ ಭಯ ಹುಟ್ಟಿಸಿದೆ" ಎಂದು ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ತಿಳಿಸಿದ್ದಾರೆ.(REUTERS)
(4 / 8)
12 ಬಲಿಪಶುಗಳು ಕರಾವಳಿ ರಾಜ್ಯವಾದ ಎಲ್ ಒರೊದಲ್ಲಿ ಮತ್ತು ಇಬ್ಬರು ಹೈಲ್ಯಾಂಡ್ಸ್ ರಾಜ್ಯವಾದ ಅಜುವಾಯ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ. (REUTERS)
(5 / 8)
ಪೆರುವಿನಲ್ಲಿ ಭೂಕಂಪವು ಈಕ್ವೆಡಾರ್‌ನ ಉತ್ತರದ ಗಡಿಯಿಂದ ಮಧ್ಯ ಪೆಸಿಫಿಕ್ ಕರಾವಳಿಯವರೆಗೆ ಸಂಭವಿಸಿದೆ. (REUTERS)
(6 / 8)
ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಜನರು ಮನೆಗಳಿಂದ ಹೊರಬಂದು ಹತ್ತಿರದ ಬೀದಿಗಳಲ್ಲಿ ಜಮಾಯಿಸಿದ್ದರು. ಈ ಕುರಿತ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. (REUTERS)
(7 / 8)
ಈಕ್ವೆಡಾರ್‌ನ ಪ್ರತಿಕೂಲ ಘಟನೆಗಳ ಮೇಲ್ವಿಚಾರಣಾ ನಿರ್ದೇಶನಾಲಯದ ವರದಿಯು ಸುನಾಮಿ ಅಪಾಯವನ್ನು ತಳ್ಳಿಹಾಕಿದೆ. (REUTERS)
(8 / 8)
ಈಕ್ವೆಡಾರ್‌ನಲ್ಲಿ ಆಗಾಗ ಭೂಕಂಪ ಸಂಭವಿಸುತ್ತಿರುತ್ತದೆ. 2016 ರಲ್ಲಿ ಪೆಸಿಫಿಕ್ ಕರಾವಳಿಯಲ್ಲಿ ಉತ್ತರಕ್ಕೆ ಕೇಂದ್ರೀಕೃತವಾದ ಭೂಕಂಪವು 600 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.(REUTERS)
ಇತರ ಗ್ಯಾಲರಿಗಳು