Yoga for Heart: ಹೃದಯದ ಆರೋಗ್ಯ ಕಾಪಾಡಲು ನಿಮ್ಮ ಜೀವನಕ್ರಮ ಬದಲಿಸಿಕೊಳ್ಳಿ; ನಿತ್ಯವೂ ಈ 7 ಯೋಗಾಸನ ಮಾಡಿ-7 yogas that can keep our heart healthy photo gallery health tips world heart day smk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yoga For Heart: ಹೃದಯದ ಆರೋಗ್ಯ ಕಾಪಾಡಲು ನಿಮ್ಮ ಜೀವನಕ್ರಮ ಬದಲಿಸಿಕೊಳ್ಳಿ; ನಿತ್ಯವೂ ಈ 7 ಯೋಗಾಸನ ಮಾಡಿ

Yoga for Heart: ಹೃದಯದ ಆರೋಗ್ಯ ಕಾಪಾಡಲು ನಿಮ್ಮ ಜೀವನಕ್ರಮ ಬದಲಿಸಿಕೊಳ್ಳಿ; ನಿತ್ಯವೂ ಈ 7 ಯೋಗಾಸನ ಮಾಡಿ

  • ಹೃದಯದ ಆರೋಗ್ಯ: ನಿಮ್ಮ ಹೃದಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದರೆ ನೀವು ಯೋಗ, ವ್ಯಾಯಾಮಗಳನ್ನು ಮಾಡಬೇಕು. ಈ ಏಳು ಆಸನ ಮಾಡುವುದರಿಂದ ನಿಮ್ಮ ಹೃದಯದ ಆರೋಗ್ಯ ಹೆಚ್ಚುತ್ತದೆ. ಆ 7 ಆಸನಗಳು ಯಾವವು ಎಂಬುದನ್ನು ತಿಳಿಯಿರಿ. 

ಸೇತುಬಂಧಾಸನ: ಹೃದಯದ ಆರೋಗ್ಯಕ್ಕಾಗಿ ಈ ಯೋಗಾಸನ ಮಾಡಿ. ನಿಮ್ಮ ಎದೆ, ಭುಜಗಳು ಮತ್ತು ಬೆನ್ನುಮೂಳೆಯ ಆರೋಗ್ಯವನ್ನು ಕಾಪಾಡಲು ಇದು ಸಹಕಾರಿಯಾಗಿದೆ. ನೇರವಾಗಿ ಮಲಗಿ ನಂತರ ಕಾಲುಗಳ ಸಹಾಯದಿಂದ ನಿಮ್ಮ ಬೆನ್ನನ್ನು ನಿಧಾನವಾಗಿ ಮೇಲಕ್ಕೆತ್ತಿ ಈ ಆಸನ ಮಾಡಿ. 
icon

(1 / 8)

ಭುಜಂಗಾಸನ: ಈ ಆಸನ ನೋಡಲು ಹಾವೊಂದು ಹಡೆಬಿಚ್ಚಿದಂತೆ ಕಾಣುತ್ತದೆ. ನಿಮ್ಮ ಎದೆಯ ಸ್ನಾಯುಗಳನ್ನು ಬಲಗೊಳಿಸಲು ಈ ಆಸನವನ್ನು ಮಾಡಬೇಕು. ಹೊಟ್ಟೆ ಅಡಿಭಾಗವಾಗುವಂತೆ ಮಲಗಿ ಎದೆಯವರೆಗಿನ ಭಾಗವನ್ನು ಕೈ ಸಹಾಯದಿಂದ ಹೀಗೆ ಮೇಲೆತ್ತಬೇಕು. 
icon

(2 / 8)

ಅಧೋಮುಖ ಶ್ವಾನಾಸನ: ನಿಮ್ಮ ಕೈಗಳು, ಕಾಲುಗಳು ಮತ್ತು ಬೆನ್ನುಮೂಳೆಯ ಸೇರಿದಂತೆ ನಿಮ್ಮ ಸಂಪೂರ್ಣ ದೇಹವನ್ನು ನೀವು ಈ ರೀತಿ ಮಾಡಬೇಕು. ಹೃದಯದ ಆರೋಗ್ಯಕ್ಕೆ ಅಗತ್ಯವಾದ ರಕ್ತಪರಿಚಲನೆಗೆ ಇದು ಸಹಾಯ ಮಾಡುತ್ತದೆ. 
icon

(3 / 8)

ವೃಕ್ಷಾಸನ: ನಿಮ್ಮ ಹೃದಯ ಮತ್ತು ರಕ್ತ ಪರಿಚಲನೆಗೆ ಆಮ್ಲಜನಕದ ಹರಿವನ್ನು ಸುಧಾರಿಸಲು ಈ ಆಸನ ಸಹಾಯ ಮಾಡುತ್ತದೆ. ಈ ಆಸನ ಮಾಡುವಾಗ ನೀವು ಎರಡೂ ಕಾಲುಗಳನ್ನು ಬದಲಿಸಬೇಕು. 
icon

(4 / 8)

ತ್ರಿಕೋನಾಸನ: ಸೈಡ್ ಸ್ಟ್ರೆಚ್ ಎಂದೂ ಸಹ ಇದನ್ನು ಕರೆಯುತ್ತಾರೆ. ನಿಮ್ಮ ಕಾಲುಗಳು, ಸೊಂಟ ಮತ್ತು ಎದೆಯ ಭಾಗದ ಆರೋಗ್ಯಕ್ಕೆ ಇದು ಸಹಾಯ ಮಾಡುತ್ತದೆ. ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ. ಉಸಿರಾಟದ ಸಮಸ್ಯೆ ಆಗುವುದಿಲ್ಲ. 
icon

(5 / 8)

ಉತ್ಕಟಾಸನ: ನಿಮ್ಮ ಕಾಲುಗಳು ಮತ್ತು ಕೈಗಳ ಶಕ್ತಿ ಹೆಚ್ಚುವಂತೆ ಈ ಆಸನವು ಮಾಡುತ್ತದೆ. ಈ ರೀತಿ ಮಾಡುವುದರಿಂದ ದೇಹಕ್ಕೆ ಸರಿಯಾಗಿ ರಕ್ತಪರಿಚಲನೆ ಆಗುತ್ತದೆ. 
icon

(6 / 8)

ಮಾರ್ಜಾಲಾಸನ: ನಿಮ್ಮ ಬೆನ್ನುಮೂಳೆ ಮತ್ತು ಎದೆಯ ಭಾಗವನ್ನು ಹಿಗ್ಗಿಸಲು ಈ ಆಸನವನ್ನು ಮಾಡಿ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ಹೃದಯದ ಆರೋಗ್ಯಕ್ಕೆ ನೀವು ಈ 7 ಆಸನಗಳನ್ನು ಮಾಡಿ, ಪ್ರಯೋಜನ ಪಡೆದುಕೊಳ್ಳಿ. 
icon

(7 / 8)

 ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ         
icon

(8 / 8)

ಇತರ ಗ್ಯಾಲರಿಗಳು