ಟಿಬೆಟ್‌ ಸುತ್ತಮುತ್ತ ಬೆಳ್ಳಂಬೆಳಗ್ಗೆ ನಡುಗಿದ ಭೂಮಿ, 7.1 ತೀವ್ರತೆಯ ಭೂಕಂಪದ ಬಳಿಕ ವಿವಿಧೆಡೆ ಕಂಡುಬಂದ ದೃಶ್ಯಗಳಿವು- ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿಬೆಟ್‌ ಸುತ್ತಮುತ್ತ ಬೆಳ್ಳಂಬೆಳಗ್ಗೆ ನಡುಗಿದ ಭೂಮಿ, 7.1 ತೀವ್ರತೆಯ ಭೂಕಂಪದ ಬಳಿಕ ವಿವಿಧೆಡೆ ಕಂಡುಬಂದ ದೃಶ್ಯಗಳಿವು- ಚಿತ್ರನೋಟ

ಟಿಬೆಟ್‌ ಸುತ್ತಮುತ್ತ ಬೆಳ್ಳಂಬೆಳಗ್ಗೆ ನಡುಗಿದ ಭೂಮಿ, 7.1 ತೀವ್ರತೆಯ ಭೂಕಂಪದ ಬಳಿಕ ವಿವಿಧೆಡೆ ಕಂಡುಬಂದ ದೃಶ್ಯಗಳಿವು- ಚಿತ್ರನೋಟ

Tibet Earthquake 2025: ಟಿಬೆಟ್‌ನಲ್ಲಿ ಮಂಗಳವಾರ (ಜನವರಿ 7) ಬೆಳಗ್ಗೆ ಸಂಭವಿಸಿದ ಭೂಕಂಪದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದ್ದರೆ, ಹಲವು ಭಾಗಗಳಲ್ಲಿ ಅನಾಹುತ ಆಗಿರುವುದು ಕಂಡು ಬಂದಿದೆ. ಭೂಕಂಪದ ತೀವ್ರತೆ ತೋರುವ ಚಿತ್ರ ನೋಟ ಇಲ್ಲಿದೆ.

ಅಮೆರಿಕದ ಜಿಯಾಲಾಜಿಕಲ್ ಸರ್ವೇ ಮಾಹಿತಿ ಪ್ರಕಾರ, ನೇಪಾಳ - ಟಿಬೆಟ್ ಗಡಿಭಾಗದಲ್ಲಿ ಲೋಬುಚೆ ಎಂಬ ಪ್ರದೇಶದಿಂದ ಈಶಾನ್ಯಕ್ಕೆ 93 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು. ಟಿಬೆಟ್ ಸುತ್ತ ಮುತ್ತ ಜನವರಿ 7 ರಂದು ಬೆಳಗ್ಗೆ 6.35ಕ್ಕೆ ಪ್ರಬಲ ಭೂಕಂಪ ಸಂಭವಿಸಿತ್ತು. 
icon

(1 / 9)

(REUTERS)

 ಭೂಕಂಪ ಸಂಭವಿಸಿದ ಬಳಿಕ ಟಿಬೆಟ್‌ನ ಶಿಗಟ್ಸೆ ನಗರದಲ್ಲಿ ಕಟ್ಟಡಗಳ ಅವಶೇಷಗಳೆಡೆಯಲ್ಲಿ ಬದುಕಿ ಉಳಿದವರ ರಕ್ಷಣಾ ಕಾರ್ಯ ನಡೆಯಿತು. ವಿಡಿಯೋದಿಂದ ತೆಗೆದ ಚಿತ್ರ ಇದು.
icon

(2 / 9)

(via REUTERS)

ಭೂಕಂಪದ ಬಳಿಕ ಶಿಗಟ್ಸೆ ನಗರದಲ್ಲಿ ಹಾನಿಗೀಡಾದ ಮನೆಗಳ ದೃಶ್ಯ ಹೀಗಿತ್ತು. ಅನೇಕರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
icon

(3 / 9)

ಟಿಬೆಟ್‌ನ ಭೂಕಂಪ ಪೀಡಿತ ಪ್ರದೇಶ ಶಿಗಟ್ಸೆ ನಗರದಲ್ಲಿ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂದರ್ಭದ ದೃಶ್ಯ.
icon

(4 / 9)

ಭೂಕಂಪದಿಂದಾಗಿ ಹಲವು ಭಾಗಗಳಲ್ಲಿ ಕಟ್ಟಡಗಳು ಕುಸಿದು ಬಿದ್ದು ಹಲವರು ಜೀವ ಕಳೆದುಕೊಂಡಿದ್ದಾರೆ.
icon

(5 / 9)

ಏಕಾಏಕಿ ಭೂಮಿ ಕಂಪಿಸಿ ಕೆಲವು ಕ್ಷಣದಲ್ಲಿಯೇ ಹಲವು ಕಟ್ಟಡಗಳು ಉರುಳಿ ಬಿದ್ದವು. ಕೆಲವರು ತಪ್ಪಿಸಿಕೊಂಡು ಹೊರಗೆ ಓಡಿದ್ದರು. ಅನೇಕರು ಸಿಲುಕಿಕೊಂಡು ಪ್ರಾಣ ಬಿಟ್ಟಿದ್ದಾರೆ.
icon

(6 / 9)

ಕಟ್ಟಡಗಳು ಕುಸಿದಿದ್ದರಿಂದ ಸಮೀಪದಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳು ಜಖಂಗೊಂಡಿವೆ. 
icon

(7 / 9)

ಭೂಕಂಪದಿಂದ ಬೆಟ್ಟಗಳೂ ಅಲ್ಲಲ್ಲಿ ಕುಸಿದು ಹಲವು ಮಾರ್ಗಗಳಲ್ಲಿ ಕಲ್ಲುಗಳು ಬಿದ್ದಿರುವುದು ಸಾಮಾನ್ಯವಾಗಿದೆ.
icon

(8 / 9)

ಟಿಬೆಟ್ ಪ್ರವಾಸಿಗರ ನೆಚ್ಚಿನ ತಾಣವಾದ ಕಾರಣ,. ಭೂಕಂಪದ ಸಂದರ್ಭದಲ್ಲಿ ಅಲ್ಲಿ ಹೆಚ್ಚಿನ ಸಂಖ್ಯೆ ಪ್ರವಾಸಿಗರೂ ಇದ್ದರು. ಭೂಕಂಪ ಅನುಭವಕ್ಕೆ ಬರುತ್ತಿದ್ದಂತೆ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದ ಪ್ರವಾಸಿಗರು ಅನೇಕರು ಹೊರಗೆ ಬಂದಿದ್ದಾರೆ. ಬದುಕಿ ಉಳಿದವರು ಬಳಿಕ ಅವಶೇಷಗಳೆಡೆ ಉಳಿದವರನ್ನು ರಕ್ಷಿಸುವುದರ ಕಡೆಗೆ ಗಮನಹರಿಸಿದರು. ಹಾಗೂ ತಾವು ಸುರಕ್ಷಿತವಾಗಿರಲು ಸೂಕ್ತ ಪ್ರದೇಶ ಹುಡುಕಿ ಸಾಗಿದರು.
icon

(9 / 9)

ಇತರ ಗ್ಯಾಲರಿಗಳು