ಮತ್ತೆಂದಿಗೂ ಪಾಕಿಸ್ತಾನಕ್ಕೆ ಹೋಗಲ್ಲ ಎಂದ ನ್ಯೂಜಿಲ್ಯಾಂಡ್ ಕ್ರಿಕೆಟಿಗ; ಏರ್‌ಪೋರ್ಟ್ ಬಂದ್ ಆಗಿದ್ದಕ್ಕೆ ಗಳಗಳನೆ ಅತ್ತ ಇಂಗ್ಲೆಂಡ್ ಕ್ರಿಕೆಟಿಗ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮತ್ತೆಂದಿಗೂ ಪಾಕಿಸ್ತಾನಕ್ಕೆ ಹೋಗಲ್ಲ ಎಂದ ನ್ಯೂಜಿಲ್ಯಾಂಡ್ ಕ್ರಿಕೆಟಿಗ; ಏರ್‌ಪೋರ್ಟ್ ಬಂದ್ ಆಗಿದ್ದಕ್ಕೆ ಗಳಗಳನೆ ಅತ್ತ ಇಂಗ್ಲೆಂಡ್ ಕ್ರಿಕೆಟಿಗ

ಮತ್ತೆಂದಿಗೂ ಪಾಕಿಸ್ತಾನಕ್ಕೆ ಹೋಗಲ್ಲ ಎಂದ ನ್ಯೂಜಿಲ್ಯಾಂಡ್ ಕ್ರಿಕೆಟಿಗ; ಏರ್‌ಪೋರ್ಟ್ ಬಂದ್ ಆಗಿದ್ದಕ್ಕೆ ಗಳಗಳನೆ ಅತ್ತ ಇಂಗ್ಲೆಂಡ್ ಕ್ರಿಕೆಟಿಗ

ಮತ್ತೆಂದೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದ ನ್ಯೂಜಿಲೆಂಡ್‌ ಕ್ರಿಕೆಟಿಗ ಡ್ಯಾರಿಲ್ ಮಿಚೆಲ್. ಇನ್ನೊಂದೆಡೆ ವಿಮಾನ ನಿಲ್ದಾಣ ಮುಚ್ಚಿದ ನಂತರ ಮಗುವಿನಂತೆ ಅತ್ತ ಟಾಮ್ ಕರನ್. ವಿದೇಶಿ ಕ್ರಿಕೆಟ್ ಆಟಗಾರರ ದುಸ್ಥಿತಿ ವಿವರಿಸಿದ ಬಾಂಗ್ಲಾದೇಶದ ಕ್ರಿಕೆಟಿಗ ರಿಷದ್.

ನ್ಯೂಜಿಲೆಂಡ್ ಆಲ್‌ರೌಂಡರ್ ಡ್ಯಾರಿಲ್ ಮಿಚೆಲ್ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ಎಂದಿಗೂ ಹಿಂತಿರುಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇನ್ನೊಂದೆಡೆ ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಟಾಮ್ ಕರನ್, ವಿಮಾನ ನಿಲ್ದಾಣ ಬಂದ್ ಮಾಡಿದ ಬಗ್ಗೆ ತಿಳಿದಾಗ ಮಗುವಿನಂತೆ ಗಳಗಳನೆ ಅಳುತ್ತಿದ್ದರು ಎಂದು ಬಾಂಗ್ಲಾದೇಶದ ಲೆಗ್-ಸ್ಪಿನ್ನರ್ ರಿಷದ್ ಹೂಸೈನ್ ಬಹಿರಂಗಪಡಿಸಿದರು. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಭಾಗವಹಿಸಿದ ವಿದೇಶಿ ಆಟಗಾರರ ದುಃಸ್ಥಿತಿಯಿದು.
icon

(1 / 8)

(AFP)

ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರನ್ನು ಕೊಂದ ಭೀಕರ ಭಯೋತ್ಪಾದಕ ದಾಳಿಗೆ ಭಾರತ ತಕ್ಕ ತಿರುಗೇಟು ನೀಡುತ್ತಿದೆ. ಮೇ 7 ರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಉದ್ವಿಗ್ನತೆಯಿಂದಾಗಿ ಪಿಎಸ್‌ಎಲ್ ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು.
icon

(2 / 8)

ಆರಂಭದಲ್ಲಿ, ಪಿಸಿಬಿ ಲೀಗ್‌ನ ಉಳಿದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲು ಬಯಸಿತ್ತು. ಆದರೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ಪಂದ್ಯಾವಳಿಯನ್ನು ರದ್ದುಗೊಳಿಸಲಾಯಿತು. ಇದೇ ಕಾರಣಕ್ಕಾಗಿ ಬಿಸಿಸಿಐ ಐಪಿಎಲ್ ಅನ್ನು ಒಂದು ವಾರ ಸ್ಥಗಿತಗೊಳಿಸಿದ ಕೆಲವೇ ಗಂಟೆಗಳ ನಂತರ ಅಧಿಕೃತ ಘೋಷಣೆ ಹೊರಬಿತ್ತು.
icon

(3 / 8)

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಭಾಗವಹಿಸಿದ ವಿದೇಶಿ ಆಟಗಾರರನ್ನು ಯುಎಇಗೆ ಕರೆತರಲಾಯಿತು. ಅಲ್ಲಿಂದ ಅವರ ದೇಶಗಳಿಗೆ ಸಂಪರ್ಕಿಸುವ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಲಾಯಿತು. ಲಾಹೋರ್ ಖಲಂದರ್ ತಂಡದ ಆಟಗಾರ, ಬಾಂಗ್ಲಾದೇಶ ಮೂಲದ ರಿಷದ್, ಶನಿವಾರ ತಮ್ಮ ಚಾರ್ಟರ್ ವಿಮಾನ ಹಾರಾಟ ನಡೆಸಿದ ವಿಮಾನ ನಿಲ್ದಾಣವು 20 ನಿಮಿಷಗಳ ನಂತರ ಕ್ಷಿಪಣಿ ದಾಳಿಗೆ ಒಳಗಾಯಿತು ಎಂದು ತಿಳಿದು ಭಯಪಟ್ಟಿದ್ದಾಗಿ ತಿಳಿಸಿದರು.
icon

(4 / 8)

ಆಟವಾಡಲು ಹೋದಾಗಲೆಲ್ಲಾ, ಪರಿಸ್ಥಿತಿ ಚೆನ್ನಾಗಿದೆಯೋ ಇಲ್ಲವೋ ಎಂದು ತನ್ನ ಕುಟುಂಬ ಚಿಂತಿಸುತ್ತದೆ. ಈಗ ಅವರು ಪಾಕಿಸ್ತಾನದ ಬಗ್ಗೆ ಸುದ್ದಿ ಕೇಳಿದಾಗ, ಬಾಂಬ್ ಸ್ಫೋಟಗಳು ಮತ್ತು ಕ್ಷಿಪಣಿ ದಾಳಿಗಳಿಂದ ಸ್ವಾಭಾವಿಕವಾಗಿಯೇ ಉದ್ವಿಗ್ನರಾಗಿದ್ದರು. ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ತನ್ನ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದಾಗಿ ರಿಷದ್ ತಿಳಿಸಿದರು.
icon

(5 / 8)

ಲಾಹೋರ್ ಖಲಂದರ್ಸ್‌ ತಂಡದ ಸಹ ಆಟಗಾರ ಡ್ಯಾರಿಲ್ ಮಿಚೆಲ್ ಅವರು ಮತ್ತೆಂದೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಗಿ ರಿಷದ್ ಹೇಳಿದರು. ಸ್ಯಾಮ್ ಬಿಲ್ಲಿಂಗ್ಸ್, ಡ್ಯಾರಿಲ್ ಮಿಚೆಲ್, ಕುಶಾಲ್ ಪೆರೆರಾ, ಡೇವಿಡ್ ವೈಸ್, ಟಾಮ್ ಕರ್ರನ್ ಮುಂತಾದ ವಿದೇಶಿ ಆಟಗಾರರು ಎಲ್ಲರೂ ತುಂಬಾ ಭಯಭೀತರಾಗಿದ್ದರು. ದುಬೈಗೆ ಬಂದಿಳಿದ ಮಿಚೆಲ್, ಈ ರೀತಿಯ ಸನ್ನಿವೇಶದಲ್ಲಿ ಮತ್ತೆ ಎಂದಿಗೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದರು. ಒಟ್ಟಾರೆಯಾಗಿ, ಅವರೆಲ್ಲರೂ ಭಯಭೀತರಾಗಿದ್ದರು ಎಂದು ರಿಷದ್ ಹೇಳಿದರು.
icon

(6 / 8)

ಪಿಎಸ್‌ಎಲ್‌ನ ಉಳಿದ ಪಂದ್ಯಗಳನ್ನು ಕರಾಚಿಯಲ್ಲಿ ನಡೆಸಲು ಪಿಸಿಬಿ ಮುಖ್ಯಸ್ಥರು ಪ್ರಯತ್ನಿಸಿದ್ದರು. ಆದರೆ ಸರ್ಕಾರದ ಹಸ್ತಕ್ಷೇಪದ ನಂತರ ಅದು ಸ್ಥಗಿತಗೊಂಡಿತು ಎಂದು ರಿಷದ್ ಬಹಿರಂಗಪಡಿಸಿದರು. ವಿದೇಶಿ ಕ್ರಿಕೆಟಿಗರ ಸುರಕ್ಷತೆ ದೃಷ್ಟಿಯಿಂದ ಎಲ್ಲರನ್ನೂ ದುಬೈಗೆ ಸ್ಥಳಾಂತರಿಸಲಾಯಿತು ಎಂದು ರಿಷದ್ ತಿಳಿಸಿದರು.
icon

(7 / 8)

ಪಿಸಿಬಿ ಅಧ್ಯಕ್ಷರು ಉಳಿದ ಪಂದ್ಯಗಳನ್ನು ಕರಾಚಿಯಲ್ಲಿ ನಡೆಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಆ ಸಮಯದಲ್ಲಿ ಅವರು ಎರಡು ಡ್ರೋನ್ ದಾಳಿಗಳು ನಡೆದಿವೆ ಎಂಬುದನ್ನು ಮರೆಮಾಡಲು ಪ್ರಯತ್ನಿಸಿದರು. ಅದರ ಹಿಂದಿನ ದಿನವೇ ಡ್ರೋನ್ ದಾಳಿಯ ಬಗ್ಗೆ ತಿಳಿಯಿತು. ನಂತರ ಎಲ್ಲರೂ ದುಬೈಗೆ ಸ್ಥಳಾಂತರಗೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ರಿಷದ್ ವಿವರಿಸಿದರು.
icon

(8 / 8)

ಇತರ ಗ್ಯಾಲರಿಗಳು