ಮಹಿಳೆಯರು ಹೆಚ್ಚಾಗಿ ಬಳಸುವ ಸಾಬೂನು, ಶಾಂಪೂ, ಬಾಡಿಲೋಷನ್‍ಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕ ಪತ್ತೆ: ಅಧ್ಯಯನ
ಶಾಂಪೂ, ಸಾಬೂನು, ಕಂಡೀಷನರ್, ಬಾಡಿಲೋಷನ್ ಅಂತೆಲ್ಲಾ ಈ ಉತ್ಪನ್ನಗಳನ್ನು ಮಹಿಳೆಯರು ಹೆಚ್ಚಾಗಿ ಬಳಸುತ್ತಾರೆ. ಆದರೆ, ಈ ಉತ್ಪನ್ನಗಳು ಫಾರ್ಮಾಲ್ಡಿಹೈಡ್ ಎಂಬ ಕ್ಯಾನ್ಸರ್ ಕಾರಕವನ್ನು ಹೊಂದಿರುತ್ತವೆ ಎಂದು ಇತ್ತೀಚಿನ ಅಧ್ಯಯನವೊಂದು ಕಂಡುಹಿಡಿದಿದೆ.
(1 / 8)
ಶಾಂಪೂ, ಸಾಬೂನು, ಕಂಡೀಷನರ್, ಬಾಡಿಲೋಷನ್ ಅಂತೆಲ್ಲಾ ಈ ಉತ್ಪನ್ನಗಳನ್ನು ಮಹಿಳೆಯರು ಹೆಚ್ಚಾಗಿ ಬಳಸುತ್ತಾರೆ. ಆದರೆ, ಈ ಉತ್ಪನ್ನಗಳು ಫಾರ್ಮಾಲ್ಡಿಹೈಡ್ ಎಂಬ ಕ್ಯಾನ್ಸರ್ ಕಾರಕವನ್ನು ಹೊಂದಿರುತ್ತವೆ ಎಂದು ಇತ್ತೀಚಿನ ಅಧ್ಯಯನವೊಂದು ಕಂಡುಹಿಡಿದಿದೆ. ಈ ರಾಸಾಯನಿಕವು ಕ್ಯಾನ್ಸರ್‌ಗೆ ಸಂಬಂಧಿಸಿದೆ. ಇದನ್ನು ಸಾಮಾನ್ಯವಾಗಿ ಶಾಂಪೂ, ಲೋಷನ್, ಬಾಡಿ ಸೋಪ್ ಇತ್ಯಾದಿ ಉತ್ಪನ್ನಗಳಿಗೆ ಸೇರಿಸಲಾಗುತ್ತದೆ.
(All image credit: Canva)(2 / 8)
ಎನ್ವಿರಾನ್ಮೆಂಟಲ್ ಸೈನ್ಸ್ & ಟಾಕ್ಸಿಕಾಲಜಿ ಲೆಟರ್ಸ್‍ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು, ಹೆಚ್ಚಿನ ಜನರು ಫಾರ್ಮಾಲ್ಡಿಹೈಡ್ ಬಿಡುಗಡೆ ಮಾಡುವ ರಾಸಾಯನಿಕಗಳನ್ನು ಹೊಂದಿರುವ ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಬಳಸುತ್ತಾರೆ ಎಂದು ಬಹಿರಂಗಪಡಿಸಿದೆ.
(3 / 8)
ಈ ಸಂಶೋಧನೆಯು ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳು ಕೇವಲ ಹೇರ್ ಸ್ಟ್ರೈಟ್‍ನಿಂಗ್ ಮಾತ್ರವಲ್ಲ ಬಹುತೇಕ ಎಲ್ಲಾ ಸೌಂದರ್ಯ ಉತ್ಪನ್ನಗಳಲ್ಲಿ ಇರುತ್ತವೆ ಎಂಬ ಆತಂಕಕಾರಿ ಅಂಶವನ್ನು ತಿಳಿಸುತ್ತದೆ.
(4 / 8)
ಲಾಸ್ ಏಂಜಲೀಸ್‍ನಲ್ಲಿ ಮಹಿಳೆಯರೊಂದಿಗೆ ನಡೆಸಿದ ಅಧ್ಯಯನವು ಅವರು ಬಳಸುವ ವೈಯಕ್ತಿಕ ಆರೈಕೆ ಉತ್ಪನ್ನಗಳ ಬಗ್ಗೆ ಆತಂಕಕಾರಿ ಸಂಶೋಧನೆಗಳನ್ನು ಬಹಿರಂಗಪಡಿಸಿದೆ. ಅವರಲ್ಲಿ ಶೇ. 53 ರಷ್ಟು ಜನರು ಫಾರ್ಮಾಲ್ಡಿಹೈಡ್ ಬಿಡುಗಡೆ ಮಾಡುವ ರಾಸಾಯನಿಕಗಳನ್ನು ಹೊಂದಿರುವ ಕನಿಷ್ಠ ಒಂದು ಉತ್ಪನ್ನವನ್ನು ಬಳಸಿದ್ದಾರೆ ಎಂದು ಫಲಿತಾಂಶಗಳು ತೋರಿಸಿವೆ.
(5 / 8)
ಸಮೀಕ್ಷೆ ನಡೆಸಿದ ಶೇ. 58 ಕೂದಲಿನ ಆರೈಕೆ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಕಂಡುಬಂದಿದೆ. ಇದರ ಜೊತೆಗೆ ವಿವಿಧ ಶಾಂಪೂ, ಲೋಷನ್, ಸಾಬೂನುಗಳು ಮತ್ತು ಕಣ್ಣಿನ ರೆಪ್ಪೆ ಅಂಟು (ಐ ಲ್ಯಾಷ್) ಗಳಲ್ಲಿಯೂ ಕಂಡುಬಂದಿದೆ.
(6 / 8)
ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (ಇಪಿಎ) ಈ ಹಿಂದೆ ಫಾರ್ಮಾಲ್ಡಿಹೈಡ್ ಅನ್ನು ಮಾನವ ಆರೋಗ್ಯಕ್ಕೆ ಹಾನಿಯಾಗುವ ಅಪಾಯವನ್ನು ಹೊಂದಿದೆ ಎಂದು ಗುರುತಿಸಿದೆ. ಹಿಂದಿನ ಸಂಶೋಧನೆಯು, ಕೂದಲನ್ನು ನೇರಗೊಳಿಸುವ (ಹೇರ್ ಸ್ಟ್ರೈಟನಿಂಗ್) ಉತ್ಪನ್ನಗಳಲ್ಲಿ ಅದರ ಉಪಸ್ಥಿತಿಯ ಮೇಲೆ ಕೇಂದ್ರೀಕರಿಸಿದ್ದರೂ, ಶ್ಯಾಂಪೂ ಇತ್ಯಾದಿಗಳಿಂದಲೂ ಪರಿಣಾಮ ಬೀರುತ್ತದೆ ಎಂಬುದನ್ನು ಈ ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ.
(7 / 8)
ಅಧ್ಯಯನದ ಪ್ರಮುಖ ಲೇಖಕ ಡಾ. ರಾಬಿನ್ ಡಾಡ್ಸನ್ ಆರೋಗ್ಯದ ಅಪಾಯಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದರು. ಈ ರಾಸಾಯನಿಕಗಳು ನಾವು ಎಲ್ಲಾ ಸಮಯದಲ್ಲೂ ಬಳಸುವ ಉತ್ಪನ್ನಗಳಲ್ಲಿವೆ. ಫಾರ್ಮಾಲ್ಡಿಹೈಡ್ ಹೊಂದಿರುವ ಉತ್ಪನ್ನಗಳನ್ನು ಗುರುತಿಸುವಲ್ಲಿ ಗ್ರಾಹಕರಿಗೆ ಇರುವ ತೊಂದರೆಯನ್ನು ಅವರು ಗಮನಸೆಳೆದರು.
ಇತರ ಗ್ಯಾಲರಿಗಳು