ಗ್ಲೆನ್ ಮ್ಯಾಕ್ಸ್​ವೆಲ್​ ಕೈಬಿಡಿ, ಈತನಿಗೆ ಅವಕಾಶ ಕೊಡಿ; ಆರ್‌ಸಿಬಿ ಪ್ಲೇಯಿಂಗ್​ XI ಕುರಿತು ಆಕಾಶ್ ಚೋಪ್ರಾ ಮಹತ್ವದ ಸಲಹೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗ್ಲೆನ್ ಮ್ಯಾಕ್ಸ್​ವೆಲ್​ ಕೈಬಿಡಿ, ಈತನಿಗೆ ಅವಕಾಶ ಕೊಡಿ; ಆರ್‌ಸಿಬಿ ಪ್ಲೇಯಿಂಗ್​ Xi ಕುರಿತು ಆಕಾಶ್ ಚೋಪ್ರಾ ಮಹತ್ವದ ಸಲಹೆ

ಗ್ಲೆನ್ ಮ್ಯಾಕ್ಸ್​ವೆಲ್​ ಕೈಬಿಡಿ, ಈತನಿಗೆ ಅವಕಾಶ ಕೊಡಿ; ಆರ್‌ಸಿಬಿ ಪ್ಲೇಯಿಂಗ್​ XI ಕುರಿತು ಆಕಾಶ್ ಚೋಪ್ರಾ ಮಹತ್ವದ ಸಲಹೆ

  • Aakash Chopra : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆಗೆ ಸಂಬಂಧಿಸಿ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್‌ ಆಕಾಶ್‌ ಚೋಪ್ರಾ ಅವರು ಮಹತ್ವದ ಸಲಹೆ ನೀಡಿದ್ದಾರೆ. 

17ನೇ ಆವೃತ್ತಿಯ ಐಪಿಎಲ್​ನಲ್ಲಿ ಕಣಕ್ಕಿಳಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇದೀಗ 5ನೇ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಏಪ್ರಿಲ್ 6ರ ಶನಿವಾರ ಜೈಪುರದ ಸವಾಯಿ ಮಾನ್​ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​​ಸಿಬಿ ಕಾದಾಡಲಿದೆ.
icon

(1 / 9)

ಹ್ಯಾಟ್ರಿಕ್ ಗೆಲುವುಗಳೊಂದಿಗೆ ಅಂಕಪಟ್ಟಿಯ 2ನೇ ಸ್ಥಾನ ಪಡೆದಿರುವ ರಾಜಸ್ಥಾನ್‌ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇದರ ನಡುವೆ ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ನೀಡಬೇಕು ಎಂಬ ಗೊಂದಲದಲ್ಲಿದೆ ಆರ್​​ಸಿಬಿ. ಇದರ ನಡುವೆ ಮಾಜಿ ಕ್ರಿಕೆಟಿಗರೊಬ್ಬರು ಆರ್​ಸಿಬಿಗೆ ಮಹತ್ವದ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ.
icon

(2 / 9)

ಹ್ಯಾಟ್ರಿಕ್ ಗೆಲುವುಗಳೊಂದಿಗೆ ಅಂಕಪಟ್ಟಿಯ 2ನೇ ಸ್ಥಾನ ಪಡೆದಿರುವ ರಾಜಸ್ಥಾನ್‌ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇದರ ನಡುವೆ ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ನೀಡಬೇಕು ಎಂಬ ಗೊಂದಲದಲ್ಲಿದೆ ಆರ್​​ಸಿಬಿ. ಇದರ ನಡುವೆ ಮಾಜಿ ಕ್ರಿಕೆಟಿಗರೊಬ್ಬರು ಆರ್​ಸಿಬಿಗೆ ಮಹತ್ವದ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ.(AFP)

ಬೆಂಗಳೂರು ತಂಡದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆಗೆ ಸಂಬಂಧಿಸಿ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್‌ ಆಕಾಶ್‌ ಚೋಪ್ರಾ ಅವರು ಮಹತ್ವದ ಸಲಹೆ ನೀಡಿದ್ದಾರೆ. ಯಾರನ್ನು ಕೈಬಿಡಬೇಕು, ಯಾರಿಗೆ ಅವಕಾಶ ನೀಡಬೇಕು ಎನ್ನುವುದರ ಕುರಿತು ವಿವರಿಸಿದ್ದಾರೆ.
icon

(3 / 9)

ಬೆಂಗಳೂರು ತಂಡದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆಗೆ ಸಂಬಂಧಿಸಿ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್‌ ಆಕಾಶ್‌ ಚೋಪ್ರಾ ಅವರು ಮಹತ್ವದ ಸಲಹೆ ನೀಡಿದ್ದಾರೆ. ಯಾರನ್ನು ಕೈಬಿಡಬೇಕು, ಯಾರಿಗೆ ಅವಕಾಶ ನೀಡಬೇಕು ಎನ್ನುವುದರ ಕುರಿತು ವಿವರಿಸಿದ್ದಾರೆ.(AFP)

ನಾಲ್ಕು ಪಂದ್ಯಗಳಲ್ಲೂ ನಿರಾಸೆ ಮೂಡಿಸಿದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್​ರನ್ನು ಕೈಬಿಡಬೇಕು. ಅವರ ಜಾಗದಲ್ಲಿ ಬ್ಯಾಟರ್‌ ವಿಲ್‌ ಜ್ಯಾಕ್ಸ್‌ ಅವರನ್ನು ಆಡಿಸುವ ನಿರೀಕ್ಷೆ ಇದೆ. ಆರ್​ಸಿಬಿ ಪರ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
icon

(4 / 9)

ನಾಲ್ಕು ಪಂದ್ಯಗಳಲ್ಲೂ ನಿರಾಸೆ ಮೂಡಿಸಿದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್​ರನ್ನು ಕೈಬಿಡಬೇಕು. ಅವರ ಜಾಗದಲ್ಲಿ ಬ್ಯಾಟರ್‌ ವಿಲ್‌ ಜ್ಯಾಕ್ಸ್‌ ಅವರನ್ನು ಆಡಿಸುವ ನಿರೀಕ್ಷೆ ಇದೆ. ಆರ್​ಸಿಬಿ ಪರ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.(AFP)

ಆದರೂ ಮ್ಯಾಕ್ಸ್​ವೆಲ್ ಒಂದೆರಡು ಪಂದ್ಯಗಳಲ್ಲಿ ಅವಕಾಶ ಪಡೆದರೂ ಅಚ್ಚರಿ ಇಲ್ಲ. ಮೊದಲು ಮ್ಯಾಕ್ಸಿ, ನಂತರ ನಾಯಕ ಫಾಫ್ ಡು ಪ್ಲೆಸಿಸ್ ಸ್ಥಾನಕ ಕೂಡ ಆಪತ್ತು ಇದೆ. ಅವರು ಸಹ ಉತ್ತಮ ಪ್ರದರ್ಶನ ನೀಡುವ ಅಗತ್ಯ ಇದೆ. ವಿಲ್ ಜ್ಯಾಕ್ಸ್ ಆರಂಭಿಕನಾದ ಕಾರಣ ಡುಪ್ಲೆಸಿ, ರನ್ ಗಳಿಸಿ ಲಯಕ್ಕೆ ಮರಳಬೇಕಿದೆ ಎಂದು ಹೇಳಿದ್ದಾರೆ.
icon

(5 / 9)

ಆದರೂ ಮ್ಯಾಕ್ಸ್​ವೆಲ್ ಒಂದೆರಡು ಪಂದ್ಯಗಳಲ್ಲಿ ಅವಕಾಶ ಪಡೆದರೂ ಅಚ್ಚರಿ ಇಲ್ಲ. ಮೊದಲು ಮ್ಯಾಕ್ಸಿ, ನಂತರ ನಾಯಕ ಫಾಫ್ ಡು ಪ್ಲೆಸಿಸ್ ಸ್ಥಾನಕ ಕೂಡ ಆಪತ್ತು ಇದೆ. ಅವರು ಸಹ ಉತ್ತಮ ಪ್ರದರ್ಶನ ನೀಡುವ ಅಗತ್ಯ ಇದೆ. ವಿಲ್ ಜ್ಯಾಕ್ಸ್ ಆರಂಭಿಕನಾದ ಕಾರಣ ಡುಪ್ಲೆಸಿ, ರನ್ ಗಳಿಸಿ ಲಯಕ್ಕೆ ಮರಳಬೇಕಿದೆ ಎಂದು ಹೇಳಿದ್ದಾರೆ.(ANI )

ಪ್ರಸ್ತುತ ಮ್ಯಾಕ್ಸ್‌ವೆಲ್‌ ಸ್ಥಾನದಲ್ಲಿ ಜ್ಯಾಕ್ಸ್​ ಆಡುವ ಸಾಧ್ಯತೆ ದಟ್ಟವಾಗಿದೆ. ಟೂರ್ನಿಗೂ ಮುನ್ನವೇ ಜ್ಯಾಕ್ಸ್​​ ಅವರನ್ನು ಆಡಿಸುವಂತೆ ಸಲಹೆ ನೀಡಿದ್ದೆ. ಟಿ20 ಕ್ರಿಕೆಟ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವಿಲ್​ ಅವರನ್ನು ಆಡುವ 11ರ ಬಳಗಕ್ಕೆ ಸೇರಿಸಬೇಕು ಎಂದು ಹೇಳಿದ್ದೆ. ಆತ ಬ್ಯಾಟರ್​ ಮಾತ್ರವಲ್ಲ ಆಫ್ ಸ್ಪಿನ್ ಬೌಲಿಂಗ್‌ ಕೂಡ ಮಾಡ್ತಾರೆ ಎಂದು ಆಕಾಶ್‌ ಚೋಪ್ರಾ ತಮ್ಮ ಯೂಟ್ಯೂಬ್​ನಲ್ಲಿ ಹೇಳಿದ್ದಾರೆ.
icon

(6 / 9)

ಪ್ರಸ್ತುತ ಮ್ಯಾಕ್ಸ್‌ವೆಲ್‌ ಸ್ಥಾನದಲ್ಲಿ ಜ್ಯಾಕ್ಸ್​ ಆಡುವ ಸಾಧ್ಯತೆ ದಟ್ಟವಾಗಿದೆ. ಟೂರ್ನಿಗೂ ಮುನ್ನವೇ ಜ್ಯಾಕ್ಸ್​​ ಅವರನ್ನು ಆಡಿಸುವಂತೆ ಸಲಹೆ ನೀಡಿದ್ದೆ. ಟಿ20 ಕ್ರಿಕೆಟ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವಿಲ್​ ಅವರನ್ನು ಆಡುವ 11ರ ಬಳಗಕ್ಕೆ ಸೇರಿಸಬೇಕು ಎಂದು ಹೇಳಿದ್ದೆ. ಆತ ಬ್ಯಾಟರ್​ ಮಾತ್ರವಲ್ಲ ಆಫ್ ಸ್ಪಿನ್ ಬೌಲಿಂಗ್‌ ಕೂಡ ಮಾಡ್ತಾರೆ ಎಂದು ಆಕಾಶ್‌ ಚೋಪ್ರಾ ತಮ್ಮ ಯೂಟ್ಯೂಬ್​ನಲ್ಲಿ ಹೇಳಿದ್ದಾರೆ.(IPL)

ಬೆಂಗಳೂರಿನಲ್ಲಿ ಆಡುವಾಗ ವಿಜಯ್‌ಕುಮಾರ್ ವೈಶಾಕ್ ಅವರನ್ನು ಆಡಿಸಬೇಕು. ಆಡುವ 11ರ ಬಳಗದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳಬೇಕು ಎಂದ ಆಕಾಶ್ ಚೋಪ್ರಾ, ರಜತ್ ಪಾಟಿದಾರ್ ಬದಲಿಗೆ ಮಹಿಪಾಲ್ ಲೊಮ್ರೋರ್ ಆಡಬೇಕು ಎಂದು ಹೇಳಿದ್ದಾರೆ. ದಿನೇಶ್ ಕಾರ್ತಿಕ್ ಅನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದು ಎಂದು ಹೇಳಿದ್ದಾರೆ.
icon

(7 / 9)

ನಾಲ್ಕು ಪಂದ್ಯಗಳಿಂದ ಮ್ಯಾಕ್ಸಿ ಅಟ್ಟರ್​ಫ್ಲಾಪ್​ ಶೋ ನೀಡಿದ್ದಾರೆ. ಆದರೆ ಬೌಲಿಂಗ್​ನಲ್ಲಿ 4 ವಿಕೆಟ್​ ಪಡೆದು ಗಮನ ಸೆಳೆದಿದ್ದಾರೆ. ಬ್ಯಾಟಿಂಗ್​ನಲ್ಲಿ ಗಳಿಸಿರುವು ಕೇವಲ 31 ರನ್. ಹೀಗಾಗಿ ಮುಂದಿನ ಪಂದ್ಯದಲ್ಲಿ ಮ್ಯಾಕ್ಸಿ ಆಡುವುದು ಬಹುತೇಕ ಅನುಮಾನ.
icon

(8 / 9)

ವಿಲ್ ಜ್ಯಾಕ್ಸ್​ 3.2 ಕೋಟಿ ಪಡೆದು ಆರ್​ಸಿಬಿ ತಂಡದಲ್ಲಿದ್ದಾರೆ. ಆದರೆ ಇನ್ನೂ ಒಮ್ಮೆಯೂ ಅವಕಾಶ ಪಡೆದಿಲ್ಲ. ಆತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತು ಫ್ರಾಂಚೈಸಿ ಲೀಗ್‌ಗಳಲ್ಲಿ ಸಾಕಷ್ಟು ಹೆಸರನ್ನು ಸಂಪಾದಿಸಿದ್ದಾರೆ. ಅವರಿಗೆ ಅವಕಾಶ ಸಿಗುತ್ತದೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.
icon

(9 / 9)

ಇತರ ಗ್ಯಾಲರಿಗಳು