ವಿರಾಟ್ ಕೊಹ್ಲಿ ದೌರ್ಬಲ್ಯ ಬಹಿರಂಗಪಡಿಸಿ ಲಯಕ್ಕೆ ಮರಳಲು ಅಗತ್ಯ ಸಲಹೆ ನೀಡಿದ ಗೆಳೆಯ ಎಬಿ ಡಿವಿಲಿಯರ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿರಾಟ್ ಕೊಹ್ಲಿ ದೌರ್ಬಲ್ಯ ಬಹಿರಂಗಪಡಿಸಿ ಲಯಕ್ಕೆ ಮರಳಲು ಅಗತ್ಯ ಸಲಹೆ ನೀಡಿದ ಗೆಳೆಯ ಎಬಿ ಡಿವಿಲಿಯರ್ಸ್

ವಿರಾಟ್ ಕೊಹ್ಲಿ ದೌರ್ಬಲ್ಯ ಬಹಿರಂಗಪಡಿಸಿ ಲಯಕ್ಕೆ ಮರಳಲು ಅಗತ್ಯ ಸಲಹೆ ನೀಡಿದ ಗೆಳೆಯ ಎಬಿ ಡಿವಿಲಿಯರ್ಸ್

  • AB de Villiers: ಟೀಮ್ ಇಂಡಿಯಾ ಬ್ಯಾಟರ್​​ ವಿರಾಟ್ ಕೊಹ್ಲಿ ಅವರ ದೌರ್ಬಲ್ಯಗಳನ್ನು ಬಹಿರಂಗಡಿಸಿ ಲಯಕ್ಕೆ ಮರಳಲು ಬೇಕಾದ ಅಗತ್ಯ ಸಲಹೆಗಳನ್ನು ಗೆಳೆಯ ಎಬಿ ಡಿವಿಲಿಯರ್ಸ್ ನೀಡಿದ್ದಾರೆ.

ಬಾರ್ಡರ್​ ಗವಾಸ್ಕರ್ ಟ್ರೋಫಿ ಸೇರಿದಂತೆ 2024ರ ಕ್ಯಾಲೆಂಡರ್​ ವರ್ಷದಲ್ಲಿ ಬ್ಯಾಟಿಂಗ್​ನಲ್ಲಿ ಸದ್ದೇ ಮಾಡದ ಟೀಮ್ ಇಂಡಿಯಾ ಬ್ಯಾಟರ್​ ವಿರಾಟ್ ಕೊಹ್ಲಿ ಅವರಿಗೆ ತನ್ನ ಆಪ್ತ ಸ್ನೇಹಿತ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಸಲಹೆ ನೀಡಿದ್ದಾರೆ.
icon

(1 / 9)

(HT_PRINT)

ವಿರಾಟ್ ಅವರ ದೌರ್ಬಲ್ಯವನ್ನೂ ಬಹಿರಂಗಪಡಿಸಿದ ಎಬಿಡಿ, ಫಾರ್ಮ್​​ಗೆ ಮರಳಲು ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಬಿಜಿಟಿ ಸರಣಿಯಲ್ಲಿ ಕೊಹ್ಲಿ ಕಣಕ್ಕಿಳಿದ 9 ಇನ್ನಿಂಗ್ಸ್​​ಗಳಲ್ಲಿ 23.75ರ ಸರಾಸರಿಯಲ್ಲಿ ಕೇವಲ 190 ರನ್ ಗಳಿಸಿದ್ದಾರೆ. ಇದರ ಬೆನ್ನಲ್ಲೇ ಎಬಿಡಿ ಪ್ರತಿಕ್ರಿಯಿಸಿದ್ದಾರೆ.
icon

(2 / 9)

(AFP)

ಕೊಹ್ಲಿ ತಾನಾಡಿದ 9 ಇನ್ನಿಂಗ್ಸ್​​ಗಳ ಪೈಕಿ 8ರಲ್ಲಿ ಆಫ್​ ಸ್ಟಂಪ್​ ಹೊರಗಿನ ಎಸೆತಗಳಿಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿಯ ದೊಡ್ಡ ದೌರ್ಬಲ್ಯ ಕಂಡುಹಿಡಿದ ಬೌಲರ್ಸ್​, ಪದೆಪದೇ ಅದೇ ತಂತ್ರವನ್ನು ಬಳಸಿ ಯಶಸ್ವಿಯಾದರು. ಕೊಹ್ಲಿ ತಮ್ಮ ದೌರ್ಬಲ್ಯ ಹೋಗಲಾಡಿಸಲು ಎಬಿಡಿ, ಹೊಸ ಮಾರ್ಗವನ್ನು ಹೇಳಿದ್ದಾರೆ.
icon

(3 / 9)

ಕೊಹ್ಲಿ 8 ಬಾರಿ ಆಫ್ ಸ್ಟಂಪ್‌ ಹೊರಗಿನ ಎಸೆತಗಳಿಗೆ ಔಟಾಗಿದ್ದಾರೆ. ಹೀಗುದ್ದಾಗ ಅವರು ಪ್ರತಿ ಎಸೆತದ ನಂತರ ಮತ್ತೆ ಅಂತಹ ಎಸೆತಗಳ ಕುರಿತು ಗಮನ ಹರಿಸಬೇಕು. ಎಚ್ಚರಿಕೆ ವಹಿಸಬೇಕು ಎಂದು ಎಬಿಡಿ ಸಲಹೆ ನೀಡಿದ್ದಾರೆ. ಆಗ ಆಫ್ ಸ್ಟಂಪ್‌ನ ಹೊರಗಿನ ಎಸೆತಗಳ ಸಮಸ್ಯೆಯಿಂದ ಹೊರಬರಬಹುದು ಎಂದಿದ್ದಾರೆ.
icon

(4 / 9)

ವಿಶ್ವದ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ನಲ್ಲೂ ಕೆಲವು ದೌರ್ಬಲ್ಯಗಳಿವೆ. ನಾನು ಕೂಡ ಪ್ಯಾಡ್‌ಗಳ ಮೇಲೆ ಬಂದ ನೇರ ಚೆಂಡನ್ನು ಎದುರಿಸಲು ಕಷ್ಟಪಡುತ್ತೇನೆ. ಆದರೆ ಅಂತಹ ಎಸೆತಗಳ ಮೇಲೆ ಅವಲೋಕನ ನಡೆಸಬೇಕು. ಕೊಹ್ಲಿ ಆಫ್​ ಸ್ಟಂಪ್ ಎಸೆತಗಳ ಬಗ್ಗೆ ಪರಿಶೀಲನೆ ನಡೆಸುವುದು ಅಗತ್ಯ. ಆಗ ಅನುಭವವೇ ಫಾರ್ಮ್​ಗೆ ಬರುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
icon

(5 / 9)

ಅಗ್ರೆಸ್ಸಿವ್ ಆಗಿ ಹೋರಾಡುವುದು ಕೊಹ್ಲಿಗೆ ತುಂಬಾ ಇಷ್ಟ. ಇದು ಅವರ ಶಕ್ತಿ. ಆದರೆ ಇದೇ ಅವರ ದೌರ್ಬಲ್ಯವೂ ಆಗುತ್ತಿದೆ ಸರಣಿಯಲ್ಲಿ ಕೆಲವರೊಂದಿಗೆ ಸ್ಲೆಡ್ಜಿಂಗ್ ಮಾಡಿದರು. ಆದರೆ ನೀವು ಫಾರ್ಮ್‌ನಲ್ಲಿ ಇಲ್ಲದಿರುವಾಗ, ಇಂತಹ ವಿಷಯಗಳಿಂದ ದೂರವಿರುವುದು ಅತ್ಯಂತ ಮುಖ್ಯ. ಕೊಹ್ಲಿ ಇದನ್ನು ರೂಡಿಸಿಕೊಂಡರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.
icon

(6 / 9)

(AP)

ಒಬ್ಬ ಬ್ಯಾಟ್ಸ್‌ಮನ್ ಆಗಿ ಪ್ರತಿ ಎಸೆತವನ್ನೂ ನಂತರ ಆಲೋಚಿಸಬೇಕು. ಪ್ರತಿ ಎಸೆತದಿಂದಲೂ ಹೊಸದನ್ನು ಕಲಿಯಬೇಕು. ಬೌಲರ್ ಯಾರು ಎಂದು ಮರೆತುಬಿಡಬೇಕು. ತಾಜಾತನದಿಂದ ಆಡಬೇಕು. ಇದು ಆಟಗಾರನ ಕೌಶಲ್ಯ, ಅನುಭವ ಮತ್ತು ಶ್ರೇಷ್ಠತೆಯ ವಿಷಯವಲ್ಲ. ಪ್ರತಿ ಎಸೆತದ ನಂತರ ತನಗೆ ತಾನೇ ರಿಸೆಟ್ ಆಗುತ್ತಿರಬೇಕು ಎಂದಿದ್ದಾರೆ.
icon

(7 / 9)

ವಿರಾಟ್ ಕೊಹ್ಲಿ ಅವರು ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗಬೇಕಿದೆ. ಅದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದಕ್ಕಾಗಿ ಇನ್ನೂ ತಿಂಗಳ ಕಾಲ ಸಮಯ ಇದೆ. ಹೀಗಾಗಿ ಕೊಹ್ಲಿ ಸತತ ಅಭ್ಯಾಸ ನಡೆಸಬೇಕಿದೆ. ತನ್ನ ತಪ್ಪುಗಳ ಮೇಲೆ ಅಧ್ಯಯನ ನಡೆಸುವುದು ಅಗತ್ಯ. ಇದೇ ಫಾರ್ಮ್​ನೊಂದಿಗೆ ಚಾಂಪಿಯನ್ಸ್ ಟ್ರೋಫಿ ಆಡಿದರೆ ತಂಡದ ಹಿನ್ನಡೆಗೆ ಕಾರಣವಾಗಬಹುದು.
icon

(8 / 9)

ಕ್ರಿಕೆಟ್ ಸುದ್ದಿಗಳ ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(9 / 9)

ಇತರ ಗ್ಯಾಲರಿಗಳು