ಟಿ20 ಕ್ರಿಕೆಟ್ನಲ್ಲಿ 300+ ಸ್ಟ್ರೈಕ್ರೇಟ್ನೊಂದಿಗೆ ಶತಕ ಬಾರಿಸಿದ ಅಗ್ರ ಐವರು ಬ್ಯಾಟರ್ಸ್ ಇವರೇ!
- HIGHEST Strike rate for a T20 century: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಭಿಷೇಕ್ ಶರ್ಮಾ 29 ಎಸೆತಗಳಲ್ಲಿ 8 ಬೌಂಡರಿ ಮತ್ತು 11 ಸಿಕ್ಸರ್ ಸಹಿತ ಅಜೇಯ 106 ರನ್ ಬಾರಿಸಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸ್ಟ್ರೈಕ್ ರೇಟ್ ವಿಷಯದಲ್ಲಿ ಅವರು ವಿಶ್ವ ದಾಖಲೆ ಬರೆದಿದ್ದಾರೆ.
- HIGHEST Strike rate for a T20 century: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಭಿಷೇಕ್ ಶರ್ಮಾ 29 ಎಸೆತಗಳಲ್ಲಿ 8 ಬೌಂಡರಿ ಮತ್ತು 11 ಸಿಕ್ಸರ್ ಸಹಿತ ಅಜೇಯ 106 ರನ್ ಬಾರಿಸಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸ್ಟ್ರೈಕ್ ರೇಟ್ ವಿಷಯದಲ್ಲಿ ಅವರು ವಿಶ್ವ ದಾಖಲೆ ಬರೆದಿದ್ದಾರೆ.
(1 / 5)
ಅಭಿಷೇಕ್ ಶರ್ಮಾ: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ವೇಗದ ಶತಕದ ಜೊತೆಗೆ ಅತ್ಯುತ್ತಮ ಸ್ಟ್ರೈಕ್ರೇಟ್ನೊಂದಿಗೆ ಸೆಂಚುರಿ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದಲ್ಲಿ ಮೇಘಾಲಯ ವಿರುದ್ಧ ಪಂಜಾಬ್ ಬ್ಯಾಟರ್ ಅಭಿಷೇಕ್ 365.52 ಸ್ಟ್ರೈಕ್ರೇಟ್ನಲ್ಲಿ ನೂರು ಪೂರೈಸಿದ್ದಾರೆ. ಇದು ಹೊಸ ವಿಶ್ವದಾಖಲೆಯಾಗಿದೆ. ಮೇಘಾಲಯ ವಿರುದ್ಧ 28 ಎಸೆತಗಳಲ್ಲಿ ಶತಕ ಪೂರೈಸಿದ್ದರು.
(AP)(2 / 5)
ಸಾಹಿಲ್ ಚೌಹಾಣ್: ಎಸ್ಟೋನಿಯನ್ ಕ್ರಿಕೆಟಿಗ ಸಾಹಿಲ್ ಚೌಹಾಣ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಎಸ್ಟೋನಿಯಾ ಪರ ಆಡುವ ಈತ ಈ ವರ್ಷ ಸೈಪ್ರಸ್ ವಿರುದ್ಧ 27 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆಗ ಸಾಹಿಲ್ ಸ್ಟ್ರೈಕ್ ರೇಟ್ 351.21 ಆಗಿತ್ತು.
(ICC)(3 / 5)
ಉರ್ವಿಲ್ ಪಟೇಲ್: ಗುಜರಾತ್‌ನ ಉರ್ವಿಲ್ ಪಟೇಲ್ ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 322.85 ಸ್ಟ್ರೈಕ್ ರೇಟ್‌ನಲ್ಲಿ ಶತಕ ಸಿಡಿಸಿದ್ದರು. ತ್ರಿಪುರಾ ವಿರುದ್ಧ 28 ಎಸೆತಗಳಲ್ಲಿ ಶತಕ ಬಾರಿಸಿ ಈ ಸಾಧನೆ ಮಾಡಿದರು. ಉರ್ವಿಲ್ ಮತ್ತು ಅಭಿಷೇಕ್ ಜಂಟಿಯಾಗಿ ವೇಗದ ಟಿ20 ಶತಕ ಬಾರಿಸಿದ ಗಳಿಸಿದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
(4 / 5)
ಸಿಕಂದರ್ ರಾಜಾ: ಜಿಂಬಾಬ್ವೆ ನಾಯಕ ಮತ್ತು ಆಲ್‌ರೌಂಡರ್ ಸಿಕಂದರ್ ರಜಾ ಅವರು ಅಕ್ಟೋಬರ್ 2024ರಲ್ಲಿ ಗ್ಯಾಂಬಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. 33 ಎಸೆತಗಳಲ್ಲಿ ಅಜೇಯ 143 ರನ್ ಗಳಿಸಿದ್ದರು. ಅಂದು ಅವರ ಸ್ಟ್ರೈಕ್ರೇಟ್ 309.30 ಆಗಿತ್ತು. ಅತ್ಯಧಿಕ ಸ್ಟ್ರೈಕ್ ರೇಟ್ನೊಂದಿಗೆ ಶತಕ ಸಿಡಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
(X)ಇತರ ಗ್ಯಾಲರಿಗಳು