ಕನ್ನಡ ಸುದ್ದಿ  /  Photo Gallery  /  Abvpbagalkot: Akhil Bharatiya Vidyarthi Parishad Bagalkot District Conference At Bagalkot

ABVPBagalkot: ಎಬಿವಿಪಿ ಬಾಗಲಕೋಟೆ ಜಿಲ್ಲಾ ಸಮ್ಮೇಳನ; ಫೋಟೋ ವರದಿ ಇಲ್ಲಿದೆ

ABVPBagalkot: ಬಾಗಲಕೋಟೆಯ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಬಾಗಲಕೋಟೆ ಜಿಲ್ಲಾ ಸಮ್ಮೇಳನವು ನಡೆಯಿತು. ಈ ಸಮ್ಮೇಳನದ ಸಚಿತ್ರ ವರದಿ ಇಲ್ಲಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಬಾಗಲಕೋಟೆ ಜಿಲ್ಲಾ ಸಮ್ಮೇಳನವು ಬಿವಿವಿಸಂಘದ ನೂತನ ಸಭಾಭವನದಲ್ಲಿ ಜರುಗಿತು. ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಮತ್ತು ಗುಳೇದಗುಡ್ಡದ ಕಾಡು ಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ದೀಪ ಬೆಳಗಿ ಸಮ್ಮೇಳನಕ್ಕೆ ಚಾಲನೆ ನೀಡಿದರು. 
icon

(1 / 6)

 ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಸಮ್ಮೇಳನದ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬಿದರು. ಗುಳೇದಗುಡ್ಡದ ಕಾಡು ಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. 
icon

(2 / 6)

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಬಾಗಲಕೋಟೆ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿದ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿ ಕಾರ್ಯಕರ್ತರು ಮತ್ತು ಇತರರು.
icon

(3 / 6)

ಸಮ್ಮೇಳನ ಉದ್ಘಾಟನೆಯ ನಂತರ ಜರುಗಿದ ಭವ್ಯ ಶೋಭಾ ಯಾತ್ರೆಗೆ ನಿಕಟ ಪೂರ್ವ ರಾಜ್ಯ ಸಹ ಕಾರ್ಯದರ್ಶಿ ಪ್ರಕಾಶ ಪೂಜಾರ ಹಾಗೂ ನಗರ ಅಧ್ಯಕ್ಷ ಡಾ.ಆರ್.ಎಂ. ಕುಲಕರ್ಣಿ ಅವರು ಚಾಲನೆ ನೀಡಿದರು. ಶೋಭಯಾತ್ರೆಯಲ್ಲಿ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
icon

(4 / 6)

ಶೋಭಾ ಯಾತ್ರೆಯು ಹುಂಡೆಕಾರಗಲ್ಲಿ, ಬಸವೇಶ್ವರ ಬ್ಯಾಂಕ್, ವಲ್ಲಭಾಯಿ ಚೌಕ, ಬಸವೇಶ್ವರ ಸರ್ಕಲ್ ಮುಖಾಂತರ ಬಂದು ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಎದುರು ಬಹಿರಂಗ ಸಮಾವೇಶ ಜರುಗಿತು. 
icon

(5 / 6)

ಚಿತ್ರದಲ್ಲಿರುವುದ ಶೋಭಾಯಾತ್ರೆಯ ಎರಡು ಭಿನ್ನ ನೋಟಗಳು. ಎಬಿವಿಪಿ ಸಮ್ಮೇಳನದಲ್ಲಿ ಮಧ್ಯಾಹ್ನ ಜರುಗಿದ ನಿರ್ಣಯಗೋಷ್ಠಿ ಹಾಗೂ ಸಮ್ಮೇಳನ ಸಮಾರೋಪದಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ ಹಾಗೂ ಜಿಲ್ಲೆಯ ಸ್ಥಳೀಯ ವಿಷಯಗಳ ಬಗ್ಗೆ ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಲಾಯಿತು. 
icon

(6 / 6)

ಇತರ ಗ್ಯಾಲರಿಗಳು