2000 ಕೋಟಿ ಮೌಲ್ಯದ ಡ್ರಗ್ ಕೇಸ್​​ನಲ್ಲಿ ಸಿಲುಕಿದ್ದ, ಕನ್ನಡದಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ಈಗ ಸಾಧ್ವಿ; ಗ್ಲಾಮರ್ ಲೋಕ ತೊರೆದು ಆಧಾತ್ಮದತ್ತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2000 ಕೋಟಿ ಮೌಲ್ಯದ ಡ್ರಗ್ ಕೇಸ್​​ನಲ್ಲಿ ಸಿಲುಕಿದ್ದ, ಕನ್ನಡದಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ಈಗ ಸಾಧ್ವಿ; ಗ್ಲಾಮರ್ ಲೋಕ ತೊರೆದು ಆಧಾತ್ಮದತ್ತ

2000 ಕೋಟಿ ಮೌಲ್ಯದ ಡ್ರಗ್ ಕೇಸ್​​ನಲ್ಲಿ ಸಿಲುಕಿದ್ದ, ಕನ್ನಡದಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ಈಗ ಸಾಧ್ವಿ; ಗ್ಲಾಮರ್ ಲೋಕ ತೊರೆದು ಆಧಾತ್ಮದತ್ತ

  • Mamta Kulkarni: 2025ರ ಮಹಾ ಕುಂಭ ಮೇಳದಲ್ಲಿ ಸಾಕಷ್ಟು ಜನರು ಸನ್ಯಾಸ ಮಾರ್ಗವನ್ನು ತೆಗೆದುಕೊಂಡಿದ್ದಾರೆ. ಕೆಲವರು ನಾಗಾ ಸನ್ಯಾಸಿಗಳೂ ಆಗಿದ್ದಾರೆ. ಇದಕ್ಕೆ ನಟಿ ಮಮತಾ ಕುಲಕರ್ಣಿ ಅವರ ಹೆಸರೂ ಸೇರ್ಪಡೆಯಾಗಿದೆ.

90ರ ದಶಕದ ಜನಪ್ರಿಯ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಅವರು ಐಷಾರಾಮಿ ಜೀವನ ತ್ಯಜಿಸಿ ಆಧ್ಯಾತ್ಮದ ಕಡೆಗೆ ಹೆಜ್ಜೆ ಹಾಕಿದ್ದು, ಸನ್ಯಾಸತ್ವ ಸೀಕರಿಸಿದ್ದಾರೆ.
icon

(1 / 10)

2,000 ಕೋಟಿ ರೂಪಾಯಿ ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈಕೆ, ಹಾಟ್ ನಟಿಯಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ, ಕನ್ನಡದ ವಿಷ್ಣು ವಿಜಯ ಚಿತ್ರದಲ್ಲೂ ನಟಿಸಿದ್ದಾರೆ.
icon

(2 / 10)

ಕನ್ನಡ ಸೇರಿ ಹಿಂದಿ, ತೆಲುಗು, ತಮಿಳು, ಮಲಯಾಳಂಸಿನಿಮಾಗಳಲ್ಲಿ ನಟಿಸಿರುವ ಮಮತಾ ಕುಲಕರ್ಣಿ, ಇದೀಗ ಸಾಧ್ವಿ ಆಗಿದ್ದಾರೆ. ಆಕೆ, ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಆಗಿ ನೇಮಕವಾಗಿದ್ದಾರೆ.
icon

(3 / 10)

ಕಿನ್ನರ ಅಖಾಡ ಅಥವಾ ಕಿನ್ನರ ಅಖಾರ ಎಂಬುದು ಧಾರ್ಮಿಕ ಆಚರಣೆಗಳಲ್ಲಿ ತೊಡಗಿರುವ ತೃತೀಯ ಲಿಂಗಿಗಳ ಸಂಘ. 2015 ರಲ್ಲಿ ಪ್ರಾರಂಭವಾದ ಸಂಘಕ್ಕೆ ಮಮತಾ ಈಗ ಮಹಾಮಂಡಲೇಶ್ವರಿ.
icon

(4 / 10)

ಮಮತಾ ಕುಲಕರ್ಣಿ ಭಾರತ ದೇಶವನ್ನು 2000ರಲ್ಲಿ ತೊರೆದಿದ್ದರು. ಇದೀಗ 25 ವರ್ಷಗಳ ನಂತರ ದೇಶಕ್ಕೆ ಬಂದಿದ್ದಾರೆ.
icon

(5 / 10)

ಬಾಲಿವುಡ್ ಮತ್ತು ದೇಶವನ್ನೇ ಬೆಚ್ಚಿಬೀಳಿಸಿದ್ದ ಹೈ ಪ್ರೊಫೈಲ್ ಡ್ರಗ್ ಪ್ರಕರಣದಲ್ಲಿ ನಟಿ ಸಿಲುಕಿಕೊಂಡಿದ್ದರು. 2,000 ಕೋಟಿ ಮೌಲ್ಯದ ಈ ಪ್ರಕರಣ 2016ರಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.
icon

(6 / 10)

ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ 1985ರ ಅಡಿಯಲ್ಲಿ ನಿಯಂತ್ರಿತ ವಸ್ತುವಾದ ಎಫೆಡ್ರಿನ್ ತಯಾರಿಕೆ ಮತ್ತು ಖರೀದಿಯಲ್ಲಿ ತೊಡಗಿದ್ದ ಈ ದಂಧೆಯ ಹಿಂದೆ ಮಮತಾ ಕುಲಕರ್ಣಿ ಪತಿ ವಿಕ್ಕಿ ಗೋಸ್ವಾಮಿ ಮಾಸ್ಟರ್ ಮೈಂಡ್ ಎನ್ನಲಾಗಿತ್ತು.
icon

(7 / 10)

ನಟಿಯ ಪತಿ ವಿಕ್ಕಿ ಗೋಸ್ವಾಮಿ ಅವರಿಂದ ನಿಯಂತ್ರಿಸಲ್ಪಡುವ ಏವನ್ ಲೈಫ್ ಸೈನ್ಸಸ್ ಲಿಮಿಟೆಡ್ ಕಂಪನಿಯು ನಡೆಸುತ್ತಿದ್ದ ಮಹಾರಾಷ್ಟ್ರದ ಸೋಲಾಪುರದ ಕಾರ್ಖಾನೆಯಲ್ಲಿ ಎಫೆಡ್ರಿನ್ ಪತ್ತೆಯಾಗಿತ್ತು. ಪೊಲೀಸರು ದಾಳಿ ನಡೆಸಿ 2,000 ಕೋಟಿ ಮೌಲ್ಯದ 18,000 ಕೆಜಿ ಎಫೆಡ್ರಿನ್ ವಶಪಡಿಸಿಕೊಂಡಿದ್ದರು.
icon

(8 / 10)

ಈ ಪ್ರಕರಣದಲ್ಲಿ ಮಮತಾ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿತ್ತು. ಪೊಲೀಸರು 2017ರಲ್ಲಿ ಜಾಮೀನು ರಹಿತ ವಾರಂಟ್ ಹೊರಡಿದ್ದರು. ಆದಾಗ್ಯೂ, ತಾನು ನಿರಪರಾಧಿ ಮತ್ತು ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ 2018ರಲ್ಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
icon

(9 / 10)

ಹಲವು ವರ್ಷಗಳ ಕಾಲ ವಾದ ಆಲಿಸಿದ ಬಾಂಬೆ ಹೈಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ತೀರ್ಪು ನೀಡಿತು. ಸಾಕ್ಷಿ ಕೊರತೆಗಳನ್ನು ಉಲ್ಲೇಖಿಸಿ ಪ್ರಕರಣವನ್ನು ರದ್ದುಪಡಿಸಿತು. ನ್ಯಾಯಮೂರ್ತಿ ಭಾರತಿ ಡಾಂಗ್ರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ನೇತೃತ್ವದ ಪೀಠ ಈ ತೀರ್ಪು ನೀಡಿತ್ತು.
icon

(10 / 10)

ಇತರ ಗ್ಯಾಲರಿಗಳು